Viral News: ಟೊಮೇಟೊ ಪೇಸ್ಟ್‌ ನ ಟ್ಯೂಬ್‌ನಿಂದ ಹೊರಬಂತು ಸತ್ತ ಇಲಿ..!

ಆಹಾರ ಮಳಿಗೆಗಳಲ್ಲಿ ಪಿಜ್ಜಾ, ಬರ್ಗರ್‌ನಂತಹ ವಸ್ತುಗಳಲ್ಲಿ ಕೀಟಗಳು ಕಾಣಿಸಿಕೊಂಡ ಘಟನೆಗಳು ಸಾಕಷ್ಟು ನಡೆದಿವೆ.

ನೀವು ಖುಷಿ ಖುಷಿಯಾಗ ಏನಾದರೂ ತಿನ್ನಬೇಕು, ಸೇವಿಸಬೇಕು ಎಂದುಕೊಂಡಿರುತ್ತೀರಿ. ಹೀಗೆ ನೀವು ಸೇವಿಸುವ ಆಹಾರ ಮತ್ತು ಪಾನೀಯದಲ್ಲಿ ಏನಾದರೂ ಹೊರಬಂದರೆ ಏನಾಗಬೇಡ ಹೇಳಿ. ಹೌದು,ಆಹಾರ ಮಳಿಗೆಗಳಲ್ಲಿ ಪಿಜ್ಜಾ, ಬರ್ಗರ್‌ನಂತಹ ವಸ್ತುಗಳಲ್ಲಿ ಕೀಟಗಳು ಕಾಣಿಸಿಕೊಂಡ ಘಟನೆಗಳು ಸಾಕಷ್ಟು ನಡೆದಿವೆ. ಆದರೆ ಟೊಮೇಟೊ ಪೇಸ್ಟ್‌ ನ ಟ್ಯೂಬ್‌ನಿಂದ ಸತ್ತ ಇಲಿಯೊಂದು ಹೊರಬಂದಿದ್ದು, ಅದನ್ನು ಕಂಡ ಮಹಿಳೆಯೊಬ್ಬರು ಹೌಹಾರಿ ಹೋಗಿದ್ದಾರೆ. ಅಷ್ಟಕ್ಕೂ ಈ ಘಟನೆ ಎಲ್ಲಿ ನಡೆದಿದೆ ನೋಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

‘ದಿ ಸನ್’ ವರದಿಯ ಪ್ರಕಾರ, ಮೀಟಿ ಎಂಬ ಮಹಿಳೆ ಟೊಮೇಟೊ ಪೇಸ್ಟ್‌ ಖರೀಸಿದ್ದರು. ಸಾಸ್ ತೆಗೆದುಕೊಳ್ಳಲೆಂದು ಪ್ರಯತ್ನಿಸಿದ ಅವರಿಗೆ ಟೊಮೇಟೊ ಪೇಸ್ಟ್‌ ನ ಟ್ಯೂಬ್‌ನಿಂದ ಸತ್ತ ಇಲಿಯೊಂದ ಹೊರಬಂದಿದೆ. ಇದನ್ನು ಕಂಡು ಮೀಟಿ ಹೌಹಾರಿಹೋಗಿದ್ದಾರೆ. ಸಾಸ್ ನ ಪೌಚ್ ನಲ್ಲಿ ಸತ್ತ ಇಲಿ ಪತ್ತೆಯಾಗಿದೆ ಅಂತಾ ಅವರು ದೂರು ನೀಡಿದ್ದಾರೆ. ಆದರೆ ಟೊಮೇಟೊ ತಯಾರಿಕ ಕಂಪನಿ ಇದನ್ನು ನಿರಾಕರಿಸಿದೆ. ಎರಡು ಮಿಲಿಮೀಟರ್ ಫಿಲ್ಟರಿಂಗ್ ಪ್ರಕ್ರಿಯೆಯನ್ನು ಅನುಸರಿಸುವುದರಿಂದ ಇದು ಸಾಧ್ಯವಿಲ್ಲವೆಂದು ಹೇಳಿದೆ.

2 /5

ಈ ಭಯಾನಕ ಘಟನೆಯ ವಿವರ ಹಂಚಿಕೊಂಡಿಕೊಂಡಿರುವ ಮಹಿಳೆ,  ಸತ್ತ ಇಲಿ ಇದ್ದಕ್ಕಿದ್ದಂತೆ ಟ್ಯೂಬ್‌ನಿಂದ ಹೊರಬಂದು ಸಾಸ್ ಪಾತ್ರೆಗೆ ಬಿದ್ದಿತು. ನಾನು ಈ ಬ್ರ್ಯಾಂಡ್‌ನ ಒಂದಕ್ಕಿಂತ ಹೆಚ್ಚು ಟೊಮೇಟೊ ಪೇಸ್ಟ್ ನ ಟ್ಯೂಬ್‌ಗಳನ್ನು ಖರೀದಿಸಿದ್ದೇನೆ. ನಾನು ದೊಡ್ಡ ಪಾತ್ರೆಯಲ್ಲಿ ಸಾಸ್ ಸಂಗ್ರಹಿಸುವ ಉದ್ದೇಶದಿಂದ ಟ್ಯೂಬ್‌ ಹಿಸುಕಿದಾಗ ಅದರಿಂದ ಇಲಿಯ ಮೃತದೇಹ ಹೊರಬಂದಿತು ಅಂತಾ ಹೇಳಿದ್ದಾರೆ.

3 /5

ಈ ಘಟನೆ ನಡೆದಿರುವುದು ಬ್ರೆಜಿಲ್‌ನ ಸಾವೊ ಡೊಮಿಂಗೊದಲ್ಲಿ. ಸತ್ತ ಇಲಿಯ ಮೃತದೇಹ ಪತ್ತೆಯಾದ ಬಳಿಕ ಹೆದರಿರುವ ಮಹಿಳೆ ನಾನು ಇನ್ನು ಮುಂದೆ ಟೊಮೇಟೊ ಸಾಸ್ ಖರೀದಿಸುವುದಿಲ್ಲ ಎಂದು ಹೇಳಿದ್ದಾರೆ. ಈ ಘಟನೆಯ ನಂತರ ಅವರು ತಮ್ಮ ಮನೆಯ ತೋಟದಲ್ಲಿ ಟೊಮೇಟೊಗಳನ್ನು ಬೆಳೆಯಲು ನಿರ್ಧರಿಸಿದ್ದಾರೆ. 

4 /5

ಈ ಘಟನೆಯಿಂದ ನನಗೆ ತುಂಬಾ ಭಯವಾಯಿತು ಎಂದು ಮಹಿಳೆ ಹೇಳಿದ್ದಾರೆ. ಇದಾದ ನಂತರ ನಾನು ಸುಳ್ಳು ಹೇಳುತ್ತಿದ್ದೇನೆಂದು ಜನರು ಭಾವಿಸಬಾರದೆಂದು ನನ್ನ ಪೋಷಕರಿಗೆ ಸತ್ತ ಇಲಿಯ ಮೃತದೇಹವನ್ನು ತೋರಿಸಿದೆ. ಆದರೆ ಸಾಸ್ ತಯಾರಿಕಾ ಕಂಪನಿಯವರು ಮಾತ್ರ ನಾನು ಸುಳ್ಳು ಹೇಳುತ್ತಿದ್ದೇನೆ ಎನ್ನುತ್ತಿದ್ದಾರೆ ಅಂತಾ ಮಹಿಳೆ ಗೋಳು ತೋಡಿಕೊಂಡಿದ್ದಾಳೆ.  

5 /5

ಟೊಮೇಟೊ ಸಾಸ್ ನಲ್ಲಿ ಸತ್ತ ಇಲಿ ಪತ್ತೆಯಾಗಿರುವ ಬಗ್ಗೆ ದೂರು ಬಂದ ಬಳಿಕ ಫ್ರೂಟ್ಸ್ ಅಲಿಮೆಂಟೊ ಹೆಸರಿನ ಕಂಪನಿಯು ಈ ಬಗ್ಗೆ ಸ್ಪಷ್ಟೀಕರಣ ನೀಡಿದೆ. ನಾವು ಆ ಪೇಸ್ಟ್ ಅನ್ನು ಪರೀಕ್ಷಿಸಲು ಮಹಿಳೆಯನ್ನು ಸಂಪರ್ಕಿಸಿದ್ದೇವೆ. ಸಾಸ್ ತಯಾರಿಕೆಯ ಕೆಲಸ ಸಂಪೂರ್ಣವಾಗಿ ಯಂತ್ರದಿಂದಲೇ ನಡೆಯುತ್ತದೆ. ಆದರೆ ಇಷ್ಟು ದೊಡ್ಡ ಇಲಿ ಟೊಮೇಟೊ ಸಾಸ್ ನ ಪೌಚ್ ನಲ್ಲಿ ಹೋಗಲು ಸಾಧ್ಯವಿಲ್ಲ. ಇದರ ಬಗ್ಗೆ ನಾವು ಕೂಡ ಕ್ರಮ ಕೈಗೊಳ್ಳಲು ಮುಂದಾಗಿದ್ದೇವೆ ಎಂದು ಹೇಳಿದ್ದಾರೆ.