Buddha Purnima ದಿನ ವರ್ಷದ ಮೊದಲ ಚಂದ್ರ ಗ್ರಹಣ, ಈ ರಾಶಿಗಳ ಜನರ ಒಳ್ಳೆಯ ದಿನಗಳು ಆರಂಭ, ಪ್ರತಿ ಕ್ಷೇತ್ರದಲ್ಲಿ ಯಶಸ್ಸಿನ ಯೋಗ!

Lunar Eclipse: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಈ ಬಾರಿ ವರ್ಷದ ಮೊದಲ ಚಂದ್ರ ಗ್ರಹಣ ಬುದ್ಧ ಪೌರ್ಣಿಮೆಯ ದಿನ ಗೋಚರಿಸಲಿದೆ. ಈ ಚಂದ್ರ ಗ್ರಹಣ 3 ರಾಶಿಗಳ ಜನರ ಜೀವನದಲ್ಲಿ ಒಳ್ಳೆಯ ದಿನಗಳನ್ನು ತರಲಿದೆ. ಅದೃಶವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,
 

Parshva Chaya Chandra  Grahan: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಚಂದ್ರ ಮತ್ತು ಸೂರ್ಯಗ್ರಹಣಗಳು ಕಾಲಕಾಲಕ್ಕೆ ಸಂಭವಿಸುತ್ತವೆ. ಈ ಗ್ರಹಣಗಳ ಪರಿಣಾಮವು ಮಾನವ ಜೀವನದ ಮೇಲೆ ಮತ್ತು ಭೂಮಿಯ ಸಕಲ ಚರಾಚರಗಳ ಮೇಲೆ ಗೋಚರಿಸುತ್ತದೆ. ವರ್ಷದ ಮೊದಲ ಚಂದ್ರಗ್ರಹಣವು ಮೇ 5, ಶುಕ್ರವಾರ ಸಂಭವಿಸಲಿದೆ. ಈ ದಿನವೂ ಬುದ್ಧ ಪೌರ್ಣಿಮೆ ಅಥವಾ ಬುದ್ಧ ಹುಣ್ಣಿವೆಯೂ ಇದೆ. ಹೀಗಾಗಿ ಈ ಗ್ರಹಣವನ್ನು ಅತ್ಯಂತ ಮುಖ್ಯ ಗ್ರಹಣವೆಂದು ಪರಿಗಣಿಸಲಾಗಿದೆ. ಭಾರತೀಯ ಕಾಲಮಾನದ ಪ್ರಕಾರ ಈ ಗ್ರಹಣವು ಮೇ 5, 2023 ರಂದು ರಾತ್ರಿ 8:44 ರಿಂದ ಪ್ರಾರಂಭವಾಗಿ, ಶನಿವಾರ, ಮೇ 06, 2023 ರಂದು ಮಧ್ಯರಾತ್ರಿ 01:01 ರವರೆಗೆ ಇರುತ್ತದೆ. ಇದೊಂದು ಉಪ ಛಾಯಾ ಚಂದ್ರ ಗ್ರಹಣವಾಗಿದ್ದು,  ಇದು ಭಾರತವನ್ನು ಹೊರತುಪಡಿಸಿ, ನೈಋತ್ಯ ಯುರೋಪ್, ಏಷ್ಯಾ ಖಂಡದ ಹೆಚ್ಚಿನ ಭಾಗಗಳು, ಆಸ್ಟ್ರೇಲಿಯಾ, ಆಫ್ರಿಕಾ ಮತ್ತು ಹಿಂದೂ ಮಹಾಸಾಗರದಲ್ಲಿ ಗೋಚರಿಸುತ್ತದೆ. ಗ್ರಹಣದ ಒಟ್ಟು ಅವಧಿ 04 ಗಂಟೆ 8 ನಿಮಿಷಗಳದ್ದಾಗಿದೆ. ಇದು ಪಾರ್ಶ್ವಛಾಯಾ ಚಂದ್ರ ಗ್ರಹಣವಾಗಿರುವ ಕಾರಣ ಇದರ ಸೂತಕ ಕಾಲ ಭಾರತದಲ್ಲಿ  ಮಾನ್ಯವಾಗುವುದಿಲ್ಲ. ಇನ್ನೊಂದೆಡೆ ಈ ಗ್ರಹಣದ ಪರಿಣಾಮವು ಎಲ್ಲಾ ದ್ವಾದಶ ರಾಶಿಗಳ ಮೇಲೆ ಗೋಚರಿಸಲಿದೆ. ಆದರೆ ಕೆಲವು ರಾಶಿಗಳ ಜನರ ಪಾಲಿಗೆ ಈ ಗ್ರಹಣವು ಅತ್ಯಂತ ಮಂಗಳಕರ ಸಾಬೀತಾಗಲಿದೆ. ಈ ಗ್ರಹಣ ಯಾವಾಗ ಸಂಭವಿಸಲಿದೆ ಮತ್ತು ಯಾವ ರಾಶಿಗಳ ಜನರಿಗೆ ಇದು ಧನಾತ್ಮಕವಾಗಿದೆ ಎಂಬುದನ್ನೂ ತಿಳಿದುಕೊಳ್ಳಲು ಪ್ರಯತ್ನಿಸೋಣ ಬನ್ನಿ. 

 

ಇದನ್ನೂ ಓದಿ-ತನ್ನ ಸ್ನೇಹಿತನ ನಕ್ಷತ್ರಕ್ಕೆ ಶನಿಯ ಪ್ರವೇಶ, 3 ರಾಶಿಗಳ ಜನರಿಗೆ ಅಪಾರ ಧನ-ಸಂಪತ್ತು-ಘನತೆ-ಗೌರವ ಪ್ರಾಪ್ತಿ!

 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /3

ಸಿಂಹ ರಾಶಿ: ಸಿಂಹ ರಾಶಿಯ ಜಾತಕದವರಿಗೆ ಈ ಚಂದ್ರ ಗ್ರಹಣ ಆರ್ಥಿಕ ದೃಷ್ಟಿಕೋನದಿಂದ ಮಂಗಳಕರವೆಂದು ಸಾಬೀತಾಗಲಿದೆ. ಈ ಅವಧಿಯಲ್ಲಿ ನೀವು ನಿಮ್ಮ ವೃತ್ತಿಜೀವನದಲ್ಲಿ ಖ್ಯಾತಿಯನ್ನು ಪಡೆಯುತ್ತೀರಿ. ಅಲ್ಲದೆ, ಈ ಸಮಯದಲ್ಲಿ ನೀವು ಕೆಲಸದ ಸ್ಥಳದಲ್ಲಿ ಕಿರಿಯ ಮತ್ತು ಹಿರಿಯರ ಬೆಂಬಲವನ್ನು ಪಡೆಯುತ್ತೀರಿ. ಮತ್ತೊಂದೆಡೆ, ಉದ್ಯೋಗ ವೃತ್ತಿಯ ಜನರಿಗೆ ಬಡ್ತಿ ಸಿಗುವ ಸಾಧ್ಯತೆ ಇದೆ. ಅಲ್ಲದೆ, ಈ ಅವಧಿಯಲ್ಲಿ  ನಿಮ್ಮ ತಂದೆಯೊಂದಿಗಿನ ನಿಮ್ಮ ಸಂಬಂಧವು ಬಲವಾಗಿರುತ್ತದೆ. ಇದೇ ವೇಳೆ ವಿದೇಶ ಪ್ರವಾಸದ ಅವಕಾಶಗಳೂ ಸೃಷ್ಟಿಯಾಗುತ್ತಿವೆ.  

2 /3

ಧನು ರಾಶಿ: ಚಂದ್ರಗ್ರಹಣವು ನಿಮಗೆ ಮಂಗಳಕರ ಮತ್ತು ಫಲಪ್ರದ ಸಾಬೀತಾಗಲಿದೆ. ಈ ಅವಧಿಯಲ್ಲಿ ನೀವು ವ್ಯವಹಾರದಲ್ಲಿ ಉತ್ತಮ ಯಶಸ್ಸನ್ನು ಪಡೆಯಬಹುದು. ಹೊಸ ಆರ್ಡರ್‌ಗಳು ನಿಮಗೆ ಒದಗಿ ಬರಲಿದ್ದು ಅದರಿಂದ ನೀವು ಉತ್ತಮ ಲಾಭವನ್ನು ಪಡೆಯಬಹುದು. ಇನ್ನೊಂದೆಡೆ ಈ ಅವಧಿಯಲ್ಲಿ ನಿಮ್ಮ ಮಾತುಗಳಿಂದ ಇತರ ಜನರು ಪ್ರಭಾವಿತರಾಗಲಿದ್ದಾರೆ. ಈ ಸಮಯದಲ್ಲಿ ನೀವು ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಬಹುದು. ಆಸ್ತಿ ಮತ್ತು ವಾಹನಗಳನ್ನು ಸಹ ಖರೀದಿಸಬಹುದು.  

3 /3

ಕನ್ಯಾ ರಾಶಿ: ಚಂದ್ರಗ್ರಹಣದ ಸಂಭವವು ಕನ್ಯಾರಾಶಿಯ ಸ್ಥಳೀಯರಿಗೆ ಪ್ರಯೋಜನಕಾರಿ ಸಾಬೀತಾಗಲಿದೆ. ಈ ಅವಧಿಯಲ್ಲಿ ಉದ್ಯೋಗ ಬದಲಿಸುವ ಇಚ್ಛೆಯಲ್ಲಿರುವ ಉದ್ಯೋಗಿಗಳು  ತಮ್ಮ ಆಸೆ ಈಡೇರಿಸಿಕೊಳ್ಳಬಹುದು. ಸಂತಾನದ ಕಡೆಯಿಂದ ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಇದೇ ವೇಳೆ, ಶಿಕ್ಷಣದ ದೃಷ್ಟಿಯಿಂದ ಈ ಗ್ರಹಣ  ಉತ್ತಮವಾಗಿರುತ್ತದೆ. ಹಳೆಯ ಕಾಲದಿಂದ ನಡೆಯುತ್ತಿದ್ದ ವಿವಾದಗಳು ಸಹ ಕೊನೆಗೊಳ್ಳಲಿವೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಧಾರ್ಮಿಕ ನಂಬಿಕೆ ಹಾಗೂ ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)