Shukra Asta Effects: ಈ ಜನರ ಅದೃಷ್ಟವನ್ನು ಬೆಳಗಿಸಲಿದ್ದಾನೆ ಅಸ್ತ ಶುಕ್ರ

Shukra Asta Effects:  ವೈದಿಕ ಜ್ಯೋತಿಷ್ಯದಲ್ಲಿ, ಶುಕ್ರನನ್ನು ಮಂಗಳಕರ ಗ್ರಹವೆಂದು ಪರಿಗಣಿಸಲಾಗುತ್ತದೆ.ಇಂದು ಸೆಪ್ಟೆಂಬರ್ 15 ರಂದು ಸಂಪತ್ತು, ಸಂತೋಷ, ಪ್ರೀತಿ-ಪ್ರಣಯವನ್ನು ನೀಡುವ ಶುಕ್ರ ಗ್ರಹವು ಅಸ್ತಮಿಸಲಿದೆ. ಆದಾಗ್ಯೂ, ಶುಕ್ರನು ಕೆಲವು ರಾಶಿಯ ಜನರಿಗೆ ಅಪಾರ ಸಂಪತ್ತು, ಸಂತೋಷವನ್ನು ಕರುಣಿಸಲಿದ್ದಾನೆ. 

Written by - Yashaswini V | Last Updated : Sep 15, 2022, 07:23 AM IST
  • ಜ್ಯೋತಿಷ್ಯ ಶಾಸ್ತ್ರದಲ್ಲಿ ಯಾವುದೇ ಗ್ರಹದ ಅಸ್ತಮಿಸುವ ಸ್ಥಿತಿಯನ್ನು ಉತ್ತಮವೆಂದು ಪರಿಗಣಿಸಲಾಗುವುದಿಲ್ಲ.
  • ಆದರೆ, ಕೆಲವೊಮ್ಮೆ ಗ್ರಹಗಳ ಅಸ್ತಮ ಸ್ಥಿತಿಯೂ ಕೂಡ ಮಂಗಳಕರ ಫಲಿತಾಂಶಗಳನ್ನು ನೀಡುತ್ತವೆ.
  • ಶುಕ್ರನು ತನ್ನ ಅಸ್ತಮ ಸ್ಥಿತಿಯಲ್ಲಿ ಕೆಲವು ರಾಶಿಯವರ ಜೀವನವನ್ನು ಬೆಳಗಲಿದ್ದಾನೆ ಎಂದು ಹೇಳಲಾಗುತ್ತಿದೆ.
Shukra Asta Effects: ಈ ಜನರ ಅದೃಷ್ಟವನ್ನು ಬೆಳಗಿಸಲಿದ್ದಾನೆ ಅಸ್ತ ಶುಕ್ರ  title=
Shukra ast effects

ಶುಕ್ರ ಅಸ್ತ ಪರಿಣಾಮ:  ವೈದಿಕ ಜ್ಯೋತಿಷ್ಯದಲ್ಲಿ, ಶುಕ್ರನನ್ನು ಮಂಗಳಕರ ಗ್ರಹವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಅದು ಜೀವನದಲ್ಲಿ ಸಂತೋಷ, ಸಮೃದ್ಧಿ, ಸೌಂದರ್ಯ, ಗೌರವ, ಪ್ರೀತಿ, ಪ್ರಣಯವನ್ನು ನೀಡುತ್ತದೆ. ಜೀವನದಲ್ಲಿ ಆನಂದವನ್ನು ನೀಡುವ ಗ್ರಹ ಶುಕ್ರ ಎಂದು ಹೇಳಬಹುದು. 15 ಸೆಪ್ಟೆಂಬರ್ 2022 ರ ರಾತ್ರಿ 02:29 ಕ್ಕೆ, ಶುಕ್ರ ಗ್ರಹವು ಸೂರ್ಯನ ರಾಶಿಯಾದ ಸಿಂಹ ರಾಶಿಯಲ್ಲಿ ಅಸ್ತಮಿಸಲಿದ್ದಾನೆ. ಶುಕ್ರನು ಡಿಸೆಂಬರ್  2, 2022 ರವರೆಗೆ ಇದೇ ಸ್ಥಿತಿಯಲ್ಲಿ ಇರುತ್ತಾನೆ.

ಜ್ಯೋತಿಷ್ಯ ಶಾಸ್ತ್ರದಲ್ಲಿ ಯಾವುದೇ ಗ್ರಹದ ಅಸ್ತಮಿಸುವ ಸ್ಥಿತಿಯನ್ನು  ಉತ್ತಮವೆಂದು ಪರಿಗಣಿಸದಿದ್ದರೂ, ಕೆಲವೊಮ್ಮೆ ಗ್ರಹಗಳ ಅಸ್ತಮ ಸ್ಥಿತಿಯೂ ಕೂಡ ಮಂಗಳಕರ ಫಲಿತಾಂಶಗಳನ್ನು ನೀಡುತ್ತವೆ. ಶುಕ್ರನು ತನ್ನ ಅಸ್ತಮ ಸ್ಥಿತಿಯಲ್ಲಿ ಕೆಲವು ರಾಶಿಯವರ ಜೀವನವನ್ನು ಬೆಳಗಲಿದ್ದಾನೆ ಎಂದು ಹೇಳಲಾಗುತ್ತಿದೆ. ಅಂತಹ ರಾಶಿಗಳು ಯಾವುವು ಎಂದು ತಿಳಿಯೋಣ...

ಶುಕ್ರ ಅಸ್ತ ಪರಿಣಾಮಗಳು: ಈ ರಾಶಿಯವರಿಗೆ ಅಪಾರ ಸಂಪತ್ತು, ಸಂತೋಷ ಪ್ರಾಪ್ತಿ :-
ಮೇಷ ರಾಶಿ:

ಶುಕ್ರ ಗ್ರಹದ ಅಸ್ತಮ ಸ್ಥಿತಿಯು ಮೇಷ ರಾಶಿಯವರಿಗೆ ಕುಟುಂಬದ ಜವಾಬ್ದಾರಿಗಳನ್ನು ಹೆಚ್ಚಿಸುತ್ತದೆ. ಅದರೊಂದಿಗೆ ಜೀವನದಲ್ಲಿ ಸಂತೋಷ ಮತ್ತು ವೈಭವವನ್ನು ನೀಡುತ್ತದೆ. ಮನೆಯಲ್ಲಿ ಸಂತೋಷ ಮತ್ತು ಶಾಂತಿ ನೆಲೆಸುತ್ತದೆ.

ಇದನ್ನೂ ಓದಿ- ಬುಧಾದಿತ್ಯ ರಾಜಯೋಗ- ಈ 3 ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದ್ದಾರೆ ಬುಧ-ಆದಿತ್ಯ

ವೃಷಭ ರಾಶಿ: 
ವೃಷಭ ರಾಶಿಯ ಅಧಿಪತಿ ಶುಕ್ರ ಗ್ರಹ. ಅಸ್ತಮ ಸ್ಥಿತಿಯಲ್ಲಿರುವ ಶುಕ್ರನು ಈ ಜನರಿಗೆ ಜೀವನದಲ್ಲಿ ಪ್ರೀತಿಯನ್ನು ನೀಡುತ್ತಾನೆ. ಸಂಗಾತಿಯೊಂದಿಗಿನ ಸಂಬಂಧವು ಬಲವಾಗಿರುತ್ತದೆ. ಕುಟುಂಬದ ಸುಖಕ್ಕಾಗಿ ದುಡಿಯುವಿರಿ. ಕೌಟುಂಬಿಕ ಪ್ರವಾಸಕ್ಕೆ ಯೋಜನೆ ರೂಪಿಸಬಹುದು.

ಮಿಥುನ ರಾಶಿ:
ಈ ಸಮಯದಲ್ಲಿ ಮಿಥುನ ರಾಶಿಯವರು ಐಷಾರಾಮಿ ವಸ್ತುಗಳನ್ನು ಖರೀದಿಸಲು ಖರ್ಚು ಮಾಡುವಿರಿ. ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ. ಪ್ರೀತಿಯ ಜೀವನ ಅದ್ಭುತವಾಗಿರುತ್ತದೆ. ಆರ್ಥಿಕ ವೃದ್ದಿಯಾಗಲಿದೆ.

ಕನ್ಯಾ ರಾಶಿ: 
ಶುಕ್ರ ಅಸ್ತನಾಗಿರುವ ಈ ಸಮಯದಲ್ಲಿ ಕನ್ಯಾ ರಾಶಿಯವರಿಗೆ ಹೊಸ ಜನರ ಸಂಪರ್ಕ ಏರ್ಪಡಲಿದೆ. ನಿಮ್ಮ ವ್ಯಕ್ತಿತ್ವವು ಆಕರ್ಷಕವಾಗಿರುತ್ತದೆ. ಇನ್ನೂ ಮದುವೆ ಆಗದವರಿಗೆ ಕಂಕಣ ಭಾಗ್ಯ ಕೂಡಿಬರಲಿದೆ. ಐಷಾರಾಮಿ ಜೀವನಕ್ಕೆ ಅಗತ್ಯ ಸೌಲಭ್ಯಗಳು ಲಭ್ಯವಾಗಲಿವೆ.

ತುಲಾ ರಾಶಿ:
ತುಲಾ ರಾಶಿಯ ಆಡಳಿತ ಗ್ರಹ ಶುಕ್ರ. ಅಂತಹ ಸಂದರ್ಭದಲ್ಲಿ  ಈ ಸಮಯ ವರದಾನದಂತಾಗುತ್ತದೆ. ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ. ನೀವು ಮೆಚ್ಚುಗೆ ಪಡೆಯುತ್ತೀರಿ. ಸೌಕರ್ಯಗಳು ಹೆಚ್ಚಾಗಲಿವೆ. ದೊಡ್ಡ ಕಂಪನಿಯಿಂದ ಉದ್ಯೋಗ ಆಫರ್ ಬರಬಹುದು. ಆದಾಯ ಹೆಚ್ಚಲಿದೆ. 

ಇದನ್ನೂ ಓದಿ- ಕನ್ಯಾ ರಾಶಿಗೆ ಶುಕ್ರನ ಪ್ರವೇಶ: ಸೆಪ್ಟೆಂಬರ್ 24ರಿಂದ ಈ ರಾಶಿಯವರಿಗೆ ಸುವರ್ಣ ದಿನಗಳು ಆರಂಭ

ವೃಶ್ಚಿಕ ರಾಶಿ:
ಈ ಸಮಯದಲ್ಲಿ ಜೀವನದಲ್ಲಿ ಸೌಕರ್ಯಗಳು ಹೆಚ್ಚಾಗುತ್ತವೆ. ಸಂಪತ್ತು ವೃದ್ಧಿಯಾಗಲಿದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ವೃತ್ತಿ ಜೀವನದಲ್ಲಿ ನಿರೀಕ್ಷಿತ ಫಲಿತಾಂಶಗಳನ್ನು ಪಡೆಯುವಿರಿ.

ಮಕರ ರಾಶಿ: 
ಮಕರ ರಾಶಿಯವರಿಗೆ ಇದು ಉತ್ತಮ ಸಮಯವಾಗಿರುತ್ತದೆ. ಸಂಬಂಧಗಳು ಗಟ್ಟಿಯಾಗುತ್ತವೆ. ಸಂಗಾತಿಯೊಂದಿಗೆ ಪ್ರಣಯ ಸಮಯವನ್ನು ಕಳೆಯುವಿರಿ. ಹಣವು ಪ್ರಯೋಜನಕಾರಿಯಾಗಲಿದೆ. ಜೀವನದಲ್ಲಿ ನೆಮ್ಮದಿಯ ಸಾಧನಗಳು ಹೆಚ್ಚಾಗುತ್ತವೆ.  

ಮೀನ ರಾಶಿ: 
ಮೀನ ರಾಶಿಯವರಿಗೆ ಜೀವನದಲ್ಲಿ ಸೌಕರ್ಯಗಳು ಹೆಚ್ಚಾಗುತ್ತವೆ. ಜೀವನ ಸುಗಮವಾಗಿ ಸಾಗಲಿದೆ. ಲವ್ ಲೈಫ್ ತುಂಬಾ ಚೆನ್ನಾಗಿರುತ್ತೆ. ಆರ್ಥಿಕ ಜೀವನವೂ ಸುಧಾರಿಸಲಿದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News