WhatsApp: ಬಳಕೆದಾರರಿಗಾಗಿ ಏಳು ಅದ್ಭುತ ವೈಶಿಷ್ಟ್ಯಗಳನ್ನು ಪರಿಚಯಿಸಿದ ವಾಟ್ಸಾಪ್

                                                 

WhatsApp Feature: ಮೆಟಾ ಒಡೆತನದ ವಾಟ್ಸಾಪ್ ತನ್ನ ಬಳಕೆದಾರರ ಚಾಟಿಂಗ್ ಅನುಭವವನ್ನು ಸುಧಾರಿಸಲು ಆಗಾಗ್ಗೆ ಹಲವು ವೈಶಿಷ್ಟ್ಯಗಳನ್ನು ಬಿಡುಗಡೆ ಮಾಡುತ್ತಾಳೆ ಇರುತ್ತದೆ. ಇದೀಗ ವಾಟ್ಸಪ್ ಏಳು ಅತ್ಯುತ್ತಮ ವೈಶಿಷ್ಟ್ಯಗಳನ್ನು ಬಿಡುಗಡೆ ಮಾಡಿದೆ. ಇದು ನಿಮ್ಮ ಚಾಟಿಂಗ್ ಶೈಲಿಯನ್ನು ಇನ್ನೂ ಉತ್ತಮಗೊಳಿಸಲಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /7

ವಾಟ್ಸಾಪ್ ಇದೀಗ ಅನೇಕ ಸಾಧನಗಳಲ್ಲಿ ಖಾತೆಯನ್ನು ಬಳಸುವ ಸೌಲಭ್ಯವನ್ನು ನೀಡಿದೆ. ಈಗ ನೀವು ನಿಮ್ಮ ವಾಟ್ಸಾಪ್ ಖಾತೆಯನ್ನು ನಾಲ್ಕು ವಿಭಿನ್ನ ಸಾಧನಗಳಲ್ಲಿ ಒಟ್ಟಿಗೆ ಬಳಸಬಹುದು. 

2 /7

ವಾಟ್ಸಾಪ್ ಚಾಟ್ ಲಾಕ್ :  ವಾಟ್ಸಾಪ್ ಇತ್ತೀಚೆಗೆ ತನ್ನ ಬಳಕೆದಾರರಿಗೆ ಚಾಟ್ ಲಾಕ್ ವೈಶಿಷ್ಟ್ಯವನ್ನು ಪರಿಚಯಿಸಿದೆ. ಇದುವರೆಗೂ, ವಾಟ್ಸಾಪ್ ಬಳಕೆದಾರರು ತಮ್ಮ ಚಾಟ್‌ಗಳನ್ನು ಮರೆಮಾಡಲು ಆರ್ಕೈವ್ ಆಯ್ಕೆಯನ್ನು ಬಳಸಬೇಕಿತ್ತು. ಇಲ್ಲವೇ, ವಾಟ್ಸಾಪ್ ಅನ್ನು ಸಂಪೂರ್ಣವಾಗಿ ಲಾಕ್ ಮಾಡಬೇಕಿತ್ತು. ಇದೀಗ ನೀವು ವಾಟ್ಸಾಪ್ ಚಾಟ್‌ಗಳನ್ನು ಪ್ರತ್ಯೇಕವಾಗಿ ಲಾಕ್ ಮಾಡಬಹುದು. 

3 /7

ವಾಟ್ಸಾಪ್ ಮೆಸೇಜ್ ಎಡಿಟ್:  ವಾಟ್ಸಾಪ್ ಮೆಸೇಜ್ ಎಡಿಟ್ ವೈಶಿಷ್ಟ್ಯವು ಅಪ್ಲಿಕೇಶನ್‌ನಲ್ಲಿ ಬಹು ಬೇಡಿಕೆಯ ವೈಶಿಷ್ಟ್ಯವಾಗಿದೆ. ಇದರ ಸಹಾಯದಿಂದ ನಾವು ಈಗಾಗಲೇ ಸೆಂಡ್ ಮಾಡಿರುವ ಮೆಸೇಜ್ ಅನ್ನು ಸುಲಭವಾಗಿ ಎಡಿಟ್ ಮಾಡಬಹುದು. 

4 /7

ಉತ್ತಮ ಗುಣಮಟ್ಟದ ಫೋಟೋಗಳನ್ನು ಶೇರ್ ಮಾಡುವುದು:  ವಾಟ್ಸಾಪ್  ಸ್ನ್ಯಾಪ್‌ಶಾಟ್‌ಗೆ ಹೋಗಿ, ಸಂಗ್ರಹಣೆ ಮತ್ತು ಡೇಟಾವನ್ನು ನೋಡಿ ಮತ್ತು ಮೀಡಿಯಾ ಅಪ್‌ಲೋಡ್ ಗುಣಮಟ್ಟದ ಅಡಿಯಲ್ಲಿ, ಅಪ್‌ಲೋಡ್ ಗುಣಮಟ್ಟಕ್ಕಾಗಿ 'ಉನ್ನತ ಗುಣಮಟ್ಟ' ಆಯ್ಕೆಯನ್ನು ಆರಿಸಿದರೆ, ಉತ್ತಮ ಗುಣಮಟ್ಟದ ಫೋಟೋಗಳನ್ನು ಶೇರ್ ಮಾಡಬಹುದಾಗಿದೆ. 

5 /7

ವೀಡಿಯೊ ರೆಕಾರ್ಡಿಂಗ್ ಮೋಡ್:  ಈ ಮೊದಲು ವಾಟ್ಸಾಪ್‌ನಿಂದ ನೇರವಾಗಿ ವೀಡಿಯೊ ರೆಕಾರ್ಡ್ ಮಾಡಲು, ಬಳಕೆದಾರರು ವಾಟ್ಸಾಪ್‌ನ ಕ್ಯಾಮೆರಾದ ಬದಿಯಲ್ಲಿರುವ ಬಟನ್ ಒತ್ತಿ ಹಿಡಿಯುತ್ತಿದ್ದರು. ಆದರೆ ಈಗ ಮೀಸಲಾದ ವೀಡಿಯೊ ರೆಕಾರ್ಡಿಂಗ್ ಮೋಡ್‌ನೊಂದಿಗೆ ವೀಡಿಯೊಗಳನ್ನು ರೆಕಾರ್ಡ್ ಮಾಡಲು ನಿಮಗೆ ಅನುಮತಿಸುವ ಪ್ರತ್ಯೇಕ ಬಟನ್ ಅನ್ನು ನೀಡಲಾಗಿದೆ. 

6 /7

ವಾಯ್ಸ್ ಸ್ಟೇಟಸ್:  ಈ ಹಿಂದೆ ವಾಟ್ಸಾಪ್ ನಲ್ಲಿ ವಿಡಿಯೋ ಸ್ಟೇಟಸ್ ಮತ್ತು ಸ್ಟೇಟಸ್ ಅಪ್ ಡೇಟ್ ಮಾಡುವ ಆಯ್ಕೆ ಇತ್ತು. ಆದರೆ ಈಗ ನೀವು ವಾಯ್ಸ್ ಸ್ಟೇಟಸ್ ಅನ್ನು ಸಹ ಹಂಚಿಕೊಳ್ಳಬಹುದು. ಇದಕ್ಕಾಗಿ ಮೊದಲು ವಾಟ್ಸಾಪ್ ಸ್ಟೇಟಸ್  ಟ್ಯಾಬ್‌ಗೆ ಹೋಗಿ ಮತ್ತು ಕೆಳಭಾಗದಲ್ಲಿರುವ 'ಪೆನ್ಸಿಲ್' ಐಕಾನ್ ಅನ್ನು ಆಯ್ಕೆ ಮಾಡಿ. ಮುಂದಿನ ಪರದೆಯಲ್ಲಿ, 'ಮೈಕ್ರೊಫೋನ್' ಐಕಾನ್ ಮೇಲೆ ಟ್ಯಾಪ್ ಮಾಡಿ ಮತ್ತು 30 ಸೆಕೆಂಡುಗಳವರೆಗೆ ನಿಮ್ಮ ಧ್ವನಿ ಸಂದೇಶವನ್ನು ರೆಕಾರ್ಡ್ ಮಾಡಿ. 

7 /7

ಸ್ಟೇಟಸ್ ಲಿಂಕ್ ಪ್ರೀ ವ್ಯೂ : ಯೂ‌ಆರ್‌ಎಲ್  ನಿಂದ ವೈಶಿಷ್ಟ್ಯಗೊಳಿಸಿದ ಚಿತ್ರವನ್ನು ಪಡೆಯುವ ಮೂಲಕ ನೀವು ವಾಟ್ಸಾಪ್ ಪೂರ್ವ ವೀಕ್ಷಣೆ ಚಿತ್ರವನ್ನೂ ಸೇರಿಸಬಹುದಾಗಿದೆ.