Virat Kohli, Anushka Sharma ಅವರ ಐಷಾರಾಮಿ ಮನೆಯ INSIDE ಫೋಟೋಸ್

                             

ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ (Virat Kohli) ಅವರ ಜನಪ್ರಿಯತೆಯ ಬಗ್ಗೆ ಹೇಳುವುದಾದರೆ  ಅವರು ಯಾವುದೇ ಬಾಲಿವುಡ್ ತಾರೆಗಳಿಗಿಂತ ಕಡಿಮೆಯಿಲ್ಲ. ಅವರ ನಿವ್ವಳ ಮೌಲ್ಯದ ಬಗ್ಗೆ ಹೇಳುವುದಾದರೆ ಅವರು ಭಾರತದ ಅತ್ಯಂತ ಶ್ರೀಮಂತ ಕ್ರಿಕೆಟಿಗರಲ್ಲಿ ಒಬ್ಬರು. ಹೀಗಿರುವಾಗ ಅವರು ವಾಸಿಸುವ ಮನೆ ಅಥವಾ ಬಂಗಲೆ ಕೂಡ ಐಶಾರಾಮಿಯಾಗಿಯೇ ಇರುವುದು ಸಹಜವೇ. ಅವರ ಅಭಿಮಾನಿಗಳಿಗೆ ಈ ತಾರೆಯರ ಐಶಾರಮಿ ಮನೆ ಹೇಗಿದೆ. ಒಮ್ಮೆಯಾದರೂ ಅದನ್ನು ಕಣ್ತುಂಬಿಕೊಳ್ಳಬೇಕು ಎಂಬ ಆಸೆ ಇದ್ದೇ ಇರುತ್ತದೆ. ಬನ್ನಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರ ಮನೆಯ ಒಳಗಿನ ಕೆಲವು ಸುಂದರ ಚಿತ್ರಗಳನ್ನು ನೋಡೋಣ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ವಿರಾಟ್ ಕೊಹ್ಲಿಯನ್ನು ಕಿಂಗ್ ಕೊಹ್ಲಿ ಎಂದೂ ಕರೆಯುತ್ತಾರೆ. ಅವರ ಮನೆ ಕೂಡ ಅರಮನೆಗಿಂತ ಕಡಿಮೆ ಇಲ್ಲ ಎಂಬಂತೆಯೇ ಇದೆ. ಇದರಲ್ಲಿ 4 ಬೆಡ್ ರೂಮ್‌ಗಳ ಹೊರತಾಗಿ ದೊಡ್ಡ ಹಾಲ್ ಇದೆ. ವಿರಾಟ್-ಅನುಷ್ಕಾ ಅವರ ಈ ಮನೆಯ ಒಟ್ಟು ವೆಚ್ಚ 34 ಕೋಟಿ ರೂ.

2 /5

ವಿರಾಟ್ ಮತ್ತು ಅನುಷ್ಕಾ ಅವರ ಐಷಾರಾಮಿ ಮನೆ ಮುಂಬೈನ ವರ್ಲಿಯಲ್ಲಿದೆ. ಅವರ ಅಪಾರ್ಟ್‌ಮೆಂಟ್‌ನ ಹೆಸರು 'ಓಂಕಾರ್ 1973'. ಮದುವೆಯ ನಂತರ, ವಿರಾಟ್-ಅನುಷ್ಕಾ  2017 ರಲ್ಲಿ ಈ ಮನೆಗೆ ಸ್ಥಳಾಂತರಗೊಂಡರು.

3 /5

ಈ ಐಷಾರಾಮಿ ಮನೆಯ ಬಾಲ್ಕನಿಯಲ್ಲಿ ತುಂಬಾ ಸುಂದರವಾಗಿದೆ. ಹಬ್ಬದ ಸಂದರ್ಭದಲ್ಲಿ ಅನುಷ್ಕಾ ಶರ್ಮಾ (Anushka Sharma) ಮತ್ತು ವಿರಾಟ್ ಕೊಹ್ಲಿ (Virat Kohli) ಫೋಟೋ ಕ್ಲಿಕ್ ಮಾಡಿರುವುದನ್ನು ಹಲವು ಬಾರಿ ನೋಡಿರಬಹುದು. ದೀಪಾವಳಿಯಲ್ಲಿ ಈ ದಂಪತಿಗಳು ಬಾಲ್ಕನಿಯಲ್ಲಿರುವ ಚಿತ್ರಗಳನ್ನು ಕ್ಲಿಕ್ ಮಾಡಿ ಅದನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಇದನ್ನೂ ಓದಿ - ಮೊದಲ ಫೋಟೋ : ಈಗ ಹೀಗಿದ್ದಾಳೆ ನೋಡಿ Virushka ಮುದ್ದಿನ ಮಗಳು ವಾಮಿಕ..!

4 /5

ಆಗಾಗ್ಗೆ  ಅನುಷ್ಕಾ ಶರ್ಮಾ (Anushka Sharma) ಅವರ ಮನೆಯಲ್ಲಿ ತೋಟಗಾರಿಕೆ ಮಾಡುತ್ತಿರುವುದು ಕಂಡುಬರುತ್ತದೆ. ಮರಗಳು ಮತ್ತು ಸಸ್ಯಗಳ ಬಗ್ಗೆ ಅವರಿಗೆ ಅಪಾರ ಪ್ರೀತಿ ಇದೆ. ಇದನ್ನೂ ಓದಿ - Virat Kohli ಸಹೋದರಿಯೊಂದಿಗೆ Anushka Sharma ಸಂಬಂಧ ಹೇಗಿದೆ?

5 /5

ವಿರುಷ್ಕಾ (Virushka) ಅವರ ಕನಸಿನ ಮನೆ ಓಂಕಾರ್‌ 1973 ರ ಅಪಾರ್ಟ್‌ಮೆಂಟ್‌ನ 35 ನೇ ಮಹಡಿಯಲ್ಲಿದೆ. ಅವರ ಲಿವಿಂಗ್ ಕೋಣೆ ಸಾಕಷ್ಟು ವಿಶಾಲವಾಗಿದೆ. ಇಲ್ಲಿ ಆಧುನಿಕ ಪೀಠೋಪಕರಣಗಳನ್ನು ಇರಿಸಲಾಗಿದೆ ಮತ್ತು ಗೋಡೆಗಳನ್ನು ಬಿಳಿ ಬಣ್ಣದಲ್ಲಿ ಚಿತ್ರಿಸಲಾಗಿದೆ. ವಿರುಷ್ಕಾ ತನ್ನ ಮನೆಯಲ್ಲಿ ಮರದ ನೆಲಹಾಸು ಮಾಡಿದ್ದಾರೆ. ಇದರೊಂದಿಗೆ ಮರದ ಪೀಠೋಪಕರಣಗಳನ್ನು ಸಹ ಈ ದೃಶ್ಯಗಳಲ್ಲಿ ಕಾಣಬಹುದು.