ಅಯೋಧ್ಯೆಯಲ್ಲಿ ಹರಿಯುವ ಸರಯೂ ನದಿಯ ವಿಶೇಷತೆ ಏನು ಗೊತ್ತಾ?

Ayodhya Sarayu Nadi: ಅಯೋಧ್ಯೆಯ ಬಗ್ಗೆ ಮಾತನಾಡುವಾಗ ಅಲ್ಲಿ ಹರಿಯುವ ನದಿ ಮತ್ತು ಅದರ ಮಹತ್ವದ ಬಗ್ಗೆ ಮಾತನಾಡಲೇಬೇಕು.. ಹಾಗಾದರೆ ಇದೀಗ ಸರಯೂ ನದಿಯ ಕೆಲವು ವಿಶೇಷತೆಗಳ ಬಗ್ಗೆ ತಿಳಿಯೋಣ.. 

Written by - Savita M B | Last Updated : Jan 22, 2024, 07:51 AM IST
  • ಸದ್ಯ ಎಲ್ಲಾ ಜನರು ರಾಮಮಂದಿರದ ಉದ್ಘಾಟನೆಗಾಗಿ ಕಾಯುತ್ತಿದ್ದಾರೆ..
  • ಇಡೀ ದೇಶವೇ ಅಯೋಧ್ಯೆಯಲ್ಲಿ ರಾಮನ ಮಹಿಮೆಯನ್ನು ಹಬ್ಬದಂತೆ ಆಚರಿಸಲಿದೆ..
  • ಈಗ ಎಲ್ಲೆಡೆ ಅಯೋಧ್ಯೆ ರಾಮಮಂದಿರದ ಬಗ್ಗೆ ಚರ್ಚೆಯಾಗುತ್ತಿದೆ.
ಅಯೋಧ್ಯೆಯಲ್ಲಿ ಹರಿಯುವ ಸರಯೂ ನದಿಯ ವಿಶೇಷತೆ ಏನು ಗೊತ್ತಾ? title=

Ayodhya Ram Mandir: ಸದ್ಯ ಎಲ್ಲಾ ಜನರು ರಾಮಮಂದಿರದ ಉದ್ಘಾಟನೆಗಾಗಿ ಕಾಯುತ್ತಿದ್ದಾರೆ... ಇಡೀ ದೇಶವೇ ಅಯೋಧ್ಯೆಯಲ್ಲಿ ರಾಮನ ಮಹಿಮೆಯನ್ನು ಹಬ್ಬದಂತೆ ಆಚರಿಸಲಿದೆ.. ಈಗ ಎಲ್ಲೆಡೆ ಅಯೋಧ್ಯೆ ರಾಮಮಂದಿರದ ಬಗ್ಗೆ ಚರ್ಚೆಯಾಗುತ್ತಿದೆ.. ಅದೇ ರೀತಿ ಅಯೋಧ್ಯೆಯ ಬಗ್ಗೆ ಮಾತನಾಡುವಾಗ... ಖಂಡಿತವಾಗಿ ಅಲ್ಲಿ ಹರಿಯುವ ಸರಯೂ ನದಿ ಮತ್ತು ಅದರ ಮಹತ್ವದ ಬಗ್ಗೆ ಮಾತನಾಡಲೇಬೇಕು. ಇದೀಗ ಆ ಸರಯೂ ನದಿಯ ವಿಶೇಷತೆ ಏನು ಎಂಬುದು ತಿಳಿಯೋಣ.. 

ಅತ್ಯಂತ ಪವಿತ್ರವಾದನ ಸರಯೂ ನದಿಯು ಅಯೋಧ್ಯೆಯ ಉತ್ತರಕ್ಕೆ ಹರಿಯುತ್ತದೆ... ಎಲ್ಲಾ ಯಾತ್ರಾರ್ಥಿಗಳು ಇದನ್ನು ನೋಡಿ ಧನ್ಯರಾಗುತ್ತಾರೆ. ಅಂದರೆ ಸರಯೂ ನದಿಯಲ್ಲಿ ಸ್ನಾನ ಮಾಡುವುದರಿಂದ ಎಲ್ಲಾ ಪುಣ್ಯಕ್ಷೇತ್ರಗಳನ್ನು ಸಂದರ್ಶಿಸಿದ ಪುಣ್ಯ ಸಿಗುತ್ತದೆ..

ಇದನ್ನೂ ಓದಿ-ದಿನಭವಿಷ್ಯ 22-01-2024: ಈ ರಾಶಿಯವರಿಗೆ ದಿನದ ಅಂತ್ಯದ ವೇಳೆಗೆ ಧನಾಲಾಭ

ಬ್ರಹ್ಮ ಮುಹೂರ್ತದಂದು ಸರಯೂ ನದಿಯಲ್ಲಿ ಸ್ನಾನ ಮಾಡುವ ವ್ಯಕ್ತಿಗೆ ಎಲ್ಲಾ ತೀರ್ಥಗಳ ದರ್ಶನದ ಫಲ ಸಿಗುತ್ತದೆ ಎಂದು ನಂಬಲಾಗಿದೆ. ಪುರಾಣಗಳ ಪ್ರಕಾರ, ಮೊದಲಿನಿಂದಲೂ ಸರಯೂ ಮತ್ತು ಶಾರದಾ ನದಿಗಳ ಸಂಗಮವಾಗಿದ್ದು.. ಸರಯೂ ಮತ್ತು ಗಂಗೆಯ ಸಂಗಮವನ್ನು ಭಗವಾನ್ ರಾಮನ ಪೂರ್ವಜ ಭಗೀರಥನು ಮಾಡಿದ್ದಾನೆ ಎನ್ನಲಾಗಿದೆ....

ಸರಯೂ ನದಿ ಹುಟ್ಟಿದ್ದು ಹೇಗೆ?
ಪುರಾಣಗಳ ಪ್ರಕಾರ, ಸರಯೂ ನದಿಯ ಮೂಲವು ವಿಷ್ಣುವಿನ ಕಣ್ಣುಗಳಿಂದ ಹುಟ್ಟಿಕೊಂಡಿದೆ. ಪ್ರಾಚೀನ ಕಾಲದಲ್ಲಿ, ಸಂಖಾಸುರ ಎಂಬ ರಾಕ್ಷಸನು ವೇದಗಳನ್ನು ಕದ್ದು ಸಮುದ್ರಕ್ಕೆ ಎಸೆದು ಮರೆಯಾಗಿದ್ದನು.. ಇದರ ನಂತರ, ವಿಷ್ಣುವು ಮತ್ಸ್ಯ ಅವತಾರದಲ್ಲಿ ಬಂದು ರಾಕ್ಷಸನನ್ನು ಕೊಲ್ಲುತ್ತಾನೆ... ಆಗ ವಿಷ್ಣುವು ಬ್ರಹ್ಮನಿಗೆ ವೇದಗಳನ್ನು ಒಪ್ಪಿಸಿ ತನ್ನ ನಿಜವಾದ ರೂಪವನ್ನು ಪಡೆಯುತ್ತಾನೆ...

ಇದನ್ನೂ ಓದಿ-Shani Ast 2024: ಕೆಲವೇ ದಿನಗಳಲ್ಲಿ ಅಸ್ತಮಿಸಲಿದ್ದಾನೆ ಶನಿ, ನಾಲ್ಕು ರಾಶಿಯವರಿಗೆ ಕಷ್ಟದ ದಿನಗಳು ಆರಂಭ

ಆ ವೇಳೆ ವಿಷ್ಣುವಿನ ಕಣ್ಣಿನಿಂದ ಬಂದ ಆನಂದದ ನೀರನ್ನು ಬ್ರಹ್ಮನು ಮಾನಸ ಸರೋವರದಲ್ಲಿ ಇಟ್ಟು ಸಂರಕ್ಷಿಸಿದನು... ಈ ನೀರನ್ನು ಪರಾಕ್ರಮಿ ವೈವಸ್ವತ ಮಹಾರಾಜನು ಬಾಣದಿಂದ ಮಾನಸ ಸರೋವರದಿಂದ ಹೊರತೆಗೆದನು... ಈ ಜಲಧಾರೆಯನ್ನು ಸರಯೂ ನದಿ ಎಂದು ಕರೆಯಲಾಯಿತು.

ಧಾರ್ಮಿಕ ಗ್ರಂಥಗಳ ಪ್ರಕಾರ, ಭಗೀರಥನು ಗಂಗಾ ನದಿಯನ್ನು ಭೂಮಿಗೆ ತಂದಂತೆ, ಸರಯೂ ನದಿಯನ್ನು ವೈವಸ್ವತ ಮಹಾರಾಜನು ಭೂಮಿಗೆ ತಂದನು ಎನ್ನಲಾಗಿದೆ.. ವಿಷ್ಣುವಿನ ಮಗಳು ಸರಯೂಳನ್ನು ಭೂಮಿಗೆ ತಂದ ಕೀರ್ತಿ ಬ್ರಹ್ಮರ್ಷಿ ವಶಿಷ್ಠರಿಗೆ ಸಲ್ಲುತ್ತದೆ.. ಇಷ್ಟೇ ಅಲ್ಲ.. ಶಿವನು ಕೂಡ ಕೋಪದಿಂದ ಈ ಸರಯೂ ನದಿಗೆ ಶಾಪ ಹಾಕುತ್ತಾನೆ. ಆ ಶಾಪದಿಂದಾಗಿ.. ಈ ಸರಯೂ ನದಿಯ ನೀರನ್ನು ಶಿವನ ಪೂಜೆಗೆ ಬಳಸುವುದಿಲ್ಲ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News