ಅನಂತ ಚತುರ್ದಶಿಯಂದು 2 ಶುಭ ಯೋಗ: ನಿಮಗೆ ಯಶಸ್ಸಿನ ಜೊತೆಗೆ ಅಪಾರ ಸಂಪತ್ತು ದೊರೆಯಲಿದೆ!

ಈ ವರ್ಷ ಅನಂತ ಚತುರ್ದಶಿಯಂದು 2 ಅತ್ಯಂತ ಶುಭ ಯೋಗಗಳು ರೂಪುಗೊಳ್ಳುತ್ತಿದ್ದು. ಸುಕರ್ಮ ಯೋಗದಲ್ಲಿ ಶುಭ ಕಾರ್ಯಗಳಲ್ಲಿ ಯಶಸ್ಸು ಸಿಗುತ್ತದೆ ಮತ್ತು ರವಿ ಯೋಗದಲ್ಲಿ ಶ್ರೀಹರಿಯ ಆರಾಧನೆಯಿಂದ ಪಾಪಗಳು ನಾಶವಾಗುತ್ತವೆ.

Written by - Puttaraj K Alur | Last Updated : Sep 7, 2022, 02:23 PM IST
  • ಅನಂತ ಚತುರ್ದಶಿಯಂದು ಭಗವಾನ್ ವಿಷ್ಣುವಿನ ಅನಂತ ರೂಪಗಳನ್ನು ಪೂಜಿಸಲಾಗುತ್ತದೆ
  • ಈ ಬಾರಿಯ ಅನಂತ ಚತುರ್ದಶಿಯಂದು ಅತ್ಯಂತ ಮಂಗಳಕರವಾದ ಯೋಗವು ರೂಪುಗೊಳ್ಳುತ್ತಿದೆ
  • ಭಗವಾನ್ ವಿಷ್ಣುವಿನ ಆರಾಧನೆಯು ನಿಮಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ
ಅನಂತ ಚತುರ್ದಶಿಯಂದು 2 ಶುಭ ಯೋಗ: ನಿಮಗೆ ಯಶಸ್ಸಿನ ಜೊತೆಗೆ ಅಪಾರ ಸಂಪತ್ತು ದೊರೆಯಲಿದೆ!  title=
ಅನಂತ ಚತುರ್ದಶಿಯಂದು ಮಂಗಳಕರ ಯೋಗ

ನವದೆಹಲಿ: ಅನಂತ ಚತುರ್ದಶಿಯಂದು ಭಗವಾನ್ ವಿಷ್ಣುವಿನ ಅನಂತ ರೂಪಗಳನ್ನು ಪೂಜಿಸಲಾಗುತ್ತದೆ. ಈ ದಿನ ಶ್ರೀ ವಿನಾಯಕನಿಗೆ ವೈಭವದ ವಿದಾಯ ಹೇಳಲಾಗುತ್ತದೆ. ಈ ವರ್ಷ ಅನಂತ ಚತುರ್ದರ್ಶಿ ಸೆಪ್ಟೆಂಬರ್ 9ರಂದು ಅಂದರೆ ಶುಕ್ರವಾರ ಬಂದಿದೆ. ಈ ಬಾರಿಯ ಅನಂತ ಚತುರ್ದಶಿಯಂದು ಅತ್ಯಂತ ಮಂಗಳಕರವಾದ ಯೋಗವು ರೂಪುಗೊಳ್ಳುತ್ತಿದೆ. ಇದರಿಂದ ಭಗವಾನ್ ವಿಷ್ಣುವಿನ ಆರಾಧನೆಯು ಶುಭ ಫಲಿತಾಂಶಗಳನ್ನು ನೀಡುತ್ತದೆ.

ಅನಂತ ಚತುರ್ದರ್ಶಿ ಶುಭ ಯೋಗ

ಅನಂತ ಚತುರ್ದರ್ಶಿಯಂದು 2 ಅತ್ಯಂತ ಮಂಗಳಕರ ಯೋಗಗಳ ಸಂಯೋಜನೆಯನ್ನು ಮಾಡಲಾಗುತ್ತಿದೆ. ಇದು ಶ್ರೀ ಹರಿಗೆ ಹೆಚ್ಚಿನ ಅನುಗ್ರಹವನ್ನು ನೀಡುತ್ತದೆ. ಈ ಬಾರಿಯ ಅನಂತ ಚತುರ್ದಶಿಯಂದು ಸುಕರ್ಮ ಮತ್ತು ರವಿಯೋಗವು ರೂಪುಗೊಳ್ಳುತ್ತಿದೆ. ಇದು ಯಶಸ್ಸನ್ನು ನೀಡುತ್ತದೆ ಮತ್ತು ಪಾಪಗಳನ್ನು ನಾಶಪಡಿಸುತ್ತದೆ. ಸುಕರ್ಮ ಯೋಗದಲ್ಲಿ ಯಾವುದೇ ಶುಭ ಕಾರ್ಯವನ್ನು ಮಾಡುವುದರಿಂದ ಖಂಡಿತ ಯಶಸ್ಸು ಸಿಗುತ್ತದೆ ಎಂದು ನಂಬಲಾಗಿದೆ. ಆದರೆ ರವಿ ಯೋಗದಲ್ಲಿ ಭಗವಾನ್ ವಿಷ್ಣುವನ್ನು ಆರಾಧಿಸುವುದರಿಂದ ಎಲ್ಲಾ ಪಾಪಗಳು ನಾಶವಾಗುತ್ತವೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ರಾಹುವಿನ ಅನುಗ್ರಹದಿಂದ ಇದ್ದಕ್ಕಿದ್ದಂತೆ ಸಿರಿವಂತರಾಗುತ್ತಾರೆ ಈ ದಿನಾಂಕದಲ್ಲಿ ಜನಿಸಿದವರು

ಅನಂತ ಚತುರ್ದರ್ಶಿ ಶುಭಯೋಗ ಸಮಯ

ಅನಂತ ಚತುರ್ದರ್ಶಿಯಂದು ಸುಕರ್ಮ ಯೋಗವು 8 ಸೆಪ್ಟೆಂಬರ್ 2022ರಂದು ರಾತ್ರಿ 9:41 ರಿಂದ ಪ್ರಾರಂಭವಾಗುತ್ತದೆ ಮತ್ತು 9 ಸೆಪ್ಟೆಂಬರ್ 2022ರಂದು ಸಂಜೆ 6:12ರವರೆಗೆ ಮುಂದುವರಿಯುತ್ತದೆ. ಇದೇ ವೇಳೆಗೆ ಸೆ.9ರಂದು ಬೆಳಗ್ಗೆ 6.10ರಿಂದ ರವಿಯೋಗ ಆರಂಭವಾಗಿದ್ದು, 11.35ರವರೆಗೆ ನಡೆಯಲಿದೆ.

ಅನಂತ ಚತುರ್ದರ್ಶಿ 2022 ಮುಹೂರ್ತ

ಅನಂತ ಚತುರ್ದಶಿ ತಿಥಿಯು ಸೆಪ್ಟೆಂಬರ್ 8, 2022ರಂದು ರಾತ್ರಿ 9.02ರಿಂದ ಪ್ರಾರಂಭವಾಗಲಿದೆ ಮತ್ತು ಚತುರ್ದಶಿ ತಿಥಿಯು ಸೆಪ್ಟೆಂಬರ್ 9, 2022ರಂದು ಸಂಜೆ 6.07ರವರೆಗೆ ಇರುತ್ತದೆ. ಭಗವಾನ್ ವಿಷ್ಣುವಿನ ಅನಂತ ರೂಪಗಳ ಆರಾಧನೆಗೆ ಶುಭ ಮುಹೂರ್ತವು ಸೆಪ್ಟೆಂಬರ್ 9ರಂದು ಬೆಳಿಗ್ಗೆ 6.10ರಿಂದ ಪ್ರಾರಂಭವಾಗುತ್ತಿದೆ ಮತ್ತು ಸಂಜೆ 6.07ರವರೆಗೆ ಪೂಜಿಸಬಹುದು.

ಇದನ್ನೂ ಓದಿ: 13 Number Meaning: ಲಿಫ್ಟ್ ನಲ್ಲೂ 13 ನಂಬರ್ ಇರಲ್ಲ! ಈ ಸಂಖ್ಯೆಯನ್ನು ಕಂಡ್ರೆ ಭಯವೇಕೆ? ಇದರ್ಥವೇನು?

ಗಣಪತಿ ವಿಸರ್ಜನೆ

ಅನಂತ ಚತುರ್ದರ್ಶಿಯ ದಿನದಂದು ಗಣಪತಿಯನ್ನು ವಿಜೃಂಭಣೆಯಿಂದ ವಿಸರ್ಜಿಸಲಾಗುತ್ತದೆ. ಬಪ್ಪನನ್ನು ನೀರಿನಲ್ಲಿ ಮುಳುಗಿಸುವ ಮೊದಲು ವಿಧಿ-ವಿಧಾನಗಳ ಪ್ರಕಾರ ಪೂಜೆ ಮಾಡುವುದು ಬಹಳ ಮುಖ್ಯ. ಇದಕ್ಕಾಗಿ ಗಣಪತಿಗೆ ಧೂಪ ಮತ್ತು ದೀಪದಿಂದ ನೈವೇದ್ಯ ಮಾಡಬೇಕು. ಇದರ ನಂತರ ಬಪ್ಪನನ್ನು ವಿಸರ್ಜಿಸುವ ಮುನ್ನ ತಪ್ಪುಗಳನ್ನು ಕ್ಷಮಿಸುವಂತೆ ಬೇಡಿಕೊಳ್ಳಬೇಕು. ಇದರ ನಂತರ ಗಣಪತಿ ಬಪ್ಪನ ವಿಗ್ರಹವನ್ನು ನೀರಿನಲ್ಲಿ ಮುಳುಗಿಸಬೇಕು. ಆದರೆ ಗಣಪತಿಗೆ ಅರ್ಪಿಸಿದ ವಸ್ತುಗಳನ್ನು ನೀರಿನಲ್ಲಿ ಮುಳುಗಿಸಬಾರದು ಎಂಬುದನ್ನು ನೆನಪಿನಲ್ಲಿಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News