12 ವರ್ಷಗಳ ಬಳಿಕ ಗುರು-ಸೂರ್ಯರ ಅದ್ಭುತ ಸಂಯೋಗ, ಈ ರಾಶಿಯವರಿಗೆ ಧನ ವೃಷ್ಟಿ

ಪ್ರಸ್ತುತ ಕುಂಭ ರಾಶಿಯಲ್ಲಿ ತನ್ನ ಪುತ್ರ ಶನಿಯೊಂದಿಗೆ ಸಂಚರಿಸುತ್ತಿರುವ ಗ್ರಹಗಳ ರಾಜ ಸೂರ್ಯದೇವನು ಮಾರ್ಚ್‌ನಲ್ಲಿ ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ನಂತರ, ತಿಂಗಳ ಬಳಿಕ ಮೇಷ ರಾಶಿಯನ್ನು ಪ್ರವೇಶಿಸಲಿದ್ದಾನೆ. ಈ ಸಮಯದಲ್ಲಿ ಸೂರ್ಯನು ದೇವ ಗುರು ಬೃಹಸ್ಪತಿಯೊಂದಿಗೆ ಸಂಯೋಜನೆ ಹೊಂದಲಿದ್ದಾನೆ. ಇದು ಮೂರು ರಾಶಿಯವರಿಗೆ ತುಂಬಾ ಶುಭಕರ ಎಂದು ಹೇಳಲಾಗುತ್ತಿದೆ.

Written by - Yashaswini V | Last Updated : Feb 24, 2023, 08:35 AM IST
  • 2023ರಲ್ಲಿ ಗುರು ದಶಕದ ಬಳಿಕ 12 ವರ್ಷಗಳ ನಂತರ ಮೇಷ ರಾಶಿಯನ್ನು ಪ್ರವೇಶಿಸಲಿದ್ದಾನೆ.
  • ಇದಕ್ಕೂ ಮೊದಲು ಏಪ್ರಿಲ್ 14 ರಂದು, ಗ್ರಹಗಳ ರಾಜ ಸೂರ್ಯ ದೇವನು ಮೇಷ ರಾಶಿಯನ್ನು ಪ್ರವೇಶಿಸಲಿದ್ದಾನೆ.
  • ಇದರಿಂದಾಗಿ ಬರೋಬ್ಬರಿ 12 ವರ್ಷಗಳ ನಂತರ ಮೇಷ ರಾಶಿಯಲ್ಲಿ ಸೂರ್ಯ-ಗುರು ಎರಡೂ ಶುಭ ಗ್ರಹಗಳ ಮಹಾನ್ ಸಂಯೋಗ ನಡೆಯಲಿದೆ.
12 ವರ್ಷಗಳ ಬಳಿಕ ಗುರು-ಸೂರ್ಯರ ಅದ್ಭುತ ಸಂಯೋಗ, ಈ ರಾಶಿಯವರಿಗೆ ಧನ ವೃಷ್ಟಿ  title=
Guru-Surya Yuti

ಬೆಂಗಳೂರು: ವೈದಿಕ ಜ್ಯೋತಿಷ್ಯದ ಪ್ರಕಾರ, ದೇವಗುರು ಬೃಹಸ್ಪತಿಯೂ ಯಾವುದೇ ಒಂದು ರಾಶಿಯನ್ನು ಮತ್ತೆ ಸಂಧಿಸಲು ಕನಿಷ್ಠ 12 ವರ್ಷಗಳು ಬೇಕಾಗುತ್ತದೆ. ಈ ವರ್ಷ 2023ರಲ್ಲಿ ಗುರು ದಶಕದ ಬಳಿಕ 12 ವರ್ಷಗಳ ನಂತರ ಮೇಷ ರಾಶಿಯನ್ನು ಪ್ರವೇಶಿಸಲಿದ್ದಾನೆ. ಇದಕ್ಕೂ ಮೊದಲು  ಏಪ್ರಿಲ್ 14 ರಂದು, ಗ್ರಹಗಳ ರಾಜ ಸೂರ್ಯ ದೇವನು ಮೇಷ ರಾಶಿಯನ್ನು  ಪ್ರವೇಶಿಸಲಿದ್ದಾನೆ. ಇದರಿಂದಾಗಿ ಬರೋಬ್ಬರಿ 12 ವರ್ಷಗಳ ನಂತರ ಮೇಷ ರಾಶಿಯಲ್ಲಿ ಸೂರ್ಯ-ಗುರು ಎರಡೂ ಶುಭ ಗ್ರಹಗಳ ಮಹಾನ್ ಸಂಯೋಗ ನಡೆಯಲಿದೆ. ಇದರ ಪ್ರಭಾವ ಎಲ್ಲಾ 12 ರಾಶಿಗಳ ಮೇಲೆ ಕಂಡು ಬರುತ್ತದೆ. ಆದರೂ, ಇದು ಮೂರು ರಾಶಿಯವರ ಜೀವನದಲ್ಲಿ ಅಪಾರ ಸಂಪತ್ತನ್ನು ತರಲಿದೆ ಎಂದು ಹೇಳಲಾಗುತ್ತಿದೆ. 

12 ವರ್ಷಗಳ ಬಳಿಕ ಮೇಷ ರಾಶಿಯಲ್ಲಿ ಗುರು-ಸೂರ್ಯರ ಯುತಿಯಿಂದ ಮೂರು ರಾಶಿಯವರ ಅದೃಷ್ಟ ಬೆಳಗಲಿದೆ. ಅವರು ಅಪಾರ ಸಂಪತ್ತಿನ ಒಡೆಯರಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...

ಮೇಷ ರಾಶಿ:
ಸ್ವ ರಾಶಿಯಲ್ಲಿ 12 ವರ್ಷಗಳ ಬಳಿಕ ಗುರು-ಸೂರ್ಯರ ಸಂಯೋಗವು ಈ ರಾಶಿಯವರಿಗೆ ತುಂಬಾ ಮಂಗಳಕರ ಎಂದು ಸಾಬೀತುಪಡಿಸಲಿದೆ. ಈ ಸಮಯದಲ್ಲಿ ಮೇಷ ರಾಶಿಯವರು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯಲಿದ್ದು ಪ್ರತಿ ಕೆಲಸದಲ್ಲೂ ಯಶಸ್ಸನ್ನು ಗಳಿಸಲಿದ್ದಾರೆ. ಹೊಸ ಜಾಬ್ ಆಫರ್ ಲಭಿಸಲಿದೆ. ವ್ಯಾಪಾರಸ್ಥರಿಗೆ ಉತ್ತಮ ಧನ ಲಾಭವಾಗಲಿದೆ.

ಇದನ್ನೂ ಓದಿ- ಮಾಸ ಭವಿಷ್ಯ: ಮಾರ್ಚ್ ತಿಂಗಳಿನಲ್ಲಿ ಪ್ರಕಾಶಿಸಲಿದೆ ಈ ರಾಶಿಯವರ ಅದೃಷ್ಟ

ಮಿಥುನ ರಾಶಿ: 
ಗುರು-ಸೂರ್ಯರ ಸಂಯೋಗವು ಮಿಥುನ ರಾಶಿಯವರಿಗೂ ಕೂಡ ಮಂಗಳಕರ ಫಲಗಳನ್ನು ತರಲಿದೆ. ಹೊಸ ವ್ಯಾಪಾರ-ವ್ಯವಹಾರ ಆರಂಭಿಸಲು ಯೋಚಿಸುತ್ತಿರುವವರಿಗೆ ಉತ್ತಮ ಸಮಯ ಇದಾಗಿದೆ. ವೃತ್ತಿ ಜೀವನದಲ್ಲಿ ನಿಮ್ಮ ಬಹುದಿನಗಳ ಕನಸು ನನಸಾಗಲಿದೆ. ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ನಿಮ್ಮ ಆಸೆ ಈಡೇರಲಿದೆ.

ಇದನ್ನೂ ಓದಿ- ಗುರು ಶುಕ್ರ ಯುತಿ ಪರಿಣಾಮ: ಮೂರು ರಾಶಿಯವರಿಗೆ ಭಾರೀ ಅದೃಷ್ಟ

ತುಲಾ ರಾಶಿ:
ಬೃಹಸ್ಪತಿ- ಸೂರ್ಯನ ಸಂಯೋಜನೆಯು ತುಲಾ ರಾಶಿಯವರಿಗೆ ಒಳ್ಳೆಯ ಫಲಗಳನ್ನು ನೀಡಲಿದೆ. ಹಣಕಾಸಿನ ಮೂಲಗಳು ಹೆಚ್ಚಾಗಲಿದ್ದು ವಿತ್ತೀಯ ಸ್ಥಿತಿ ಸುಧಾರಿಸಲಿದೆ. ವಿವಾಹಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಶೀಘ್ರದಲ್ಲೇ ಕಂಕಣ ಭಾಗ್ಯ ಕೂಡಿ ಬರಲಿದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
 

Trending News