ರಾಶಿಗಳಿಗೆ ಅನುಗುಣವಾಗಿಯೇ ಯಾರು ಯಾವ ದಿಕ್ಕಿನಲ್ಲಿ ಹುಡುಕಾಟ ನಡೆಸಿದರೆ, ಬಾಳಸಂಗಾತಿ ಸಿಗುವುದು ಗ್ಯಾರಂಟಿ!

Auspicious Direction For Marriage: ಮೇಷ ರಾಶಿಗಳ ಜನರ ವಿವಾಹ ಪೂರ್ವ ಅಥವಾ ದಕ್ಷಿಣ ಪೂರ್ವ ದಿಕ್ಕಿನಲ್ಲಿ ನೆರವೇರುವ ಸಾಧ್ಯತೆ ಇದೆ. ಇತರ ರಾಶಿಗಳ ವಿವಾಹದ ದಿಕ್ಕನ್ನು ತಿಳಿದುಕೊಳ್ಳೋಣ ಬನ್ನಿ, 

Written by - Nitin Tabib | Last Updated : Sep 20, 2023, 06:58 PM IST
  • ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಪೂರ್ವ ದಿಕ್ಕಿಗೆ ಗ್ರಹಗಳ ರಾಜ ಸೂರ್ಯ ಅಧಿಪತಿ, ದಕ್ಷಿಣ-ಪೂರ್ವ ದಿಕ್ಕಿಗೆ ಶುಕ್ರ ಅಧಿಪತಿ,
  • ದಕ್ಷಿಣ ದಿಕ್ಕಿಗೆ ಸೇನಾಪತಿ ಮಂಗಳ ಅಧಿಪತಿ, ದಕ್ಷಿಣ-ಪಶ್ಚಿಮ ದಿಕ್ಕಿಗೆ ಚಂದ್ರ ಅಧಿಪತಿ, ಉತ್ತರ ದಿಕ್ಕಿಗೆ ಗ್ರಹಗಳ ರಾಜಕುಮಾರ ಬುಧ ಅಧಿಪತಿ,
  • ಹಾಗೂ ಉತ್ತರ ಪೂರ್ವ ದಿಕ್ಕಿನ ಮೇಲೆ ದೇವಗುರು ಬೃಹಸ್ಪತಿಯ ಆಧಿಪತ್ಯ ಇರುತ್ತದೆ.
ರಾಶಿಗಳಿಗೆ ಅನುಗುಣವಾಗಿಯೇ ಯಾರು ಯಾವ ದಿಕ್ಕಿನಲ್ಲಿ ಹುಡುಕಾಟ ನಡೆಸಿದರೆ, ಬಾಳಸಂಗಾತಿ ಸಿಗುವುದು ಗ್ಯಾರಂಟಿ! title=

ಬೆಂಗಳೂರು: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಯಾವುದೇ ಓರ್ವ ವ್ಯಕ್ತಿಯ ಜನ್ಮಜಾತಕದಲ್ಲಿರುವ ಗ್ರಹಗಳ ವಿಶ್ಲೇಷಣೆಯಿಂದ ಅವರ ವೈವಾಹಿಕ ಜೀವನ, ವೃತ್ತಿ ಜೀವನ ಹಾಗೂ ಆರ್ಥಿಕ ಸ್ಥಿತಿಗತಿಯ ಕುರಿತು ತಿಳಿದುಕೊಳ್ಳಬಹುದು ಎನ್ನಲಾಗಿದೆ. ಆದರೆ, ವ್ಯಕ್ತಿಯ ಜಾತಕವನ್ನು ಜಾಲಾಡುವ ಮೂಲಕ ಆ ವ್ಯಕ್ತಿಯ ವಿವಾಹ ಯಾವ ದಿಕ್ಕಿನಲ್ಲಿ ನಡೆಯಲಿದೆ ಎಂಬುದನ್ನು ತಿಳಿದುಕೊಳ್ಳಬಹುದು ಎಂಬ ಸಂಗತಿ ನಿಮಗೆ ತಿಳಿದಿದೆಯೇ? ಹೌದು, ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ವ್ಯಕ್ತಿಯ ಜನ್ಮ ಜಾತಕದ ಸಪ್ತಮ ಭಾವದಿಂದ ವಿವಾಹ ಇತ್ಯಾದಿಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಬಹುದು. ಅರ್ಥಾತ್ ಸಪ್ತಮ ಭಾವದಲ್ಲಿ ಯಾವ ಗ್ರಹವಿದೆ, ಅಲ್ಲದೆ ಸಪ್ತಮೇಶನ ಮೇಲೆ ಯಾರ ದೃಷ್ಟಿ ನೆಟ್ಟಿದೆ ಇದರ ಆಧಾರದ ಮೇಲೆ ಇಂತಹ ಮಾಹಿತಿಯನ್ನು ತಿಳಿದುಕೊಳ್ಳಬಹುದು. 

ಯಾವ ದಿಕ್ಕಿನ ಮೇಲೆ ಯಾವ ಗ್ರಹದ ಆಧಿಪತ್ಯ?
ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಪೂರ್ವ ದಿಕ್ಕಿಗೆ ಗ್ರಹಗಳ ರಾಜ ಸೂರ್ಯ ಅಧಿಪತಿ, ದಕ್ಷಿಣ-ಪೂರ್ವ ದಿಕ್ಕಿಗೆ ಶುಕ್ರ ಅಧಿಪತಿ, ದಕ್ಷಿಣ ದಿಕ್ಕಿಗೆ ಸೇನಾಪತಿ ಮಂಗಳ ಅಧಿಪತಿ, ದಕ್ಷಿಣ-ಪಶ್ಚಿಮ ದಿಕ್ಕಿಗೆ ಚಂದ್ರ ಅಧಿಪತಿ, ಉತ್ತರ ದಿಕ್ಕಿಗೆ ಗ್ರಹಗಳ ರಾಜಕುಮಾರ ಬುಧ ಅಧಿಪತಿ, ಹಾಗೂ ಉತ್ತರ ಪೂರ್ವ ದಿಕ್ಕಿನ ಮೇಲೆ ದೇವಗುರು ಬೃಹಸ್ಪತಿಯ ಆಧಿಪತ್ಯ ಇರುತ್ತದೆ. 

ಮೇಷ ರಾಶಿ: ಜೋತಿಷ್ಯ ಶಾಸ್ತ್ರದ ಪ್ರಕಾರ ನಿಮಗೆ ವಿವಾಹಕ್ಕಾಗಿ ಪೂರ್ವ ದಿಕ್ಕು ಅಥವಾ ದಕ್ಷಿಣ ಪೂರ್ವ ಯೋಗ್ಯ ಎಂದು ಭಾವಿಸಲಾಗುತ್ತದೆ. 

ವೃಷಭ ರಾಶಿ: ಈ ರಾಶಿಯ ಜನರಿಗೆ ದಕ್ಷಿಣ ದಿಕ್ಕು ಅಥವಾ ಉತ್ತರ ಪಶ್ಚಿಮ ದಿಕ್ಕು ಶುಭವಾಗಿದೆ. 

ಮಿಥುನ ರಾಶಿ: ಪೂರ್ವ ಅಥವಾ ಉತ್ತರ ಪೂರ್ವ ದಿಕ್ಕಿನಲ್ಲಿ ನೀವು ನಿಮ್ಮ ಬಾಳಸಂಗಾತಿ ಹುಡುಕಿದರೆ ಉತ್ತಮ. 

ಕರ್ಕ ರಾಶಿ: ನಿಮ್ಮ ಪಾಲಿಗೆ ದಕ್ಷಿಣ ಅಥವಾ ದಕ್ಷಿಣ-ಪಶ್ಚಿಮ ದಿಕ್ಕು ಅತ್ಯಂತ ಶುಭ ಎಂದು ಭಾವಿಸಲಾಗಿದೆ. 

ಸಿಂಹ ರಾಶಿ: ಸಿಂಹ ರಾಶಿಯ ಜನರ ವಿವಾಹ ಪಶ್ಚಿಮ ಹಾಗೂ ಉತ್ತರ ಪಶ್ಚಿಮ ದಿಕ್ಕುಗಳ ಪ್ರಭಾವದಿಂದ ನೆರವೇರುತ್ತದೆ. 

ಕನ್ಯಾ ರಾಶಿ: ನೀವು ನಿಮ್ಮ ಬಾಳಸಂಗಾತಿಗಾಗಿ ಉತ್ತರ ಅಥವಾ ಉತ್ತರ-ಪೂರ್ವ ದಿಕ್ಕಿನಲ್ಲಿ ಹುಡುಕಾಟ ನಡೆಸಿದರೆ ನಿಮಗೆ ಶ್ರೇಯಸ್ಸು ಲಭಿಸುತ್ತದೆ. 

ತುಲಾ ರಾಶಿ: ನಿಮಗೂ ಕೂಡ ಪೂರ್ವ ಹಾಗೂ ದಕ್ಷಿಣ ಪೂರ್ವ ದಿಕ್ಕು ಸರ್ವಶ್ರೇಷ್ಠ ಎಂದು ಭಾವಿಸಲಾಗಿದೆ. ಮದುವೆ ಈ ದಿಕ್ಕಿನಲ್ಲಿ ನೆರವೇರುವ ಪ್ರಬಲ ಸಾಧ್ಯತೆ ಇದೆ. 

ವೃಶ್ಚಿಕ ರಾಶಿ: ನಿಮಗೆ ದಕ್ಷಿಣ ಹಾಗೂ ದಕ್ಷಿಣ ಪೂರ್ವ ದಿಕ್ಕು ವಿವಾಹಕ್ಕಾಗಿ ತುಂಬಾ ಯೋಗ್ಯವಾಗಿದೆ. 

ಧನು ರಾಶಿ: ಈ ರಾಶಿಗಳ ಜನರಿಗೆ ಪಶ್ಚಿಮ ಹಾಗೂ ಉತ್ತರ ಪಶ್ಚಿಮ ದಿಕ್ಕಿನಿಂದ ಬಾಳಸಂಗಾತಿ ಮನೆಗೆ ಆಗಮಿಸುವರು. 

ಮಕರ ರಾಶಿ: ಉತ್ತರ ಅಥವಾ ಉತ್ತರ ಪಶ್ಚಿಮ ದಿಕ್ಕಿನಲ್ಲಿ ನಿಮ್ಮ ಬಾಳಸಂಗಾತಿ ನೆಲೆಸಿದ್ದಾರೆ. ಹುಡುಕಾಟ ನಿಮ್ಮ ಕೈಯಲ್ಲಿದೆ. 

ಕುಂಭ ರಾಶಿ: ಪೂರ್ವ ಅಥವಾ ದಕ್ಷಿಣ ಪೂರ್ವ ದಿಕ್ಕು ನಿಮಗೆ ನಿಮ್ಮ ಬಾಳಸಂಗಾತಿಗಾಗಿ ಯೋಗ್ಯ ದಿಕ್ಕುಗಳಾಗಿವೆ. 

ಇದನ್ನೂ ಓದಿ-ಅಕ್ಟೋಬರ್ 1 ರಿಂದ ಸೂರ್ಯನಂತೆ ಹೊಳೆಯಲಿದೆ ಈ ಜನರ ಅದೃಷ್ಟ, ಧನಲಕ್ಷ್ಮಿಯ ಕೃಪೆಯಿಂದ ಹಣದ ಸುರಿಮಳೆ!

ಮೀನ ರಾಶಿ: ದಕ್ಷಿಣ ಅಥವಾ ದಕ್ಷಿಣ ಪಶ್ಚಿಮ ದಿಕ್ಕಿನಲ್ಲಿ ಹುಡುಕಾಟ ನಡೆಸಿ, ಶೀಘ್ರದಲ್ಲೇ ಕಂಕಣ ಭಾಗ್ಯ ಕೂಡಿ ಬರಲಿದೆ. 

ಇದನ್ನೂ ಓದಿ-ಶೀಘ್ರದಲ್ಲಿಯೇ ರುಚಕ ರಾಜಯೋಗ ನಿರ್ಮಾಣ, 3 ರಾಶಿಗಳ ಜನರಿಗೆ ಧನ-ಕುಬೇರ ಭಾಗ್ಯ ಪ್ರಾಪ್ತಿ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.

Trending News