ಯುವಾವಸ್ಥೆಯಲ್ಲಿಯೇ ಬಿಳಿಕೂದಲು ಸಮಸ್ಯೆಯಿಂದ ತೊಂದರೆಗೀಡಾಗಿದ್ದೀರಾ? ಮನೆಯಲ್ಲಿ ತಯಾರಾಗುವ ಈ ಆಯುರ್ವೇದ ಎಣ್ಣೆ ಟ್ರೈ ಮಾಡಿ!

White Hair Home Remedy: ಕೂದಲನ್ನು ಕಪ್ಪಾಗಿಸಲು ಮತ್ತು ಕೂದಲು ಅಕಾಲಿಕವಾಗಿ ಬಿಳಿಯಾಗುವುದನ್ನು ತಡೆಯಲು ಆಯುರ್ವೇದದಲ್ಲಿ ಅನೇಕ ಪ್ರಯೋಜನಕಾರಿ ಗಿಡಮೂಲಿಕೆಗಳನ್ನು ಉಲ್ಲೇಖಿಸಲಾಗಿದೆ. (Lifestyle News In Kannada)
 

ಬೆಂಗಳೂರು: ಅಕಾಲಿಕ ಕೂದಲು ಬಿಳಿಯಾಗುವುದು ಇಂದು ಒಂದು ಸಾಮಾನ್ಯ ಕೂದಲಿನ ಸಮಸ್ಯೆಯಾಗಿ ಮಾರ್ಪಟ್ಟಿದೆ ಮತ್ತು ಈಗ 22-30 ವರ್ಷ ವಯಸ್ಸಿನವರಲ್ಲಿಯೂ ಸಹ ಬಿಳಿ ಕೂದಲಿನ ಸಮಸ್ಯೆ ಕಂಡುಬರುತ್ತದೆ. ಒತ್ತಡ, ಪೋಷಣೆಯ ಕೊರತೆ, ಕಳಪೆ ಜೀವನಶೈಲಿ ಮತ್ತು ನಿದ್ರೆಯ ಕೊರತೆಯಂತಹ ಅನೇಕ ಕಾರಣಗಳಿಂದ ಕೂದಲು ಬಿಳಿಯಾಗಲು ಪ್ರಾರಂಭಿಸುತ್ತವೆ. ಆದ್ದರಿಂದ, ಅದರ ಕಾರಣಗಳನ್ನು ಅರ್ಥ ಮಾಡಿಕೊಂಡು  ಕೂದಲಿಗೆ ಸರಿಯಾದ ಚಿಕಿತ್ಸೆ ಮತ್ತು ಕಾಳಜಿ ನೀಡುವುದು ತುಂಬಾ ಮಹತ್ವದ್ದಾಗಿದೆ.

 

ಇದನ್ನೂ ಓದಿ-ನಿತ್ಯ ಖಾಲಿ ಹೊಟ್ಟೆ ಈ ನೀರು ಸೇವಿಸಿದರೆ ಹೊಟ್ಟೆ-ಪೃಷ್ಠ ಭಾಗದ ಬೊಜ್ಜು ಕೆಲವೇ ದಿನಗಳಲ್ಲಿ ಕರಗುತ್ತೆ!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /7

ಚಿಕ್ಕ ವಯಸ್ಸಿನಲ್ಲೇ ಕೂದಲು ಬಿಳಿ ಬಣ್ಣಕ್ಕೆ ತಿರುಗಲು ಕಾರಣಗಳು: ಕೂದಲನ್ನು ಕಪ್ಪಾಗಿಸಲು ಮತ್ತು ಕೂದಲು ಅಕಾಲಿಕವಾಗಿ ಬಿಳಿಯಾಗುವುದನ್ನು ತಡೆಯಲು ಆಯುರ್ವೇದದಲ್ಲಿ ಅನೇಕ ಪ್ರಯೋಜನಕಾರಿ ಗಿಡಮೂಲಿಕೆಗಳನ್ನು ಉಲ್ಲೇಖಿಸಲಾಗಿದೆ. ಈ ಗಿಡಮೂಲಿಕೆಗಳನ್ನು ಬಳಸುವ ವಿಧಾನವನ್ನು ನಾವು ನಿಮಗೆ ಈ ಲೇಖನದ ಮುಖಾಂತರ ಹೇಳಿಕೊಡುತ್ತಿದ್ದು, ಇದು ನಿಮ್ಮ ಕೂದಲನ್ನು ಅಕಾಲಿಕ ಬಿಳಿ ಬಣ್ಣಕ್ಕೆ ತಿರುಗುವುದರಿಂದ ರಕ್ಷಿಸುತ್ತದೆ ಮತ್ತು ಅವುಗಳನ್ನು ಕಪ್ಪು ಮತ್ತು ದಟ್ಟವಾಗಿಸುತ್ತದೆ. 

2 /7

ಬಿಳಿಕೂದಲು ಕಪ್ಪಾಗಿಸುವ ಎಣ್ಣೆ: ಆಮ್ಲಾ, ದಾಸವಾಳ  ಮತ್ತು ಭೃಂಗರಾಜ ಮುಂತಾದ  ಆಯುರ್ವೇದ ಗಿಡಮೂಲಿಕೆಗಳಿಂದ ತಯಾರಿಸಲಾಗುವ ಎಣ್ಣೆ ನಿಮ್ಮ ಕೂದಲನ್ನು ಕಪ್ಪಾಗಿಸುತ್ತದೆ,  ಈ ಗಿಡಮೂಲಿಕೆಗಳನ್ನು ಸಾಮಾನ್ಯವಾಗಿ ಆಯುರ್ವೇದ ಎಣ್ಣೆ ತಯಾಯಿಸಲುಬಳಸಲಾಗುತ್ತದೆ ಮತ್ತು ಈ ಎಲ್ಲಾ ಗಿಡಮೂಲಿಕೆಗಳು ಕೂದಲಿನ ಪೋಷಣೆಗೆ ಸಹಾಯ ಮಾಡುತ್ತವೆ.

3 /7

ಆಮ್ಲಾ : ವಿಟಮಿನ್ ಸಿ ಮತ್ತು ಕಬ್ಬಿಣದ ಜೊತೆಗೆ, ಉತ್ಕರ್ಷಣ ನಿರೋಧಕಗಳು ಇದರಲ್ಲಿ ಕಂಡುಬರುತ್ತವೆ. ಆಯುರ್ವೇದ ಎಣ್ಣೆ ತಯಾರಿಕೆಗೆ ಬಳಕೆಯಾಗುವ  ಆಮ್ಲಾ  ಕೂದಲಿನ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸುತ್ತದೆ. ಇದಲ್ಲದೆ ನೀವು ಆಮ್ಲಾ ಸೇವನೆಯನ್ನೂ ಕೂಡ ಮಾಡಬಹುದು.  

4 /7

ದಾಸವಾಳದ ಹೂವು ಮತ್ತು ಎಲೆಗಳು: ಕೂದಲಿನ ಉತ್ತಮ ಆರೋಗ್ಯಕ್ಕಾಗಿ, ಹಿಬಿಸ್ಕಸ್ ಅಥವಾ ದಾಸವಾಳದ ಹೂವುಗಳನ್ನು ವಿವಿಧ ರೀತಿಯಲ್ಲಿ ಬಳಸಲಾಗುತ್ತದೆ. ದಾಸವಾಳದ ಹೂವುಗಳು ಮತ್ತು ಎಲೆಗಳ ರಸವನ್ನು ನೀವು ನಿಮ್ಮ ಕೂದಲಿಗೆ ಅನ್ವಯಿಸಬಹುದು. ಇದಲ್ಲದೆ ಇದನ್ನು ನೀವು ಆಯುರ್ವೇದ ಎಣ್ಣೆ ತಯಾರಿಸಲು ಕೂಡ ಬಳಕೆ ಮಾಡಬಹುದು. 

5 /7

ಭೃಂಗರಾಜ್: ಇದು ಕೂದಲಿನ ಉದ್ದವನ್ನು ಹೆಚ್ಚಿಸಲು ಮತ್ತು ಅದರ ನೈಸರ್ಗಿಕ ಬಣ್ಣವನ್ನು ಕಾಪಾಡುವ ಕೆಲಸ ಆಮ್ಲಾ ಮಾಡುತ್ತದೆ.  ಶಾಂಪೂ ಅಥವಾ ಎಣ್ಣೆಯೊಂದಿಗೆ ಮಿಶ್ರಣ ಮಾಡುವ ಮೂಲಕ ನೀವು ಭೃಂಗರಾಜ್ ಅನ್ನು ಕೂದಲಿಗೆ ಅನ್ವಯಿಸಬಹುದು. ಇದಲ್ಲದೆ ನೀವು ಇದನ್ನು ಆಯುರ್ವೇದ ಎಣ್ಣೆ ತಯಾರಿಸಲು ಕೂಡ ಬಳಕೆ ಮಾಡಬಹುದು. 

6 /7

ತೆಂಗಿನ ಎಣ್ಣೆ: ಕೂದಲನ್ನು ಪೋಷಿಸಲು ಮತ್ತು ಕಂಡೀಷನಿಂಗ್ ಮಾಡಲು ತೆಂಗಿನ ಎಣ್ಣೆ ಉತ್ತಮ ಆಯ್ಕೆಯಾಗಿದೆ. ತೆಂಗಿನ ಎಣ್ಣೆಯನ್ನು ಲಘುವಾಗಿ ಬಿಸಿ ಮಾಡಿ ಮತ್ತು ಅದರಿಂದ ನಿಮ್ಮ ತಲೆಯನ್ನು ಮಸಾಜ್ ಮಾಡಿ. ಅಂತೆಯೇ, ತೆಂಗಿನೆಣ್ಣೆಯೊಂದಿಗೆ ಆಮ್ಲಾ, ದಾಸವಾಳ ಮತ್ತು ಮೆಂತ್ಯವನ್ನು ಕುದಿಸಿ ಮತ್ತು ಈ ಗಿಡಮೂಲಿಕೆ ಎಣ್ಣೆಯಿಂದ ನಿಮ್ಮ ಕೂದಲು ಮತ್ತು ನೆತ್ತಿಯನ್ನು ಮಸಾಜ್ ಮಾಡಬಹುದು.

7 /7

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)