Shani Gochar 2023: ವೈದಿಕ ಜ್ಯೋತಿಷ್ಯದ ಪ್ರಕಾರ, ನವಗ್ರಹಗಳಲ್ಲಿ ಶನಿ ಗ್ರಹವು ಅತ್ಯಂತ ನಿಧಾನವಾಗಿ ಚಲಿಸುವ ಗ್ರಹ. ಶನಿ ಗ್ರಹವು ಯಾವುದೇ ಒಂದು ರಾಶಿಯಲ್ಲಿ ಸುಮಾರು ಎರಡೂವರೆ ವರ್ಷಗಳ ಕಾಲ ಸಂಚರಿಸುತ್ತಾನೆ. ಈ ಲೆಕ್ಕಾಚಾರದ ಪ್ರಕಾರ, ಶನಿಯು ಯಾವುದೇ ಒಂದು ಗ್ರಹವನ್ನು ಮತ್ತೆ ಸಂಧಿಸಲು ಬರೋಬ್ಬರಿ ಮೂರು ದಶಕಗಳು ಎಂದರೆ ಮೂವತ್ತು ವರ್ಷಗಳು ಬೇಕಾಗುತ್ತದೆ. ಅಂತೆಯೇ, ಹೊಸ ವರ್ಷ 2023ರಲ್ಲಿ ಶನಿಯು 30 ವರ್ಷಗಳ ಬಳಿಕ ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ.
ವಾಸ್ತವವಾಗಿ, ಪ್ರಸ್ತುತ ಮಕರ ರಾಶಿಯಲ್ಲಿ ಸಂಚರಿಸುತ್ತಿರುವ ಶನಿದೇವನು 2023ರ ಜನವರಿ 17ರಂದು ಮಕರ ರಾಶಿಯನ್ನು ತೊರೆದು ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿಯು 30 ವರ್ಷಗಳ ಬಳಿಕ ಕುಂಭ ರಾಶಿಗೆ ಪ್ರವೇಶಿಸುತ್ತಿದ್ದಾನೆ. ಶನಿಯ ಈ ರಾಶಿ ಬದಲಾವಣೆಯು ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಆದಾಗ್ಯೂ, ಹೊಸ ವರ್ಷದ ಮೊದಲ ಮಾಸದಲ್ಲಿಯೇ ಶನಿಯ ರಾಶಿ ಪರಿವರ್ತನೆಯು ಮೂರು ರಾಶಿಯ ಜನರಿಗೆ ವಿಶೇಷ ಆಶೀರ್ವಾದವನ್ನು ಕರುಣಿಸಲಿದ್ದಾನೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ- Shani Sade Sati Remedies: ಸಾಡೇಸಾತಿ ಶನಿ ಪ್ರಭಾವವಿದ್ದಾಗ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಲೇಬಾರದು
2023ರಲ್ಲಿ ಶನಿ ಸಂಚಾರದಿಂದ ಈ ಮೂರು ರಾಶಿಯವರಿಗೆ ವಿಶೇಷ ಲಾಭ:
ಮಿಥುನ ರಾಶಿ:
ಮೂರು ದಶಕಗಳ ಬಳಿಕ ಕುಂಭ ರಾಶಿಯನ್ನು ಪ್ರವೇಶಿಸಲಿರುವ ಶನಿ ಮಹಾತ್ಮ ಮಿಥುನ ರಾಶಿಯವರಿಗೆ ವಿಶೇಷ ಪ್ರಯೋಜನವನ್ನು ನೀದಲಿದ್ದಾನೆ. ಈ ಸಮಯದಲ್ಲಿ ಈ ರಾಶಿಯವರಿಗೆ ವಿದೇಶಿ ಪ್ರಯಾಣದ ಯೋಗವೂ ಇದೆ. ಉದ್ಯೋಗ ವ್ಯವಹಾರದಲ್ಲಿ ಈ ರಾಶಿಯವರ ಅದೃಷ್ಟ ಉಜ್ವಲಿಸಲಿದ್ದು ಆರ್ಥಿಕವಾಗಿ ಲಾಭದಾಯಕವಾಗಿರಲಿದೆ ಎಂದು ಹೇಳಲಾಗುತ್ತಿದೆ.
ಸಿಂಹ ರಾಶಿ:
ಹೊಸ ವರ್ಷದಲ್ಲಿ ಶನಿ ರಾಶಿ ಪರಿವರ್ತನೆಯಿಂದ ಈ ರಾಶಿಯ ಜನರಿಗೆ ಅದ್ಭುತ ಪ್ರಯೋಜನವಾಗಲಿದೆ. ಈ ವರ್ಷವಿಡೀ ಶನಿಯ ವಿಶೇಷ ಕೃಪೆಯಿಂದಾಗಿ ಸಿಂಹ ರಾಶಿಯ ಜನರು ಎಲ್ಲಾ ಕೆಲಸಗಳಲ್ಲೂ ಯಶಸ್ಸನ್ನು ಪಡೆಯಲಿದ್ದಾರೆ. ಈ ಸಮಯದಲ್ಲಿ ನಿಮ್ಮ ಕಷ್ಟಕ್ಕೆ ತಕ್ಕಂತೆ ಪ್ರತಿಫಲ ದೊರೆಯುವುದರಿಂದ ಮನಸ್ಸಿಗೆ ಸಂತೋಷವಾಗಲಿದೆ.
ಇದನ್ನೂ ಓದಿ- Shani Dev: ಶನಿವಾರ ಅಪ್ಪಿತಪ್ಪಿಯೂ ನೀವು ಈ 5 ಕೆಲಸಗಳನ್ನು ಮಾಡಬಾರದು!
ಮೀನ ರಾಶಿ:
ವೈದಿಕ ಜ್ಯೋತಿಷ್ಯದ ಪ್ರಕಾರ, ಕುಂಭ ರಾಶಿಗೆ ಪ್ರವೇಶಿಸಲಿರುವ ಶನಿಯು ಈ ರಾಶಿಯವರಿಗೆ ವಿಶೇಷ ಆಶೀರ್ವಾದವನ್ನು ಕರುಣಿಸಲಿದ್ದಾನೆ. ಈ ಸಮಯದಲ್ಲಿ ನೀವು ನಿಮ್ಮ ಖರ್ಚು-ವೆಚ್ಚಗಳನ್ನು ನಿಯಂತ್ರಿಸುವುದು ಒಳಿತು. ಇಲ್ಲದಿದ್ದರೆ ಆರ್ಥಿಕ ಸಮಸ್ಯೆ ಹೆಚ್ಚಾಗಬಹುದು. ವ್ಯರ್ಥ ಖರ್ಚಿನ ಬದಲಿಗೆ ಹಣವನ್ನು ಸರಿಯಾದ ಸ್ಥಳದಲ್ಲಿ ಹೂಡಿಕೆ ಮಾಡುವುದರಿಂದ ಹೆಚ್ಚಿನ ಲಾಭಗಳಿಸಬಹುದಾಗಿದೆ. ಆರೋಗ್ಯದ ದೃಷ್ಟಿಯಿಂದಲೂ ಸಮಯ ಉತ್ತಮವಾಗಿದೆ. ಒಟ್ಟಾರೆಯಾಗಿ ನಿಮ್ಮ ಪ್ರತಿ ಕೆಲಸದಲ್ಲಿ ಶನಿ ಮಹಾತ್ಮ ನಿಮ್ಮ ಜೊತೆಗೆ ನಿಲ್ಲಲಿದ್ದು, ಯಶಸ್ಸು ನಿಮ್ಮದಾಗಲಿದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.