Chanakya Niti: ಹಠಾತ್ ಆಗಿ ಸಿಗುವ ಹಣದಿಂದ ಎಂದಿಗೂ ಈ ಕೆಲಸಗಳನ್ನು ಮಾಡಲೇಬಾರದು

Chanakya Niti: ಸಾಮಾನ್ಯವಾಗಿ ಒಂದಲ್ಲಾ ಒಂದು ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ಸಹ ಆಕಸ್ಮಿಕವಾಗಿ ಹಣ ಸಿಕ್ಕೇ ಇರುತ್ತದೆ. ಹಣ ಕಂಡರೆ ಹೆಣವೂ ಬಾಯಿ ಬಿಡುತ್ತೆ, ಹಾಗಿರುವಾಗ ಹಣ ಸಿಕ್ಕಾಗ ಯಾರಿಗೆ ತಾನೇ ಖುಷಿ ಆಗುವುದಿಲ್ಲ. ಆದರೆ, ಆಕಸ್ಮಿಕವಾಗಿ ಸಿಗುವ ಇಂತಹ ಹಣದಿಂದ ಕೆಲವು ಕೆಲಸಗಳನ್ನು ಮಾಡುವುದರಿಂದ ಬಡತನವನ್ನು ನೀವೇ ಆಹ್ವಾನಿಸಿದಂತೆ ಆಗುತ್ತದೆ. 

Written by - Yashaswini V | Last Updated : May 17, 2023, 09:35 AM IST
  • ಯಾವಾಗಲಾದರೂ ದಿಢೀರ್ ಹಣ ಬಂದರೆ ಇಲ್ಲವೇ ಆಕಸ್ಮಿಕವಾಗಿ ಹಣ ಸಿಕ್ಕರೆ ಯಾರಿಗೆ ತಾನೇ ಸಂತೋಷವಾಗುವುದಿಲ್ಲ.
  • ಆದರೆ, ಆಚಾರ್ಯ ಚಾಣಕ್ಯರ ಪ್ರಕಾರ, ನೀವು ಎಲ್ಲಿಂದಲೋ ಹಣ ಪಡೆದಾಗ, ದಿಢೀರ್ ಧನಾಗಮನವಾದಾಗ ಅದನ್ನು ಅಪ್ಪಿತಪ್ಪಿಯೂ ಸಹ ಐದು ಕೆಲಸಗಳಿಗೆ ಬಳಸಬಾರದು.
  • ಈ ರೀತಿ ಮಾಡುವುದರಿಂದ ನಿಮ್ಮ ಜೀವನದಲ್ಲಿ ಬಡತನಕ್ಕೆ ನೀವೇ ಆಹ್ವಾನ ನೀಡಿದಂತೆ ಎಂದು ಹೇಳಲಾಗುತ್ತದೆ.
Chanakya Niti: ಹಠಾತ್ ಆಗಿ ಸಿಗುವ ಹಣದಿಂದ ಎಂದಿಗೂ ಈ ಕೆಲಸಗಳನ್ನು ಮಾಡಲೇಬಾರದು  title=

Chanakya Niti For Money: ಭಾರತದ ಮಹಾನ್ ತತ್ವಜ್ಞಾನಿ, ಅರ್ಥಶಾಸ್ತ್ರಜ್ಞ ಎಂದೇ ಖ್ಯಾತಿ ಪಡೆದಿರುವ ಆಚಾರ್ಯ ಚಾಣಕ್ಯ ತಮ್ಮ ನೀತಿ ಶಾಸ್ತ್ರದಲ್ಲಿ ಜೀವನಕ್ಕೆ ಸಂಬಂಧಿಸಿದ ಹಲವು ಅಂಶಗಳನ್ನು ಉಲ್ಲೇಖಿಸಿದ್ದಾರೆ. ಇದನ್ನು ಚಾಣಕ್ಯ ನೀತಿ ಎಂತಲೂ ಕರೆಯಲಾಗುತ್ತದೆ. ನೂರಾರು ವರ್ಷಗಳ ಹಿಂದೆ ರಚಿತವಾಗಿರುವ ಈ ಚಾಣಕ್ಯ ನೀತಿ ಇಂದಿಗೂ ಕೂಡ ಪ್ರತಿಯೊಬ್ಬರ ಜೀವನಕ್ಕೂ ಅನ್ವಯವಾಗುವ ಹಲವು ಅಂಶಗಳನ್ನು ಒಳಗೊಂಡಿರುವುದೇ ಇದಕ್ಕೆ ಪ್ರಮುಖ ಕಾರಣ. 

ಆಚಾರ್ಯ ಚಾಣಕ್ಯರಿಂದ ರಚಿತವಾಗಿರುವ ನೀತಿ ಶಾಸ್ತ್ರದಲ್ಲಿ ಇಂದಿಗೂ ಸಂಪೂರ್ಣವಾಗಿ ಪ್ರಸ್ತುತವಾಗಿರುವ ಇಂತಹ ಅನೇಕ ಅಮೂಲ್ಯ ವಿಷಯಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಒಂದು ಹಠಾತ್ ಆಗಿ, ದಿಢೀರನೆ ಸಿಗುವ ಹಣದಿಂದ ಯಾವ ಕೆಲಸಗಳನ್ನು ಮಾಡುವುದು ಅಮಂಗಳಕರ ಎಂಬುದನ್ನೂ ಸಹ ಅವರು ಉಲ್ಲೇಖಿಸಿದ್ದಾರೆ. ವಾಸ್ತವವಾಗಿ, ಯಾವಾಗಲಾದರೂ ದಿಢೀರ್ ಹಣ ಬಂದರೆ ಇಲ್ಲವೇ ಆಕಸ್ಮಿಕವಾಗಿ ಹಣ ಸಿಕ್ಕರೆ ಯಾರಿಗೆ ತಾನೇ ಸಂತೋಷವಾಗುವುದಿಲ್ಲ. ಆದರೆ, ಆಚಾರ್ಯ ಚಾಣಕ್ಯರ ಪ್ರಕಾರ, ನೀವು ಎಲ್ಲಿಂದಲೋ ಹಣ ಪಡೆದಾಗ, ದಿಢೀರ್ ಧನಾಗಮನವಾದಾಗ ಅದನ್ನು ಅಪ್ಪಿತಪ್ಪಿಯೂ ಸಹ ಐದು ಕೆಲಸಗಳಿಗೆ ಬಳಸಬಾರದು.  ಈ ರೀತಿ ಮಾಡುವುದರಿಂದ ನಿಮ್ಮ ಜೀವನದಲ್ಲಿ ಬಡತನಕ್ಕೆ ನೀವೇ ಆಹ್ವಾನ ನೀಡಿದಂತೆ ಎಂದು ಹೇಳಲಾಗುತ್ತದೆ. 

ದಿಢೀರ್ ಬಂದ ಹಣದಿಂದ ಈ ಕೆಲಸ ಮಾಡಿದ್ರೆ ಬಡವರಾಗುವುದು ನಿಶ್ಚಿತ! 
ಇತರರಿಗೆ ತೋರಿಸಬೇಡಿ: 

ಸಾಮಾನ್ಯವಾಗಿ ಕೆಲವರು ತಮಗೆ ದಿಢೀರ್ ಧನಾಗಮನವಾದಾಗ ಅದನ್ನು ಇತರರಿಗೆ ತೋರಿಸುತ್ತಾರೆ. ಇಲ್ಲವೇ, ಈ ಬಗ್ಗೆ ಬೇರೆಯವರ ಬಳಿ ಹಂಚಿಕೊಳ್ಳುತ್ತಾರೆ. ಆದರೆ ಇಂತಹ ತಪ್ಪನ್ನು ಎಂದಿಗೂ ಮಾಡಬಾರದು. ಬದಲಿಗೆ ಇಂತಹ ಹಣವನ್ನು ಜನರ ಒಳಿತಿಗಾಗಿ ಬಳಸಬೇಕು. ಇದರಿಂದ ದೇವರೂ ಕೂಡ ಸಂತುಷ್ಟಗೊಳ್ಳುತ್ತಾರೆ. 

ಇದನ್ನೂ ಓದಿ- Chanakya Niti : ಈ 5 ವಿಷಯಗಳನ್ನು ಯಾವಾಗಲು ನೆನಪಿನಲ್ಲಿಡಿ, ಯಶಸ್ಸು - ಪ್ರಗತಿ ನಿಮ್ಮದಾಗಿರುತ್ತೆ!

ವ್ಯರ್ಥ ಖರ್ಚು ಮಾಡಬೇಡಿ: 
ಕೆಲವರಿಗೆ ಹಣ ಕೈಯಲ್ಲಿದ್ದರೆ ತಲೆಯೇ ನಿಲ್ಲುವುದಿಲ್ಲ. ಅದನ್ನು ಸಿಕ್ಕ ಸಿಕ್ಕ ಹಾಗೆ ಖರ್ಚು ಮಾಡುತ್ತಾರೆ. ಆದರೆ, ನೆನಪಿಡಿ ಕಷ್ಟದ ಸಮಯದಲ್ಲಿ ಹಣವೇ ದೊಡ್ಡ ಸ್ನೇಹಿತ. ಹಾಗಾಗಿ, ಹಣ ಹೆಚ್ಚಿರಲಿ ಇಲ್ಲವೇ ಅಧಿಕವಾಗಿರಲಿ ಯಾವಾಗಲೂ ಯೋಚಿಸಿ, ಅಗತ್ಯವಿರುವಷ್ಟು ಮಾತ್ರ ಖರ್ಚು ಮಾಡಿ. ಮಿಕ್ಕ ಹಣವನ್ನು ಉಳಿತಾಯ ಮಾಡಿ. ಕಷ್ಟ ಕಾಲದಲ್ಲಿ ಹಣವೇ ಸಹಾಯಕ್ಕೆ ಬರುತ್ತದೆ ಎನ್ನುತ್ತಾರೆ ಆಚಾರ್ಯ ಚಾಣಕ್ಯ.

ಬೇರೆಯವರ ಮುಂದೆ ಚರ್ಚಿಸಬೇಡಿ:
ಕೆಲವರ ಮನಸ್ಸಿನಲ್ಲಿ ಏನೂ ನಿಲ್ಲುವುದಿಲ್ಲ. ಆದರೆ, ನಿಮಗೆ ಬರುವ ಆದಾಯದ ಬಗ್ಗೆ ಬೇರೆಯವರ ಮುಂದೆ ಚರ್ಚಿಸಬೇಡಿ, ಆದಾಯದ ಮೂಲವನ್ನು ಬೇರೆಯವರ ಮುಂದೆ ಮಾತನಾಡಬಾರದು ಎಂಬುದನ್ನೂ ಚಾಣಕ್ಯ ನೀತಿಯಲ್ಲಿ ಉಲ್ಲೇಖಿಸಲಾಗಿದೆ. ಈ ರೀತಿ ಮಾಡುವುದರಿಂದ ಹಣದ ಸುರಕ್ಷತೆಗೆ ಧಕ್ಕೆ ಆಗಬಹುದು. ಜೊತೆಗೆ ಕಳ್ಳರು, ಶತ್ರುಗಳೂ ನಿಮ್ಮನ್ನು ಹಾನಿಗೊಳಿಸಬಹುದು. ಹಾಗಾಗಿ, ಈ ಬಗ್ಗೆ ಜಾಗರೂಕರಾಗಿರಿ. 

ಇಂತಹ ಹಣವನ್ನು ಇತರರಿಗೆ ಹಾನಿಗೊಳಿಸಲು ಬಳಸಬೇಡಿ: 
ಇದಲ್ಲದೆ, ನಿಮ್ಮ ಬಳಿ ಇರುವ ಹಠಾತ್ ಹಣದಿಂದಲೇ ಆಗಲಿ ಅಥವಾ ನೀವು ದುಡಿದಿರುವ ಹಣದಿಂದಲೇ ಆಗಲಿ ಬೇರೆಯವರನ್ನು ನೋಯಿಸಲು ಬಳಸಬೇಡಿ. ಇದು ತಾಯಿ ಲಕ್ಷ್ಮೀದೇವಿಯ ಕೋಪಕ್ಕೆ ಕಾರಣವಾಗಬಹುದು.  ಇದನ್ನು ತಪ್ಪಿಸಲು ಹಣವನ್ನು ಸಕಾರಾತ್ಮಕ ರೀತಿಯಲ್ಲಿ ಬಳಸಿ. 

ಇದನ್ನೂ ಓದಿ- Chanakya Niti: ಪತಿ ಎಂದಿಗೂ ಪತ್ನಿಯೊಂದಿಗೆ ಈ 4 ವಿಷಯಗಳನ್ನು ಹಂಚಿಕೊಳ್ಳಬಾರದಂತೆ!

ಅಹಂ ಭಾವ ತೋರಬೇಡಿ: 
ಕೆಲವರಿಗೆ ಹಣದ ಜೊತೆಗೆ ಅಹಂಕಾರವೂ ಹೆಚ್ಚಾಗುತ್ತದೆ. ಆದರೆ, ಎಂದಿಗೂ ಕೂಡ ಹಣದಿಂದ ಅಹಂಕಾರವನ್ನು ತೋರಬೇಡಿ. ಲಕ್ಷ್ಮಿ ಚಂಚಲೆ, ನಿಮ್ಮ ಅಹಂಕಾರವನ್ನು ಲಕ್ಷ್ಮಿ ದೇವಿ ಎಂದಿಗೂ ಸಹಿಸುವುದಿಲ್ಲ. ಸಂಪತ್ತಿನ ಅಹಂಕಾರವನ್ನು ಪ್ರದರ್ಶಿಸುವುದರಿಂದ ಜೀವನದಲ್ಲಿ ನಿಮ್ಮ ಶತ್ರುಗಳೂ ಹೆಚ್ಚಾಗಬಹುದು. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News