Weight Loss Soups: ತೂಕ ಇಳಿಕೆಮಾಡಬೇಕೆ? ಇಂದೇ ಈ ಸೂಪ್ ಗಳನ್ನು ನಿಮ್ಮ ಡಯಟ್ ನಲ್ಲಿ ಶಾಮೀಲುಗೊಳಿಸಿ

Weight loss Soup For All: ಕೆಲವು ಸೂಪ್‌ಗಳು ತೂಕವನ್ನು ಕಡಿಮೆ ಮಾಡಲು ಬಹಳ ಪ್ರಯೋಜನಕಾರಿಯಾಗಿವೆ. ನೀವು ನಿಮ್ಮ ಆಹಾರದಲ್ಲಿ ಸ್ವಲ್ಪ ಸೂಪ್ ಅನ್ನು ಸೇರಿಸಿದರೆ, ನೀವೂ ಕೂಡ ನಿಮ್ಮ ತೂಕವನ್ನು ಖಂಡಿತವಾಗಿ ಇಳಿಕೆ ಮಾಡಿಕೊಳ್ಳಬಹುದು. ಈ ಸೂಪ್ ಗಳು ಯಾವುವು ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ ಬನ್ನಿ,
 

Weight loss Soup for Health: ತೂಕವನ್ನು ಕಳೆದುಕೊಳ್ಳಲು ಹಲವು ಮಾರ್ಗಗಳಿವೆ, ಆದರೆ ಇದರ ನಂತರವೂ ಕೆಲವರ ತೂಕ ಇಳಿಕೆಯಾಗುವುದಿಲ್ಲ, ಏಕೆಂದರೆ ಅವರು ತಮ್ಮ ಆಹಾರವನ್ನು ಬದಲಾಯಿಸುವುದಿಲ್ಲ. ಕೆಲವು ಸೂಪ್‌ಗಳ ಸಹಾಯದಿಂದ ತೂಕವನ್ನು ಸಹ ಕಡಿಮೆ ಮಾಡಬಹುದು ಎಂದು ನಿಮಗೆ ತಿಳಿದಿದೆಯೇ?  ತೂಕವನ್ನು ಇಳಿಕೆ ಮಾಡಿಕೊಳ್ಳಬಹುದಾದಂತಹ ಆ ಸೂಪ್ ಗಳು ಯಾವುವು ತಿಳಿದುಕೊಳ್ಳೋಣ,

 

ಇದನ್ನೂ ಓದಿ-Drinking Cold Water After Workout: ವರ್ಕೌಟ್ ಬಳಿಕ ನೀವೂ ಕೂಡ ತಣ್ಣೀರು ಕುಡಿಯುತ್ತೀರಾ?

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /6

1. ಎಲೆಕೋಸು ಸೂಪ್ ನಿಂದ ತೂಕ ಇಳಿಕೆ ಮಾಡಿಕೊಳ್ಳಬಹುದು - ಎಲೆಕೋಸು ಸೂಪ್ ಸಹ ತೂಕವನ್ನು ಕಡಿಮೆ ಮಾಡಬಹುದು. ಈ ಸೂಪ್ ಅನ್ನು ತಯಾರಿಸುವುದು ಕೂಡ ಸುಲಭ. ಎಲೆಕೊಸಿನಲ್ಲಿ ಪ್ರೋಟೀನ್, ಫೈಬರ್, ವಿಟಮಿನ್ ಕೆ, ಸಿ ಮತ್ತು ಬಿ 6 ಮತ್ತು ಪೊಟ್ಯಾಸಿಯಮ್ ನಂತಹ ಪೋಷಕಾಂಶಗಳು ಹೇರಳ ಒರನಾಬದಕ್ಕು ಕಂಡುಬರುತ್ತವೆ. ಇದರ ಸೇವನೆಯು ತೂಕವನ್ನು ಇಳಿಕೆ ಮಾಡಿಕೊಳ್ಳಲು ಮಾಡಲು ಸಹಾಯ ಮಾಡುತ್ತದೆ.

2 /6

2. ಲೆಂಟಿಲ್ ಮತ್ತು ಕುಂಬಳಕಾಯಿ ಸೂಪ್ ಸಹ ಪ್ರಯೋಜನಕಾರಿಯಾಗಿದೆ - ಲೆಂಟಿಲ್ ಮತ್ತು ಕುಂಬಳಕಾಯಿ ಸೂಪ್ ಕೂಡ ತೂಕ ಇಳಿಕೆಗೆ ತುಂಬಾ ಉಪಯುಕ್ತವಾಗಿದೆ. ನೀವು ಈ ಎರಡನ್ನೂ ಸೇವಿಸಿರಬಹುದು, ಆದರೆ ಈ ಎರಡನ್ನು ಬೆರೆಸಿ ಸೂಪ್ ಮಾಡಿದರೆ, ಅದು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂಬುದು ಕೆಲವೇ ಜನರಿಗೆ ತಿಳಿದಿದೆ. ವಾಸ್ತವದಲ್ಲಿ, ಸಾಕಷ್ಟು ಪ್ರೋಟೀನ್ ಮತ್ತು ಇತರ ಪೋಷಕಾಂಶಗಳು ಲೆಂಟಿಲ್ ಮತ್ತು ಕುಂಬಳಕಾಯಿಯಲ್ಲಿ ಕಂಡುಬರುತ್ತವೆ. ವೆಜ್ ಜನರಿಗೆ ಇದೊಂದು ಉತ್ತಮ ಆಯ್ಕೆಯಾಗಿದೆ.

3 /6

3. ಚಿಕನ್ ಸೂಪ್ ಕೂಡ ಉತ್ತಮ - ಚಿಕನ್ ಸೂಪ್ ಸಹ ತೂಕ ಇಳಿಕೆ ಮಾಡುತ್ತದೆ. ತೂಕವನ್ನು ಕಡಿಮೆ ಮಾಡಿಕೊಳ್ಳಲು ಇದು ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ನೀವೂ ಕೂಡ ಯೋಚಿಸುತ್ತಿರಬಹುದಲ್ಲವೇ. ಇದಕ್ಕಾಗಿ, ಮೊದಲು ನೀವು ಚಿಕನ್ ಅನ್ನು ಚೆನ್ನಾಗಿ ಬೇಯಿಸಬೇಕು, ನಂತರ ಅದನ್ನು ಪ್ರೆಶರ್ ಕುಕ್ಕರ್‌ನಲ್ಲಿ ಹಾಕಿ ಮತ್ತು ಬೇ ಎಲೆ ಮತ್ತು ಹಸಿರು ಮೆಣಸಿನಕಾಯಿಯನ್ನು ಫ್ರೈ ಮಾಡಿ, ಈರುಳ್ಳಿ ಸೇರಿಸಿ. ಚೆನ್ನಾಗಿ ಬೇಯಿಸಿದ ನಂತರ, ಉಪ್ಪು ಮತ್ತು ಸ್ವಲ್ಪ ಪ್ರಮಾಣದ ಆಮ್ಚೂರ್ ಪುಡಿಯನ್ನು ಕೂಡ ಸೇರಿಸಬಹುದು.

4 /6

4. ಪನೀರ್ ಮತ್ತು ಪಾಲಕ ಸೂಪ್ ಸಹ ಸಹಾಯ ಮಾಡುತ್ತದೆ - ಪನೀರ್ ಮತ್ತು ಪಾಲಕ್ ಸೂಪ್ ಕೂಡ ತೂಕವನ್ನು ಇಳಿಕೆ ಮಾಡುತ್ತವೆ ಎಂಬುದು ನಿಮಗೆ ತಿಳಿದಿದೆಯೇ? ಹೌದು, ವಾಸ್ತವದಲ್ಲಿ, ಪಾಲಕನಲ್ಲಿ ಆಂಟಿ ಆಕ್ಸಿಡೆಂಟ್ ಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತವೆ, ಇದು ಚರ್ಮಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ಪ್ರೋಟೀನ್, ಕಬ್ಬಿಣ ಮತ್ತು ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿದೆ. ಇದು ಕೂಡ ತೂಕವನ್ನು ಇಳಿಕೆ ಮಾಡಬಹುದು.  

5 /6

5. ಬಟಾಣಿ ಮತ್ತು ಕ್ಯಾರೆಟ್ ಸೂಪ್ - ಬಟಾಣಿ ಮತ್ತು ಕ್ಯಾರೆಟ್ ಸೂಪ್ ಕೂಡ ನಿಮಗೆ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ವಾಸ್ತವದಲ್ಲಿ, ವಿಟಮಿನ್-ಎ ಕ್ಯಾರೆಟ್‌ನಲ್ಲಿ ಹೇರಳಪ್ರಮಾನದಲ್ಲಿ ಕಂಡುಬರುತ್ತದೆ, ಇದು ಕಣ್ಣುಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದರೊಂದಿಗೆ, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ಕಬ್ಬಿಣವು ಬಟಾಣಿಯಲ್ಲಿ ಕಂಡುಬರುತ್ತದೆ, ಇದು ನಿಮ್ಮ ಆರೋಗ್ಯ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದರೊಂದಿಗೆ, ಇದು ತೂಕವನ್ನು ಕಡಿಮೆ ಮಾಡಲು ಸಹ ಉಪಯುಕ್ತವಾಗಿದೆ

6 /6