ಶನಿ-ರಾಹು-ಕೇತುಗಳ ಕೆಟ್ಟ ಪ್ರಭಾವಗಳಿಂದ ಪಾರಾಗಲು ಈ ಮಹಾ ಉಪಾಯ ಮಾಡಿ, ಅಪಾರ ಧನವೃದ್ಧಿಯ ಜೊತೆಗೆ ಭಾಗ್ಯೋದಯ ಪ್ರಾಪ್ತಿ!

ಜೋತಿಷ್ಯ ಶಾಸ್ತ್ರದಲ್ಲಿ ರಾಹು-ಕೇತು ಹಾಗೂ ಶನಿ ಗ್ರಹಗಳನ್ನು ಮಹತ್ವಪೂರ್ಣ ಗ್ರಹಗಳೆಂದು ಭಾವಿಸಲಾಗಿದೆ. ಜಾತಕದಲ್ಲಿ ಈ ಮೂರು ಗ್ರಹಗಳ ಅಶುಭ ಸ್ಥಿತಿ ಭಾರಿ ನಕಾರಾತ್ಮಕ ಪ್ರಭಾವಗಳನ್ನು ಬೀರುತ್ತದೆ. ಕುಂಡಲಿಯಲ್ಲಿ ಈ ಮೂರು ಗ್ರಹಗಳ ಸ್ಥಿತಿ ಅಶುಭವಾಗಿದ್ದರೆ ಯಾವ ಮಹಾ ಉಪಾಯ ಮಾಡುವುದರಿಂದ ಈ ಮೂವರನ್ನು ಶಾಂತಗೊಳಿಸಬೇಕು ತಿಳಿದುಕೊಳ್ಳೋಣ ಬನ್ನಿ,

Shani-Rahu-Ketu Remedy: ಜೋತಿಷ್ಯ ಶಾಸ್ತ್ರದಲ್ಲಿ ರಾಹು-ಕೇತು ಹಾಗೂ ಶನಿ ಗ್ರಹಗಳನ್ನು ಮಹತ್ವಪೂರ್ಣ ಗ್ರಹಗಳೆಂದು ಭಾವಿಸಲಾಗಿದೆ. ಜಾತಕದಲ್ಲಿ ಈ ಮೂರು ಗ್ರಹಗಳ ಅಶುಭ ಸ್ಥಿತಿ ಭಾರಿ ನಕಾರಾತ್ಮಕ ಪ್ರಭಾವಗಳನ್ನು ಬೀರುತ್ತದೆ. ಕುಂಡಲಿಯಲ್ಲಿ ಈ ಮೂರು ಗ್ರಹಗಳ ಸ್ಥಿತಿ ಅಶುಭವಾಗಿದ್ದರೆ ಯಾವ ಮಹಾ ಉಪಾಯ ಮಾಡುವುದರಿಂದ ಈ ಮೂವರನ್ನು ಶಾಂತಗೊಳಿಸಬೇಕು ತಿಳಿದುಕೊಳ್ಳೋಣ ಬನ್ನಿ,

 

ಇದನ್ನೂ ಓದಿ-ವಿಕ್ರಮ ಸಂವತ್ಸರ 2080ರ ಆರಂಭದಲ್ಲಿಯೇ ಮೂರು ಮಹಾ ರಾಜಯೋಗಗಳ ನಿರ್ಮಾಣ, 4 ರಾಶಿಗಳ ಜನರಿಗೆ ವರ್ಷವಿಡೀ ಧನಲಾಭ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

1.ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ಛಾಯಾ ಗ್ರಹಗಳಾಗಿರುವ ರಾಹು-ಕೇತು ಹಾಗೂ ಸೂರ್ಯ ಪುತ್ರ ಶನಿ ಗ್ರಹಗಳನ್ನು ಕ್ರೂರ ಗ್ರಹಗಳೆಂದು ಪರಿಗಣಿಸಲಾಗಿದೆ. ಜಾತಕದಲ್ಲಿ ಈ ಗ್ರಹಗಳ ಅಶುಭ ಸ್ಥಿತಿ ವ್ಯಕ್ತಿಯ ಜೀವನದ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ. ಶನಿ ದೇವನನ್ನು ಕರ್ಮಫಲದಾತ ಹಾಗೂ ನ್ಯಾಯ ಪ್ರಿಯ ಎಂದು ಕರೆಯಲಾಗುತ್ತದೆ. ಇದಲ್ಲದೆ, ಆತನನ್ನು ವಯಸ್ಸು, ದುಃಖ, ರೋಗ, ನೋವು, ವಿಜ್ಞಾನ, ತಂತ್ರಜ್ಞಾನ, ಕಬ್ಬಿಣ, ಖನಿಜ ತೈಲ, ಉದ್ಯೋಗಿ, ಸೇವಕ, ಜೈಲು ಇತ್ಯಾದಿಗಳ ಕಾರಕ ಗ್ರಹವೆಂದು ಪರಿಗಣಿಸಲಾಗುತ್ತದೆ. ಈತ ಮಕರ ಮತ್ತು ಕುಂಭ ರಾಶಿಗಳಿಗೆ ರಾಷ್ಯಾದೀಪತಿ ಕೂಡ ಹೌದು. ತುಲಾ ಶನಿಯ ಉತ್ಕೃಷ್ಟ ರಾಶಿಯಾಗಿದೆ. ಮತ್ತೊಂದೆಡೆ, ಪೀಡಿತ ಶನಿಯು ವ್ಯಕ್ತಿಯ ಜೀವನದಲ್ಲಿ ಅನೇಕ ರೀತಿಯ ಸಮಸ್ಯೆಗಳನ್ನು ಸೃಷ್ಟಿಸುತ್ತಾನೆ ಎನ್ನಲಾಗತ್ತದೆ. ಶನಿಯು ಮಂಗಳನಿಂದ ಪೀಡಿತನಾಗಿದ್ದರೆ, ಅದು ಸ್ಥಳೀಯರಿಗೆ ಅಪಘಾತ ಮತ್ತು ಜೈಲುವಾಸದಂತಹ ಪರಿಸ್ಥಿತಿಗಳನ್ನು ಸೃಷ್ಟಿಸುತ್ತದೆ. ಅಲ್ಲದೆ, ವ್ಯಕ್ತಿಯ ವಿರುದ್ಧ ಸುಳ್ಳು ಆರೋಪಗಳೂ ಕೂಡ ಕೇಳಿಬರುತ್ತವೆ.  

2 /4

2. ಮತ್ತೊಂದೆಡೆ, ರಾಹು ಮತ್ತು ಕೇತುಗಳನ್ನು ಕಠೋರ ಮಾತು, ಜೂಜು, ಪ್ರಯಾಣ, ಕಳ್ಳತನ, ದುಷ್ಟ ಕಾರ್ಯಗಳು, ಚರ್ಮ ರೋಗಗಳು, ಧಾರ್ಮಿಕ ಪ್ರಯಾಣದ ಕಾರಕ ಗ್ರಹಗಳು ಎಂದು ಪರಿಗಣಿಸಲಾಗುತ್ತದೆ. ಈಗಾಗಿ, ಈ ಮೂರು ಗ್ರಹಗಳು ಅಶುಭ ಅಥವಾ ಜಾತಕದಲ್ಲಿ ದುರ್ಬಲವಾಗಿದ್ದರೆ, ವ್ಯಕ್ತಿಯು ಈ ಕ್ಷೇತ್ರಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಲ್ಲದೆ, ಜಾತಕದಲ್ಲಿ ರಾಹು ಅಶುಭನಾಗಿದ್ದಾರೆ, ವ್ಯಕ್ತಿಯು ಅದರ ನಕಾರಾತ್ಮಕ ಫಲಿತಾಂಶಗಳನ್ನು ಪಡೆಯುತ್ತಾನೆ. ಇದು ವ್ಯಕ್ತಿಯೊಳಗೆ ಕೆಟ್ಟ ಅಭ್ಯಾಸಗಳನ್ನು ಸೃಷ್ಟಿಸುತ್ತದೆ. ಪೀಡಿತ ರಾಹುವಿನ ಪ್ರಭಾವದಿಂದಾಗಿ, ವ್ಯಕ್ತಿಯು ಮೋಸ, ವಂಚನೆ  ಮತ್ತು ಕಳ್ಳತನದಂತಹ ಕೃತ್ಯಗಳನ್ನು ಮಾಡುತ್ತಾನೆ. ವ್ಯಕ್ತಿಯು ಮಾಂಸ, ಮದ್ಯ ಮತ್ತು ಇತರ ಅಮಲು ಪದಾರ್ಥಗಳನ್ನು ಸೇವಿಸುತ್ತಾನೆ. ಇನ್ನೊಂದೆಡೆ ಅಂತಹ ವ್ಯಕ್ತಿ ಆಕಸ್ಮಿಕ ಧನಹಾನಿಯನ್ನು ಕೂಡ ಮಾಡಿಕೊಳ್ಳುತ್ತಾನೆ.  

3 /4

3. ಜ್ಯೋತಿಷ್ಯ ಶಾಸ್ತ್ರದಲ್ಲಿ  ಯಾವುದೇ ಗ್ರಹಗಳ ಅಶುಭ ಪರಿಣಾಮಗಳನ್ನು ತೆಗೆದುಹಾಕಲು ರತ್ನಗಳು, ಮಂತ್ರಗಳು ಮತ್ತು ಕ್ರಮಗಳ ಬಗ್ಗೆ ವಿವರಣೆಯನ್ನು ನೀಡಲಾಗಿದೆ. ಅವುಗಳನ್ನು ಅನುಸರಿಸುವುದರಿಂದ ಗ್ರಹದ ಋಣಾತ್ಮಕ ಪರಿಣಾಮಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತೆಗೆದುಹಾಕಬಹುದು. ಈ ಲೇಖನದಲ್ಲಿ ನಾವು ಕೆಲ ಪರಿಹಾರಗಳನ್ನು ಹೇಳುತ್ತಿದ್ದು, ಅವುಗಳನ್ನು  ಮಾಡುವುದರಿಂದ ನೀವು ರಾಹು-ಕೇತು ಮತ್ತು ಶನಿದೇವನ ಅಶುಭ ಪರಿಣಾಮಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತಪ್ಪಿಸಬಹುದು.  

4 /4

4. ಈ ಮಹಾ ಪರಿಹಾರವನ್ನು ಮಾಡಿ - ನಿಮ್ಮ ಜಾತಕದಲ್ಲಿ ರಾಹು-ಕೇತು ಮತ್ತು ಶನಿದೇವರು ಅಶುಭ ಸ್ಥಿತಿಯಲ್ಲಿದ್ದು, ಅವರ ಅಶುಭ ಪರಿಣಾಮವು ನಿಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತಿದ್ದರೆ, ನೀವು ನಿಮ್ಮ ದಿನದ ಮೊದಲ ರೊಟ್ಟಿಯನ್ನು ಹಸುವಿಗೆ, ಕೊನೆಯ ರೊಟ್ಟಿಯನ್ನು ನಾಯಿಗೆ ತಿನ್ನಿಸಿ ಮತ್ತು ಪಕ್ಷಿಗಳಿಗೆ ನೀರನ್ನು ನೀಡಲು ಪ್ರಾರಂಭಿಸಿ. . ಈ ರೀತಿ ಮಾಡುವುದರಿಂದ ರಾಹು, ಕೇತು ಮತ್ತು ಶನಿ ಗ್ರಹಗಳು ತಮ್ಮ ದುಷ್ಪರಿಣಾಮಗಳನ್ನು ಕಡಿಮೆ ಮಾಡುತ್ತವೆ ಮತ್ತು ಮನೆಯಲ್ಲಿ ಸಂತೋಷ, ಶಾಂತಿ ಮತ್ತು ನೆಮ್ಮದಿ ವಾಸಿಸಲು ಪ್ರಾರಂಭಿಸುತ್ತದೆ. ವಾಸ್ತವದಲ್ಲಿ, ಹಿಂದೂ ಧರ್ಮ ಶಾಸ್ತ್ರಗಳಲ್ಲಿ, ಹಸುವಿಗೆ ತುಂಬಾ ಪವಿತ್ರ ಸ್ಥಾನವನ್ನು ಕಲ್ಪಿಸಲಾಗಿದೆ. ಇದರೊಂದಿಗೆ ಪುರಾಣಗಳ ಪ್ರಕಾರ 33 ಕೋಟಿ ದೇವತೆಗಳು ಗೋಮಾತೆಯಲ್ಲಿ ನೆಲೆಸಿದ್ದಾರೆ ಎಂದು ಹೇಳಾಗುತ್ತದೆ . ಮೊದಲ ರೊಟ್ಟಿಯನ್ನು ಹಸುವಿಗೆ ತಿನ್ನಿಸುವುದರಿಂದ ದೇವ-ದೇವತೆಗಳು ಪ್ರಸನ್ನರಾಗುತ್ತಾರೆ ಎಂದು ನಂಬಲಾಗಿದೆ. ಮತ್ತೊಂದೆಡೆ, ಕಪ್ಪು ನಾಯಿಗೆ ರೊಟ್ಟಿಯನ್ನು ನೀಡುವುದರಿಂದ ರಾಹು-ಕೇತು ಮತ್ತು ಶನಿಯ ಅಶುಭ ಪರಿಣಾಮಗಳು ಕಡಿಮೆಯಾಗುತ್ತವೆ. ಏಕೆಂದರೆ ನಾಯಿಯನ್ನು ಭೈರೋ ಬಾಬಾನ ವಾಹನವೆಂದು ಪರಿಗಣಿಸಲಾಗಿದೆ. ನೀವು ನಾಯಿಗೆ ಆಹಾರ ನೀಡಿದರೆ ಕಾಲಭೈರವ ಪ್ರಸನ್ನನಾಗುತ್ತಾನೆ. ಮತ್ತೊಂದೆಡೆ, ಪಕ್ಷಿಗಳಿಗೆ ಆಹಾರ ಮತ್ತು ನೀರನ್ನು ನೀಡುವುದರಿಂದ ಗ್ರಹಗಳು ಶಾಂತವಾಗುತ್ತವೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)