ಮಾರ್ಚ್‌ನಲ್ಲಿ ವೃತ್ತಿ ಬದುಕಿನಲ್ಲಿ ಹೊಸ ಶಿಖರವನ್ನು ಏರಲಿದ್ದಾರೆ ಈ ರಾಶಿಯವರು

ವೈದಿಕ ಜ್ಯೋತಿಷ್ಯದ ಪ್ರಕಾರ, ಮಾರ್ಚ್ ಮಾಸವು ಕೆಲವು ರಾಶಿಯವರಿಗೆ ಉದ್ಯೋಗ ಕ್ಷೇತ್ರದಲ್ಲಿ ಭರ್ಜರಿ ಪ್ರಯೋಜನವನ್ನು ತರಲಿದೆ ಎಂದು ಹೇಳಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಾರ್ಚ್‌ನಲ್ಲಿ ಈ ರಾಶಿಯವರಿಗೆ ಹೊಸ ಉದ್ಯೋಗ, ಪ್ರಮೋಶನ್, ಇನ್ಕ್ರಿಮೆಂಟ್ ಭಾಗ್ಯ ಪ್ರಾಪ್ತಿಯಾಗಲಿದೆ ಎಂದು ಹೇಳಲಾಗುತ್ತಿದ್ದು, ಆ ಅದೃಷ್ಟದ ರಾಶಿಗಳು ಯಾವುವು ತಿಳಿಯೋಣ...

Written by - Yashaswini V | Last Updated : Feb 27, 2023, 09:15 AM IST
  • ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಾರ್ಚ್ ತಿಂಗಳು ಉದ್ಯೋಗದ ದೃಷ್ಟಿಯಿಂದ ಕೆಲವು ರಾಶಿಯವರಿಗೆ ತುಂಬಾ ಅದೃಷ್ಟವನ್ನು ಹೊತ್ತು ತರಲಿದೆ
  • ಕೆಲವು ರಾಶಿಯ ಉದ್ಯೋಗಸ್ಥರಿಗೆ ಪ್ರಮೋಶನ್, ಇನ್ಕ್ರಿಮೆಂಟ್ ದೊರೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
  • ಆ ಅದೃಷ್ಟದ ರಾಶಿಗಳು ಯಾವುವು ತಿಳಿಯೋಣ...
ಮಾರ್ಚ್‌ನಲ್ಲಿ ವೃತ್ತಿ ಬದುಕಿನಲ್ಲಿ ಹೊಸ ಶಿಖರವನ್ನು ಏರಲಿದ್ದಾರೆ ಈ ರಾಶಿಯವರು  title=
Monthly Horoscope

ಬೆಂಗಳೂರು: ಫೆಬ್ರವರಿ ತಿಂಗಳು ಕೊನೆಗೊಳ್ಳಲು ಇನ್ನೊಂದೇ ದಿನ ಬಾಕಿ ಉಳಿದಿದೆ. ಮಾರ್ಚ್ ತಿಂಗಳು ಆರ್ಥಿಕ ವರ್ಷದ ಕೊನೆಯ ತಿಂಗಳು. ಮಾತ್ರವಲ್ಲ, ಉದ್ಯೋಗಸ್ಥರಿಗೆ  ಪ್ರಮೋಶನ್, ಇನ್ಕ್ರಿಮೆಂಟ್ ದೊರೆಯುವ ತಿಂಗಳೂ ಹೌದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಾರ್ಚ್ ತಿಂಗಳು ಉದ್ಯೋಗದ ದೃಷ್ಟಿಯಿಂದ ಕೆಲವು ರಾಶಿಯವರಿಗೆ ತುಂಬಾ ಅದೃಷ್ಟವನ್ನು ಹೊತ್ತು ತರಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ತಿಳಿಯೋಣ...

ಮಾರ್ಚ್‌ನಲ್ಲಿ ಈ ರಾಶಿಯವರಿಗೆ ಹೊಸ ಉದ್ಯೋಗ, ಪ್ರಮೋಶನ್, ಇನ್ಕ್ರಿಮೆಂಟ್ ಭಾಗ್ಯ:-
ಮೇಷ ರಾಶಿ: 

ಮೇಷ ರಾಶಿಯವರಿಗೆ ಉದ್ಯೋಗಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ಮಾರ್ಚ್ ತಿಂಗಳಲ್ಲಿ ಕೊನೆಗೊಳ್ಳಲಿವೆ. ಈ ಸಮಯದಲ್ಲಿ ಹೊಸ ಉದ್ಯೋಗ ದೊರೆಯುವ ಸಾಧ್ಯತೆ ಇದ್ದು, ಆದಾಯವೂ ಹೆಚ್ಚಳಗೊಳ್ಳಲಿದೆ. ಈ ಸಮಯದಲ್ಲಿ ನೀವು ನಿಮ್ಮ ಕೋಪವನ್ನು ನಿಯಂತ್ರಿಸಿದರೆ ಹೆಚ್ಚಿನ ಪ್ರಯೋಜನವಾಗಲಿದೆ.

ಮಿಥುನ ರಾಶಿ:
ಮಿಥುನ ರಾಶಿಯವರಿಗೆ ಮಾರ್ಚ್ ತಿಂಗಳು ಬಂಪರ್ ಉಡುಗೊರೆಗಳನ್ನು ಹೊತ್ತು ತರಲಿದೆ. ಈ ಸಮಯದಲ್ಲಿ ಕೆಲಸದಲ್ಲಿ ನೀವು ಹೊಸ ಉತ್ತುಂಗವನ್ನು ಏರುವಿರಿ. ಸರ್ಕಾರಿ ಉದ್ಯೋಗದಲ್ಲಿರುವವರಿಗೆ ನಿಮಗೆ ನಿಮ್ಮ ನೆಚ್ಚಿನ ಸ್ಥಳಕ್ಕೆ ವರ್ಗಾವಣೆ ಸಿಗಲಿದೆ. ಉದ್ಯೋಗದಲ್ಲಿ ಮೇಲಾಧಿಕಾರಿಗಳಿಂದ ಮೆಚ್ಚಿಗೆ ಜೊತೆಗೆ ಪ್ರಮೋಶನ್ ಕೂಡ ಸಿಗಲಿದೆ. 

ಇದನ್ನೂ ಓದಿ- Surya-Shani Yuti: ಸೂರ್ಯ-ಶನಿ ಯುತಿ: ತಂದೆ-ಮಗನಿಂದಾಗಿ ಈ ರಾಶಿಯ ಜನರ ಜೀವನದಲ್ಲಿ ಭೂಕಂಪವೇ ಸಂಭವಿಸುತ್ತೆ!

ಸಿಂಹ ರಾಶಿ: 
ಮಾರ್ಚ್ ತಿಂಗಳ ಭವಿಷ್ಯದ ಪ್ರಕಾರ, ಈ ತಿಂಗಳು ನಿಮ್ಮ ಬಹುದಿನದ ಕನಸುಗಳು ನನಸಾಗಲಿವೆ. ದೀರ್ಘಕಾಲದಿಂದ ಸ್ಥಗಿತಗೊಂಡಿದ್ದ ನಿಮ್ಮ ಕೆಲಸಗಳು ಈ ಸಮಯದಲ್ಲಿ ಪೂರ್ಣಗೊಳ್ಳಲಿವೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿದ್ದು ವಿತ್ತೀಯ ಸ್ಥಿತಿ ಸುಧಾರಿಸಲಿದೆ. ಬಡ್ತಿ ದೊರೆಯುವ ಸಾಧ್ಯತೆ ಇದ್ದು ಸಮಾಜದಲ್ಲಿ ಗೌರವವೂ ಹೆಚ್ಚಾಗಲಿದೆ.

ತುಲಾ ರಾಶಿ:
ಮಾರ್ಚ್ ಮಾಸದಲ್ಲಿ ತುಲಾ ರಾಶಿಯವರಿಗೆ ಎಲ್ಲಾ ಕೆಲಸಗಳಲ್ಲೂ ಕೂಡ ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದೆ. ಈ ಸಮಯದಲ್ಲಿ ಉದ್ಯೋಗಸ್ಥರಿಗೆ ಪ್ರಮೋಷನ್ ದೊರೆಯುವ ಸಾಧ್ಯತೆ ಇದೆ. ಮಾತ್ರವಲ್ಲ, ಕಂಪನಿ ಕಡೆಯಿಂದ ವಿದೇಶಕ್ಕೆ ತೆರಳುವ ಸಾಧ್ಯತೆಯೂ ಇದೆ. 

ಧನು ರಾಶಿ:
ನಿಮ್ಮ ಬಹುದಿನದ ಕನಸುಗಳು ಈ ಸಮಯದಲ್ಲಿ ನನಸಾಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಿರೀಕ್ಷಿತ ಯಶಸ್ಸು ನಿಮ್ಮದಾಗಲಿದ್ದು, ಹೊಸ ಉದ್ಯೋಗ ದೊರೆಯುವ ಸಾಧ್ಯತೆ ಇದೆ. ಉದ್ಯೋಗ ಸ್ಥಳದಲ್ಲಿ ಪ್ರಮುಖ ಜವಾಬ್ದಾರಿಗಳು ನಿಮ್ಮ ಹೆಗಲೇರಲಿವೆ. ಒಟ್ಟಾರೆಯಾಗಿ ಸಮಯವು ತುಂಬಾ ಉತ್ತಮವಾಗಿದೆ.

ಇದನ್ನೂ ಓದಿ- Budh Asta 2023 : ಬುಧ ಅಷ್ಟಮಿಯಿಂದ ಈ ರಾಶಿಯವರಿಗೆ ಖುಲಾಯಿಸಲಿದೆ ಅದೃಷ್ಟ..!

ಮಕರ ರಾಶಿ:
ಮಾರ್ಚ್ ತಿಂಗಳು ಈ ರಾಶಿಯವರಿಗೆ ಹಲವು ವಿಷಯಗಳಲ್ಲಿ ತುಂಬಾ ಮಂಗಳಕರ ಎಂದು ಸಾಬೀತುಪಡಿಸಲಿದೆ. ನಿಮ್ಮ ಹಲವು ಸಮಸ್ಯೆಗಳು ಬಹಳ ಸುಲಭವಾಗಿ ನೆರವೇರಲಿವೇ. ವೃತ್ತಿ ರಂಗದಲ್ಲಿ ನಿರೀಕ್ಷಿತ ಯಶಸ್ಸು ನಿಮ್ಮದಾಗಲಿದ್ದು  ಹಣಕಾಸಿನ ಸ್ಥಿತಿ ಸುಧಾರಿಸಲಿದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News