Rishabh Pant: ಸ್ಟಾರ್ ಕ್ರಿಕೆಟರ್ ರಿಷಭ್ ಪಂತ್ ಸುಂದರಿ ಯಾರು ಗೊತ್ತಾ..?

ಟೀಂ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್‌ ಮನ್ ರಿಷಭ್ ಪಂತ್ ಹೆಸರು ಈ ಹಿಂದೆ ಬಾಲಿವುಡ್ ಖ್ಯಾತ ನಟಿ ಊರ್ವಶಿ ರೌಟೇಲಾ ಜೊತೆ ತಳಕುಹಾಕಿಕೊಂಡಿತ್ತು.

ಟೀಂ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್‌ ಮನ್ ರಿಷಭ್ ಪಂತ್ ಇತ್ತೀಚಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಿಂಚುತ್ತಿದ್ದಾರೆ. ತಂಡದಲ್ಲಿ ಅವರಿಗೆ ವಿಶೇಷ ಸ್ಥಾನ ಸಿಕ್ಕಂತಾಗಿದೆ. ಕ್ರಿಕೆಟ್ ಜೊತೆಗೆ ಅವರು ತಮ್ಮ ವೈಯಕ್ತಿಕ ಜೀವನದ ಬಗ್ಗೆಯೂ ಚರ್ಚೆಯಲ್ಲಿದ್ದಾರೆ. ರಿಷಭ್ ಪಂತ್ ಹೆಸರು ಈ ಹಿಂದೆ ಬಾಲಿವುಡ್ ಖ್ಯಾತ ನಟಿ ಊರ್ವಶಿ ರೌಟೇಲಾ ಜೊತೆ ತಳಕುಹಾಕಿಕೊಂಡಿತ್ತು. ಆದರೆ ಪಂತ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಗೆಳತಿಯೊಂದಿಗಿನ ಚಿತ್ರವನ್ನು ಹಂಚಿಕೊಂಡಿದ್ದಾರೆ. ಇದರ ನಂತರ ಪಂತ್ ಇಂಟೀರಿಯರ್ ಡಿಸೈನರ್ ಆಗಿರುವ ಇಶಾ ನೇಶಿ ಅವರ ಪ್ರೀತಿಯ ಬಲೆಯಲ್ಲಿ ಸಿಲುಕಿರುವುದು ಬಹಿರಂಗವಾಗಿತ್ತು. ಸ್ವತಃ ಅವರೇ ಇಶಾ ಮೇಲಿನ ಪ್ರೀತಿಯನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಈ ಇಶಾ ನೇಶಿ ಯಾರು..? ಈ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ…

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ರಿಷಭ್ ಪಂತ್ ಗೆಳತಿ ಇಶಾ ನೇಗಿ ತುಂಬಾ ಸುಂದರವಾಗಿದ್ದಾಳೆ. ಆದರೆ ಅವರ ಬಾರ್ ಬಗ್ಗೆ ನಿಮಗೆ ತಿಳಿದಿದೆಯೇ? ಇಂದು ನಾವು ನಿಮಗೆ ಅವರನ್ನು ಪರಿಚಯಿಸುತ್ತಿದ್ದೇವೆ. ಇಶಾ ಡೆಹ್ರಾಡೂನ್‌ ಮೂಲದವರು. ವೃತ್ತಿಯಲ್ಲಿ ಇವರು ಉದ್ಯಮಿ ಮತ್ತು ಇಂಟೀರಿಯರ್ ಡಿಸೈನರ್ ಆಗಿದ್ದಾರೆ.

2 /5

ಇಶಾ ನೇಗಿ Instagram ನಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅವರು ಆಗಾಗ ತನಮ್ಮ ಫೋಟೋಗಳನ್ನು ಶೇರ್ ಮಾಡುವ ಮೂಲಕ ಚರ್ಚೆಯಲ್ಲಿರುತ್ತಾರೆ. ಇಶಾ ಹಂಚಿಕೊಂಡ ಫೋಟೋಗಳನ್ನು ಅಭಿಮಾನಿಗಳು ತುಂಬಾ ಇಷ್ಟಪಡುತ್ತಾರೆ.   

3 /5

ಇಶಾ ನೇಗಿ ತಮ್ಮ ಶಾಲಾ ಶಿಕ್ಷಣವನ್ನು ಡೆಹ್ರಾಡೂನ್‌ನ ಜೀಸಸ್ ಮತ್ತು ಮೇರಿ ಸ್ಕೂಲ್ ನಲ್ಲಿ ಮತ್ತು ನೋಯ್ಡಾದ ಅಮಿಟಿ ವಿಶ್ವವಿದ್ಯಾಲಯದಿಂದ ಕಾಲೇಜು ಶಿಕ್ಷಣ ಪೂರೈಸಿದ್ದಾರೆ. ಪಂತ್ ಜೊತೆ  ಇಶಾ ಬಹಳ ದಿನಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ.

4 /5

2020ರ ಆರಂಭದಲ್ಲಿ ರಿಷಭ್ ಪಂತ್ ಅವರು ಇಶಾ ನೇಗಿ ಜೊತೆಗಿನ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಆಗ ಪಂತ್ ತಮ್ಮ ಪ್ರೀತಿಯನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದರು. ಬಾಲಿವುಡ್ ನಟಿ ಊರ್ವಶಿ ರೌಟೇಲಾ ಜೊತೆಗೆ ರಿಷಬ್ ಪಂತ್ ಹೆಸರು ಕೂಡ ಈ ಮೊದಲು ತಳಕುಹಾಕಿಕೊಂಡಿತ್ತು.

5 /5

ಇಶಾ ನೇಗಿ ಕಪ್ಪು ಡ್ರೆಸ್‌ನಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. ಸೋಫಾದ ಒಂದು ಬದಿಯಲ್ಲಿ ಕುಳಿತು ಫೋಟೋಗೆ ಪೋಸು ನೀಡಿದ್ದಾರೆ. ಇವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದವು.