Shani Deva: ಜನವರಿ 16ರವರೆಗೆ ಈ ರಾಶಿಯವರಿಗೆ ಶನಿ ಕೃಪೆಯಿಂದ ಗೋಲ್ಡನ್ ಡೇಸ್

Shani Deva: ನ್ಯಾಯದ ದೇವರು, ಕರ್ಮಕ್ಕೆ ತಕ್ಕ ಪ್ರತಿಫಲ ನೀಡುವವನು ಎಂದು ಬಣ್ಣಿಸಲ್ಪಡುವ ಶನಿ ದೇವನು ಹೊಸ ವರ್ಷದ ಮೊದಲ 16 ದಿನಗಳು ಕೆಲವು ರಾಶಿಯವರಿಗೆ ದಯೆ ತೋರಲಿದ್ದಾನೆ. ಶನಿ ದೇವನ ಕೃಪಾಕಟಾಕ್ಷದಿಂದ ಜನವರಿ 16ರವರೆಗೆ ಕೆಲವು ರಾಶಿಯ ಜನರು ಲಕ್ಶಾಧಿಪತಿಯಾಗುವ ಯೋಗವನ್ನು ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ... 

Written by - Yashaswini V | Last Updated : Jan 3, 2023, 11:32 AM IST
  • ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜನವರಿ 16ರ ನಂತರ ಶನಿ ಮಹಾತ್ಮನು ಸುಮಾರು ಮೂರು ದಶಕಗಳ ನಂತರ ಅಂದರೆ 30 ವರ್ಷಗಳ ನಂತರ ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ.
  • ಅಲ್ಲಿಯವರೆಗೆ ದ್ವಾದಶ ರಾಶಿಗಳಲ್ಲಿ ಮೂರು ರಾಶಿಯವರಿಗೆ ಶನಿ ಮಹಾತ್ಮನ ಕೃಪಾಕಟಾಕ್ಷ ಇರಲಿದೆ.
  • ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...
Shani Deva: ಜನವರಿ 16ರವರೆಗೆ ಈ ರಾಶಿಯವರಿಗೆ  ಶನಿ ಕೃಪೆಯಿಂದ ಗೋಲ್ಡನ್ ಡೇಸ್  title=
Shani Gochar 2023

Shani Deva: ವೈದಿಕ ಜ್ಯೋತಿಷ್ಯದ ಪ್ರಕಾರ, ನವಗ್ರಹಗಳಲ್ಲಿ ಯಾವುದೇ ಒಂದು ರಾಶಿಯಲ್ಲಿನ ಸಣ್ಣ ಬದಲಾವಣೆಯೂ ಕೂಡ ದ್ವಾದಶ ರಾಶಿಗಳ ಮೇಲೆ ಶುಭ-ಅಶುಭ ಪರಿಣಾಮಗಳನ್ನು ಉಂಟು ಮಾಡುತ್ತವೆ. ಅದರಲ್ಲೂ ಕರ್ಮಫಲದಾತ, ನ್ಯಾಯದ ದೇವರು ಎಂದು ಬಣ್ಣಿಸಲ್ಪಡುವ ಶನಿಯ ಸಂಚಾರದಲ್ಲಿನ ಬದಲಾವಣೆಯನ್ನು ಬಹಳ ಮುಖ್ಯ ಎಂದು ಪರಿಗಣಿಸಲಾಗುತ್ತದೆ. ಹೊಸ ವರ್ಷದಲ್ಲಿ ಜನವರಿ 17ರಂದು ಶನಿ ದೇವಾನು ಮಕರ ರಾಶಿಯನ್ನು ತೊರೆದು ಕುಂಭ ರಾಶಿಯನ್ನು ಪ್ರವೆಶಿಸಲಿದ್ದಾನೆ. ಈ ಸಮಯದಲ್ಲಿ ಕೆಲ ರಾಶಿಚಕ್ರ ಚಿಹ್ನೆಗಳು ಸಾಡೇಸಾತಿ ಶನಿ ಹಾಗೂ ಶನಿ ಧೈಯಾ ಪ್ರಭಾವದಿಂದ ಮುಕ್ತಿ ಹೊಂದಲಿದ್ದರೆ, ಇನ್ನೂ ಕೆಲ ರಾಶಿಯವರಿಗೆ ಸಾಡೇಸಾತಿ ಶನಿ ಹಾಗೂ ಧೈಯಾ ಪ್ರಭಾವ ಆರಂಭವಾಗಲಿದೆ. ಅದಕ್ಕೂ ಮೊದಲು ಅಂದರೆ ಜನವರಿ 16ರವರೆಗಿನ ಸಮಯವನ್ನು ಕೆಲವು ರಾಶಿಯವರಿಗೆ ಗೋಲ್ಡನ್ ಸಮಯ ಎಂದು ಬಣ್ಣಿಸಲಾಗುತ್ತಿದೆ.

ಜನವರಿ 16ರವರೆಗೆ ಶನಿದೇವನು ಕೆಲವು ರಾಶಿಯವರಿಗೆ ದಯೆ ತೋರಲಿದ್ದು, ಕರ್ಮಫಲದಾತನ ಕೃಪಾಕಟಾಕ್ಷದಿಂದ ಈ ರಾಶಿಯವರು ಲಕ್ಶಾಧಿಪತಿಯಾಗುವ ಯೋಗವನ್ನೂ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಜನವರಿ 16ರವರೆಗೆ ಮಕರ ರಾಶಿಯಲ್ಲಿ ಸಂಚರಿಸಲಿರುವ ಶನಿಯು ಯಾವ ರಾಶಿಯವರಿಗೆ ದಯೆ ತೋರಲಿದ್ದಾನೆ. 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜನವರಿ 16ರ ನಂತರ ಶನಿ ಮಹಾತ್ಮನು ಸುಮಾರು ಮೂರು ದಶಕಗಳ ನಂತರ ಅಂದರೆ 30 ವರ್ಷಗಳ ನಂತರ ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಅಲ್ಲಿಯವರೆಗೆ ದ್ವಾದಶ ರಾಶಿಗಳಲ್ಲಿ ಮೂರು ರಾಶಿಯವರಿಗೆ ಶನಿ ಮಹಾತ್ಮನ ಕೃಪಾಕಟಾಕ್ಷ ಇರಲಿದೆ. ಆ ಅದೃಷ್ಟದ ರಾಶಿಗಳು ಯಾವುವು  ಎಂದು ತಿಳಿಯೋಣ...

ಇದನ್ನೂ ಓದಿ- Tulsi Plant Vastu: ತುಳಸಿ ಸುತ್ತ ಇಂತಹ ವಸ್ತುಗಳನ್ನು ಇಡುವುದು ಬಡತನಕ್ಕೆ ಆಹ್ವಾನ ನೀಡಿದಂತೆ!

ಜನವರಿ 16ರವರೆಗೆ ಮೂರು ರಾಶಿಯವರಿಗೆ ದಯೆ ತೋರಲಿದ್ದಾನೆ ಶನಿಮಹಾತ್ಮ:
ವೃಷಭ ರಾಶಿ: 

ಜ್ಯೋತಿಷ್ಯದಲ್ಲಿ ಜನವರಿ 16ರವರೆಗಿನ ಸಮಯವನ್ನು ವೃಷಭ ರಾಶಿಯವರಿಗೆ ಸುವರ್ಣ ಸಮಯ ಎಂದು ಬಣ್ಣಿಸಲಾಗಿದೆ. ಈ ಸಮಯದಲ್ಲಿ ಶನಿ ಮಹಾತ್ಮಕ ಕೃಪೆಯಿಂದಾಗಿ ಅದೃಷ್ಟದ ಸಂಪೂರ್ಣ ಬೆಂಬಲ ಈ ರಾಶಿಯವರಿಗೆ ದೊರೆಯಲಿದ್ದು, ಕಠಿಣ ಪರಿಶ್ರಮದ ಪೂರ್ಣ ಫಲ ಲಭ್ಯವಾಗಲಿದೆ.. ಇದರಿಂದಾಗಿ ಆರ್ಥಿಕ ಸ್ಥಿತಿಯೂ ಉತ್ತಮಗೊಳ್ಳಲಿದ್ದು ಅಪಾರ ಸಂಪತ್ತಿನ ಒಡೆಯರಾಗಲಿದ್ದೀರಿ. ವಿದ್ಯಾರ್ಥಿಗಳಿಗೂ ಸಮಯ ಉತ್ತಮವಾಗಿದೆ. ವಾಹನ, ಮನೆ ಖರೀದಿಸುವ ಯೋಗವೂ ಇದೆ ಎಂದು ಹೇಳಲಾಗುತ್ತಿದೆ.

ವೃಶ್ಚಿಕ ರಾಶಿ: 
ಜನವರಿ 16ರವರೆಗೆ ಮಕರ ರಾಶಿಯಲ್ಲಿರುವ ಶನಿ ದೇವನು ವೃಶ್ಚಿಕ ರಾಶಿಯವರಿಗೆ ವಿಶೇಷ ಆಶೀರ್ವಾದವನ್ನು ನೀದಲಿದ್ದಾನೆ. ಪ್ರತಿ ಕೆಲಸದಲ್ಲೂ ಯಶಸ್ಸನ್ನು ನೀಡಲಿದ್ದಾರೆ. ಆದಾಯದ ಮೂಲಗಳು ಹೆಚ್ಚಾಗಲಿದ್ದು ಆರ್ಥಿಕ ಸ್ಥಿತಿ ಬಲಗೊಳ್ಳಲಿದೇ. ಎಲ್ಲಾ ಕೆಲಸಗಳಲ್ಲೂ ಅದೃಷ್ಟದ ಪೂರ್ಣ ಬೆಂಬಲ ದೊರೆಯಲಿದ್ದು ನಿಮ್ಮ ಆಸೆ-ಆಕಾಂಕ್ಷೆಗಳೆಲ್ಲವೂ ಪೂರ್ಣಗೊಳ್ಳಲಿದೆ. ಕೌಟುಂಬಿಕ ಸುಖ-ಸಂತೋಷ ನಿಮ್ಮದಾಗಲಿದೆ.

ಇದನ್ನೂ ಓದಿ- Grah Gochar: ಜನವರಿಯಲ್ಲಿ ಶನಿ ಸೇರಿದಂತೆ 5 ಗ್ರಹಗಳ ರಾಶಿ ಪರಿವರ್ತನೆ, ಈ ರಾಶಿಯವರಿಗೆ ಸಂಕಷ್ಟ

ಮೀನ ರಾಶಿ: 
ಜನವರಿ 16ರವರೆಗೆ ಮಕರ ರಾಶಿಯಲ್ಲಿರುವ ಶನಿಯು ಮೀನ ರಾಶಿಯವರಿಗೆ ಶತ್ರುಗಳ ವಿರುದ್ಧ ಜಯ ನೀಡಲಿದ್ದಾನೆ. ಹಣಕಾಸಿನ ದೃಷ್ಟಿಯಿಂದಲೂ ಈ ಸಮಯ ಅತ್ಯುತ್ತಮವಾಗಿದೆ. ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದಲೂ ಮುಕ್ತಿ ದೊರೆಯಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ತಯಾರಿ ನಡೆಸುವವರಿಗೂ ಉತ್ತಮ ಸಮಯ ಇದಾಗಿದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News