ಶನಿಚಾರಿ ಅಮಾವಾಸ್ಯೆಯ ದಿನವೇ ಸೂರ್ಯ ಗ್ರಹಣ, ದ್ವಾದಶ ರಾಶಿಗಳ ಮೇಲೆ ಏನು ಪರಿಣಾಮ

ಶನಿಚಾರಿ ಅಮಾವಾಸ್ಯೆ ದಿನದಂದು ಸೂರ್ಯಗ್ರಹಣ- ಅದರ ಪ್ರಭಾವ: ಈ ತಿಂಗಳಾಂತ್ಯದಲ್ಲಿ ಅಂದರೆ ಏಪ್ರಿಲ್ 30ರಂದು ಶನಿಚಾರಿ ಅಮಾವಾಸ್ಯೆ ದಿನದಂದು ಸೂರ್ಯ ಗ್ರಹಣ ಸಂಭವಿಸಲಿದೆ. ಈ ಗ್ರಹಣವು ಯಾವ ರಾಶಿಯವರ ಮೇಲೆ ಏನು ಪ್ರಭಾವ ಬೀರಲಿದೆ ತಿಳಿಯಿರಿ.

Written by - Yashaswini V | Last Updated : Apr 19, 2022, 10:56 AM IST
  • ಏಪ್ರಿಲ್ 30ರಂದು ಶನಿಚಾರಿ ಅಮಾವಾಸ್ಯೆ ದಿನದಂದು ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸಲಿದೆ.
  • ಇದಕ್ಕೂ ಒಂದು ದಿನ ಮುನ್ನ ಏಪ್ರಿಲ್ 29 ರಂದು ಶನಿ ರಾಶಿಚಕ್ರವನ್ನು ಬದಲಾಯಿಸುವ ಮೂಲಕ ಕುಂಭ ರಾಶಿ ಪ್ರವೇಶಿಸಲಿದ್ದಾನೆ.
  • ದ್ವಾದಶ ರಾಶಿಗಳ ಮೇಲೆ ಶನಿಚಾರಿ ಅಮಾವಾಸ್ಯೆಯಂದು ಸಂಭವಿಸಲಿರುವ ಸೂರ್ಯಗ್ರಹಣದ ಪರಿಣಾಮ ತಿಳಿಯೋಣ...
ಶನಿಚಾರಿ ಅಮಾವಾಸ್ಯೆಯ ದಿನವೇ ಸೂರ್ಯ ಗ್ರಹಣ, ದ್ವಾದಶ ರಾಶಿಗಳ ಮೇಲೆ ಏನು ಪರಿಣಾಮ  title=
Surya Grahan Effects on Zodiac signs

ದ್ವಾದಶ ರಾಶಿಗಳ ಮೇಲೆ ಸೂರ್ಯಗ್ರಹಣದ ಪರಿಣಾಮ: ಈ ವರ್ಷದ ಮೊದಲ ಸೂರ್ಯಗ್ರಹಣ ಈ ತಿಂಗಳಾಂತ್ಯದಲ್ಲಿ ಸಂಭವಿಸಲಿದೆ. ಏಪ್ರಿಲ್ 30ರಂದು ಶನಿಚಾರಿ ಅಮಾವಾಸ್ಯೆ ದಿನದಂದು ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸಲಿದೆ. ಇದಕ್ಕೂ ಒಂದು ದಿನ ಮುನ್ನ ಏಪ್ರಿಲ್ 29 ರಂದು ಶನಿ ರಾಶಿಚಕ್ರವನ್ನು ಬದಲಾಯಿಸುವ ಮೂಲಕ ಕುಂಭ ರಾಶಿ ಪ್ರವೇಶಿಸಲಿದ್ದಾನೆ. ಶನಿಚಾರಿ ಅಮಾವಾಸ್ಯೆಯಂದು ಸಂಭವಿಸಲಿರುವ ಸೂರ್ಯ ಗ್ರಹಣವು ಭಾಗಶಃ ಸೂರ್ಯಗ್ರಹಣವಾಗಿರುವುದರಿಂದ ಸೂತಕದ ಅವಧಿ ಮಾನ್ಯವಾಗಿರುವುದಿಲ್ಲ. ಆದಾಗ್ಯೂ, ಸೂರ್ಯಗ್ರಹನವು ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರಲಿದೆ. ಹಾಗಿದ್ದರೆ ವರ್ಷದ ಪ್ರಥಮ ಸೂರ್ಯಗ್ರಹಣದ ಯಾವ ರಾಶಿಯವರಿಗೆ ಶುಭ ಯಾವ ರಾಶಿಯ ಜನರಿಗೆ ಅಶುಭ ಫಲಿತಾಂಶಗಳನ್ನು ನೀಡಲಿದೆ ಎಂದು ತಿಳಿಯೋಣ..

ಶನಿಚಾರಿ ಅಮಾವಾಸ್ಯೆಯ ದಿನದಂದು ಸೂರ್ಯಗ್ರಹಣ: ಶುಭ-ಅಶುಭ ಪರಿಣಾಮ :
ಮೇಷ ರಾಶಿ: 

ವರ್ಷದ ಮೊದಲ ಸೂರ್ಯಗ್ರಹಣವು ಮೇಷ ರಾಶಿಯವರಿಗೆ ಆರ್ಥಿಕ ನಷ್ಟವನ್ನು ಉಂಟುಮಾಡಲಿದೆ.

ವೃಷಭ ರಾಶಿ:
ಶನಿಚಾರಿ ಅಮಾವಾಸ್ಯೆಯಂದು ಸಂಭವಿಸಲಿರುವ ಸೂರ್ಯಗ್ರಹಣವು ವೃಷಭ ರಾಶಿಯವರಿಗೆ ಒತ್ತಡವನ್ನು ಹೆಚ್ಚಿಸಲಿದೆ ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ- Surya Grahan: ಶನಿಚಾರಿ ಅಮವಾಸ್ಯೆಯಂದು ವರ್ಷದ ಮೊದಲ ಸೂರ್ಯಗ್ರಹಣ! ಈ ರಾಶಿಯ ಜನರಿಗೆ ಅದೃಷ್ಟ

ಮಿಥುನ ರಾಶಿ: 
ಮಿಥುನ ರಾಶಿಯವರು ಸೂರ್ಯಗ್ರಹಣದ ಸಮಯದಲ್ಲಿ ಎಚ್ಚರಿಕೆಯಿಂದ ಇರುವುದು ಒಳ್ಳೆಯದು ಇಲ್ಲವೇ ಭಾರೀ ನಷ್ಟವಾಗುವ ಸಾಧ್ಯತೆಯಿದೆ.

ಕಟಕ ರಾಶಿ:
ವರ್ಷದ ಮೊದಲ ಸೂರ್ಯಗ್ರಹಣವು ಕಟಕ ರಾಶಿಯವರಿಗೆ ಶುಭ ಫಲಿತಾಂಶಗಳನ್ನು ನೀಡಲಿದೆ. ಆರ್ಥಿಕ ಲಾಭ ಸಾಧ್ಯತೆಗಳಿವೆ.

ಸಿಂಹ ರಾಶಿ:
ಶನಿಚಾರಿ ಅಮಾವಾಸ್ಯೆಯಂದು ಸಂಭವಿಸಲಿರುವ ವರ್ಷದ ಮೊದಲ ಸೂರ್ಯಗ್ರಹಣವು ಸಿಂಹ ರಾಶಿಯವರಿಗೆ ಶುಭ ಫಲಿತಾಂಶಗಳನ್ನು ನೀಡಲಿದೆ.

ಕನ್ಯಾ ರಾಶಿ: 
ಕನ್ಯಾ ರಾಶಿಯವರಿಗೆ ಈ ಸಮಯವು ಅಷ್ಟಾಗಿ ಚೆನ್ನಾಗಿಲ್ಲ. ಹಾಗಾಗಿ ವೃತ್ತಿ ಬದಲಾವಣೆ ಸಂಬಂಧಿಸಿದಂತೆ ಸದ್ಯಕ್ಕೆ ನಿಮ್ಮ ಯೋಚನೆಯನ್ನು ಕೈಬಿಡುವುದು ಉತ್ತಮ. 

ತುಲಾ ರಾಶಿ: 
ಸೂರ್ಯಗ್ರಹಣವು ತುಲಾ ರಾಶಿಯ ಜನರ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಉಂಟುಮಾಡುವ ಸಾಧ್ಯತೆಯಿದೆ. ಅಲ್ಲದೇ, ವಿವಾದಗಳಿಂದ ದೂರವಿರಲು ನಿಮ್ಮ ಮಾತಿನ ಮೇಲೆ ಹಿಡಿತ ಕಾಯ್ದುಕೊಳ್ಳುವುದು ಉತ್ತಮ.

ವೃಶ್ಚಿಕ ರಾಶಿ:
ವರ್ಷದ ಮೊದಲ ಸೂರ್ಯಗ್ರಹಣವು ವೃಶ್ಚಿಕ ರಾಶಿಯವರಿಗೆ ಉದ್ಯೋಗ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಉತ್ತಮ ಫಲಿತಾಂಶ ನೀಡುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಬಡ್ತಿ ಸಂಭವವಿದೆ.

ಇದನ್ನೂ ಓದಿ- Solar Eclipse 2022: ವರ್ಷದ ಮೊದಲ ಸೂರ್ಯಗ್ರಹಣ ಯಾವಾಗ ಸಂಭವಿಸುತ್ತದೆ? ದಿನಾಂಕ & ಸಮಯ ತಿಳಿಯಿರಿ

ಧನು ರಾಶಿ:
ಧನು ರಾಶಿಯ ಜನರಿಗೆ ಸೂರ್ಯಗ್ರಹಣವು ವೃತ್ತಿ, ಆರ್ಥಿಕ ಸ್ಥಿತಿ, ಆರೋಗ್ಯ ಎಲ್ಲಾ ಕ್ಷೇತ್ರಗಳಲ್ಲೂ ಉತ್ತಮ ಎಂದು ಸಾಬೀತು ಪಡಿಸಲಿದೆ.

ಮಕರ ರಾಶಿ: 
ಮಕರ ರಾಶಿಯವರು ದುಶ್ಚಟಗಳಿಂದ ದೂರವಿದ್ದರೆ ಒಳಿತು, ಇಲ್ಲವೇ ಭಾರೀ ನಷ್ಟ.

ಕುಂಭ ರಾಶಿ:
ಸೂರ್ಯಗ್ರಹಣದ ಪರಿಣಾಮ ಕುಂಭ ರಾಶಿಯವರಿಗೆ ಅಷ್ಟಾಗಿ ಚೆನ್ನಾಗಿಲ್ಲ. ಹಾಗಾಗಿ ಯಾವುದೇ ಕೆಲಸದಲ್ಲಿ ಆತುರ ಪಡೆಯದಿರುವುದು ಒಳ್ಳೆಯದು.

ಮೀನ ರಾಶಿ: 
ವರ್ಷದ ಮೊದಲ ಸೂರ್ಯಗ್ರಹಣವು ಶನಿ ರಾಶಿಯವರಿಗೆ ಸಮಾಜದಲ್ಲಿ ಗೌರವವನ್ನು ಹೆಚ್ಚಿಸಲಿದೆ. ಇದಲ್ಲದೆ ಆರ್ಥಿಕ ಭಾಗವೂ ಬಲಗೊಳ್ಳಲಿದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಪುಷ್ಟೀಕರಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News