ಶೀಘ್ರದಲ್ಲೇ ಬುಧನ ಮನೆಗೆ ವೈಭವದಾತ ಶುಕ್ರನ ಆಗಮನ, ಈ ಜನರ ಜೀವನದಲ್ಲಿ ಸುವರ್ಣ ಕಾಲ ಆರಂಭ!

Venus Entry To Mercury Home 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶುಕ್ರನನ್ನು ವೈಭವ ಕರುಣಿಸುವಾತ ಎಂದು ಭಾವಿಸಲಾಗಿದೆ. ಇಂದು ಗ್ರಹಗಳ ರಾಜಕುಮಾರ ಎಂದೇ ಕರೆಯಲಾಗುವ ಬುಧ ತನ್ನ ಸ್ವರಾಶಿಯಾಗಿರುವ ಕನ್ಯಾ ರಾಶಿಗೆ ಪ್ರವೇಶಿಸಿದ್ದಾನೆ. ಶೀಘ್ರದಲ್ಲಿಯೇ ಬುಧನ ಮನೆಗೆ ಶುಕ್ರನ ಪ್ರವೇಶ ಕೂಡ ನೆರವೇರಲಿದೆ. ಇದರಿಂದ ಒಟ್ಟು 3 ರಾಶಿಗಳ ಜನರ ಜೀವನದಲ್ಲಿ ಸುವರ್ಣ ಕಾಲ ಆರಂಭಗೊಳ್ಳಲಿದ್ದು, ಅವರಿಗೆ ಪ್ರತಿಯೊಂದು ಕ್ಷೇತ್ರದಲ್ಲಿ ಅಪಾರ ಯಶಸ್ಸು ಪ್ರಾಪ್ತಿಯಾಗಲಿದೆ. Spiritual News In Kannada
 

ಬೆಂಗಳೂರು: ವೈದಿಕ ಜೋತಿಷ್ಯ ಶಾಸ್ತ್ರದಲ್ಲಿ ಶುಕ್ರನನ್ನು ಧನ, ವೈಭವ, ಸುಖ-ಸಂಪತ್ತು, ಐಷಾರಾಮಿ ಜೀವನ, ವಿಲಾಸಿ ಜೀವನದ ಕಾರಕ ಗ್ರಹ ಎಂದು ಭಾವಿಸಲಾಗುತ್ತದೆ. ಶುಕ್ರ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸಲು ಸುಮಾರು ಒಂದು ತಿಂಗಳು ಕಾಲಾವಕಾಶ ತೆಗೆದುಕೊಳ್ಳುತ್ತದೆ. ಪ್ರಸ್ತುತ ಶುಕ್ರ ಸೂರ್ಯನ ರಾಶಿಯಾಗಿರುವ ಸಿಂಹ ರಾಶಿಯಲ್ಲಿ ವಿರಾಜಮಾನನಾಗಿದ್ದಾನೆ. ಬರುವ ನವೆಂಬರ್ ತಿಂಗಳ ಆರಂಭದಲ್ಲಿ ಆತನ ಕನ್ಯಾ ರಾಶಿ ಗೋಚರ ನೆರವೇರಲಿದೆ. ಇದರಿಂದ ಮೂರು ರಾಶಿಗಳ ಜನರ ಜೀವನದಲ್ಲಿ ಶುಕ್ರದೆಸೆ ಆರಂಭಗೊಳ್ಳಲಿದ್ದು, ಅವರಿಗೆ ಭಾರಿ ಧನಲಾಭ, ಭಾಗ್ಯೋದಯ ಯೋಗವನ್ನು ಶುಕ್ರ ಕರುಣಿಸಲಿದ್ದಾನೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ, Spiritual News In Kannada

 

ಇದನ್ನೂ ಓದಿ-ಇಂದು ಏಕಕಾಲಕ್ಕೆ ಡಬಲ್ ರಾಜಯೋಗಗಳ ನಿರ್ಮಾಣ, ಶ್ರೀಹರಿ ಲಕ್ಷ್ಮಿ ಕೃಪೆಯಿಂದ ಈ ಜನರ ಜೀವನದಲ್ಲಿ ಹಣವೋ ಹಣ ಹರಿದುಬರಲಿದೆ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

Venus Entry To Mercury Home 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶುಕ್ರನನ್ನು ವೈಭವ ಕರುಣಿಸುವಾತ ಎಂದು ಭಾವಿಸಲಾಗಿದೆ. ಇಂದು ಗ್ರಹಗಳ ರಾಜಕುಮಾರ ಎಂದೇ ಕರೆಯಲಾಗುವ ಬುಧ ತನ್ನ ಸ್ವರಾಶಿಯಾಗಿರುವ ಕನ್ಯಾ ರಾಶಿಗೆ ಪ್ರವೇಶಿಸಿದ್ದಾನೆ. ಶೀಘ್ರದಲ್ಲಿಯೇ ಬುಧನ ಮನೆಗೆ ಶುಕ್ರನ ಪ್ರವೇಶ ಕೂಡ ನೆರವೇರಲಿದೆ. ಇದರಿಂದ ಒಟ್ಟು 3 ರಾಶಿಗಳ ಜನರ ಜೀವನದಲ್ಲಿ ಸುವರ್ಣ ಕಾಲ ಆರಂಭಗೊಳ್ಳಲಿದ್ದು, ಅವರಿಗೆ ಪ್ರತಿಯೊಂದು ಕ್ಷೇತ್ರದಲ್ಲಿ ಅಪಾರ ಯಶಸ್ಸು ಪ್ರಾಪ್ತಿಯಾಗಲಿದೆ.   

2 /5

ಕನ್ಯಾ ರಾಶಿ: ನಿಮ್ಮ ಗೋಚರ ಜಾತಕದ ಲಗ್ನ ಭಾವಕ್ಕೆ ಶುಕ್ರ ಸಂಕ್ರಮಿಸಲಿದ್ದು, ಈ ಅವಧಿಯಲ್ಲಿ ನಿಮ್ಮ ವ್ಯಕ್ತಿತ್ವದಲ್ಲಿ ಅಪಾರ ಹೊಳಪು ನೋಡಲು ನಿಮಗೆ ಸಿಗಲಿದೆ. ಇದರಿಂದ ಧನ ಹಾಗೂ ವಿತ್ತೀಯ ವೇದಿಕೆಯಲ್ಲಿ ಅಪಾರ ಸುಧಾರಣೆಯನ್ನು ನೀವು ಕಾಣಬಹುದು ಹಾಗೂ ನಿಮ್ಮ ಎಲ್ಲಾ ಯೋಜನೆಗಳು ಯಶಸ್ವಿಯಾಗಲಿವೆ. ಹಾಗೆ ನೋಡಿದರೆ, ಶುಕ್ರ ನಿಮ್ಮ ಧನ ಹಾಗೂ ಭಾಗ್ಯ ಸ್ಥಾನದ ಅಧಿಪತಿಯಾಗಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದ್ದು, ಆಕಸ್ಮಿಕ ಧನಲಾಭ ಯೋಗ ಕೂಡ ನಿರ್ಮಾಣಗೊಳ್ಳುತ್ತಿದೆ. ಎಲ್ಲಾ ಕಾರ್ಯಗಳಲ್ಲಿ ನಿಮಗೆ ಕಾರ್ಯಸಿದ್ಧಿಯ ಜೊತೆಗೆ ನಿಮ್ಮ ಎಲ್ಲಾ ಇಷ್ಟಾರ್ಥಗಳು ನೆರವೇರಲಿವೆ.   

3 /5

ವೃಷಭ ರಾಶಿ: ಶುಕ್ರ ಕನ್ಯಾ ಗೋಚರದ ಈ ಅವಧಿಯಲ್ಲಿ ಶುಕ್ರ ನಿಮ್ಮ ಗೋಚರ ಜಾತಕದ ಪಂಚಮ ಭಾವದಲ್ಲಿ ಸಂಚರಿಸಲಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಮಕ್ಕಳಿಗೆ ಸಂಬಂಧಿಸಿದಂತೆ ಸಂತಸದ ಸುದ್ದಿ ಸಿಗುವ ಎಲ್ಲಾ ಸಾಧ್ಯತೆಗಳಿವೆ. ಇದರ ಜೊತೆಗೆ ವಿದೇಶದಿಂದ ನಿಮಗೆ ಧನಲಾಭ ಉಂಟಾಗುವ ಎಲ್ಲಾ ಸಾಧ್ಯತೆಗಳಿವೆ ಹಾಗೂ ಷೇರುಪೇಟೆಗೆ ಸಂಬಂಧಿಸಿದ ಕೆಲಸಗಳಲ್ಲಿ ನಿಮಗೆ ಅಪಾರ ಯಶಸ್ಸು ಕೂಡ ಲಭಿಸಲಿದೆ. ಇದಲ್ಲದೆ ಈ ಅವಧಿಯಲ್ಲಿ ಪ್ರೇಮ-ಸಂಬಂಧಗಳಲ್ಲಿಯೂ ಕೂಡ ನಿಮಗೆ ಅಪಾರ ಯಶಸ್ಸು ಸಿಗಲಿದೆ. ಅರ್ಥಾತ್ ನಿಮ್ಮ ಪ್ರೇಮ ವಿವಾಹದ ರೂಪ ಪಡೆದುಕೊಳ್ಳಬಹುದು. ಇನ್ನೊಂದೆಡೆ ಶುಕ್ರ ನಿಮ್ಮ ರಾಶಿಯ ಆರನೇ ಮನೆಗೆ ಅಧಿಪತಿಯಾಗಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಕೋರ್ಟ್-ಕಚೇರಿ ವ್ಯವಹಾರಗಳಲ್ಲಿ ಜಯ ನಿಮ್ಮದಾಗಲಿದೆ.   

4 /5

ಮಿಥುನ ರಾಶಿ: ಬುಧನ ಮನೆಯಲ್ಲಿ ಶುಕ್ರನ ಗೋಚರದ ಅವಧಿಯಲ್ಲಿ ಶುಕ್ರ ನಿಮ್ಮ ಗೋಚರ ಜಾತಕದ ಚತುರ್ಥ ಭಾವದಲ್ಲಿ ಸಂಚರಿಸಲಿದ್ದಾನೆ. ಹೀಗಾಗಿ ಶುಕ್ರನ ಈ ಗೋಚರ ನಿಮಗೆ ಅತ್ಯಂತ ಶುಭ ಫಲಗಳನ್ನು ತಂದು ಕೊಡಲಿದೆ. ಈ ಅವಧಿಯಲ್ಲಿ ನಿಮ್ಮ ಭೌತಿಕ ಸುಖಗಳು ಪ್ರಾಪ್ತಿಯಾಗಲಿವೆ. ನಿಮ್ಮ ವೃತ್ತಿ ಜೀವನದಲ್ಲಾಗುವ ಬದಲಾವಣೆಗಳು ನಿಮ್ಮಪರವಾಗಿರಲಿವೆ. ಕೌಟುಂಬಿಕ ವಿಷಯಗಳಲ್ಲಿ ನಿಮ್ಮ ಸಂಬಂಧ ಮೊದಲಿಗಿಂತ ಹೆಚ್ಚು ಬಲಿಷ್ಠವಾಗಿರಲಿವೆ. ಇನ್ನೊಂದೆಡೆ ಈ ಅವಧಿಯಲ್ಲಿ ನಿಮಗೆ ಪಿತ್ರಾರ್ಜಿತ ಆಸ್ತಿಯ ಲಾಭ ಸಿಗುವ ಎಲ್ಲಾ ಸಾಧ್ಯತೆಗಳಿವೆ. ತಂದೆ-ತಾಯಿಯರ ಜೊತೆಗೆ ನಿಮ್ಮ ಸಂಬಂಧಗಳು ಮತ್ತಷ್ಟು ಘನಿಷ್ಠವಾಗಿರಲಿವೆ. ತಾಯಿಯ ಕಡೆಯಿಂದ ನಿಮಗೆ ಧನಪ್ರಾಪ್ತಿಯಾಗುವ ಸಾಧ್ಯತೆ ಇದೆ. 

5 /5

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)