ಬಂಧ ಬೆಸೆಯುವ ಹಬ್ಬ ರಕ್ಷಾಬಂಧನ: ದಿನಾಂಕ, ಶುಭ ಮುಹೂರ್ತ, ಭದ್ರಾ ಕಾಲದ ಬಗ್ಗೆ ತಿಳಿಯಿರಿ

ಶ್ರಾವಣ ಮಾಸದ ಶುಕ್ಲ ಪಕ್ಷದ ಹುಣ್ಣಿಮೆ ದಿನಾಂಕ ಆಗಸ್ಟ್ 11 ರಂದು ಬೆಳಿಗ್ಗೆ 10:38 ರಿಂದ ಪ್ರಾರಂಭವಾಗಿ ಆಗಸ್ಟ್ 12 ರಂದು ಬೆಳಿಗ್ಗೆ 07:05 ರವರೆಗೆ ಇರುತ್ತದೆ. ಉದಯ ತಿಥಿಯು ಆಗಸ್ಟ್ 12 ರಂದಾಗಿದ್ದು, ಇದೇ ದಿನ ರಕ್ಷಾ ಬಂಧನವನ್ನು ಆಚರಿಸಬೇಕು. ಆದರೆ ಆಗಸ್ಟ್ 11 ಹುಣ್ಣಿಮೆಯ ದಿನವಾಗಿರುವುದರಿಂದ ಜ್ಯೋತಿಷಿಗಳ ಪ್ರಕಾರ, ಆಗಸ್ಟ್ 11 ರಂದು ರಕ್ಷಾಬಂಧನವನ್ನು ಆಚರಿಸುವುದು ಉತ್ತಮ. ಈ ರೀತಿಯಾಗಿ, 2022 ರಲ್ಲಿ, ರಕ್ಷಾ ಬಂಧನವನ್ನು ಆಗಸ್ಟ್ 11ರಂದು ಆಚರಿಸಲಾಗುತ್ತದೆ.

Written by - Bhavishya Shetty | Last Updated : Jul 10, 2022, 03:15 PM IST
  • ರಕ್ಷಾ ಬಂಧನವನ್ನು ಆಗಸ್ಟ್ 11ರಂದು ಆಚರಿಸಲಾಗುತ್ತದೆ
  • ಬೆಳಿಗ್ಗೆ 10:38 ರಿಂದ ರಾತ್ರಿ 9 ರವರೆಗೆ ರಾಖಿ ಕಟ್ಟಲು ಶುಭ ಮುಹೂರ್ತ
  • ಭದ್ರಾ ಕಾಲದಲ್ಲಿ ನಿಮ್ಮ ಸಹೋದರರಿಗೆ ರಾಖಿ ಕಟ್ಟಬೇಡಿ
ಬಂಧ ಬೆಸೆಯುವ ಹಬ್ಬ ರಕ್ಷಾಬಂಧನ:  ದಿನಾಂಕ, ಶುಭ ಮುಹೂರ್ತ, ಭದ್ರಾ ಕಾಲದ ಬಗ್ಗೆ ತಿಳಿಯಿರಿ  title=
Rakshabandhan

ರಕ್ಷಾಬಂಧನ ಹಬ್ಬವನ್ನು ಶ್ರಾವಣ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಈ ವರ್ಷ ಹುಣ್ಣಿಮೆಯ ದಿನಾಂಕವು 2 ದಿನಗಳಲ್ಲಿ ಅಂದರೆ ಆಗಸ್ಟ್ 11 ಮತ್ತು 12ರಂದು ರಂದು ಬರುತ್ತಿದೆ. ಈ ಕಾರಣದಿಂದಾಗಿ, ಸಹೋದರ ಸಹೋದರಿಯರ ಪವಿತ್ರ ಸಂಬಂಧವನ್ನು ಆಚರಿಸುವ ಈ ಹಬ್ಬವು ಯಾವಾಗ ಆಚರಿಸಬೇಕು ಎಂಬ ಗೊಂದಲವಿದೆ. ರಕ್ಷಾಬಂಧನದ ದಿನದಂದು, ಸಹೋದರಿಯರು ಶುಭ ಸಮಯದಲ್ಲಿ ತಮ್ಮ ಸಹೋದರರಿಗೆ ರಾಖಿ ಕಟ್ಟುತ್ತಾರೆ. ಅಷ್ಟೇ ಅಲ್ಲದೆ, ಈ ಸಂದರ್ಭದಲ್ಲಿ ಅವರಿಗೆ ದೀರ್ಘಾಯುಷ್ಯ ಪ್ರಾಪ್ತಿಯಾಗಲಿ ಎಂದು ಹಾರೈಸುತ್ತಾರೆ. ಪ್ರತಿಯಾಗಿ, ಸಹೋದರರು ತಮ್ಮ ಸಹೋದರಿಯರಿಗೆ ಉಡುಗೊರೆಗಳನ್ನು ನೀಡುತ್ತಾರೆ ಮತ್ತು ಅವರ ರಕ್ಷಣೆ ಮಾಡುವ ಭರವಸೆಯನ್ನು ನೀಡುತ್ತಾರೆ.

ಇದನ್ನೂ ಓದಿ: Shooting in South Africa: ದಕ್ಷಿಣ ಆಫ್ರಿಕಾದಲ್ಲಿ ಗುಂಡಿನ ದಾಳಿ, 14 ಮಂದಿ ದುರ್ಮರಣ

ಶ್ರಾವಣ ಮಾಸದ ಶುಕ್ಲ ಪಕ್ಷದ ಹುಣ್ಣಿಮೆ ದಿನಾಂಕ ಆಗಸ್ಟ್ 11 ರಂದು ಬೆಳಿಗ್ಗೆ 10:38 ರಿಂದ ಪ್ರಾರಂಭವಾಗಿ ಆಗಸ್ಟ್ 12 ರಂದು ಬೆಳಿಗ್ಗೆ 07:05 ರವರೆಗೆ ಇರುತ್ತದೆ. ಉದಯ ತಿಥಿಯು ಆಗಸ್ಟ್ 12 ರಂದಾಗಿದ್ದು, ಇದೇ ದಿನ ರಕ್ಷಾ ಬಂಧನವನ್ನು ಆಚರಿಸಬೇಕು. ಆದರೆ ಆಗಸ್ಟ್ 11 ಹುಣ್ಣಿಮೆಯ ದಿನವಾಗಿರುವುದರಿಂದ ಜ್ಯೋತಿಷಿಗಳ ಪ್ರಕಾರ, ಆಗಸ್ಟ್ 11 ರಂದು ರಕ್ಷಾಬಂಧನವನ್ನು ಆಚರಿಸುವುದು ಉತ್ತಮ. ಈ ರೀತಿಯಾಗಿ, 2022 ರಲ್ಲಿ, ರಕ್ಷಾ ಬಂಧನವನ್ನು ಆಗಸ್ಟ್ 11ರಂದು ಆಚರಿಸಲಾಗುತ್ತದೆ.

ರಕ್ಷಾ ಬಂಧನದ ಶುಭ ಸಮಯ: 
ಆಗಸ್ಟ್‌ 11ರಂದು ರಕ್ಷಾಬಂಧನವನ್ನು ಆಚರಿಸುವ ಶುಭ ಸಮಯವು ಬೆಳಿಗ್ಗೆಯಿಂದಲೇ ಪ್ರಾರಂಭವಾಗುತ್ತದೆ. ಈ ದಿನ ಬೆಳಿಗ್ಗೆ 10:38 ರಿಂದ ರಾತ್ರಿ 9 ರವರೆಗೆ ರಾಖಿ ಕಟ್ಟಲು ಶುಭ ಮುಹೂರ್ತವಿರುತ್ತದೆ. ಅಭಿಜೀತ್ ಮುಹೂರ್ತವು ಮಧ್ಯಾಹ್ನ 12:06 ರಿಂದ 12:57 ರವರೆಗೆ ಇರುತ್ತದೆ. ಅಮೃತ ಕಾಲ ಸಂಜೆ 6:55 ರಿಂದ ರಾತ್ರಿ 8:20 ರವರೆಗೆ ಇರುತ್ತದೆ.

ಇದನ್ನೂ ಓದಿ: ಕೆನಡಾದಲ್ಲಿ ಶಿಕ್ಷಣ ಪಡೆಯಬೇಕೆ? ಹಾಗಾದ್ರೆ ಈ ಉಚಿತ ಸೇವೆಗಳ ಬಗ್ಗೆ ತಿಳಿದುಕೊಳ್ಳಿ

ಭದ್ರಾ ಕಾಲದಲ್ಲಿ ರಾಖಿ ಕಟ್ಟಬೇಡಿ: 
ಭದ್ರಾ ಕಾಲದಲ್ಲಿ ನಿಮ್ಮ ಸಹೋದರರಿಗೆ ರಾಖಿ ಕಟ್ಟಬೇಡಿ. ಭದ್ರಾ ಕಾಲದಲ್ಲಿ ರಾಖಿ ಕಟ್ಟುವುದು ಅಶುಭ. ಏಕೆಂದರೆ ಲಂಕಾಪತಿ ರಾವಣನ ಸಹೋದರಿ ಭದ್ರ ಕಾಲದಲ್ಲಿಯೇ ರಾವಣನಿಗೆ ರಾಖಿಯನ್ನು ಕಟ್ಟಿದ್ದಳು. ಬಳಿಕ ಯುದ್ಧದಲ್ಲಿ ಆತ ಹತನಾದನು. ಆದ್ದರಿಂದ ಭದ್ರ ಕಾಲದಲ್ಲಿ ರಾಖಿ ಕಟ್ಟಬಾರದು ಎನ್ನಲಾಗುತ್ತದೆ. ರಕ್ಷಾ ಬಂಧನದ ದಿನವಾದ ಆಗಸ್ಟ್ 11 ರಂದು, ಭದ್ರಾ ಕಾಲ ಸಂಜೆ 5:17 ರಿಂದ 8:51 ರವರೆಗೆ ಇರುತ್ತದೆ. 

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News