World Most Expensive Shoes: ಇವೇ ನೋಡಿ ವಿಶ್ವದ ಅತ್ಯಂತ ದುಬಾರಿ ಶೂಗಳು, ಬೆಲೆ ಎಷ್ಟು ಗೊತ್ತಾ?

World Most Expensive Shoes: ವಿಶ್ವದಲ್ಲಿ ಕೋಟ್ಯಂತರ ರೂ. ಬೆಲೆಬಾಳುವ ಶೂಗಳಿವೆ. ಇವುಗಳನ್ನು ಕೋಟಿಗಟ್ಟಲೇ ಹಣ ಕೊಟ್ಟು ಹರಾಜಿನಲ್ಲಿ ಖರೀದಿಸಲಾಗಿದೆ. ಇವುಗಳ ಬಗ್ಗೆ ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ.

World Most Expensive Shoes: ಯಾರಾದರೂ ನಿಮ್ಮನ್ನು ವಿಶ್ವದ ಅತ್ಯಂತ ದುಬಾರಿ ಶೂಗಳ ಬೆಲೆಗಳ ಬಗ್ಗೆ ಕೇಳಿದರೆ ಎಷ್ಟು ಹೇಳುತ್ತೀರಿ. 8 ಅಥವಾ 10 ಲಕ್ಷ ರೂ. ಎಂದು  ಹೇಳಬಹುದು. ಆದರೆ ಕೋಟ್ಯಂತರ ರೂ. ಬೆಲೆ ಬಾಳುವ ಶೂಗಳ ಬಗ್ಗೆ ಕೇಳಿದ್ರೆ ನಿಮಗೆ ನಿಜಕ್ಕೂ ಶಾಕ್ ಆಗಬಹುದು. ಹೌದು, ವಿಶ್ವದ ಅತ್ಯಂತ ದುಬಾರಿ ಶೂ 16 ಕೋಟಿ ರೂ.ಗೂ ಹೆಚ್ಚು ಬೆಲೆ ಬಾಳುತ್ತದೆ. ವಿಶ್ವ ಮಾರುಕಟ್ಟೆಯಲ್ಲಿ ದುಬಾರಿ ಶೂಗಳ ಭರಾಟೆಯು ಜೋರಾಗಿದೆ. ದುಬಾರಿ ಶೂಗಳ ಬಗ್ಗೆ ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /6

ಘನ ಚಿನ್ನದ OVO x ಏರ್ ಜೋರ್ಡಾನ್ಸ್ ಶೂಗಳ ಬೆಲೆ $2 ಮಿಲಿಯನ್ (ಸುಮಾರು 16 ಕೋಟಿ ರೂ.). ಈ ಶೂಗಳು ಅಮೇರಿಕನ್ ಪಾಪ್ ತಾರೆ ಡ್ರೇಕ್ ಒಡೆತನದಲ್ಲಿದೆ.

2 /6

ಇವು 2008ರ ಗ್ರ್ಯಾಮಿ ಪ್ರಶಸ್ತಿಗಳಲ್ಲಿ ಕಾನ್ಯೆ ವೆಸ್ಟ್ (USA) ಧರಿಸಿದ ನೈಕ್ ಏರ್ ಯೀಜಿ ಮಾದರಿ ಶೂಗಳು. ಈ ಜೋಡಿ ಶೂಗಳನ್ನು 2021ರ ಏಪ್ರಿಲ್ 26ರಂದು 1.8 ಮಿಲಿಯನ್ ಅಮೆರಿಕನ್ ಡಾಲರ್ (ಸುಮಾರು14.76 ಕೋಟಿ ರೂ.)ಗೆ ಮಾರಾಟ ಮಾಡಲಾಯಿತು.

3 /6

ಮೈಕ್ ಜೋರ್ಡಾನ್ ಅವರ ಸ್ನೀಕರ್ಸ್ 1.47 ಮಿಲಿಯನ್ ಅಮೆರಿಕನ್ ಡಾಲರ್ (ಸುಮಾರು 12 ಕೋಟಿ)ಗೆ ಮಾರಾಟವಾಗಿದೆ. ಈ ಬೂಟುಗಳನ್ನು ಹರಾಜಿನ ಸಮಯದಲ್ಲಿ ಮಾರಾಟ ಮಾಡಲಾಗಿದೆ. 2021ರ ಅಕ್ಟೋಬರ್ 24ರಂದು ಲಾಸ್ ವೇಗಾಸ್‌ನಲ್ಲಿರುವ ಸೋಥೆಬೈಸ್‌ನಲ್ಲಿ ಮೈಕ್ ಜೋರ್ಡಾನ್ ಅವರ ಸ್ನೀಕರ್‌ಗಳಿಗಾಗಿ ಕಲೆಕ್ಟರ್ ನಿಕ್ ಫಿಯೊರೆಲ್ಲಾ $1.47 ಮಿಲಿಯನ್ ಪಾವತಿಸಿದ್ದಾರೆ.

4 /6

1985ರಲ್ಲಿ ಕ್ರೀಡಾ ಪ್ರದರ್ಶನದ ಸಂದರ್ಭದಲ್ಲಿ ಚಿಕಾಗೋ ಬುಲ್ಸ್ ತಾರೆ ಧರಿಸಿದ್ದ ಬೂಟುಗಳನ್ನು 'ಅಪರೂಪದಲ್ಲಿಯೇ ಅಪರೂಪ'ವೆಂದು ಹೆಸರಿಸಲಾಗಿದೆ. ಈ ಬೂಟುಗಳನ್ನು ಆಗಸ್ಟ್ 2020ರಲ್ಲಿ ಆನ್‌ಲೈನ್ ಹರಾಜಿನಲ್ಲಿ $615,000 (ಸುಮಾರು 5 ಕೋಟಿ ರೂ)ಗೆ ಮಾರಾಟ ಮಾಡಲಾಗಿದೆ.

5 /6

ನೈಕ್ ಏರ್ ಜೋರ್ಡಾನ್ 1ನ್ನು 2020ರಲ್ಲಿ ನ್ಯೂಯಾರ್ಕ್‌ನಲ್ಲಿ ಸೋಥೆಬೈಸ್ ಹರಾಜಿನಲ್ಲಿ $0.5 ಮಿಲಿಯನ್‌ಗೆ ಮಾರಾಟ ಮಾಡಿತು. ಜೋರ್ಡಾನ್ ಸಹಿ ಮಾಡಿದ ಈ ಸ್ನೀಕರ್ಸ್ ಅನ್ನು 1985ರ ಆಟದಲ್ಲಿ ಧರಿಸಲಾಗಿತ್ತು.

6 /6

ಮೈಕೆಲ್ ಜೋರ್ಡಾನ್ ಅವರ ಏರ್ ಜೋರ್ಡಾನ್ 11 'ಸ್ಪೇಸ್ ಜಾಮ್'ನ ಶೂ ಮಾದರಿಯನ್ನು ಸೋಥೆಬೈಸ್ ಜುಲೈ 2021ರಲ್ಲಿ $176,400ಗೆ ಹರಾಜಿನಲ್ಲಿ ಮಾರಾಟ ಮಾಡಿದೆ. 1996ರ ಚಲನಚಿತ್ರ ‘ಸ್ಪೇಸ್ ಜಾಮ್‌’ನಲ್ಲಿ ಮೈಕೆಲ್ ಜೋರ್ಡಾನ್ ಧರಿಸಲು ಈ ಸ್ನೀಕರ್‌ಗಳನ್ನು ತಯಾರಿಸಲಾಗಿತ್ತು.