Yash: ಯಶ್‌ - ರಾಧಿಕಾ ಲೈಫ್‌ಲ್ಲಿ ಜುಲೈ 18 ತುಂಬಾ ಸ್ಪೆಷಲ್‌! ಅಸಲಿಗೆ ಈ ದಿನ ನಡೆದಿದ್ದೇನು?

ನಟ ಯಶ್‌ ಜೀವನದಲ್ಲಿ ಈ ದಿನ ತುಂಬಾ ಸ್ಪೆಷಲ್‌. ಜುಲೈ 18 ಅನ್ನು ಯಶ್‌ ಜೀವನದಲ್ಲೇ ಮರೆಯಲು ಸಾಧ್ಯವಿಲ್ಲ. ಈ ದಿನ ಅವರ ಪತ್ನಿ ರಾಧಿಕಾ ಪಂಡಿತ್‌ ಅವರಿಗೂ ತುಂಬಾ ವಿಶೇಷವಾಗಿದೆ. 

Yash Cinema Journey: ನಟ ಯಶ್‌ ಜೀವನದಲ್ಲಿ ಈ ದಿನ ತುಂಬಾ ಸ್ಪೆಷಲ್‌. ಜುಲೈ 18 ಅನ್ನು ಯಶ್‌ ಜೀವನದಲ್ಲೇ ಮರೆಯಲು ಸಾಧ್ಯವಿಲ್ಲ. ಈ ದಿನ ಅವರ ಪತ್ನಿ ರಾಧಿಕಾ ಪಂಡಿತ್‌ ಅವರಿಗೂ ತುಂಬಾ ವಿಶೇಷವಾಗಿದೆ. 
 

1 /7

ಈ ದಿನ ಕನ್ನಡದ ಮೊಗ್ಗಿನ ಮನಸ್ಸು ಸಿನಿಮಾ ರಿಲೀಸ್‌ ಆಗಿತ್ತು. ಮೊಗ್ಗಿನ ಮನಸ್ಸು ಸಿನಿಮಾ ಮೂಲಕ ಯಶ್‌ ಮತ್ತು ರಾಧಿಕಾ ಪಂಡಿತ್‌ ಸಿನಿ ಜರ್ನಿಯಲ್ಲಿ ಮಹತ್ತರ ಮೈಲಿಗಲ್ಲನ್ನು ಹಾಕಿತು.   

2 /7

ಮೊಗ್ಗಿನ ಮನಸ್ಸಿನ ಸಿನಿಮಾದಲ್ಲಿ ಶುಭಾ ಪೂಂಜಾ ಕೂಡ ಇದ್ದರು. ಯಶ್‌ - ರಾಧಿಕಾ ಜೋಡಿ ಈ ಸಿನಿಮಾ ಮೂಲಕ ಜನರ ಮನಗೆದ್ದಿತು.   

3 /7

ಡೈರೆಕ್ಟರ್ ಶಶಾಂಕ್ ನಿರ್ದೇಶನ, ಮನೋ ಮೂರ್ತಿ ಅವರ ಸಂಗೀತ ನೋಡುಗರನ್ನು ಮೋಡಿ ಮಾಡಿತ್ತು. ಥಿಯೇಟರ್‌ನಲ್ಲಿ 100 ದಿನ ಓಡಿತು ಮೊಗ್ಗಿನ ಮನಸ್ಸು ಸಿನಿಮಾ. ವಿಮರ್ಶಕರು ಸಹ ಈ ಚಿತ್ರವನ್ನ ಮೆಚ್ಚಿದ್ದರು.   

4 /7

ಮೊಗ್ಗಿನ ಮನಸ್ಸು ಸಿನಿಮಾ ಯಶ್‌ ಅವರ ಎರಡನೇ ಸಿನಿಮಾ. ಅದಕ್ಕೂ ಮೊದಲು ಜಂಬದ ಹುಡುಗಿ ಸಿನಿಮಾದಲ್ಲಿ ಯಶ್ ನಟಿಸಿದ್ದರು.  

5 /7

2008 ರಲ್ಲಿ ತೆರೆಕಂಡ ಮೊಗ್ಗಿನ ಮನಸ್ಸು ಸಿನಿಮಾಗೆ ಈಗ 15 ವರ್ಷಗಳ ಸಂಭ್ರಮ. ಯಶ್ ಕೈ ಹಿಡಿದ ಈ ಸಿನಿಮಾ ಇಂದಿಗೂ ಅನೇಕರ ಮೆಚ್ಚನ ಸಿನಿಮಾಗಳಲ್ಲೊಂದು.   

6 /7

ವೃತ್ತಿ ಜೀವನದಲ್ಲಿ ಮಾತ್ರವಲ್ಲ ಯಶ್‌ ವೈಯಕ್ತಿಕ ಲೈಫ್‌ನಲ್ಲೂ ಈ ಸಿನಿಮಾ ವೆರಿ ವೆರಿ ಸ್ಪೆಷಲ್.‌ ಯಾಕಂದರೆ ಈ ಚಿತ್ರದ ಮೂಲಕವೇ ಯಶ್‌ ಅವರಿಗೆ ಸ್ಯಾಂಡಲ್‌ವುಡ್‌ ಸಿಂಡ್ರೇಲಾ ರಾಧಿಕಾ ಪಂಡಿತ್ ತುಂಬಾ ಹತ್ತಿರವಾದರು.   

7 /7

ಯಶ್‌ ಇದೀಗ ಇಡೀ ವಿಶ್ವಕ್ಕೆ ಪರಿಚಿತರು. ತಮ್ಮ ನಟನೆ ಮೂಲಕ ಜಗತ್ತಿನಾದ್ಯಂತ ಜನರ ಮನಗೆದ್ದಿದ್ದಾರೆ. ಅಲ್ಲದೇ ರಾಧಿಕಾ ಪಂಡಿತ್‌ ಜೊತೆ ಮದುವೆಯಾಗಿ ಸುಖವಾಗಿದ್ದಾರೆ.