ಯಾವುದೇ ಬಾಲಿವುಡ್ ನಟಿಗಿಯರಿಗೂ ಕಡಿಮೆಯಿಲ್ಲ ಪಾಕಿಸ್ತಾನಿ ಕ್ರಿಕೆಟಿಗರ ಪತ್ನಿಯರು!

ಸೌಂದರ್ಯದ ವಿಷಯದಲ್ಲಿ ಪಾಕಿಸ್ತಾನಿ ಆಟಗಾರರ ಪತ್ನಿಯರು ಯಾವುದೇ ಟಾಪ್ ಬಾಲಿವುಡ್ ನಟಿಯರಿಗಿಂತಲೂ ಕಡಿಮೆಯಿಲ್ಲ.

ಭಾರತೀಯ ಸ್ಟಾರ್ ಕ್ರಿಕೆಟ್ ಆಟಗಾರರು ತಮ್ಮ ಸುಂದರ ಪತ್ನಿಯರ ಜೊತೆ ಚರ್ಚೆಯಲ್ಲಿರುವಂತೆಯೇ, ಪಾಕಿಸ್ತಾನಿ ಆಟಗಾರರೂ ಆಗಾಗ ಅವರ ಪತ್ನಿಯರ ವಿಷಯಕ್ಕೆ ಸುದ್ದಿಯಾಗುತ್ತಿರುತ್ತಾರೆ. ಪಾಕಿಸ್ತಾನಿ ಆಟಗಾರರ ಪತ್ನಿಯರೂ ತುಂಬಾ ಸುಂದರವಾಗಿದ್ದಾರೆ. ಸೌಂದರ್ಯದ ವಿಷಯದಲ್ಲಿ ಇವರು ಯಾವುದೇ ಟಾಪ್ ಬಾಲಿವುಡ್ ನಟಿಯರಿಗಿಂತಲೂ ಕಡಿಮೆಯಿಲ್ಲ. ಈ ಆಟಗಾರರ ಪತ್ನಿಯರು ಯಾವಾಗಲೂ ಎಲ್ಲರ ಗಮನವನ್ನು ತಮ್ಮತ್ತ ಸೆಳೆಯುತ್ತಾರೆ. ಕೆಲವು ಪಾಕಿಸ್ತಾನಿ ಆಟಗಾರರ ಸುಂದರ ಪತ್ನಿಯರ ಚಿತ್ರಗಳನ್ನು ಇಲ್ಲಿ ನೀಡಲಾಗಿದೆ ನೋಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಏಪ್ರಿಲ್ 2010ರಲ್ಲಿ ಪಾಕಿಸ್ತಾನದ ಆಲ್ ರೌಂಡರ್ ಶೋಯೆಬ್ ಮಲಿಕ್ ಅವರನ್ನು ವಿವಾಹವಾದರು. ದಂಪತಿಗೆ ಈಗ ಇಜಾನ್ ಎಂಬ 2 ವರ್ಷದ ಮಗು ಕೂಡ ಇದೆ.

2 /5

ಮೊಹಮ್ಮದ್ ಹಫೀಜ್ ಮತ್ತು ನಾಜಿಯಾ 2007ರಲ್ಲಿ ವಿವಾಹವಾದರು. ನಾಜಿಯಾ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ ಮತ್ತು ಅವರ ಪೋಸ್ಟ್ಗಳು ಅವರು ಕ್ರಿಕೆಟ್‌ನ ದೊಡ್ಡ ಅಭಿಮಾನಿ ಎಂಬುದನ್ನು ತೋರಿಸುತ್ತವೆ.

3 /5

ನರ್ಜಿಸ್ ಖಾತೂನ್ ಒಬ್ಬ ಬ್ರಿಟಿಷ್-ಪಾಕಿಸ್ತಾನಿ ಹುಡುಗಿಯಾಗಿದ್ದು, ಎಡಗೈ ವೇಗದ ಬೌಲರ್ ಲಂಡನ್‌ನಲ್ಲಿ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾಗ ಮೊಹಮ್ಮದ್ ಅಮೀರ್‌ನ ಸಂಪರ್ಕಕ್ಕೆ ಬಂದಳು. 2016ರಲ್ಲಿ ಅಮೀರ್ ಮತ್ತು ನರ್ಜಿಸ್ ವಿವಾಹವಾದರು.

4 /5

ಪಾಕಿಸ್ತಾನದ ಶ್ರೇಷ್ಠ ವೇಗದ ಬೌಲರ್ ವಾಸಿಂ ಅಕ್ರಮ್ ತಮ್ಮ ಮೊದಲ ಪತ್ನಿಯ ಮರಣದ ನಂತರ ಆಸ್ಟ್ರೇಲಿಯಾದ ಶನಿರಾರನ್ನು ವಿವಾಹವಾದರು. ಶನಿರಾ ನೋಡಲು ತುಂಬಾ ಸುಂದರವಾಗಿದ್ದಾರೆ.

5 /5

ಶಾಮಿಯಾ ಅರ್ಜೂ 2019ರಲ್ಲಿ ದುಬೈನಲ್ಲಿ ಹಸನ್ ಅಲಿ ಅವರನ್ನು ವಿವಾಹವಾದರು. ಹರಿಯಾಣ ಮೂಲದ ಶಾಮಿಯಾ ಅವರು ಎಮಿರೇಟ್ಸ್ ಏರ್‌ಲೈನ್ಸ್‌ನಲ್ಲಿ ಫ್ಲೈಟ್ ಎಂಜಿನಿಯರ್ ಆಗಿದ್ದಾರೆ. ಶಾಮಿಯಾ ಕುಟುಂಬ ಹೊಸದಿಲ್ಲಿಯಲ್ಲಿ ನೆಲೆಸಿದೆ. ಇವರಿಬ್ಬರೂ ದುಬೈನಲ್ಲಿ ಭೇಟಿಯಾಗಿದ್ದರು.