ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಆಹಾರಗಳ ಬಗೆಗೆ ಬಹಳಷ್ಟು ಜಾಗರೂಕರಾಗಿರಬೇಕಾಗುತ್ತದೆ. ಹೆಚ್ಚು ಖಾರ ಇರುವ ಹಾಗೂ ಕೊಬ್ಬಿನಾಂಶ ಹೆಚ್ಚಿರುವ ಆಹಾರವನ್ನು ಎಂದಿಗೂ ಸೇವಿಸಬಾರದು.
Health Tipes :ಗರ್ಭಿಣಿ ಅಥವಾ ಹೆರಿಗೆ ಆದ ನಂತರ ಸಾಮಾನ್ಯವಾಗಿ ಆಯಾಸ, ಬಳಲಿಕೆ ಇರುತ್ತದೆ.ಅಲ್ಲದೇ ಮಗುವಿನ ಲಾಲನೆ,ಪೋಷಣೆ, ಅಸಮರ್ಪಕವಾದ ನಿದ್ದೆಯಿಂದಾಗಿ ಪುನಃ ಆಯಾಸವಾಗುವುದು ಖಂಡಿತ.ಕೆಲವೊಮ್ಮೆ ಕೆಲವು ಮಹಿಳೆಯರಲ್ಲಿ ಕ್ಯಾಲ್ಸಿಯಂ ಕೊರತೆ ಇದ್ದಾಗಲೂ ಈ ಸಮಸ್ಯೆ ಕಾಡಬಹುದು.ಇದರಿಂದಾಗಿಯೂ ದೇಹ ಸೊರಗಬಹುದು ಅಥವಾ ಆಯಾಸ ಬಳಲಿಕೆಯಿಂದ ತಲೆನೋವು ಕಾಡಬಹುದು.ಹೀಗಾಗಿ ಹೆಚ್ಚು ಕ್ಯಾಲ್ಸಿಯಂ ಇರುವ ಸೊಪ್ಪು, ಮಾಂಸ, ದ್ವಿದಳ ಧಾನ್ಯಗಳು, ಕರ್ಜೂರ, ಅಂಜೂರವನ್ನು ಸೇವಿಸಬೇಕು. ಎಷ್ಟೋ ಮಹಿಳೆಯರಿಗೆ ಇಂತಹ ಖಾರ ಅಥವಾ ಸ್ಪೈಸಿ ಮಸಾಲೆ ಇರುವ ಆಹಾರಗಳ ಮೇಲೆ ಕ್ರೇಜ್ ಇರುತ್ತದೆ.ಹಾಗಾಂತ ಹೇಳಿ ಹೆರಿಗೆ ಆದ ಕೂಡಲೇ ಇಂತಹ ಆಹಾರಗಳನ್ನು ಸೇವಿಸುವಂತಿಲ್ಲ.
ಇದನ್ನೂ ಓದಿ: ಶರೀರದ ಈ 3 ಅಂಗಗಳ ಮೇಲೆ ಹೈ ಕೊಲೆಸ್ಟ್ರಾಲ್ ಲಕ್ಷಣಗಳು ಮೊದಲಿಗೆ ಕಾಣಿಸಿಕೊಳ್ಳುತ್ತವೆ
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಅರ್ಧ ಚಮಚ ಅರಿಶಿನವನ್ನು ಹಾಲು ಅಥವಾ ನಿಮ್ಮ ಆಹಾರದೊಂದಿಗೆ ದಿನನಿತ್ಯ ಸೇರಿಸುವುದು ಅನಿವಾರ್ಯವಾಗಿರುತ್ತದೆ.
ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದರೊಂದಿಗೆ, ಮಹಿಳೆಯರಲ್ಲಿ ಸ್ತನ್ಯಪಾನಕ್ಕಾಗಿ ಹಾಲಿನ ಉತ್ಪಾದನೆಯನ್ನು ಹೆಚ್ಚಿಸುತ್ತವೆ.
. ಒಣಗಿದ ಧಾನ್ಯಗಳಲ್ಲಿ ಹೆಚ್ಚಾಗಿ ಪೋಷಾಕಾಂಶಗಳು ಇಲ್ಲದೇ ಇರುವುದರಿಂದ ರಾಗಿ, ಗೋಧಿ, ಜೋಳ ಮುಂತಾದ ಧಾನ್ಯಗಳನ್ನು ಮೊಳಕೆ ಭರಿಸಿ ಸೇವಿಸುವುದು ಬಹಳ ಉತ್ತಮ
ಎದೆಹಾಲು ಹೆಚ್ಚಳ ಹೆಚ್ಚು ಹೆಚ್ಚು ಪೋಷಾಕಾಂಶ ಇರುವ ಆಹಾರ ಅಥವಾ ಆರೋಗ್ಯಕರವಾದ ಕೊಬ್ಬಿನಾಂಶ ಇರುವ ಆಹಾರವನ್ನು ಸೇವಿಸಿದರೆ ಎದೆ ಹಾಲು ಹೆಚ್ಚುತ್ತದೆ.ಆದರೆ ಜಂಕ್‌ಫುಡ್ ಅಥವಾ ಫಾಸ್ಟ್ ಫುಡ್ ಮಗುವಿನ ಆರೋಗ್ಯದ ಮೇಲೆ ವ್ಯತಿರಿಕ್ತವಾದ ಪರಿಣಾಮವನ್ನು ಬೀರುತ್ತದೆ.
ಸೊಪ್ಪು, ಮಾಂಸ, ದ್ವಿದಳ ಧಾನ್ಯಗಳು, ಕರ್ಜೂರ, ಅಂಜೂರವನ್ನು ಸೇವಿಸಬೇಕು. ಈ ರೀತಿಯ ಆಹಾರ ಸೇವನೆ ಬಾಣಂತಿಯರಿಗೆ ಬಹಳ ಒಳ್ಳೆಯದು.
ಮೆಂತೆಬೀಜವನ್ನು ಹಲವಾರು ಕಾರಣಗಳಿಗಾಗಿ ಬಳಸುತ್ತಾರೆ ಮತ್ತು ಇದರಲ್ಲಿ ಹೇರಳವಾಗಿ ಕ್ಯಾಲ್ಸಿಯಂ ಪ್ರಮಾಣವೂ ಇದೆ. ಅಲ್ಲದೇ ಹೆರಿಗೆ ಆದ ನಂತರ ಸುಮಾರು ಆರು ತಿಂಗಳು ಇದನ್ನು ಆಹಾರದಲ್ಲಿ ಬಳಸಿದರೆ ಎದೆ ಹಾಲಿನ ಪ್ರಮಾಣ ಹೆಚ್ಚಾಗುವುದಲ್ಲದೇ ಸುಸ್ತು ನಿಶ್ಯಕ್ತಿಯಿಂದ ಮುಕ್ತಿ ಪಡೆಯಬಹುದು.
Next Gallery