Watch Video: ಕ್ಯಾಮೆರಾ ಎದುರು ಒಂದೊಂದೇ ಡ್ರೆಸ್​ ತೆಗೆದ ನಟಿ ಉರ್ಫಿ ಜಾವೇದ್​! ಹೌಹಾರಿದ ನೆಟಿಜನ್ಸ್!!

Urfi Javed Troll: ಬಟ್ಟೆಗಳಿಂದಲೇ ಫೇಮಸ್​ ಆಗಿರೋ ನಟಿ ಉರ್ಫಿ ಜಾವೇದ್​ ಇದೀಗ ಕ್ಯಾಮೆರಾ ಎದುರೇ ಒಂದೊಂದೇ ಬಟ್ಟೆಗಳನ್ನ ತೆಗೆದಿದ್ದಾರೆ. ನಟಿಯ ಈ ಹೊಸ ವೇಷವನ್ನ ನೋಡಿ ಸೋಷಿಯಲ್‌ ಮೀಡಿಯಾ ಬಳಕೆದಾರರು ಹೌಹಾರಿಹೋಗಿದ್ದಾರೆ. 

Urfi Javed Dress Sense: ಉರ್ಫಿ ಜಾವೇದ್‌ ಎಂದಾಕ್ಷಣ ನೆನಪಿಗೆ ಬರೋದು ನಟಿಯ ಚಿತ್ರ-ವಿಚಿತ್ರ ಅವತಾರಗಳು. ಒಮ್ಮೊಮ್ಮೆ ಬಟ್ಟೆ ಇಲ್ಲದೆ, ಕೈಗೆ ಸಿಗುವ ವಸ್ತುಗಳಿಂದಲೇ ತನ್ನ ಖಾಸಗಿ ಅಂಗಗಳನ್ನು ಮುಚ್ಚಿಕೊಂಡು ಪೋಸ್​ ನೀಡುವ ನಟಿ ಈಕೆ. ದಿನವೂ ಬಟ್ಟೆಗಳಿಂದಲೇ ಟ್ರೋಲ್​ ಆಗುವುದು ಎಂದರೆ ತುಂಬಾ ಖುಷಿ ಈಕೆಗೆ. ಇದೇ  ಕಾರಣಕ್ಕೆ ಮುಂಬೈನ ರೆಸ್ಟೋರೆಂಟ್‌ಗೆ ತಮಗೆ ಎಂಟ್ರಿ ಸಿಗಲಿಲ್ಲ, ಯಾರೂ ಮನೆ ಬಾಡಿಗೆ ಕೊಡುತ್ತಿಲ್ಲ ಅಂತಾ ಗೋಳೋ ಅನ್ನುತ್ತಿದ್ದರೂ ನಟಿಯ ವಿಚಿತ್ರ ವೇಷ ಮಾತ್ರ ಮುಂದುವರಿದಿದೆ. ಇದೀಗ ಈ ನಟಿಯ ಮತ್ತೊಂದು ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಸೌಂಡ್‌ ಮಾಡುತ್ತಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /6

ಕೆಲ ದಿನಗಳ ಹಿಂದಷ್ಟೇ ನನ್ನದು ಫ್ಲ್ಯಾಟ್​ ಚೆಸ್ಟ್​ ಎಂದು ಹೇಳುವ ಡಿಜಿಟಲ್​ ಬೋರ್ಡ್​ ಹಾಕಿಕೊಂಡು ಸುತ್ತಾಡಿದ್ದ ನಟಿ ಉರ್ಫಿ ಜಾವೇದ್‌, ಎದೆ ಮೇಲೆ ಉಡ ಬಿಟ್ಕೊಂಡು ಸದ್ದು ಮಾಡಿದ್ದರು. ಮೈಮೇಲೆ ಉಡ ಹರಿದಾಡುವಂತಹ ವಿಡಿಯೋವನ್ನ ನಟಿ ಶೇರ್‌ ಮಾಡಿದ್ದರು. 

2 /6

ಇದೀಗ ಡ್ರೆಸ್​ ಮೇಲೆ ಡ್ರೆಸ್​ ಹಾಕಿಕೊಂಡು ಕ್ಯಾಮೆರಾ ಎದುರಿಗೆ ಒಂದೊಂದೇ ಬಟ್ಟೆಯನ್ನು ಕಳಚಿದ್ದಾರೆ. ಕೊನೆಯಲ್ಲಿ ಸುಂದರವಾಗಿರುವ ಕಪ್ಪು ಡ್ರೆಸ್​ ಮೇಲೆ ಕಾಣಿಸಿಕೊಂಡಿರುವ ನಟಿ ಇಷ್ಟೇ ಸಾಕು ಬಿಡಿ ಎಂದಿದ್ದಾರೆ. ಇದರ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ವೈರಲ್​ ಆಗುತ್ತಿದೆ. 

3 /6

ಒಂದೇ ಶಬ್ದದಲ್ಲಿ ನಟಿಯನ್ನು ವರ್ಣಿಸಿ ಅಂತಾ ಈ ವಿಡಿಯೋಗೆ ಕ್ಯಾಪ್ಷನ್​ ಕೊಡಲಾಗಿದೆ. ಇದಕ್ಕೆ ವಿವಿಧ ರೀತಿಯಲ್ಲಿ ಕಾಮೆಂಟ್ಸ್‌ಗಳ ಸುರಿಮಳೆಯಾಗುತ್ತಿದೆ. ಕ್ವೀನ್​, ಬ್ಯೂಟಿ, ಹಾಟಿ ಅಂತಾ ನೆಟಿಜನ್ಸ್‌ ಕಾಮೆಂಟ್‌ ಮಾಡುತ್ತಿದ್ದಾರೆ. ಎಲ್ಲಾ ಕ್ರಿಯೆಟಿವಿಟಿಗಳನ್ನ ನೀವೇ ಮಾಡಿದ್ರೆ ಬೇರೆ ನಟಿಯರು ಏನು ಮಾಡಬೇಕು, ಅವರಿಗೂ ಏನಾದ್ರೂ ಉಳಿಸಿ ಅಂತಾ ಕೆಲವರು ಕಿಚಾಯಿಸಿದ್ದಾರೆ.  

4 /6

 ಅಷ್ಟಕ್ಕೂ ಇಂಥ ಚಿತ್ರ-ವಿಚಿತ್ರ ಡ್ರೆಸ್​ ತಾವು ಏಕೆ ಧರಿಸುವುದು ಎಂಬ ಬಗ್ಗೆ ಕೆಲ ದಿನಗಳ ಹಿಂದಷ್ಟೇ ನಟಿ ಮಾತನಾಡಿದ್ದರು. 'ನಾನು ಏನೇ ಮಾಡಿದರೂ ಅದು ನನ್ನ ಸಲುವಾಗಿ. ನಾನು ಯಾರನ್ನೂ ಮೆಚ್ಚಿಸಬೇಕಿಲ್ಲ. ಯಾವುದೇ ಹೆಣ್ಣುಮಕ್ಕಳನ್ನು ಮೆಚ್ಚಿಸುವ ಉದ್ದೇಶವೂ ನನಗಿಲ್ಲ, ಯಾವುದೇ ಮಹಿಳೆಯರನ್ನು ಸಬಲೀಕರಣ ಮಾಡುವ ಉದ್ದೇಶವೂ ಇಲ್ಲ. ನಾನು ಇದನ್ನು ಫೇಮಸ್ ಮತ್ತು ಶ್ರೀಮಂತೆ ಆಗುವುದಕ್ಕಾಗಿ ಮಾಡುತ್ತಿದ್ದೇನೆ. ಅದನ್ನು ಬಿಟ್ಟು ಬೇರೆ ಯಾವುದೇ ಉದ್ದೇಶವಿಲ್ಲ. ಯಾರು ಏನೇ ಹೇಳಿದರೂ ಅದಕ್ಕೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನನ್ನನ್ನು ನೋಡಿ ಯಾರೂ ಮೆಚ್ಚಿಕೊಳ್ಳಬೇಕಾದದ್ದೂ ಇಲ್ಲ' ಎಂದಿದ್ದರು.

5 /6

ಹೆಚ್ಚು ಹಣ ಬಂದ ತಕ್ಷಣ ಏನು ಮಾಡುವಿರಿ ಎನ್ನುವ ಪ್ರಶ್ನೆಗೆ ಉತ್ತರಿಸಿದ ಉರ್ಫಿ, ʼನಾನು ರೋಲ್ಸ್ ರಾಯ್ಸ್‌ ಕಾರು ಖರೀದಿ ಮಾಡುತ್ತೇನೆ. ಇದು ನನ್ನ ಆಸೆ ಎಂದಿದ್ದರು. ಇದೇ ವೇಳೆ, ನಾನು ಹಣವನ್ನು ತುಂಬಾ ಇಷ್ಟಪಡುತ್ತೇನೆ. ಹಣ ಇದ್ದರೆ ಏನು ಬೇಕಾದರೂ ಮಾಡಲು ಸಾಧ್ಯ. ಪ್ರತಿಯೊಬ್ಬರ ಜೀವನದಲ್ಲಿಯೂ ಹಣಕ್ಕಿಂತ ಮುಖ್ಯವಾದದ್ದು ಏನೂ ಇಲ್ಲ. ಹಣ ಇದ್ದರೆ ಸುಖ ಪಡೆದುಕೊಳ್ಳಲು ಸಾಧ್ಯವಿಲ್ಲ ಎನ್ನುತ್ತಾರೆ. ಆದರೆ ಅದು ಸುಳ್ಳು. ಹಣ ಇದ್ದರೆ ಸುಖವನ್ನೂ ಪಡೆದುಕೊಳ್ಳಬಹುದು ಎಂದಿದ್ದರು.

6 /6

ಹಣ ಇದ್ದರೆ ಜೀವನದಲ್ಲಿ ಏನುಬೇಕಾದರೂ ಮಾಡಬಹುದು. ನಮ್ಮ ಜೀವನಕ್ಕೆ ಹಣವೇ ಮುಖ್ಯ, ಹಣವೇ ಜೀವನ. ಹಣದಿಂದ ಎಲ್ಲವೂ ಸಾಧ್ಯ, ಹಣವಿದ್ದರೆ ಮಾತ್ರ ಜನರು ನಿಮ್ಮ ಜೊತೆಗಿರುತ್ತಾರೆ. ನಿಮ್ಮ ಸುತ್ತಲಿನ ಜನರನ್ನು ಖುಷಿಯಾಗಿ ಇಡಲು ಸಾಧ್ಯವಾಗುವುದು ಹಣದಿಂದ ಮಾತ್ರ. ಹಣ ಇಲ್ಲದಿದ್ದರೆ ಈ ಜೀವನದಲ್ಲಿ ಏನೂ ಇಲ್ಲ ಅಂತಾ ಉರ್ಫಿ ಹೇಳಿದ್ದರು.