ಖ್ಯಾತ ಬಾಲಿವುಡ್ ನಟಿ ಹಾಗೂ ಮಾಜಿ ಸೌಂದರ್ಯ ರಾಣಿ ಊರ್ವಶಿ ರೌತೆಲಾ (Urvashi Rautela) ಹೇಳುವ ಪ್ರಕಾರ, ಸಾರಾಯಿ, ಡ್ರಗ್ಸ್ ಅಥವಾ ಜೂಜಾಟದ ಮೂಲಕ ತಾತ್ಕಾಲಿಕ ಮಜಾ ಪಡೆಯುವುದನ್ನು ಸ್ವಲ್ಪ ಹೊತ್ತು ನಿಲ್ಲಿಸಿ, ನಿರಂತರ ಖುಷಿ ನೀಡುವತ್ತ ಜನರು ತಮ್ಮ ಗಮನ ಹರಿಸಬೇಕು ಎನ್ನುತ್ತಾಳೆ.
ನವದೆಹಲಿ: ಮದ್ಯ, ಮಾದಕ ಪದಾರ್ಥ ಅಥವಾ ಜೂಜಾಟದ ಮೂಲಕ ತಾತ್ಕಾಲಿಕ ಆನಂದ ಪಡೆಯುವ ಜನರು ಅದರಿಂದ ಸ್ವಲ್ಪ ಸಮಯವನ್ನು ಶಾಶ್ವತ ಆನಂತ ನೀಡುವ ವಿಷಯಗಳಲ್ಲಿ ವಿನಿಯೋಗಿಸಬೇಕು ಎಂದು ಖ್ಯಾತ ಬಾಲಿವುಡ್ ನಟಿ ಹಾಗೂ ಮಾಜಿ ಸೌಂದರ್ಯ ರಾಣಿ ಊರ್ವಶಿ ರೌತೆಲಾ (Urvashi Rautela) ಹೇಳಿದ್ದಾರೆ. ನಾವು ನಮ್ಮ ಆಲೋಚನೆಗಳಿಗೆ ಒಳಪಟ್ಟಿರುತ್ತೇವೆ. ಒಂದು ವೇಳೆ ನಾವು ನಮ್ಮ ಆಲೋಚನೆಗಳನ್ನು ಬದಲಾಯಿಸದೆ ಹೋದಲ್ಲಿ ನಾವು ಏನನ್ನೂ ಕೂಡ ಬದಲಾಯಿಸಲು ಸಾಧ್ಯವಿಲ್ಲ. ಹೀಗಾಗಿ ನಾವೆಲ್ಲರೂ ನಮ್ಮ ಫಿಟ್ನೆಸ್ ಕಾಯ್ದುಕೊಳ್ಳಬೇಕು. ಕರುಣೆ ಹಾಗೂ ಫಿಟ್ನೆಸ್ ಇವೆರಡು ಸಂಗತಿಗಳು ಶಾಶ್ವತ ಆನಂದ ನೀಡುವ ಸಂಗತಿಗಳಾಗಿವೆ. ಇವೆರಡನ್ನೂ ಕೂಡ ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಸಂತೋಷ ಮತ್ತು ಸುಖ ನಮ್ಮ ಮನೆ ಕದ ತಟ್ಟುತ್ತವೆ. ಇವು ದೀರ್ಘ ಕಾಲದವರೆಗೆನಮ್ಮೊಂದಿಗೆ ಇರುತ್ತವೆ. ನಾನು ಅಲ್ಕೋಹಾಲ್, ಡ್ರಗ್ಸ್ ಹಾಗೂ ಜೂಜಾಟದಂತಹ ಅಲ್ಪಾವಾಧಿಯ ಸುಖ ನೀಡುವ ಸಂಗತಿಗಳ ಕುರಿತು ಹೇಳುತ್ತಿಲ್ಲ. ದಯೆ ಹಾಗೂ ಕರುಣೆ ನಮ್ಮ ಜೀವನದಲ್ಲಿ ನಿಜವಾದ ಮತ್ತು ನಿರಂತರವಾದ ಖುಷಿ ತರುತ್ತವೆ. ಶೀಘ್ರದಲ್ಲಿಯೇ ಊರ್ವಶಿ 'ಬ್ಲಾಕ್ ರೋಸ್' ಮೂಲಕ ತೆಲಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಲಿದ್ದಾಳೆ. ಇಲ್ಲಿವೆ ಊರ್ವಶಿಯ ಕೆಲ ಸುಂದರ ಭಾವಚಿತ್ರಗಳು.