Bollywood Actress life story: ಈ ನಟಿಯ ಸೌಂದರ್ಯಕ್ಕೆ ಮನಸೋಲದವರಿಲ್ಲ. ಕಣ್ಣು ಕುಕ್ಕಿಸುವಂಥ ಸುಂದರ ನಟಿ 34 ನೇ ವಯಸ್ಸಿನಲ್ಲಿಯೇ ಬೀದಿ ಹೆಣವಾದ ದುರಂತ ಕತೆಯಿದು...
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
Actress Vimi tragic life story: ನಟಿ ವಿಮಿ... 70ರ ದಶಕದಲ್ಲಿ ಹುಡುಗರ ನಿದ್ದೆ ಕದ್ ದಚೆಲುವೆ. ಹುಸನ್ ಕಿ ಮಲ್ಲಿಕಾ ಎಂಬ ಬಿರುದು ಪಡೆದ ಸುಂದರಿ. ಮದುವೆಯಾಗಿ ಎರಡು ಮಕ್ಕಳ ತಾಯಿಯಾದ ಮೇಲೂ ಚಿತ್ರರಂಗದಲ್ಲಿ ಸಾಕಷ್ಟು ಬೇಡಿ ಹೊಂದಿದ್ದರು.
ಆ ಕಾಲದ ಪ್ರಸಿದ್ಧ ಕೈಗಾರಿಕೋದ್ಯಮಿಯ ಪುತ್ರ ಶಿವ ಅಗರ್ವಾಲ್ ಜೊತೆ ಮದುವೆಯಾದರು. ಇವರಿಗೆ ಇಬ್ಬರು ಮಕ್ಕಳಿದ್ದರು. ನಟಿ ವಿಮಿ ಪತಿಯೊಂದಿಗೆ ಕೊಲ್ಕತ್ತಾದಲ್ಲಿ ನಡೆದ ಪಾರ್ಟಿಯೊಂದಕ್ಕೆ ಬಂದಾಗ ಸಂಗೀತ ನಿರ್ದೇಶಕ ರವಿ ಭೇಟಿಯಾಯಿತು.
ವಿಮಿಯ ಸೌಂದರ್ಯ ಕಂಡ ರವಿ, ಬಿಆರ್ ಚೋಪ್ರಾರ 'ಹುಮ್ರಾಜ್' ನಲ್ಲಿ ನಟಿಸುವ ಚಾನ್ಸ್ ಕೊಡಿಸಿದರು. ಗಂಡನ ಬೆಂಬಲ ಅತ್ತೆಯ ವಿರೋಧದ ನಡುವೆಯೇ ವಿಮಿ ಈ ಸಿನಿಮಾದಲ್ಲಿ ನಟಿಸಿದರು. ಇಲ್ಲಿಂದಲೇ ಮಿಮಿ ಸಿನಿ ಕರಿಯರ್ ಶುರವಾಯಿತು.
ಶಿವ ಅಗರ್ವಾಲ್ ತಂದೆ ತಾಯಿಯ ಮಾತನ್ನೂ ಕೇಳದಿದ್ದ ಕಾರಣ ಇಬ್ಬರನ್ನೂ ಮನೆ ಬಿಟ್ಟು ಹೊರಹಾಕಿದರು. ಮನೆ ನಡೆಸುವ ಸಂಪೂರ್ಣ ಜವಾಬ್ದಾರಿ ವಿಮಿಯ ಮೇಲಿತ್ತು. ಆಗ ಮಿಮಿಗೆ ಸಿನಿಮಾಗಳಲ್ಲಿ ಆಫರ್ ಬಂದವು.
ವಿಮಿ ನಟಿಸಿದ ಚಿತ್ರಗಳು ಯಶಸ್ಸು ಕಾಣದಿದ್ದ ಕಾರಣ ನಿರ್ಮಾಪಕರು ಆಫರ್ ನೀಡಲಿಲ್ಲ. ಕೈಯಲ್ಲಿ ಹಣವಿಲ್ಲದೇ ಆರ್ಥಿಕವಾಗಿ ಕುಗ್ಗಿ ಹೋದರು. ಪತಿ ಶಿವು ಕುಡಿತದ ಚಟಕ್ಕೆ ಬಿದ್ದು ವಿಮಿಗೆ ನರಕಯಾತನೆ ನೀಡುತ್ತಿದ್ದರು. ಇದರಿಂದ ಸಂಬಂಧ ಹದಗೆಟ್ಟಿತ್ತು.
ಈ ವೇಳೆ ವಿಮಿ ಚಲನಚಿತ್ರ ನಿರ್ಮಾಪಕ ಜಾಲಿ ಜೊತೆ ಪ್ರೇಮಕ್ಕೆ ಸಿಲುಕಿದರು. ಪತಿಯಿಂದ ದೂರವಾಗಿ ಜಾಲಿ ಜೊತೆ ವಾಸಿಸಲು ಶುರು ಮಾಡಿದರು. ಕೆಲವು ದಿನಗಳ ನಂತರ ಜಾಲಿ ಸಹ ಕುಡಿತದ ಚಟಕ್ಕೆ ಬಿದ್ದರು.
ಪ್ರಿಯಕರನೇ ವಿಮಿಯನ್ನು ವೇಶ್ಯಾವಾಟಿಕೆಯತ್ತ ತಳ್ಳಿದ ಎಂಬ ಆರೋಪವಿದೆ. ವೇಶ್ಯಾವಾಟಿಕೆಯಿಂದ ಆರೋಗ್ಯ ಹಾಳಾಗಿ ಹೋಯಿತು. ಕೇವಲ 34 ನೇ ವಯಸ್ಸಿನಲ್ಲಿಆಕೆ ತೀರಿ ಹೋದರು.
ವಿಮಿ ವಿಧಿವಶರಾದಾಗ ವಕ್ಕೆ ಹೆಗಲು ಕೊಡುವವರು ಸಹ ಇರಲಿಲ್ಲ ಎನ್ನಲಾಗುತ್ತದೆ. ಒಂದು ಕಾಲದಲ್ಲಿ ಐಷಾರಾಮಿ ಕಾರುಗಳಲ್ಲಿ ಸಂಚರಿಸುತ್ತಿದ್ದ ವಿಮಿಯ ಮೃತದೇಹವನ್ನು ಕೈಗಾಡಿಯಲ್ಲಿಟ್ಟು ಚಿತಾಗಾರಕ್ಕೆ ಒಯ್ದು ಅಂತ್ಯ ಸಂಸ್ಕಾರ ಮಾಡಿದರು ಎನ್ನಲಾಗುತ್ತದೆ.