ಹಸ್ತಾ ನಕ್ಷತ್ರಕ್ಕೆ ಮಂಗಳನ ಪ್ರವೇಶ, ಶ್ರೀಹರಿ ಲಕ್ಷ್ಮಿ ಕೃಪೆಯಿಂದ 4 ರಾಶಿಗಳಿಗೆ ಭಾಗ್ಯೋದಯ ಯೋಗ!

Mangal  Nakshatra Parivartan: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗ್ರಹಗಳು ಮತ್ತು ನಕ್ಷತ್ರಗಳ ನಡೆಯಲ್ಲಿನ ಬದಲಾವಣೆಯ ಪ್ರಭಾವ ಎಲ್ಲಾ ದ್ವಾದಶ ರಾಶಿಗಳ ಜನರ ಜೀವನದ ಮೇಲೆ ಗೋಚರಿಸುತ್ತದೆ. ಶೀಘ್ರದಲ್ಲಿಯೇ ಗ್ರಹಗಳ ಸೇನಾಪತಿ ಎಂದೇ ಖ್ಯಾತ ಮಂಗಳನ ಹಸ್ತಾ ನಕ್ಷತ್ರ ಪ್ರವೇಶ ನೆರವೇರಲಿದೆ. ಇದು ಹಲವು ರಾಶಿಗಳ ಜಾತಕದವರ ಪಾಲಿಗೆ ಸಾಕಷ್ಟು ಅದೃಷ್ಟವನ್ನು ಹೊತ್ತು ತರಲಿದೆ .  

Written by - Nitin Tabib | Last Updated : Aug 28, 2023, 07:46 PM IST
  • 27 ನಕ್ಷತ್ರಪುಂಜಗಳಲ್ಲಿ, ಹಸ್ತ ನಕ್ಷತ್ರ 13 ನೇ ನಕ್ಷತ್ರವಾಗಿದೆ. ಮಂಗಳವು ಹಸ್ತಾ ನಕ್ಷತ್ರದಲ್ಲಿದ್ದಾಗ,
  • ವ್ಯಕ್ತಿಯು ಧೈರ್ಯಶಾಲಿ, ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವದಿಂದ ಹಣವನ್ನು ಗಳಿಸಲು ಇಷ್ಟಪಡುತ್ತಾನೆ.
  • ಅಷ್ಟೇ ಅಲ್ಲ, ಈ ನಕ್ಷತ್ರದಲ್ಲಿ ಮಂಗಳನ ಆಗಮನದಿಂದ ಕೆಲವು ರಾಶಿಯವರಿಗೆ ಶುಭ ಫಲಗಳು ಪ್ರಾಪ್ತಿಯಾದರೆ, ಕೆಲವರಿಗೆ ಅಶುಭ ಫಲಗಳು ಪ್ರಾಪ್ತಿಯಾಗುತ್ತವೆ.
  • ಪ್ರಸ್ತುತ ಈ ಮಂಗಳನ ಹಸ್ತಾ ನಕ್ಷತ್ರ ಗೋಚರ ಯಾವ ರಾಶಿಗಳ ಜನರಿಗೆ ಅಪಾರ ಲಾಭ ತಂದುಕೊಡಲಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,
ಹಸ್ತಾ ನಕ್ಷತ್ರಕ್ಕೆ ಮಂಗಳನ ಪ್ರವೇಶ, ಶ್ರೀಹರಿ ಲಕ್ಷ್ಮಿ ಕೃಪೆಯಿಂದ 4 ರಾಶಿಗಳಿಗೆ ಭಾಗ್ಯೋದಯ ಯೋಗ! title=

ಬೆಂಗಳೂರು: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗ್ರಹಗಳು ಮತ್ತು ನಕ್ಷತ್ರಗಳ ನಡೆಯಲ್ಲಿನ ಬದಲಾವಣೆಯ ಪ್ರಭಾವ ಎಲ್ಲಾ ದ್ವಾದಶ ರಾಶಿಗಳ ಜನರ ಜೀವನದ ಮೇಲೆ ಗೋಚರಿಸುತ್ತದೆ. ಸೆಪ್ಟೆಂಬರ್ 3 ರಂದು, ಗ್ರಹಗಳ ಸೇನಾಪತಿ ಮಂಗಳ ತನ್ನ ನಕ್ಷತ್ರವನ್ನು ಪರಿವರ್ತಿಸಲಿದ್ದಾನೆ .. ಬೆಳಗ್ಗೆ 7.25 ಕ್ಕೆ ಹಸ್ತಾ ನಕ್ಷತ್ರದಲ್ಲಿ ಮಂಗಳ ಗ್ರಹದ ಸಂಚಾರ ಹಲವು ರಾಶಿಗಳ ಜನರ ಜೀವನದ ಮೇಲೆ ಭಾರಿ ಸಕಾರಾತ್ಮಕ ಪ್ರಭಾವ ಬೀರಲಿದೆ. ಹಸ್ತಾ ನಕ್ಷತ್ರಕ್ಕೆ ಸೂರ್ಯ ಅಧಿಪತಿ ಎಂಬುದು ಇಲ್ಲಿ ಉಲ್ಲೇಖನೀಯ.

ವೈದಿಕ ಜ್ಯೋತಿಷ್ಯದ ಪ್ರಕಾರ, 27 ನಕ್ಷತ್ರಪುಂಜಗಳಲ್ಲಿ, ಹಸ್ತ ನಕ್ಷತ್ರ  13 ನೇ ನಕ್ಷತ್ರವಾಗಿದೆ. ಮಂಗಳವು ಹಸ್ತಾ ನಕ್ಷತ್ರದಲ್ಲಿದ್ದಾಗ, ವ್ಯಕ್ತಿಯು ಧೈರ್ಯಶಾಲಿ, ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವದಿಂದ ಹಣವನ್ನು ಗಳಿಸಲು ಇಷ್ಟಪಡುತ್ತಾನೆ. ಅಷ್ಟೇ ಅಲ್ಲ, ಈ ನಕ್ಷತ್ರದಲ್ಲಿ ಮಂಗಳನ ಆಗಮನದಿಂದ ಕೆಲವು ರಾಶಿಯವರಿಗೆ ಶುಭ ಫಲಗಳು ಪ್ರಾಪ್ತಿಯಾದರೆ, ಕೆಲವರಿಗೆ ಅಶುಭ ಫಲಗಳು ಪ್ರಾಪ್ತಿಯಾಗುತ್ತವೆ. ಪ್ರಸ್ತುತ ಈ ಮಂಗಳನ ಹಸ್ತಾ ನಕ್ಷತ್ರ ಗೋಚರ ಯಾವ ರಾಶಿಗಳ ಜನರಿಗೆ ಅಪಾರ ಲಾಭ ತಂದುಕೊಡಲಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ, 

ಮೇಷ ರಾಶಿ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಂಗಳನು ​​ಹಸ್ತಾ ನಕ್ಷತ್ರಕ್ಕೆ ಪ್ರವೇಶಿಸಿದರೆ ಮೇಷ ರಾಶಿಯವರಿಗೆ ಶತ್ರುಗಳಿಂದ ಯಾವುದೇ ರೀತಿಯ ಹಾನಿ ಉಂಟಾಗುವುದಿಲ್ಲ. ಈ ನಕ್ಷತ್ರಕ್ಕೆ ಅಧಿಪತಿ ಸೂರ್ಯ ಮತ್ತು ಮೇಷ ರಾಶಿಗೆ ಮಂಗಳ ಅಧಿಪತಿ. ಹೀಗಿರುವಾಗ ವ್ಯಕ್ತಿಯ ಜಾತಕದಲ್ಲಿ ಸೂರ್ಯನು ಉತ್ತಮ ಸ್ಥಾನದಲ್ಲಿದ್ದರೆ, ಅವನು ಶುಭ ಫಲಿತಾಂಶಗಳನ್ನು ಪಡೆಯುತ್ತಾನೆ. ನೀವು ಕಾನೂನು ಪ್ರಕರಣದಲ್ಲಿ ಸಿಲುಕಿಕೊಂಡಿದ್ದರೆ, ಈ ಸಮಯವು ನಿಮ್ಮ ಪರವಾಗಿರುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿವಹಿಸಿ.

ವೃಶ್ಚಿಕ ರಾಶಿ
ಮಂಗಳನ ಹಸ್ತಾ ನಕ್ಷತ್ರ ಪ್ರವೇಶ ನಿಮಗೆ ಯಾವುದಾದರೊಂದು  ದಿಟ್ಟ ನಿರ್ಧಾರವನ್ನು ತೆಗೆದುಕೊಳ್ಳಲು ಸಹಾಯ ಮಾಡಲಿದೆ. ಈ ಅವಧಿಯಲ್ಲಿನ, ನಿಮ್ಮ ಈ ಧೈರ್ಯದಿಂದಾಗಿ, ನಿಮ್ಮ ವೃತ್ತಿಜೀವನವು ಬಹಳ ವೇಗವಾಗಿ ಪ್ರಗತಿ ಹೊಂದುತ್ತದೆ. ಅಷ್ಟೇ ಅಲ್ಲ ಈ ಅವಧಿಯಲ್ಲಿ ನಿಮ್ಮ ಆತ್ಮವಿಶ್ವಾಸವೂ ಹೆಚ್ಚಾಗಲಿದೆ. ವೃಶ್ಚಿಕ ರಾಶಿಯವರಿಗೆ ಇದೊಂದು ಉತ್ತಮ ಸಂಚಾರ ಎಂದರೆ ತಪ್ಪಾಗಲಾರದು. 

ಇದನ್ನೂ ಓದಿ-ಶೀಘ್ರದಲ್ಲೇ ಧನದಾತನ ನೇರನಡೆ ಆರಂಭ, 3 ರಾಶಿಗಳ ಜನರ ಜೀವನದಲ್ಲಿ ಲಕ್ಷ್ಮಿ ಕೃಪೆಯಿಂದ ಭಾರಿ ಧನವೃಷ್ಟಿ!

ಕರ್ಕ ರಾಶಿ
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಈ ಅವಧಿಯಲ್ಲಿ ಜನರು ಕರ್ಕ ರಾಶಿಯವರ ವ್ಯಕ್ತಿತ್ವದಿಂದ ಆಕರ್ಷಿತರಾಗುತ್ತಾರೆ. ಹಸ್ತಾ ನಕ್ಷತ್ರದಲ್ಲಿ ಮಂಗಳನ ಈ ಸಂಕ್ರಮನದ ಸಮಯದಲ್ಲಿ, ಡಿಜಿಟಲ್ ಮಾಧ್ಯಮ, ವಕೀಲರು ಮುಂತಾದ ವ್ಯವಹಾರಕ್ಕೆ ಸಂಬಂಧಿಸಿದ ಜನರು ಅಪಾರ ಅಭಿವೃದ್ಧಿ ಹೊಂದಲಿದ್ದಾರೆ. ಹಸ್ತ ನಕ್ಷತ್ರದಲ್ಲಿ ಮಂಗಳ ಸಂಚಾರವು ನಿಮಗೆ ಹಾನಿಯನ್ನುಂಟು ಮಾಡುವುದಿಲ್ಲ.ಈ ಅವಧಿಯಲ್ಲಿ ನೀವು ತಂದೆ ಮತ್ತು ಗುರುಗಳ ಸಹಕಾರವನ್ನು ಪಡೆಯುಯಿವಿರಿ. ಆರೋಗ್ಯ ಚೆನ್ನಾಗಿರಲಿದೆ.

ಇದನ್ನೂ ಓದಿ-Rakshabandhan 2023 ದಿನ ಶನಿ ಗುರುವಿನ ಅಪರೂಪದ ಕಾಕತಾಳೀಯ, ಈ ಜನರ ಮೇಲೆ ಧನಲಕ್ಷ್ಮಿಯ ಅಪಾರ ಕೃಪಾಶೀರ್ವಾದ!

ಮಿಥುನ ರಾಶಿ
ಮಿಥುನ ರಾಶಿಯವರಿಗೆ ಮಂಗಳನ ಹಸ್ತಾ ನಕ್ಷತ್ರ ಪ್ರವೇಶದಿಂದ ಪೋಷಕರ ಬೆಂಬಲ ಸಿಗಲಿದೆ. ವ್ಯಾಪಾರದಲ್ಲಿ ಹೆಚ್ಚಳ ಕಂಡುಬರಲಿದೆ. ವ್ಯಾಪಾರದ ದೃಷ್ಟಿಯಿಂದ ಇದು ಬಹಳ ಒಳ್ಳೆಯ ಸಮಯ. ಈ ಅವಧಿಯಲ್ಲಿ ವ್ಯಾಪಾರವು ಸಾಕಷ್ಟು ಪ್ರಗತಿ ಸಾಧಿಸುತ್ತದೆ. ಉದ್ಯೋಗಿಗಳಿಗೆ ಈ ಅವಧಿಯು ಅತ್ಯಂತ ಮಂಗಳಕರವಾಗಿರುತ್ತದೆ. ಈ ಸಮಯದಲ್ಲಿ ವಿತ್ತೀಯ ಲಾಭದ ಸಾಧ್ಯತೆಗಳಿವೆ.

ಇದನ್ನೂ ಓದಿ-ಶೀಘ್ರದಲ್ಲೇ ತುಲಾ ರಾಶಿಯಲ್ಲಿ ಮಂಗಳ-ಬುಧರ ಮೈತ್ರಿ. ಧನ ಕುಬೇರನ ಕೃಪೆಯಿಂದ ಈ ರಾಶಿಗಳ ಜನರಿಗೆ ಆಕಸ್ಮಿಕ ಧನಲಾಭ ಯೋಗ.!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News