ಹೆಚ್ಚುತ್ತಿರುವ ಮಾಲಿನ್ಯದ ಮಧ್ಯೆ ಈ ಸ್ಥಳಗಳಿಗೆ ಭೇಟಿ ನೀಡುವುದರಿಂದ ನೀವು ಪ್ರಕೃತಿಗೆ ತುಂಬಾ ಹತ್ತಿರವಾಗುತ್ತೀರಿ.
ಚಳಿಗಾಲದ ಪ್ರವಾಸಿ ತಾಣಗಳು: ನೀವು ಡಿಸೆಂಬರ್‌ನಲ್ಲಿ ಪ್ರವಾಸಕ್ಕೆಂದು ಪ್ಲಾನ್ ಮಾಡಿದ್ದರೆ ಭಾರತದಲ್ಲಿರುವ ಕೆಲವು ವಿಶೇಷ ಸ್ಥಳಗಳಿಗೆ ಭೇಟಿ ನೀಡಬಹುದು. ಈ ಸ್ಥಳಗಳಿಗೆ ಭೇಟಿ ನೀಡುವುದು ನಿಮಗೆ ವಿಶೇಷವಾಗಿರುತ್ತದೆ. ಏಕೆಂದರೆ ಇಲ್ಲಿನ ಗಾಳಿಯು ತುಂಬಾ ಪರಿಶುದ್ಧವಾಗಿರುತ್ತದೆ. ಹೆಚ್ಚುತ್ತಿರುವ ಮಾಲಿನ್ಯದ ಮಧ್ಯೆ ಈ ಸ್ಥಳಗಳಿಗೆ ಭೇಟಿ ನೀಡುವುದರಿಂದ ನೀವು ಪ್ರಕೃತಿಗೆ ತುಂಬಾ ಹತ್ತಿರವಾಗುತ್ತೀರಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಐಜ್ವಾಲ್ ವಿಶ್ವದ ಅತ್ಯಂತ ಸ್ವಚ್ಛ ನಗರಗಳಲ್ಲಿ ಒಂದಾಗಿದೆ. ನೀವು ಡಿಸೆಂಬರ್‌ನಲ್ಲಿ ಪ್ರವಾಸಕ್ಕೆ ಪ್ಲಾನ್ ಮಾಡಿದ್ದರೆ ಇಲ್ಲಿಗೆ ಭೇಟಿ ನೀಡಬಹುದು. ಖವಾಂಗ್ಲಾಂಗ್ ವನ್ಯಜೀವಿ ಅಭಯಾರಣ್ಯ, ವಂಟ್ವಾಂಗ್ ಜಲಪಾತಗಳು, ತಮ್ದಿಲ್ ಸರೋವರ ಮತ್ತು ಮಿಜೋರಾಂ ರಾಜ್ಯ ವಸ್ತುಸಂಗ್ರಹಾಲಯಗಳು ಇಲ್ಲಿನ ಪ್ರಮುಖ ಆಕರ್ಷಣೆಗಳಾಗಿವೆ.
ಕೊಯಮತ್ತೂರಿನ ಗಾಳಿಯು ಸಾಕಷ್ಟು ಪರಿಶುದ್ಧವಾಗಿದೆ. ಕೊಯಮತ್ತೂರಿನಲ್ಲಿ ನೀವು ಆದಿಯೋಗಿ ಶಿವನ ಪ್ರತಿಮೆ, ವೈದೇಹಿ ಜಲಪಾತ, ಕೋವೈ ಕೊಂಡಟ್ಟಂ, ಪೇರೂರ್ ಪಟೇಶ್ವರರ್ ದೇವಸ್ಥಾನ, ಸಿರುವಣಿ ಜಲಪಾತಗಳಂತಹ ಸ್ಥಳಗಳಿಗೆ ಭೇಟಿ ನೀಡಬಹುದು.
ಅಮರಾವತಿಯು ಪ್ರಕೃತಿ ಪ್ರಿಯರ ವಿಶೇಷ ಆಕರ್ಷಣೆಯ ಕೇಂದ್ರವಾಗಿದೆ. ಇಲ್ಲಿ ನೀವು ಹರಿಕೇನ್ ಪಾಯಿಂಟ್, ಭೀಮ್ ಕುಂಡ್, ಅಂಬಾದೇವಿ ದೇವಸ್ಥಾನ, ವಡಾಲಿ ತಾಲಾಬ್, ಸತಿಧಾಮ್ ದೇವಾಲಯದಂತಹ ಸುಂದರ ಸ್ಥಳಗಳಿಗೆ ಭೇಟಿ ನೀಡಬಹುದು.
ಕರ್ನಾಟಕದ ದಾವಣಗೆರೆ ತನ್ನ ಪ್ರಾಕೃತಿಕ ಸೌಂದರ್ಯ ಮತ್ತು ಐತಿಹಾಸಿಕ ಪ್ರಾಮುಖ್ಯತೆಗೆ ಹೆಸರುವಾಸಿಯಾಗಿದೆ. ಇದು ಭಾರತದ ಅತ್ಯಂತ ಸ್ವಚ್ಛವಾದ ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿ ನೀವು ಈಶ್ವರ ದೇವಸ್ಥಾನ, ಬೇತೂರು, ಬಾಗಲಿ ಮುಂತಾದ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಿ ಆನಂದಿಸಬಹುದು.
ಆಂಧ್ರಪ್ರದೇಶದ ವಿಶಾಖಪಟ್ಟಣಂ ತನ್ನ ಪ್ರಶಾಂತ ಕಡಲತೀರಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿ ನೀವು ಇಂದಿರಾಗಾಂಧಿ ಝೂಲಾಜಿಕಲ್ ಪಾರ್ಕ್, ಐಎನ್ಎಸ್ ಕುರುಸುರ ಜಲಾಂತರ್ಗಾಮಿ ವಸ್ತುಸಂಗ್ರಹಾಲಯ, ಕೈಲಾಸಗಿರಿ, ಋಷಿಕೊಂಡ ಬೀಚ್, ಅಕಾಕು ಕಣಿವೆ, ವರಾಹ ಲಕ್ಷ್ಮೀ ನರಸಿಂಹ ದೇವಸ್ಥಾನ ಮುಂತಾದ ಸ್ಥಳಗಳಿಗೆ ಭೇಟಿ ನೀಡಬಹುದು.