Gajalakshmi Yoga In Mesh: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿಯೊಂದು ಗ್ರಹ ಒಂದು ನಿಶ್ಚಿತ ಕಾಲಾವಧಿಯ ಬಳಿಕ ತನ್ನ ರಾಶಿಯನ್ನು ಬದಲಾಯಿಸುತ್ತವೆ. ಯಾವುದೇ ಒಂದು ಗ್ರಹದ ರಾಶಿ ಪರಿವರ್ತನೆ ಎಲ್ಲಾ ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಜೋತಿಷ್ಯ ಶಾಸ್ತ್ರದ ಪ್ರಕಾರ ಏಪ್ರಿಲ್ 21, 2023 ರಂದು ಗುರು ತನ್ನ ನೇರ ನಡೆಯ ಮೂಲಕ ರಾತ್ರಿ 8ಗಂಟೆ 43 ನಿಮಿಷಕ್ಕೆ ಮೀನ ರಾಶಿಯನ್ನು ತೊರೆದು ಮೇಷ ರಾಶಿಗೆ ಪ್ರವೇಶಿಸಲಿದೆ. ಗುರುವಿನ ಈ ಗೋಚರದಿಂದ ಮೇಷ ರಾಶಿಯಲ್ಲಿ ಗಜಲಕ್ಷ್ಮಿ ರಾಜಯೋಗ ರೂಪುಗೊಳ್ಳಲಿದೆ. ಇದು ಮೂರು ಜಾತಕದವರ ಪಾಲಿಗೆ ಅಪಾರ ಧನವೃಷ್ಟಿಗೆ ಕಾರನವಾಗಲಿದ್ದು, ಅವರ ಭಾಗ್ಯೋದಯವಾಗಲಿದೆ. ಆ ಮೂರು ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,
1. ಮೇಷ ರಾಶಿ- ಜೋತಿಷ್ಯ ಶಾಸ್ತ್ರದ ಪ್ರಕಾರ ಗುರುಗ್ರಹದ ಈ ಮೇಷ ಗೋಚರದಿಂದ ಮೇಷ ರಾಶಿಯ ಜನರಿಗೆ ಅತ್ಯಂತ ಶುಭಫಲಗಳು ಪ್ರಾಪ್ತಿಯಾಗಲಿವೆ. ಹೀಗಿರುವಾಗ ನೌಕರಿ, ವೃತ್ತಿಜೀವನ ಹಾಗೂ ವ್ಯಾಪಾರದಲ್ಲಿ ವ್ಯಕ್ತಿಗಳಿಗೆ ಸಕಾರಾತ್ಮಕ ಪರಿಣಾಮಗಳು ನೋಡಲು ಸಿಗಲಿವೆ. ಈ ಅವಧಿಯಲ್ಲಿ ನಿಮ್ಮ ಆದಾಯ ಹೆಚ್ಚಾಗಲಿದೆ. ಸಂತಾನದ ಕಡೆಯಿಂದ ನಿಮಗೆ ಶುಭ ಸಮಾಚಾರ ಪ್ರಾಪ್ತಿಯಾಗಲಿದೆ. ದಾಂಪತ್ಯ ಜೀವನದಲ್ಲಿ ಖುಷಿ ಮರಳಲಿದೆ. ಈ ಅವಧಿಯಲ್ಲಿ ದೀರ್ಘಕಾಲದಿಂದ ನಿಂತು ಹೋದ ಕೆಲಸಗಳ ಪ್ರಗತಿ ಮತ್ತೆ ಶುರುವಾಗಲಿದೆ. ವ್ಯಕ್ತಿಯ ಆರೋಗ್ಯದಲ್ಲಿಯೂ ಕೂಡ ಸುಧಾರಣೆಯಾಗಲಿದೆ. ಈ ಅವಧಿಯಲ್ಲಿ ನೀವು ಒಳ್ಳೆಯ ಕರ್ಮಗಳನ್ನು ಮಾಡಬೇಕು.
2. ಮಿಥುನ ರಾಶಿ- ಈ ವರ್ಷ ಮಿಥುನ ರಾಶಿಯವರಿಗೆ ಶನಿ ಎರಡೂವರೆ ವರ್ಷಗಳ ಕಾಟದಿಂದ ಮುಕ್ತಿ ಸಿಗಲಿದೆ. ಮತ್ತು ಗುರುವಿನ ಮೇಷ ಸಂಕ್ರಮನದಿಂದ ಈ ಜನರ ಜೀವನದಲ್ಲಿ ಸಾಕಷ್ಟು ಸಂತೋಷ ಹರಿದುಬರಲಿದೆ. ಗಜಲಕ್ಷ್ಮಿ ಯೋಗವು ಈ ರಾಶಿಗಳ ಜನರ ಭವಿಷ್ಯವನ್ನು ಬದಲಾಯಿಸಲಿದೆ. ಈ ಸಮಯದಲ್ಲಿ ವ್ಯಕ್ತಿಯ ಆದಾಯವು ಹೆಚ್ಚಾಗಲಿದೆ. ಹೂಡಿಕೆಯಿಂದ ಲಾಭ ಸಿಗಲಿದೆ. ಈ ಜನರು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯಲಿದ್ದಾರೆ. ಕುಟುಂಬ ಮತ್ತು ವೈವಾಹಿಕ ಜೀವನ ಸುಖಮಯವಾಗಿರುತ್ತದೆ. ನೀವು ಯಾರೊಂದಿಗಾದರೂ ಪ್ರೀತಿಯ ಸಂಬಂಧದಲ್ಲಿದ್ದರೆ, ಈ ಅವಧಿಯಲ್ಲಿ ಮದುವೆಯ ಸಾಧ್ಯತೆಗಳು ಕೂಡಿಬರಲಿವೆ.
ಇದನ್ನೂ ಓದಿ-ಕುಂಭ ರಾಶಿಯಲ್ಲಿ ಶನಿಯ ಗೋಚರ, ಈ ರಾಶಿಯ ಜನರ ಸಾಡೆಸಾತಿ ಆರಂಭ
3. ಧನು ರಾಶಿ- ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿಯ ಸಾಡೆಸಾತಿ ಪ್ರಭಾವವು ಧನು ರಾಶಿಯವರ ಜಾತಕದಿಂದ ಸಂಪೂರ್ಣವಾಗಿ ದೂರಾಗಲಿದೆ. ಗುರುವಿನ ಸಂಚಾರದಿಂದ ರೂಪುಗೊಂಡ ಗಜಲಕ್ಷ್ಮಿ ಯೋಗದಿಂದ ವ್ಯಕ್ತಿಯು ಅನೇಕ ಪ್ರಯೋಜನಗಳನ್ನು ಪಡೆಯಲಿದ್ದಾನೆ. ಈ ಅವಧಿಯಲ್ಲಿ ವ್ಯಕ್ತಿಯ ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ಇದೇ ವೇಳೆ, ಈ ಅವಧಿಯಲ್ಲಿ ನಿಮ್ಮ ಪ್ರೇಮ ಜೀವನವೂ ಉತ್ತಮವಾಗಿರುತ್ತದೆ. ವಿವಾಹಿತರಿಗೆ ಈ ಸಮಯ ಉತ್ತಮವಾಗಿರುತ್ತದೆ. ಗುರುವಿನ ಸಂಚಾರದಿಂದ, ಒಬ್ಬ ವ್ಯಕ್ತಿಯು ಪ್ರಯಾಣಕ್ಕೆ ಹೋಗುವ ಎಲ್ಲಾ ಸಾಧ್ಯತೆಗಳಿವೆ.
ಇದನ್ನೂ ಓದಿ-ನೀವೂ ನಿಮ್ಮ ಜೀವನವನ್ನು ಸುಖಮಯವಾಗಿಸಬೇಕೆ? ಗರುಡ ಪುರಾಣದ ಈ ಸಲಹೆಗಳನ್ನು ಅನುಸರಿಸಿ
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.