Guru Gochar 2023: ಹೊಸ ವರ್ಷದಲ್ಲಿ ಈ ರಾಶಿಯವರಿಗೆ ಭಾಗ್ಯೋದಯವನ್ನು ಕರುಣಿಸಲಿದ್ದಾನೆ ಬೃಹಸ್ಪತಿ

Guru Gochar 2023: ವೈದಿಕ ಜ್ಯೋತಿಷ್ಯದಲ್ಲಿ, ನವಗ್ರಹಗಳಲ್ಲಿ ಬೃಹಸ್ಪತಿಯನ್ನು ದೇವಗುರು ಎಂದು ಬಣ್ಣಿಸಲಾಗಿದೆ. ದೇವಗುರು ಬೃಹಸ್ಪತಿಯು ಹೊಸ ವರ್ಷ 2023ರಲ್ಲಿ ಕೆಲವು ರಾಶಿಯವರಿಗೆ ಭಾಗ್ಯದ ಬಾಗಿಲು ತೆರೆಯಲಿದ್ದು ಹಣದ ಹೊಳೆಯನ್ನೇ ಹರಿಸಲಿದ್ದಾನೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು... 

Written by - Yashaswini V | Last Updated : Dec 14, 2022, 05:07 PM IST
  • ಹೊಸ ವರ್ಷ 2023 ರಲ್ಲಿ ದೇವಗುರು ಗುರುವು ಮೀನ ರಾಶಿಯನ್ನು ಬಿಟ್ಟು ಮೇಷ ರಾಶಿಯನ್ನು ಪ್ರವೇಶಿಸಲಿದ್ದಾರೆ.
  • ಮೇಷ ರಾಶಿಯಲ್ಲಿ ಗುರು ಸಂಚಾರವು ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರಲಿದೆ.
  • ಗುರು ರಾಶಿ ಪರಿವರ್ತನೆಯಿಂದ ಕೆಲವು ರಾಶಿಯವರಿಗೆ ಹೊಸ ವರ್ಷದಲ್ಲಿ ಅದೃಷ್ಟದ ಬಾಗಿಲು ತೆರೆಯಲಿವೆ ಎಂದು ಹೇಳಲಾಗುತ್ತಿದೆ.
Guru Gochar 2023: ಹೊಸ ವರ್ಷದಲ್ಲಿ ಈ ರಾಶಿಯವರಿಗೆ ಭಾಗ್ಯೋದಯವನ್ನು ಕರುಣಿಸಲಿದ್ದಾನೆ ಬೃಹಸ್ಪತಿ  title=
Guru gochar 2023

Guru Gochar 2023: ವೈದಿಕ ಜ್ಯೋತಿಷ್ಯದಲ್ಲಿ, ಸಂತೋಷ ಮತ್ತು ಸಮೃದ್ಧಿಯ ಅಂಶವೆಂದು ಪರಿಗಣಿಸಲಾಗಿರುವ ಬೃಹಸ್ಪತಿಯನ್ನು ದೇವ ಗುರು ಎಂದು ಬಣ್ಣಿಸಲಾಗಿದೆ. ಯಾವುದೇ ವ್ಯಕ್ತಿಯ ಜಾತಕದಲ್ಲಿ ಗುರು ಗ್ರಹವು ಶುಭ ಸ್ಥಾನದಲ್ಲಿದ್ದರೆ ಅಂತಹ ವ್ಯಕ್ತಿಯ ಜೀವನದಲ್ಲಿ ಸುಖ-ಸಂತೋಷಕ್ಕೆ ಕೊರತೆ ಇರುವುದಿಲ್ಲ ಎಂದು ನಂಬಲಾಗಿದೆ. 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗುರುವಿನ ರಾಶಿ ಪರಿವರ್ತನೆಯು ಜನರ ಜೀವನದಲ್ಲಿ ಮಹತ್ವದ ಪರಿಣಾಮ ಬೀರುತ್ತದೆ. ಅಂತಹ ಗುರುವು 2023ರಲ್ಲಿ ಮೀನ ರಾಶಿಯನ್ನು ಬಿಟ್ಟು ಮೇಷ ರಾಶಿಯನ್ನು ಪ್ರವೇಶಿಸಲಿದ್ದಾನೆ. ಗುರುವಿನ ರಾಶಿ ಪರಿವರ್ತನೆಯು ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಆದರೂ ಕೆಲವು ರಾಶಿಯವರ ಜೀವನದಲ್ಲಿ ಭಾಗ್ಯೋದಯವನ್ನು ಕರುಣಿಸಲಿದ್ದಾನೆ ಎಂದು ಹೇಳಲಾಗುತ್ತಿದೆ. ಹೊಸ ವರ್ಷದಲ್ಲಿ ಬೃಹಸ್ಪತಿಯು ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲನ್ನು ತೆರೆಯಲಿದ್ದಾನೆ ಎಂದು ತಿಳಿಯಿರಿ.

ಹೊಸ ವರ್ಷದಲ್ಲಿ ಈ ರಾಶಿಯವರಿಗೆ ಅದೃಷ್ಟದ ಬಾಗಿಲನ್ನು ತೆರೆಯಲಿದ್ದಾನೆ ಬೃಹಸ್ಪತಿ:
ಮಿಥುನ ರಾಶಿಯವರಿಗೆ ಆದಾಯದಲ್ಲಿ ಹೆಚ್ಚಳ:

ಹೊಸ ವರ್ಷದಲ್ಲಿ ಬೃಹಸ್ಪತಿಯ ರಾಶಿ ಪರಿವರ್ತನೆಯಿಂದ ಮಿಥುನ ರಾಶಿಯವರಿಗೆ ವಿಶೇಷ ಲಾಭವಾಗಲಿದೆ. ಈ ಸಮಯದಲ್ಲಿ ಈ ರಾಶಿಯವರಿಗೆ ಆದಾಯದಲ್ಲಿ ಹೆಚ್ಚಳವಾಗಲಿದ್ದು  ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದ್ದು ವ್ಯಾಪಾರ-ವ್ಯವಹಾರದಲ್ಲಿ ಬಂಪರ್ ಪ್ರಯೋಜನವಾಗಲಿದೆ.

ಇದನ್ನೂ ಓದಿ- Surya Gochar 2022: ಧನು ಸಂಕ್ರಾಂತಿಯಂದು ಈ ಪರಿಹಾರ ಮಾಡಿದರೆ ಸೂರ್ಯನಂತೆ ಹೊಳೆಯುತ್ತೆ ಅದೃಷ್ಟ

ಕರ್ಕಾಟಕ ರಾಶಿಯವರಿಗೆ ವೃತ್ತಿಯಲ್ಲಿ ಬೆಳವಣಿಗೆ:
ಗುರು ರಾಶಿ ಪರಿವರ್ತನೆಯಿಂದ ಕರ್ಕಾಟಕ ರಾಶಿಯವರಿಗೆ ವೃತ್ತಿ ರಂಗದಲ್ಲಿ ಹೊಸ ಹೊಸ ಅವಕಾಶಗಳು ಲಭ್ಯವಾಗಲಿವೆ. ಜೊತೆಗೆ ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿದ್ದು ಆರ್ಥಿಕವಾಗಿ ಬಲಗೊಳ್ಳುವಿರಿ. ಇದರೊಂದಿಗೆ ಸಮಾಜದಲ್ಲಿಯೂ ಗೌರವ ಹೆಚ್ಚಾಗಲಿದೆ. 

ಕನ್ಯಾ ರಾಶಿಯವರಿಗೆ ಕೆಲಸದಲ್ಲಿ ಯಶಸ್ಸು:
ಹೊಸ ವರ್ಷದಲ್ಲಿ ಬೃಹಸ್ಪತಿ ಸಂಚಾರದಿಂದ ಕನ್ಯಾ ರಾಶಿಯವರಿಗೆ ಕೈ ಹಾಕಿದ ಕೆಲಸಗಳಲ್ಲೆಲ್ಲಾ ಯಶಸ್ಸು ಪ್ರಾಪ್ತಿಯಾಗಲಿದೆ. ಈ ಸಮಯದಲ್ಲಿ ವಿಶೇಷ ಸ್ನೇಹಿತರು ನಿಮ್ಮನ್ನು ಭೇಟಿಯಾಗಲಿದ್ದು ನಿಮಗೆ ಭಾರೀ ಪ್ರಯೋಜನವನ್ನು ತರಲಿದ್ದಾರೆ. 

ಇದನ್ನೂ ಓದಿ-  Trigrahi Yog December 2022: ಡಿಸೆಂಬರ್ 16ರಂದು ರಚನೆಯಾಗಲಿರುವ ತ್ರಿಗ್ರಾಹಿ ಯೋಗದಿಂದ 4 ರಾಶಿಯವರಿಗೆ ಹಣದ ಸುರಿಮಳೆ

ತುಲಾ ರಾಶಿಯವರಿಗೆ ಸುಧಾರಿಸಲಿದೆ ಆರ್ಥಿಕ ಸ್ಥಿತಿ:
ಗುರು ಸಂಚಾರದಿಂದ ಮುಂದಿನ ವರ್ಷ ಈ ರಾಶಿಯವರಿಗೆ ಆರ್ಥಿಕ ಭಾಗ ಬಲಗೊಳ್ಳಲಿದೆ. ಸಮಾಜದಲ್ಲಿ ಗೌರವವೂ ಹೆಚ್ಚಾಗಲಿದೆ. ನಿಮ್ಮ ಬಹುದಿನಗಳಿಂದ ಸ್ಥಗಿತಗೊಂಡಿರುವ ಕೆಲಸಗಳು ಈ ಸಮಯದಲ್ಲಿ ಪೂರ್ಣಗೊಳ್ಳಲಿವೆ. 

ಮೀನ ರಾಶಿಯವರಿಗೆ ಹಠಾತ್ ಧನ ಲಾಭ:
ಮೀನ ರಾಶಿಯನ್ನು ತೊರೆದು ಮೇಷ ರಾಶಿಯನ್ನು ಪ್ರವೇಶಿಸಳಿರುವ ಗುರುವು ಈ ರಾಶಿಯವರಿಗೆ ಹಠಾತ್ ಧನ ಲಾಭವನ್ನು ಕರುಣಿಸಲಿದ್ದಾನೆ. ಈ ಸಮಯದಲ್ಲಿ ವ್ಯಾಪಾರ-ವ್ಯವಹಾರದಲ್ಲಿಯೂ ಭಾರೀ ಲಾಭ ಲಭ್ಯವಾಗಲಿದೆ. ಉದ್ಯೋಗಸ್ಥರಿಗೆ ಪ್ರಮೋಷನ್ ಸಾಧ್ಯತೆ ಇದೆ.

ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News