Budha Gochar: ಹತ್ತು ದಿನಗಳ ಬಳಿಕ ಈ ರಾಶಿಯವರಿಗೆ ಸಂಪತ್ತಿನ ಸುರಿಮಳೆ

Budha Gochara: ಗ್ರಹಗಳ ರಾಜಕುಮಾರ ಎಂದು ಬಣ್ಣಿಸಲ್ಪಡುವ ಬುಧನು ಇನ್ನೂ ಕೆಲವೇ ದಿನಗಳಲ್ಲಿ ರಾಶಿ ಪರಿವರ್ತನೆ ಮಾಡಲಿದ್ದಾನೆ. ಈ ಸಂದರ್ಭದಲ್ಲಿ ಕೆಲವು ರಾಶಿಯವರ ಜೀವನದಲ್ಲಿ ಸಂಪತ್ತಿನ ಹೊಳೆಯೇ ಹರಿಯಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ... 

Written by - Yashaswini V | Last Updated : Jun 14, 2023, 08:56 AM IST
  • ಜೂನ್ 24, 2023ರಂದು ಬುಧನು ತನ್ನದೇ ಆದ ಮಿಥುನ ರಾಶಿಯಲ್ಲಿ ರಾಶಿ ಪರಿವರ್ತನೆ ಆಗಲಿದ್ದಾನೆ.
  • ಇದರ ಪರಿಣಾಮ ಎಲ್ಲಾ 12 ರಾಶಿಯವರ ಮೇಲೆ ಕಂಡು ಬರುತ್ತದೆ.
  • ಆದರೂ, ನಾಲ್ಕು ರಾಶಿಯವರ ದೃಷ್ಟಿಯಿಂದ ಇದನ್ನು ತುಂಬಾ ಮಂಗಳಕರ ಎಂದು ಹೇಳಲಾಗುತ್ತಿದೆ.
Budha Gochar: ಹತ್ತು ದಿನಗಳ ಬಳಿಕ ಈ ರಾಶಿಯವರಿಗೆ ಸಂಪತ್ತಿನ ಸುರಿಮಳೆ  title=

Budha Rashi Parivartane: ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ರಾಜಕುಮಾರ ಎಂದು ಕರೆಯಲ್ಪಡುವ ಬುಧನನ್ನು ತರ್ಕ ಮತ್ತು ಬುದ್ಧಿವಂತಿಕೆಯ ಅಂಶವೆಂದು ಪರಿಗಣಿಸಲಾಗುತ್ತದೆ. ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, ಬುಧನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸಿದಾಗಲೆಲ್ಲಾ ಕೆಲವು ರಾಶಿಯವರ ಅದೃಷ್ಟದ ಬಾಗಿಲುಗಳು ತೆರೆಯಲಿವೆ. ಇದೀಗ ಇನ್ನೂ ಹತ್ತು ದಿನಗಳ ಬಳಿಕ ಬುಧ ರಾಶಿ ಪರಿವರ್ತನೆ ಹೊಂದಲಿದ್ದಾನೆ. 

ಜೂನ್ 24, 2023ರಂದು ಬುಧನು ತನ್ನದೇ ಆದ ಮಿಥುನ ರಾಶಿಯಲ್ಲಿ ರಾಶಿ ಪರಿವರ್ತನೆ ಆಗಲಿದ್ದಾನೆ. ಇದರ ಪರಿಣಾಮ ಎಲ್ಲಾ 12 ರಾಶಿಯವರ ಮೇಲೆ ಕಂಡು ಬರುತ್ತದೆ. ಆದರೂ, ನಾಲ್ಕು ರಾಶಿಯವರ ದೃಷ್ಟಿಯಿಂದ ಇದನ್ನು ತುಂಬಾ ಮಂಗಳಕರ ಎಂದು ಹೇಳಲಾಗುತ್ತಿದೆ. ಬುಧನ ಸಂಚಾರದಿಂದ ನಾಲ್ಕು ರಾಶಿಯವರ ಜೀವನದಲ್ಲಿ ಸಂಪತ್ತಿನ ಸುರಿಮಳೆಯೇ ಸುರಿಯಲಿದ್ದು ಕೆಲಸದಲ್ಲಿ ಯಶಸ್ಸು, ಕೀರ್ತಿ ಪ್ರಾಪ್ತಿಯಾಗಲಿದೆ ಎಂದು ಹೇಳಲಾಗುತ್ತಿದೆ. 

ಹತ್ತು ದಿನಗಳಲ್ಲಿ ಗ್ರಹಗಳ ರಾಜಕುಮಾರನ ಸಂಚಾರದಲ್ಲಿ ಬದಲಾವಣೆ: ನಾಲ್ಕು ರಾಶಿಯವರಿಗೆ ಭಾರೀ ಧನಸಂಪತ್ತು: 
ಮೇಷ ರಾಶಿ: 

ಬುಧ ರಾಶಿ ಪರಿವರ್ತನೆಯಿಂದ ಮೇಷ ರಾಶಿಯವರ ಜೀವನದಲ್ಲಿ ಹೊಸ ಸ್ನೇಹಿತರ ಪರಿಚಯವಾಗಲಿದೆ. ಈ ಸಮಯದಲ್ಲಿ ನಿಮ್ಮ ವಾಕ್ಚಾತುರ್ಯದಿಂದಾಗಿ ನೀವು ಉದ್ಯೋಗ ಕ್ಷೇತ್ರದಲ್ಲಿ ಯಶಸ್ಸನ್ನು ಸಾಧಿಸುವಿರಿ. ಮಾತ್ರವಲ್ಲ, ನಿಮ್ಮ ದಾಂಪತ್ಯ ಜೀವನವೂ ಸುಖವಾಗಿರುತ್ತದೆ. 

ಇದನ್ನೂ ಓದಿ- Budha Asta: ಐದು ದಿನಗಳ ಬಳಿಕ ಅಸ್ತಮಿಸಲಿರುವ ಬುಧ, ಹೆಚ್ಚಾಗಲಿದೆ ಈ ರಾಶಿಯವರ ಟೆನ್ಷನ್

ಮಿಥುನ ರಾಶಿ: 
ಸ್ವ ಗ್ರಹದಲ್ಲಿಯೇ ಬುಧನ ರಾಶಿ ಪರಿವರ್ತನೆ ಈ ರಾಶಿಯವರಿಗೆ ತುಂಬಾ ಪ್ರಯೋಜನಕಾರಿ ಆಗಿದೆ. ಈ ಸಮಯದಲ್ಲಿ ಮಿಥುನ ರಾಶಿಯವರಿಗೆ ಸಮಾಜದಲ್ಲಿ ಗೌರವ ಹೆಚ್ಚಾಗಳಿದ್ದು, ಇಷ್ಟು ದಿನ ತಲೆದೋರಿದ್ದ ಆರ್ಥಿಕ ಮತ್ತು ಕೌಟುಂಬಿಕ ಸಂಕಷ್ಟಗಳು ದೂರವಾಗಲಿವೆ. ವ್ಯಾಪಾರ ವ್ಯವಹಾರ ವೃದ್ಧಿಯಾಗಲಿದೆ. ನಿಮ್ಮ ಪ್ರತಿ ಕೆಲಸದಲ್ಲೂ ಕುಟುಂಬಸ್ಥರು ಬೆನ್ನೆಲುಬಾಗಿ ನಿಲ್ಲಲಿದ್ದಾರೆ. 

ಸಿಂಹ ರಾಶಿ: 
ಬುಧ ರಾಶಿ ಪರಿವರ್ತನೆಯು ಈ ರಾಶಿಯವರಿಗೆ ಉದ್ಯೋಗ ಕ್ಷೇತ್ರದಲ್ಲಿ ಹೊಸ ಹೊಸ ಅವಕಾಶಗಳನ್ನು ತರಲಿದೆ. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ  ಜವಾಬ್ದಾರಿಗಳು ಹೆಚ್ಚಾಗಲಿವೆ. ಮದುವೆ ಆಗದವರಿಗೆ ಕಂಕಣಭಾಗ್ಯವೂ, ಮಕ್ಕಳಾಗದವರಿಗೆ ಸಂತಾನ ಭಾಗ್ಯವೂ ದೊರೆಯಲಿದೆ. 

ಇದನ್ನೂ ಓದಿ- ಸಂಪತ್ತಿನ ಅಧಿದೇವತೆ ಲಕ್ಷ್ಮೀದೇವಿಯ ಪ್ರಿಯ ರಾಶಿಗಳಿವು: ಇವರಿಗಿರಲ್ಲ ಎಂದಿಗೂ ಹಣದ ಕೊರತೆ

ಧನು ರಾಶಿ: 
ಬುಧನ ರಾಶಿ ಪರಿವರ್ತನೆ ಧನು ರಾಶಿಯವರಿಗೆ ಸಂಪತ್ತಿನ ಸುರಿಮಳೆಯನ್ನೇ ಸುರಿಸಲಿದೆ. ಈ ಸಮಯದಲ್ಲಿ ನಿಮ್ಮ ವ್ಯಾಪಾರ ವ್ಯವಹಾರಗಳು ದುಪ್ಪಟ್ಟು ಹೆಚ್ಚಾಗಲಿದ್ದು ನಿಮ್ಮ ವ್ಯಾಪಾರವನ್ನು ವಿಸ್ತರಿಸಲು ಅತ್ಯುತ್ತಮ ಸಮಯವಾಗಿದೆ. ಹೊಸ ಹೂಡಿಕೆಗೆ ಸಂಬಂಧಿಸಿದಂತೆ ಯೋಚಿಸುತ್ತಿರುವವರಿಗೂ ಇದು ಉತ್ತಮ ಸಮಯವಾಗಿದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News