ಹೆಚ್ಚಿನ ಹಣದಾಸೆಗೆ ಪೆಟ್ರೋಲ್ ಬಂಕ್'ಗಳಲ್ಲಿ ಗ್ರಾಹಕರನ್ನು ವಂಚಿಸಲಾಗುತ್ತಿದೆ.
ಪೆಟ್ರೋಲ್ ಬಂಕ್'ಗಳಲ್ಲಿ ಜನರನ್ನು ವಂಚಿಸುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಹೆಚ್ಚಿನ ಹಣದಾಸೆಗೆ ಗ್ರಾಹಕರನ್ನು ವಂಚಿಸಲಾಗುತ್ತಿದೆ. ನಿಗದಿತ ಪ್ರಮಾಣಕ್ಕಿಂತ ಕಡಿಮೆ ಇಂಧನವನ್ನು ತುಂಬಿಸಿ ಗ್ರಾಹಕರಿಗೆ ಮೋಸ ಮಾಡಲಾಗುತ್ತಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ನಿರಂತರವಾಗಿ ಹೆಚ್ಚುತ್ತಿದೆ. ಬೆಲೆ ಏರಿಕೆಯಿಂದ ಈಗಲೇ ಜನರು ತತ್ತರಿಸಿ ಹೋಗಿದ್ದಾರೆ. ಇದರ ಮಧ್ಯೆ ಪೆಟ್ರೋಲ್ ಬಂಕ್ ನಲ್ಲಿ ವಂಚಿಸುವುದು ಮತ್ತೊಂದು ರೀತಿಯ ಆತಂಕವನ್ನುಂಟು ಮಾಡಿದೆ. ಗ್ರಾಹಕರಿಗೆ ಪೂರ್ಣಪ್ರಮಾಣದ ಪೆಟ್ರೋಲ್ ನೀಡದೆ ಮೋಸ ಮಾಡಲಾಗುತ್ತದೆ. ಇಂಧನ ಕೇಂದ್ರಗಳಲ್ಲಿ ನಡೆಯುವ ವಂಚನೆ ತಪ್ಪಿಸಲು ಏನು ಮಾಡಬೇಕು ಅಂತಾ ಕೆಲವರು ತಲೆ ಕೆಡಿಸಿಕೊಂಡಿರುತ್ತಾರೆ. ಅಂತವರು ಈ ಸಿಂಪಲ್ ಸಲಹೆಗಳನ್ನು ಪಾಲಿಸಿ ಸಾಕು..
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ನೀವು ಹಾಕಿಸಿಕೊಂಡ ಇಂಧನ ಪ್ರಮಾಣದ ಬಗ್ಗೆ ನಿಮಗೆ ಅನುಮಾನವಿದ್ದರೆ ಕೂಡಲೇ ಪರಿಶೀಲಿಸಿ. ಪೆಟ್ರೋಲ್ ಬಂಕ್ ನಲ್ಲಿಯೇ ನೀವು ಅಳತೆ ಪರೀಕ್ಷೆಯನ್ನು ಮಾಡಬಹುದು. ಪೆಟ್ರೋಲ್ ಪಂಪ್‌ಗಳಲ್ಲಿ ಸಾಮಾನ್ಯವಾಗಿ ತೂಕ ಮತ್ತು ಅಳತೆ ಇಲಾಖೆ ನೀಡಿರುವ 5 ಲೀಟರ್ ಜಾರ್ ಇರುತ್ತದೆ. ನಿಮಗೆ ಇಂಧನ ಪ್ರಮಾಣದ ಬಗ್ಗೆ ಅನುಮಾನ ಬಂದರೆ ನೀವು ಪ್ರಶ್ನಿಸಬಹುದು ಹಾಗೂ ಪೊಲೀಸರಿಗೂ ಈ ಬಗ್ಗೆ ದೂರು ನೀಡಬಹುದು.
ನಿಮ್ಮ ಮನೆ ಮತ್ತು ಕೆಲಸದ ಸ್ಥಳದ ಸಮೀಪವಿರುವ ಹೆಸರಾಂತ ಪೆಟ್ರೋಲ್ ಪಂಪ್‌ನಲ್ಲಿ ಇಂಧನ ತುಂಬಿಸುವುದು ಯಾವಾಗಲೂ ಉತ್ತಮ. ತುರ್ತು ಇದೆ ಎಂದು ಸಿಕ್ಕ ಸಿಕ್ಕ ಕಡೆ ಇಂಧನ ತುಂಬಿಸಿದರೆ ನಿಮಗೆ ಮೋಸ ಗ್ಯಾರಂಟಿ. ವಾಹನಕ್ಕೆ ಇಂಧನ ತುಂಬಿಸಿದ ಬಳಿಕ ಬಿಲ್ ಅನ್ನು ಕೇಳಿ ಪಡೆದುಕೊಳ್ಳಿ. ನೀವು ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಸಿ ಬಿಲ್ ಪಾವತಿಸುವುದು ಇನ್ನೂ ಸೂಕ್ತ. ಇದರಿಂದ ನೀವು ಮೋಸ ಹೋಗುವ ಸಾಧ್ಯತೆ ಇರುವುದಿಲ್ಲ.
ಕೆಲವೊಮ್ಮೆ ಪೆಟ್ರೋಲ್ ಪಂಪ್‌ಗಳಲ್ಲಿ ಗ್ರಾಹಕರು ಹೇಳಿದ ಪ್ರಮಾಣಕ್ಕಿಂತ ಕಡಿಮೆ ಇಂಧನ ಹಾಕಲಾಗುತ್ತದೆ. ಇದು ಸಾಮಾನ್ಯವಾಗಿ ವಂಚಿಸುವ ಕ್ರಮವಾಗಿದೆ. ನೀವು 1,500 ರೂ. ಮೌಲ್ಯದ ಇಂಧನ ತುಂಬಿರಿ ಎಂದರೆ ಕೇವಲ 1,200, 1,000, 500 ರೂ. ದಷ್ಟು ಇಂಧನ ತುಂಬಿ ನಿಮಗೆ ವಂಚಿಸಲಾಗುತ್ತದೆ. ಹೀಗಾಗಿ ನೀವು ಹೇಳಿದಷ್ಟು ಇಂಧನ ಭರ್ತಿ ಮಾಡುತ್ತಿದ್ದಾರೋ ಇಲ್ಲವೋ ಎಂಬುದರ ಬಗ್ಗೆ ಎಚ್ಚರವಹಿಸಬೇಕು. ಇಲ್ಲದಿದ್ದಲ್ಲಿ ನಿಮಗೆ ಕಡಿಮೆ ಇಂಧನ ತುಂಬಿ ಮೋಸ ಮಾಡುತ್ತಾರೆ.
1986ರ ಗ್ರಾಹಕ ಸಂರಕ್ಷಣಾ ಕಾಯ್ದೆಯ ಪ್ರಕಾರ ಪೆಟ್ರೋಲ್ ಪಂಪ್‌ಗಳಲ್ಲಿ ಫಿಲ್ಟರ್ ಪೇಪರ್‌ಗಳನ್ನು ದಾಸ್ತಾನು ಇಡಲೇಬೇಕು. ಇಂಧನವು ಕಲಬೆರಕೆಯಾಗಿದೆಯೆ ಅಥವಾ ಇಲ್ಲವೇ ಎಂಬುದನ್ನು ಪರೀಕ್ಷಿಸಲು ಗ್ರಾಹಕರು ಫಿಲ್ಟರ್ ಪೇಪರ್ ಪರೀಕ್ಷೆಯನ್ನು ಕೇಳಿದರೆ ಪೆಟ್ರೋಲ್ ಪಂಪ್ ಅದನ್ನು ನಿರಾಕರಿಸುವಂತಿಲ್ಲ. ನೀವು ಫಿಲ್ಟರ್ ಪೇಪರ್‌ಗೆ ಕೆಲ ಹನಿ ಪೆಟ್ರೋಲ್ ಹಾಕಿ ಮತ್ತು ಅದು ಕಲೆ ಬಿಡದೆ ಆವಿಯಾದರೆ ಪೆಟ್ರೋಲ್ ಶುದ್ಧವಾಗಿದೆ ಎಂದರ್ಥ. ಒಂದು ವೇಳೆ ಪೆಟ್ರೋಲ್ ಕೆಲವು ಕಲೆಗಳನ್ನು ಬಿಟ್ಟು ಆವಿಯಾದರೆ ಅದು ಕಲಬೆರಕೆ ಎಂದು ಸೂಚಿಸುತ್ತದೆ.
ನಿಮ್ಮ ವಾಹನಕ್ಕೆ ಇಂಧನ ತುಂಬಿಸುವ ಮೊದಲು ಮೀಟರ್ ಸರಿಯಾಗಿದೆಯೇ ಎಂದು ಪರಿಶೀಲಿಸಿರಿ. ಅದು ಯಾವಾಗಲೂ 0 ಇರಬೇಕು. ಇಂಧನ ತುಂಬುತ್ತಿರುವ ವೇಳೆ ಎಲ್ಲಾ ಸಮಯದಲ್ಲೂ ಮೀಟರ್ ಮೇಲೆ ಕಣ್ಣಿಡಿ. ನೀವು ಕಾರಿನೊಳಗೆ ಇರುವಾಗ ಅಟೆಂಡೆಂಟ್ ನಿಮ್ಮ ನೋಟವನ್ನು ಮೀಟರ್‌ಗೆ ನಿರ್ಬಂಧಿಸಲು ಪ್ರಯತ್ನಿಸಬಹುದು. ನೀವು ಕಾರಿನಿಂದ ಇಳಿದು ಮೀಟರ್ ಸರಿಯಾಗಿದೆಯೇ ಎಂದು ಪರಿಶೀಲಿಸುವುದು ಉತ್ತಮ.