Happy Life Tips: ಬದುಕು ಸುಲಭಗೊಳಿಸಲು ಗರುಡ ಪುರಾಣದ ಈ ಸಲಹೆಗಳನ್ನು ತಪ್ಪದೆ ಅನುಸರಿಸಿ!

Happy Life Tips: ಸನಾತನ ಧರ್ಮದ ಮಹಾಪುರಾಣಗಳಲ್ಲಿ ಗರುಡ ಪುರಾಣ ಕೂಡ ಒಂದು. ಈ ಪುರಾಣದಲ್ಲಿ ಶ್ರೀವಿಷ್ಣು ಹಾಗೂ ವಿಷ್ಣುವಿನ ವಾಹನವಾಗಿರುವ ಗರುಡ ಪಕ್ಷಿಯ ನಡುವಿನ ಸಂವಾದದ ವರ್ಣನೆ ಇದೆ. ಈ ಪುರಾಣದಲ್ಲಿ ಜೀವನ, ಸಾವು ಹಾಗೂ ಸಾವಿನ ಬಳಿಕ ನಡೆಯುವ ಘಟನಾವಳಿಗಳ ಉಲ್ಲೇಖವಿದೆ. (Spiritual News In Kannada)  

Written by - Nitin Tabib | Last Updated : Jan 20, 2024, 11:17 PM IST
  • ಹಸುವಿನ ಸೇವೆ ಮಾಡುವುದನ್ನು ಹಿಂದೂ ಧರ್ಮ ಶಾಸ್ರದಲ್ಲಿ ಅತ್ಯಂತ ಶುಭಕರ ಎಂದು ಹೇಳಲಾಗಿದೆ.
  • ಹಸುವಿನ ಸೇವೆ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. ಗರುಡ ಪುರಾಣದಲ್ಲಿಯೂ ಕೂಡ ಗೋಶಾಲೆ ತೆರೆಯುವುದು ಹಾಗೂ ಗೋವುಗಳ ಸೇವೆ ಮಾಡುವುದರ ಕುರಿತು ಉಲ್ಲೇಖಿಸಲಾಗಿದೆ.
  • ಪ್ರತಿನಿತ್ಯ ಗೋವುಗಳ ಸೇವೆ ಮಾಡುವುದರಿಂದ ಮನುಷ್ಯ ತಿಳಿದೋ ಅಥವಾ ತಿಳಿಯದೆಯೋ ಮಾಡಿರುವ ಪಾಪಗಳು ನಷ್ಟವಾಗುತ್ತವೆ.
  • 3. ಗರುಡ ಪುರಾಣದ
Happy Life Tips: ಬದುಕು ಸುಲಭಗೊಳಿಸಲು ಗರುಡ ಪುರಾಣದ ಈ ಸಲಹೆಗಳನ್ನು ತಪ್ಪದೆ ಅನುಸರಿಸಿ! title=

Happy Life Tips: ಸನಾತನ ಧರ್ಮದ ಮಹಾಪುರಾಣಗಳಲ್ಲಿ ಗರುಡ ಪುರಾಣ ಕೂಡ ಒಂದು. ಈ ಪುರಾಣದಲ್ಲಿ ಶ್ರೀವಿಷ್ಣು ಹಾಗೂ ವಿಷ್ಣುವಿನ ವಾಹನವಾಗಿರುವ ಗರುಡ ಪಕ್ಷಿಯ ನಡುವಿನ ಸಂವಾದದ ವರ್ಣನೆ ಇದೆ. ಈ ಪುರಾಣದಲ್ಲಿ ಜೀವನ, ಸಾವು ಹಾಗೂ ಸಾವಿನ ಬಳಿಕ ನಡೆಯುವ ಘಟನಾವಳಿಗಳ ಉಲ್ಲೇಖವಿದೆ. ಅಷ್ಟೇ ಅಲ್ಲ ಓರ್ವ ವ್ಯಕ್ತಿ ತನ್ನ ಜೀವನವನ್ನು ಸುಖದಿಂದ ಹೇಗೆ ಕಳೆಯಬೇಕು ಎನ್ನುವುದಕ್ಕೆ ಸಲಹೆಗಳನ್ನು ನೀಡಲಾಗಿದೆ. ಈ ಪುರಾಣದಲ್ಲಿ ನೀಡಲಾಗಿರುವ ಸಲಹೆಗಳನ್ನೂ ಅನುಸರಿಸಿದರೆ, ಮಾನವನ ಜೀವನ ತುಂಬಾ ಸುಲಭವಾಗುತ್ತದೆ.(Spiritual News In Kannada)

1. ಗರುಡ ಪುರಾಣದ ಪ್ರಕಾರ ಜೀವನದಲ್ಲಿ ಕೆಲ ಕೆಲಸಗಳನ್ನು ಪ್ರತಿನಿತ್ಯ ತಪ್ಪದೆ ಮಾಡಬೇಕು ಎಂದು ಹೇಳಲಾಗಿದೆ. ಹಿಂದೂ ಧರ್ಮದಲ್ಲಿ ಈ ಕೆಲಸಗಳನ್ನು ಅತ್ಯಂತ ಶುಭ ಫಲಪ್ರದಾಯಿ ಎಂದು ಹೇಳಲಾಗಿದೆ. ಹೀಗಿರುವಾಗ ಯಾವ ಕೆಲಸಗಳನು ಮಾಡಿದರೆ ನಮ್ಮ ಜೀವನ ಸುಲಭವಾಗುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಅವಶ್ಯಕವಾಗುತ್ತದೆ.

2. ಹಸುವಿನ ಸೇವೆ ಮಾಡುವುದನ್ನು ಹಿಂದೂ ಧರ್ಮ ಶಾಸ್ರದಲ್ಲಿ ಅತ್ಯಂತ ಶುಭಕರ ಎಂದು ಹೇಳಲಾಗಿದೆ. ಹಸುವಿನ ಸೇವೆ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. ಗರುಡ ಪುರಾಣದಲ್ಲಿಯೂ ಕೂಡ ಗೋಶಾಲೆ ತೆರೆಯುವುದು ಹಾಗೂ ಗೋವುಗಳ ಸೇವೆ ಮಾಡುವುದರ ಕುರಿತು ಉಲ್ಲೇಖಿಸಲಾಗಿದೆ. ಪ್ರತಿನಿತ್ಯ ಗೋವುಗಳ ಸೇವೆ ಮಾಡುವುದರಿಂದ ಮನುಷ್ಯ ತಿಳಿದೋ ಅಥವಾ ತಿಳಿಯದೆಯೋ ಮಾಡಿರುವ ಪಾಪಗಳು ನಷ್ಟವಾಗುತ್ತವೆ.

3. ಗರುಡ ಪುರಾಣದ ಪ್ರಕಾರ ಪ್ರತಿನಿತ್ಯ ಹಸಿದಿರುವವರಿಗೆ ಹಾಗೂ ನಿರ್ಗತಿಕರಿಗೆ ಭೋಜನ ಮಾಡಿಸಬೇಕು ಎನ್ನಲಾಗಿದೆ. ಅವರಿಗೆ ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಅನ್ನದಾನ ಮಾಡಿ ಎಂದು ಹೇಳಲಾಗಿದೆ. ಇದರಿಂದ ವ್ಯಕ್ತಿಯ ಪುಣ್ಯ ಕರ್ಮಗಳಲ್ಲಿ ವೃದ್ಧಿಯಾಗುತ್ತದೆ ಹಾಗೂ ಮನೆ ಸಮೃದ್ಧಿಯಿಂದ ತುಂಬಿರುತ್ತದೆ.

ಇದನ್ನೂ ಓದಿ-Mahalakshmi Yog 2024: ಹತ್ತು ವರ್ಷಗಳ ಬಳಿಕ ಮಹಾಲಕ್ಷ್ಮೀ ರಾಜಯೋಗ ನಿರ್ಮಾಣ, ಈ ಜನರಿಗೆ ಪ್ರಾಪ್ತಿಯಾಗಲಿದೆ ಕುಬೇರ ನಿಧಿ!

4. ನಿತ್ಯ ಮನೆಯಲ್ಲಿ ತಯಾರಾಗುವ ಭೋಜನದ ಮೊದಲ ಭಾಗವನ್ನು ದೇವರಿಗೆ ನೈವೇದ್ಯ ರೂಪದಲ್ಲಿ ಅರ್ಪಿಸಬೇಕು ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ. ಆದರೆ, ನೈವೆದ್ಯದಲ್ಲಿ ಕೇವಲ ಸಾತ್ವಿಕ ಪದಾರ್ಥಗಳು ಮಾತ್ರ ಇರಬೇಕು. ಈ ರೀತಿ ಮಾಡುವುದರಿಂದ ತಾಯಿ ಅನ್ನಪೂರ್ಣೆ ಪ್ರಸನ್ನಳಾಗುತ್ತಾಳೆ ಮತ್ತು ಮನೆಯಲ್ಲಿ ತಾಯಿ ಲಕ್ಷ್ಮಿಯ ಕೃಪೆ ಹೆಚ್ಚಾಗುತ್ತದೆ ಎನ್ನಲಾಗಿದೆ.

ಇದನ್ನೂ ಓದಿ-Sleeping Vastu Tips: ಮಲಗುವ ಈ ವಾಸ್ತು ನಿಯಮಗಳನ್ನು ಅನುಸರಿಸಿದರೆ, ಯಶಸ್ಸು ಗ್ಯಾರಂಟಿ ನಿಮ್ಮದಾಗುತ್ತದೆ!

5. ಪ್ರತಿ ನಿತ್ಯ ವ್ಯಕ್ತಿ ತನಗಾಗೆಂದೇ ಸ್ವಲ್ಪ ಸಮಯ ಮೀಸಲಿಡಬೇಕು ಮತ್ತು ಈ ಸಮಯದಲ್ಲಿ ಆತ ದಿನವಿಡೀ ಮಾಡಿದ ಒಳ್ಳೆಯ ಹಾಗೂ ತಪ್ಪು ಕಾರ್ಯಗಳ ಕುರಿತು ಶಾಂತ ಚಿತ್ತದಿಂದ ಚಿಂತನೆ ನಡೆಸಬೇಕು ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ. ಈ ರೀತಿ ಮಾಡುವುದರಿಂದ ಮೆದುಳು ಶಾಂತವಾಗುತ್ತದೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News