MS Dhoni ನಂತರ ಯಾರಾಗಲಿದ್ದಾರೆ CSK ಕ್ಯಾಪ್ಟನ್?

             

ಹೊಸದಿಲ್ಲಿ: 'ಕ್ಯಾಪ್ಟನ್ ಕೂಲ್' ಎಂಎಸ್ ಧೋನಿಗೆ (MS Dhoni) ಈಗ 40 ವರ್ಷ, ಹಾಗಾಗಿ ಅವರು ಪ್ರಸಕ್ತ ಋತುವಿನ ನಂತರ ಅಥವಾ ಮುಂದಿನ ವರ್ಷದವರೆಗೆ ಐಪಿಎಲ್‌ನಿಂದ  (IPL) ನಿವೃತ್ತಿ ಹೊಂದುತ್ತಾರೆ ಎಂದು ನಿರೀಕ್ಷಿಸಲಾಗಿದೆ. 'ಯೆಲ್ಲೋ ಆರ್ಮಿ' (Yellow Army) ಅಭಿಮಾನಿಗಳ ಮನಸ್ಸಿನಲ್ಲಿರುವ ದೊಡ್ಡ ಪ್ರಶ್ನೆಯೆಂದರೆ, ಮಹಿಯನ್ನು ಚೆನ್ನೈ ಸೂಪರ್ ಕಿಂಗ್ಸ್  (Chennai Super Kings) ತಂಡದ ನಾಯಕನನ್ನಾಗಿ ಯಾರು ಬದಲಾಯಿಸುತ್ತಾರೆ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಎಂಎಸ್ ಧೋನಿ ತಮ್ಮ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ಗೆ (Chennai Super Kings) 3 ಬಾರಿ ಐಪಿಎಲ್ ಪ್ರಶಸ್ತಿಯನ್ನು ನೀಡಿದ್ದಾರೆ. ಆದರೆ ಈಗ ಈ ಜವಾಬ್ದಾರಿಯನ್ನು ಕೆಲವು ಶ್ರೇಷ್ಠ ಆಟಗಾರರಿಗೆ ವರ್ಗಾಯಿಸುವ ಸಮಯ ಬಂದಿದೆ, ಅವರು ಈ ಪರಂಪರೆಯನ್ನು ಮುಂದುವರಿಸಬಹುದು ಎಂದು ನಿರೀಕ್ಷಿಸಲಾಗಿದೆ.

2 /5

ಸುರೇಶ್ ರೈನಾ  (Suresh Raina), 'ಮಿಸ್ಟರ್ ಐಪಿಎಲ್' ಎಂದೇ ಪ್ರಸಿದ್ಧರಾಗಿದ್ದು, ಎಂಎಸ್ ಧೋನಿಯ ಉತ್ತರಾಧಿಕಾರಿ ಎಂದು ಕರೆಯುತ್ತಾರೆ. ರೈನಾ ಅವರಿಗೆ ಇನ್ನೂ 34 ವರ್ಷ, ಅವರು ಸಿಎಸ್‌ಕೆ ತಂಡದ ನಾಯಕರಾದರೆ ಕನಿಷ್ಠ 3 ವರ್ಷಗಳ ಕಾಲ ಅವರು ಈ ಜವಾಬ್ದಾರಿಯನ್ನು ನಿಭಾಯಿಸುತ್ತಾರೆ ಎಂದು ಹೇಳಲಾಗುತ್ತಿದೆ.   

3 /5

ರುತುರಾಜ್ ಗಾಯಕ್ವಾಡ್ (Ruturaj Gaikwad) 2020 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ಗಾಗಿ (Chennai Super Kings) ಐಪಿಎಲ್‌ಗೆ ಪದಾರ್ಪಣೆ ಮಾಡಿದರು. ಈಗ ಅವರು ಈ ತಂಡದ ವಿಶ್ವಾಸಾರ್ಹ ಆಟಗಾರನಾಗಿದ್ದಾರೆ. ಈ ಫ್ರಾಂಚೈಸಿ ನಾಯಕತ್ವಕ್ಕಾಗಿ ದೀರ್ಘಾವಧಿಯ ಯೋಜನೆಯನ್ನು ಮಾಡುತ್ತಿದ್ದರೆ, ಅದು 24 ವರ್ಷದ ಈ ಆಟಗಾರನಿಗೆ ದೊಡ್ಡ ಜವಾಬ್ದಾರಿಯನ್ನು ವಹಿಸಿಕೊಡಬಹುದು ಎಂದು ನಿರೀಕ್ಷಿಸಲಾಗಿದೆ. ಇದನ್ನೂ ಓದಿ- Video: 'ಧೋನಿ ರಿವ್ಯೂ ಸಿಸ್ಟಮ್' ಅನ್ನು ತಪ್ಪಿಸುವುದು ಭಾರೀ ಕಷ್ಟ, ಈ ರೀತಿ ಬ್ಯಾಟ್ಸ್‌ಮನ್ ಅನ್ನು ಚಿಂತೆಗೀಡು ಮಾಡಿದ ಮಹಿ  

4 /5

2020 ರಲ್ಲಿ ಶಾರ್ದೂಲ್ ಠಾಕೂರ್ (Shardul Thankur) ಅವರನ್ನು ಸಿಎಸ್‌ಕೆ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. ಅವರ ಅಂತಾರಾಷ್ಟ್ರೀಯ ಅನುಭವ ಮತ್ತು ಆತ್ಮವಿಶ್ವಾಸವನ್ನು ನೋಡಿದರೆ, ಅವರನ್ನು 'ಹಳದಿ ಸೇನೆಯ'  (Yellow Army) ನಾಯಕನನ್ನಾಗಿ ಮಾಡಬಹುದು. ಇದನ್ನೂ ಓದಿ- IPL 2021: ಕೊಲ್ಕತ್ತಾ ನೈಟ್ ರೈಡರ್ಸ್ ಗೆ ಸುಲಭ ತುತ್ತಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು

5 /5

ಎಂಎಸ್ ಧೋನಿ ನಿವೃತ್ತಿಯ ನಂತರ ಸಿಎಸ್ ಕೆ ನಾಯಕತ್ವಕ್ಕೆ ರವೀಂದ್ರ ಜಡೇಜಾ (Ravindra Jadeja) ಅತಿದೊಡ್ಡ ಸ್ಪರ್ಧಿ ಎಂದು ಹೇಳಲಾಗಿದೆ. ಅವರು ಈ ಸಮಯದಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ ಮತ್ತು ಸ್ವತಃ ಧೋನಿ ಕೂಡ ಅವರ ಮೇಲೆ ಸಂಪೂರ್ಣ ನಂಬಿಕೆಯನ್ನು ಹೊಂದಿದ್ದಾರೆ.