ಜನ್ಮಾಷ್ಟಮಿಯಂದು ಶ್ರೀಕೃಷ್ಣ ಕೃಪೆ ಸಿಗಲು ಈ ಸಣ್ಣ ಕೆಲಸ ಮಾಡಿದರೆ ಸಾಕು

ಜನ್ಮಾಷ್ಟಮಿಯ ದಿನ ಪೂಜೆ, ಉಪವಾಸ ಮುಂತಾದವುಗಳಿಗೆ ವಿಶೇಷ ಮಹತ್ವವಿದೆ. ಈ ದಿನದಂದು ನಿಜವಾದ ಭಕ್ತಿಯಿಂದ ಉಪವಾಸವನ್ನು ಆಚರಿಸುವುದರಿಂದ, ಶ್ರೀಕೃಷ್ಣನ ಕೃಪೆಯಿಂದ ಭಕ್ತರ ಎಲ್ಲಾ ದುಃಖಗಳು ದೂರವಾಗುತ್ತವೆ

Written by - Bhavishya Shetty | Last Updated : Aug 13, 2022, 04:34 PM IST
    • ಜನ್ಮಾಷ್ಟಮಿಯ ದಿನ ಪೂಜೆ, ಉಪವಾಸ ಮುಂತಾದವುಗಳಿಗೆ ವಿಶೇಷ ಮಹತ್ವವಿದೆ
    • ಜನ್ಮಾಷ್ಟಮಿಯ ದಿನದಂದು ಈ ಮಂತ್ರಗಳನ್ನು ಪಠಿಸಿ
    • ಗೋಪಾಲನ ಕೃಪೆಯಿಂದ ಅದೃಷ್ಟ, ಆರೋಗ್ಯ, ಐಶ್ವರ್ಯ ಪ್ರಾಪ್ತಿಯಾಗುತ್ತದೆ
ಜನ್ಮಾಷ್ಟಮಿಯಂದು ಶ್ರೀಕೃಷ್ಣ ಕೃಪೆ ಸಿಗಲು ಈ ಸಣ್ಣ ಕೆಲಸ ಮಾಡಿದರೆ ಸಾಕು title=
Janmashtami 2022

ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ಜನ್ಮಾಷ್ಟಮಿ ಹಬ್ಬವನ್ನು ಆಚರಿಸಲಾಗುತ್ತದೆ. ಶ್ರೀ ಕೃಷ್ಣನು ರೋಹಿಣಿ ನಕ್ಷತ್ರದಲ್ಲಿ ಅಷ್ಟಮಿ ತಿಥಿಯಂದು ಜನಿಸಿದ್ದು, ಈ ಹಿನ್ನೆಲೆಯಲ್ಲಿ ಪ್ರತೀ ವರ್ಷ ಈ ದಿನದಂದು ಕೃಷ್ಣಾಷ್ಟಮಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಬಾರಿಯ ಜನ್ಮಾಷ್ಟಮಿಯನ್ನು ಆಗಸ್ಟ್ 18 ರಂದು ಆಚರಿಸಲಾಗುವುದು.

ಹಿಂದೂ ಪುರಾಣಗಳ ಪ್ರಕಾರ ಈ ದಿನದಂದು ಶ್ರೀ ಕೃಷ್ಣನನ್ನು ಪೂಜಿಸುವ ಸಂಪ್ರದಾಯವಿದೆ. ಮನೆಗಳು ಮತ್ತು ದೇವಾಲಯಗಳನ್ನು ದೀಪಗಳಿಂದ ಅಲಂಕರಿಸಲಾಗುತ್ತದೆ. ಇನ್ನು ಶ್ರೀಕೃಷ್ಣ ಮಧ್ಯರಾತ್ರಿ 12 ಗಂಟೆಗೆ ಹುಟ್ಟಿ ಬಳಿಕ ಸಿದ್ಧಗೊಳ್ಳುತ್ತಾನೆ. ಆ ಸಂದರ್ಭದಲ್ಲಿ ಭಕ್ತರೆಲ್ಲರೂ ಆತನಿಗೆ ಅಲಂಕಾರ ಮಾಡಿ ಪೂಜೆ ಸಲ್ಲಿಸಬೇಕು ಎಂಬುದು ನಂಬಿಕೆ.

ಇದನ್ನೂ ಓದಿ: Har Ghar Tiranga : ಸಿಎಂ ಬೊಮ್ಮಾಯಿ ಚಾಲನೆ ನೀಡಿದ 'ಹರ್ ಘರ್ ತಿರಂಗಾ' : ಫೋಟೋಗಳು

ಜನ್ಮಾಷ್ಟಮಿಯ ದಿನ ಪೂಜೆ, ಉಪವಾಸ ಮುಂತಾದವುಗಳಿಗೆ ವಿಶೇಷ ಮಹತ್ವವಿದೆ. ಈ ದಿನದಂದು ನಿಜವಾದ ಭಕ್ತಿಯಿಂದ ಉಪವಾಸವನ್ನು ಆಚರಿಸುವುದರಿಂದ, ಶ್ರೀಕೃಷ್ಣನ ಕೃಪೆಯಿಂದ ಭಕ್ತರ ಎಲ್ಲಾ ದುಃಖಗಳು ದೂರವಾಗುತ್ತವೆ ಮತ್ತು ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಎಂದು ಹೇಳಲಾಗುತ್ತದೆ.

ಆರತಿ ಮತ್ತು ಮಂತ್ರಗಳ ಪಠಣಕ್ಕೂ ಈ ದಿನದಂದು ಪೂಜೆಯೊಂದಿಗೆ ವಿಶೇಷ ಮಹತ್ವವಿದೆ. ಇವುಗಳಿಲ್ಲದೆ ಆರಾಧನೆಯನ್ನು ಪೂರ್ಣವಾಗಿ ಪರಿಗಣಿಸಲಾಗುವುದಿಲ್ಲ. ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಯಾವೆಲ್ಲಾ ಮಂತ್ರಗಳನ್ನು ಪಠಿಸಲಾಗುತ್ತದೆ ಎಂದು ತಿಳಿಯೋಣ.

ಜನ್ಮಾಷ್ಟಮಿಯ ದಿನದಂದು ಈ ಮಂತ್ರಗಳನ್ನು ಪಠಿಸಿ

ಓಂ ನಮೋ ಭಗವತೇ ಶ್ರೀ ಗೋವಿಂದಾ

ಓಂ ಶ್ರೀಂ ನಮಃ ಶ್ರೀ ಕೃಷ್ಣಾಯ ಪೂರ್ಣಮಾಯ ಸ್ವಾಹಾ

ಕ್ರೀಂ ಕೃಷ್ಣಾಯ ನಮಃ

ಗೋಕುಲನಾಥಾಯ ನಮಃ

ಓಂ ದೇವಿಕಾನಂದನಯ ವಿಧಂಹೇ ವಾಸುದೇವಾಯ ಧೀಮಹಿ ತನ್ನೋ ಕೃಷ್ಣ: ಪ್ರಚೋದಯಾತ್

ಶ್ರೀ ಕೃಷ್ಣ ಗೋವಿಂದ ಹರೇ ಮುರಾರೆ, ಹೇ ನಾಥ ನಾರಾಯಣ ವಾಸುದೇವ

ಓಂ ಶ್ರೀ ಕ್ಲೀಂ ಶ್ರೀ ಕೃಷ್ಣಾಯ ಗೋವಿಂದಾಯ ಗೋಪಿಜನ್ ವಲ್ಲಭಾಯಿ ಶ್ರೀ ಶ್ರೀ ಶ್ರೀ

ಓ ಕೃಷ್ಣಾ ದ್ವಾರಕಾವಾಸಿನ್ ಕ್ವಾಸಿ ಯಾದವ್ನನ್ದನ್. ಆಪದ್ಭಿಃ ಪರಿಭೂತಂ ಮಾಂ ತ್ರಯವಶು ಜನಾರ್ಧನಃ

ಓಂ ಕ್ಲೀಂ ಕೃಷ್ಣಾಯ ನಮಃ

ಓಂ ನಮೋ ಭಗವತೇ ತಸ್ಮೈ ಕೃಷ್ಣಾಯ ಕುಂಠಮೇಧಸೇ । ಸರ್ವವ್ಯಾಧಿ ವಿನಾಶಾಯ ಪ್ರಭೋ ಮಾಮೃತಂ ಕೃಧಿ ।

ಜನ್ಮಾಷ್ಟಮಿಯ ದಿನದಂದು ಪ್ರಾಮಾಣಿಕ ಹೃದಯದಿಂದ ಈ ಮಂತ್ರಗಳನ್ನು ಪಠಿಸುವ ವ್ಯಕ್ತಿಯು ಶ್ರೀ ಕೃಷ್ಣನ ಅನುಗ್ರಹವನ್ನು ಪಡೆಯುತ್ತಾನೆ ಎಂದು ನಂಬಲಾಗಿದೆ. ಅಲ್ಲದೆ ಲಡ್ಡು ಗೋಪಾಲನ ಕೃಪೆಯಿಂದ ಅದೃಷ್ಟ, ಆರೋಗ್ಯ, ಐಶ್ವರ್ಯ ಪ್ರಾಪ್ತಿಯಾಗುತ್ತದೆ. ಅಲ್ಲದೆ, ವಿಶೇಷ ಮಂತ್ರಗಳ ಪಠಣವು ತೊಂದರೆ ಮತ್ತು ಭಯದಿಂದ ಮುಕ್ತಿಯನ್ನು ನೀಡುತ್ತದೆ.

ಇದನ್ನೂ ಓದಿ: ‘ಕೈ’ ನಾಯಕರ ರಾತ್ರಿ ಬದುಕಿನ ರಂಗ-ಬಿರಂಗಿ ಗುಪ್ತಸಿಡಿಗಳಿವೆ: ಪ್ರಿಯಾಂಕ್ ಗೆ BJP ತಿರುಗೇಟು

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News