FD Return: ಯಾವುದೇ ರೀತಿಯ ಅಪಾಯವಿಲ್ಲದೆ ಉತ್ತಮ ಆದಾಯ ಗಳಿಕೆ ಮಾಡಲು ಎಫ್ ಡಿ ಉತ್ತಮ ಆಯ್ಕೆಗಳಾಗಿವೆ. ಇದೇ ವೇಳೆ, ಆದಾಯದ ಮೊತ್ತವೂ ಸ್ಥಿರವಾಗಿರುತ್ತದೆ.
FD Return: ಯಾವುದೇ ರೀತಿಯ ಅಪಾಯವಿಲ್ಲದೆ ಉತ್ತಮ ಆದಾಯ ಗಳಿಕೆ ಮಾಡಲು ಎಫ್ ಡಿ ಉತ್ತಮ ಆಯ್ಕೆಗಳಾಗಿವೆ. ಇದೇ ವೇಳೆ, ಆದಾಯದ ಮೊತ್ತವೂ ಸ್ಥಿರವಾಗಿರುತ್ತದೆ. ಈ ಹೂಡಿಕೆಯಲ್ಲಿ ಜನರ ಬಂಡವಾಳವೂ ಸುರಕ್ಷಿತವಾಗಿರುತ್ತದೆ. ಬ್ಯಾಂಕ್ಗಳಿಂದ ಎಫ್ಡಿ ಮಾಡಬಹುದು. ಆದರೂ ಕೂಡ, ಇತರ ಅನೇಕ ಕಂಪನಿಗಳಲ್ಲಿಯೂ ಕೂಡ ನೀವು ಎಫ್ಡಿ ಮಾಡಬಹುದು ಎಂದು ನಿಮಗೆ ತಿಳಿದಿದೆಯೇ?
ಇದನ್ನೂ ಓದಿ-EPFO News: ಇಪಿಎಫ್ಓ ಕೊಡುಗೆದಾರರ ಪೆನ್ಷನ್ ಹೆಚ್ಚಾಗಲಿದೆಯಾ! ಮಹತ್ವದ ಹೇಳಿಕೆ ನೀಡಿದ ಸರ್ಕಾರ
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
FD Interest Rate: ಫಿಕ್ಸೆಡ್ ಡೆಪಾಸಿಟ್ ಮೂಲಕ ಹೂಡಿಕೆದಾರರು ಕಡಿಮೆ ರಿಸ್ಕ್ ನಲ್ಲಿ ಉತ್ತಮ ಆದಾಯ ಪಡೆಯಬಹುದು. ಹೂಡಿಕೆದಾರರು ಎಫ್ಡಿಯಲ್ಲಿ ಯಾವುದೇ ರೀತಿಯ ಅಪಾಯವನ್ನು ಭರಿಸಬೇಕಾಗಿಲ್ಲ. ಇದೇ ವೇಳೆ, ರಿಟರ್ನ್ ಮೊತ್ತವೂ ಇಲ್ಲಿ ಸ್ಥಿರವಾಗಿರುತ್ತದೆ. ಈ ಹೂಡಿಕೆಯಲ್ಲಿ ಜನರ ಬಂಡವಾಳವೂ ಸುರಕ್ಷಿತವಾಗಿರುತ್ತದೆ. ಬ್ಯಾಂಕ್ಗಳಿಂದ ಎಫ್ಡಿ ಮಾಡಬಹುದು. ಆದರೆ, ಅನೇಕ ಕಂಪನಿಗಳ ಮೂಲಕವೂ ಕೂಡ ನೀವು ಎಫ್ಡಿ ಮಾಡಬಹುದು ಎಂಬ ಸಂಗತಿ ಬಹುತೇಕರಿಗೆ ತಿಳಿದಿಲ್ಲ. ಇದನ್ನೇ ಕಾರ್ಪೊರೇಟ್ ಫಿಕ್ಸೆಡ್ ಡೆಪಾಸಿಟ್ ಎಂದು ಕರೆಯಲಾಗುತ್ತದೆ.
ಕಾರ್ಪೊರೇಟ್ ಎಫ್ಡಿ ಒಂದು ಅವಧಿ ಠೇವಣಿಯಾಗಿದ್ದು, ನಿಗದಿತ ಬಡ್ಡಿದರದಲ್ಲಿ ನಿಗದಿತ ಅವಧಿಗೆ ಅದನ್ನು ಇರಿಸಲಾಗುತ್ತದೆ. ಕಾರ್ಪೊರೇಟ್ ಫಿಕ್ಸೆಡ್ ಡೆಪಾಸಿಟ್ ಅನ್ನು ಹಣಕಾಸು ಮತ್ತು ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳ (NBFC) ಮೂಲಕ ನೀಡಲಾಗುತ್ತದೆ. ಕಾರ್ಪೊರೇಟ್ FD ಕೆಲವು ತಿಂಗಳುಗಳಿಂದ ಕೆಲವು ವರ್ಷಗಳವರೆಗೆ ಇರಬಹುದು.
ಹೂಡಿಕೆದಾರರ ಹೂಡಿಕೆಯ ಅವಶ್ಯಕತೆಗೆ ಅನುಗುಣವಾಗಿ, ವಿವಿಧ ಅವಧಿಗಳಲ್ಲಿ, ಬಡ್ಡಿದರಗಳು ಮತ್ತು ಸಂಸ್ಥೆಗಳಲ್ಲಿ ವಿವಿಧ ಕಾರ್ಪೊರೇಟ್ ಸ್ಥಿರ ಠೇವಣಿ ಆಯ್ಕೆಗಳನ್ನು ಆಯ್ಕೆ ಮಾಡಬಹುದು. ಕಾರ್ಪೊರೇಟ್ ಫಿಕ್ಸೆಡ್ ಡೆಪಾಸಿಟ್ ಬ್ಯಾಂಕುಗಳು ಮಾಡಿದ ಎಫ್ಡಿಗಳಿಗಿಂತ ತುಲನಾತ್ಮಕವಾಗಿ ಹೆಚ್ಚಿನ ಆದಾಯವನ್ನು ನೀಡುತ್ತವೆ.
ಹಣವನ್ನು ಸಂಗ್ರಹಿಸಲು ಕಂಪನಿಗಳು ಕಾರ್ಪೊರೇಟ್ ಎಫ್ಡಿಗಳನ್ನು ನೀಡುತ್ತವೆ. ಬ್ಯಾಂಕ್ ಎಫ್ಡಿಗಳು ಬ್ಯಾಂಕುಗಳು ನಿರ್ವಹಿಸುವ ಒಟ್ಟಾರೆ ಸ್ವತ್ತುಗಳಿಂದ ಬೆಂಬಲಿತವಾಗಿದೆ. ಆದರೆ, ಕಾರ್ಪೊರೇಟ್ ಎಫ್ಡಿಗಳು ಅಸುರಕ್ಷಿತ ಸಾಧನಗಳಾಗಿರಬಹುದು. ರಿಟರ್ನ್ಸ್ ಗ್ಯಾರಂಟಿ ಮಾಡಲು ಈ ಠೇವಣಿಗಳು ಮೇಲಾಧಾರ ಅಥವಾ ಸ್ವತ್ತುಗಳನ್ನು ಹೊಂದಿರದ ಕಾರಣ ಇವುಗಳು ಈ ಸಂದರ್ಭದಲ್ಲಿ ಅಪಾಯಕಾರಿ ಎಫ್ಡಿಗಳಾಗಿವೆ.
ಇದೇ ವೇಳೆ, ಯಾವುದೇ ಕಾರ್ಪೊರೇಟ್ ಫಿಕ್ಸೆಡ್ ಡೆಪಾಸಿಟ್ ಅನ್ನು ಆಯ್ಕೆ ಮಾಡುವ ಮೊದಲು, ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಕಾರ್ಪೊರೇಟ್ ಫಿಕ್ಸೆಡ್ ಡೆಪಾಸಿಟ್ ಮಾಡುವಾಗ, ಕ್ರೆಡಿಟ್ ರೇಟಿಂಗ್, ಕಂಪನಿಯ ಹಿನ್ನೆಲೆ ಮತ್ತು ಮರುಪಾವತಿ ಇತಿಹಾಸವನ್ನು ಪರಿಶೀಲಿಸಲು ಮರೆಯಬೇಡಿ.