ಶುಕ್ರ ಗೋಚಾರ: ಇಂದಿನಿಂದ 25 ದಿನಗಳವರೆಗೆ ಮಾಲವ್ಯ ರಾಜಯೋಗದಿಂದ ಈ ರಾಶಿಯವರಿಗೆ ಧನ ವೃಷ್ಟಿ

ವೈದಿಕ ಜ್ಯೋತಿಷ್ಯದಲ್ಲಿ ಶುಕ್ರನನ್ನು ಐಶಾರಾಮಿ ಜೀವನ ಕಾರಕ ಎಂದು ಬಣ್ಣಿಸಲಾಗುತ್ತದೆ. ಇದೀಗ ಶುಕ್ರನು ರಾಶಿ ಪರಿವರ್ತನೆ ಹೊಂದಿ ಮೀನ ರಾಶಿಯನ್ನು ಪ್ರವೇಶಿಸಿದ್ದಾನೆ. ಇದರಿಂದ ಅತ್ಯಂತ ಶುಭಕರ ಮಾಲವ್ಯ ರಾಜಯೋಗವೂ ಸೃಷ್ಟಿಯಾಗುತ್ತಿದೆ. ಇದರ ಪರಿಣಾಮ ಯಾವ ರಾಶಿಗೆ ಶುಭ ಎಂದು ತಿಳಿಯೋಣ...

Written by - Yashaswini V | Last Updated : Feb 15, 2023, 08:24 AM IST
  • ಜ್ಯೋತಿಷ್ಯ ಶಾಸ್ತ್ರದಲ್ಲಿ, ಮಾಲವ್ಯ ರಾಜಯೋಗವನ್ನು ಅತ್ಯಂತ ಶುಭಕರ ಯೋಗ ಎಂದು ಪರಿಗಣಿಸಲಾಗಿದೆ.
  • ಮೀನ ರಾಶಿಯಲ್ಲಿ ರೂಪುಗೊಂಡಿರುವ ಮಾಲವ್ಯ ರಾಜಯೋಗು ಮುಂದಿನ 25 ದಿನಗಳವರೆಗೆ ಕೆಲವು ರಾಶಿಯವರಿಗೆ ಧನ ವೃಷ್ಟಿಯನ್ನುಂಟು ಮಾಡಲಿದೆ ಎಂದು ಹೇಳಲಾಗುತ್ತಿದೆ.
  • ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...
ಶುಕ್ರ ಗೋಚಾರ: ಇಂದಿನಿಂದ 25 ದಿನಗಳವರೆಗೆ ಮಾಲವ್ಯ ರಾಜಯೋಗದಿಂದ ಈ ರಾಶಿಯವರಿಗೆ ಧನ ವೃಷ್ಟಿ  title=
Malavya Raja Yoga Effect

ಬೆಂಗಳೂರು: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸಂಪತ್ತು-ಐಷಾರಾಮಿ, ಪ್ರೀತಿ-ಪ್ರಣಯದ ಅಂಶವೆಂದು ಪರಿಗಣಿಸಲಾಗಿರುವ ಶುಕ್ರನು ಇಂದು ಅಂದು ಫೆಬ್ರವರಿ 15, 2023 ರಂದು ತನ್ನ ರಾಶಿ ಚಕ್ರವನ್ನು ಬದಲಾಯಿಸುತ್ತಿದ್ದಾನೆ. ಶುಕ್ರನ ರಾಶಿ ಪರಿವರ್ತನೆಯು ಎಲ್ಲಾ ರಾಶಿಯವರ ಆರ್ಥಿಕ ಸ್ಥಿತಿ, ಸಂತೋಷ ಮತ್ತು ಪ್ರೀತಿಯ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಇಂದು ಶುಕ್ರನು ಮೀನ ರಾಶಿಯನ್ನು ಪ್ರವೇಶಿಸಿದ್ದಾನೆ. ಇದರೊಂದಿಗೆ ಅತ್ಯಂತ ಮಂಗಳಕರವಾದ ಮಾಲವ್ಯ ರಾಜಯೋಗವೂ ರೂಪುಗೊಳ್ಳುತ್ತಿದೆ.

ಜ್ಯೋತಿಷ್ಯ ಶಾಸ್ತ್ರದಲ್ಲಿ, ಮಾಲವ್ಯ ರಾಜಯೋಗವನ್ನು ಅತ್ಯಂತ ಶುಭಕರ ಯೋಗ ಎಂದು ಪರಿಗಣಿಸಲಾಗಿದೆ. ಮೀನ ರಾಶಿಯಲ್ಲಿ ರೂಪುಗೊಂಡಿರುವ ಮಾಲವ್ಯ ರಾಜಯೋಗು ಮುಂದಿನ 25 ದಿನಗಳವರೆಗೆ ಕೆಲವು ರಾಶಿಯವರಿಗೆ ಧನ ವೃಷ್ಟಿಯನ್ನುಂಟು ಮಾಡಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...

ಶುಕ್ರ ಗೋಚಾರದಿಂದ ಮಾಲವ್ಯ ರಾಜಯೋಗ- ಮುಂದಿನ 25 ದಿನಗಳು ಈ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ:
ವೃಷಭ ರಾಶಿ:

ಶುಕ್ರ ರಾಶಿ ಪರಿವರ್ತನೆಯಿಂದ ರೂಪುಗೊಂಡಿರುವ ಮಾಲವ್ಯ ರಾಜಯೋಗವು ಮುಂದಿನ 25 ದಿನಗಳವರೆಗೆ ವೃಷಭ ರಾಶಿಯವರ ಜೀವನದಲ್ಲಿ ಬಹಳ ಸಂತೋಷಕರ ಸಮಯವನ್ನು ತರಲಿದೆ. ವಿವಾಹಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಕಂಕಣಭಾಗ್ಯ ಕೂಡಿ ಬರಲಿದೆ. ಹಠಾತ್ ಧನ ಲಾಭದಿಂದ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲಿದೆ.

ಇದನ್ನೂ ಓದಿ- Shukra Gochar 2023: ಶುಕ್ರ ಸಂಕ್ರಮಣದಿಂದ ಈ ರಾಶಿಯವರಿಗೆ ಕಂಟಕ, ಎಚ್ಚರಿಕೆಯಿಂದ ಹೆಜ್ಜೆ ಇಡಿ

ಮಿಥುನ ರಾಶಿ:
ಮಾಲವ್ಯ ರಾಜಯೋಗದಿಂದ ಮಿಥುನ ರಾಶಿಯವರಿಗೆ ವೃತ್ತಿ ರಂಗದಲ್ಲಿ ಬಂಪರ್ ಲಾಭವಾಗಲಿದೆ. ಸ್ಥಗಿತಗೊಂಡ ಕಾಮಗಾರಿಗಳು ಪೂರ್ಣಗೊಳ್ಳಲಿದ್ದು ವ್ಯಾಪಾರ-ವ್ಯವಹಾರವೂ ವೃದ್ಧಿಯಾಗಲಿದೆ. ಸರ್ಕಾರಿ ನೌಕರರಿಗೆ ನಿಮ್ಮ ಇಚ್ಚೆಯ ಸ್ಥಳಕ್ಕೆ ವರ್ಗಾವಣೆ ಭಾಗ್ಯವೂ ದೊರೆಯಲಿದೆ.

ಕನ್ಯಾ ರಾಶಿ:
ಶುಕ್ರನ ಸಂಚಾರದಿಂದ ನಿರ್ಮಾಣಗೊಂಡ ಮಾಲವ್ಯ ರಾಜಯೋಗದಿಂದ ಕನ್ಯಾ ರಾಶಿಯವರಿಗೆ ಸಂಪತ್ತು ಪ್ರಾಪ್ತಿಯಾಗಲಿದೆ. ನಿಮ್ಮ ಬಹುದಿನದ ಕನಸುಗಳು ಈ ಸಮಯದಲ್ಲಿ ನನಸಾಗಲಿವೆ. ನಿಮ್ಮ ಪ್ರತಿ ಕೆಲಸದಲ್ಲೂ ಅದೃಷ್ಟದ ಬೆಂಬಲ ದೊರೆಯಲಿದ್ದು ನೀವು ಕೈ ಹಾಕಿದ ಕೆಲಸದಲ್ಲಿ ಯಶಸ್ಸು ದೊರೆಯಲಿದೆ.

ಇದನ್ನೂ ಓದಿ- 12 ಗಂಟೆಗಳ ಬಳಿಕ ಕುಂಭ ರಾಶಿಯಲ್ಲಿ ಸೂರ್ಯ, 3 ರಾಶಿಗಳ ಜನರಿಗೆ ಭಾರಿ ಧನಲಾಭ, ಬಡ್ತಿ-ಇನ್ಕ್ರಿಮೆಂಟ್ ಭಾಗ್ಯ!

ಧನು ರಾಶಿ:
ಶುಕ್ರ ಗೋಚಾರದಿಂದ ರೂಪುಗೊಂಡ ಮಾಲವ್ಯ ರಾಜಯೋಗವು ಧನು ರಾಶಿಯವರಿಗೆ ಬಂಪರ್ ಧನ ಲಾಭವನ್ನು ತರಲಿದೆ. ಹಣಕಾಸಿನ ಮೂಲಗಳು ಹೆಚ್ಚಾಗಲಿದ್ದು ನಿಮ್ಮ ಮನೆ-ವಾಹನ ಖರೀದಿಸುವ ಯೋಜನೆಗಳು ಪೂರ್ಣಗೊಳ್ಳಲಿವೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News