ಶೀಘ್ರದಲ್ಲೇ ಗೃಹಲಕ್ಷ್ಮಿ ರಾಜಯೋಗ ನಿರ್ಮಾಣ, ವಿಷ್ಣುಪ್ರಿಯೆ ಲಕ್ಷ್ಮಿಯ ಕೃಪೆಯಿಂದ ಈ ಜನರಿಗೆ ರಾಜವೈಭವ ಪ್ರಾಪ್ತಿ!

Gruhalakshmi Rajyog: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಗೃಹಲಕ್ಷ್ಮಿ ರಾಜಯೋಗ ನಿರ್ಮಾಣಗೊಳ್ಳುತ್ತಿದೆ. ಈ ಯೋಗ ನಿರ್ಮಾಣಗೊಳ್ಳುವುದರಿಂದ ಕೆಲ ರಾಶಿಗಳ ಜನರ ಧನ-ಧಾನ್ಯದಲ್ಲಿ ಅಪಾರ ವೃದ್ಧಿಯಾಗಲಿದೆ. ಜೊತೆಗೆ ಬಿಸ್ನೆಸ್ ಹಾಗೂ ನೌಕರಿಯಲ್ಲಿ ಅಪಾರ ಯಶಸ್ಸು ಲಭಿಸಲಿದ್ದು, ಇವರಿಗೆ ಧನಲಾಭದ ಯೋಗ ರಚನೆಯಾಗಲಿದೆ (Spiritual News In Kannada). 
 

ಬೆಂಗಳೂರು: ಗ್ರಹಗಳು ಕಾಲಕಾಲಕ್ಕೆ ತಮ್ಮ ತಮ್ಮ ರಾಶಿಗಳು ಹಾಗೂ ನಕ್ಷತ್ರಗಳನ್ನು ಪರಿವರ್ತಿಸುವ ಮೂಲಕ ಶುಭ-ಅಶುಭ ಯೋಗಗಳನ್ನು ರೂಪಿಸುತ್ತವೆ. ಹೀಗಿರುವಾಗ ಶುಕ್ರನ ರಾಶಿ ಪರಿವರ್ತನೆಯುಯಿಂದ ಗುರುವಿನ ಜೊತೆಗೆ ಗೃಹ ಲಕ್ಷ್ಮಿ ಯೋಗ ರೂಪುಗೊಳ್ಳುತ್ತಿದೆ. ಇದನ್ನು ಅತ್ಯಂತ ಶುಭ ಹಾಗೂ ಅಪರೂಪದ ಯೋಗ ಎಂದು ವೈದಿಕ ಜೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಈ ಯೋಗ ರೂಪ ಗೊಳ್ಳುವುದರಿಂದ ಕೆಲ ರಾಶಿಗಳ ಜನರ ಜೀವನದಲ್ಲಿ ಅತ್ಯಂತ ಶುಭ ಘಟನೆಗಳು ಸಂಭವಿಸುತ್ತದೆ. ಅವರ ಧನ-ಧಾನ್ಯದಲ್ಲಿ ಅಪಾರ ವೃದ್ಧಿಯ ಜೊತೆಗೆ ಸಮಾಜದಲ್ಲಿ ಅವರ ಸ್ಥಾನಮಾನ ಹೆಚ್ಚಾಗುತ್ತದೆ. ಗೃಹಲಕ್ಷ್ಮಿ ರಾಜಯೋಗ ಯಾವ ರಾಶಿಗಳ ಜನರಿಗೆ ವಿಶೇಷ ಲಾಭಗಳನ್ನು ತಂದುಕೊಡಲಿದೆ ತಿಳಿದುಕೊಳ್ಳೋಣ ಬನ್ನಿ, 

 

ಇದನ್ನೂ ಓದಿ-ತುಲಾ ರಾಶಿಗೆ ಗ್ರಹಗಳ ರಾಜ ಸೂರ್ಯನ ಸಂಕ್ರಮಣ, ಈ ಜನರ ಜೀವನದಲ್ಲಿ ಐಶ್ವರ್ಯ ಲಕ್ಷ್ಮಿಯ ಕೃಪೆಯಿಂದ ಚಿನ್ನದಂತಹ ಕಾಲ ಆರಂಭ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /6

ಏನಿದು ಗೃಹಲಕ್ಷ್ಮಿ ಯೋಗ?- ಸಾಮಾನ್ಯವಾಗಿ ಶುಕ್ರ, ಬುಧ ಹಾಗೂ ಮಂಗಳ ಗ್ರಹಗಳು ತಮ್ಮ ತಮ್ಮ ಉನ್ನತ ಸ್ಥಾನದಲ್ಲಿರುವಾಗ ಗೃಹಲಕ್ಷ್ಮಿ ರಾಜಯೋಗ ನಿರ್ಮಾಣಗೊಳ್ಳುತ್ತದೆ. ಇನ್ನೊಂದೆಡೆ ಜಾತಕದಲ್ಲಿ ಒಂಬತ್ತನೇ ಮನೆಯ ಅಧಿಪತಿ ಕೇಂದ್ರಸ್ಥಾನದಲ್ಲಿದ್ದಾಗಲೂ ಕೂಡ ಈ ಯೋಗ ನಿರ್ಮಾಣಗೊಳ್ಳುತ್ತದೆ.   

2 /6

ಯಾವಾಗ ನಿರ್ಮಾಣಗೊಳ್ಳುತ್ತಿದೆ ಗೃಹಲಕ್ಷ್ಮಿ ರಾಜಯೋಗ? : ನವೆಂಬರ್ 3, 2023 ರಂದು ಐಶ್ವರ್ಯ ಫಲದಾತ ಶುಕ್ರ ಕನ್ಯಾ ರಾಶಿಯ ಪ್ರಥಮ ಭಾವಕ್ಕೆ ಪ್ರವೇಶಿಸಲಿದ್ದಾನೆ. ಆತ ಈ ರಾಶಿಯ ನವಮ ಭಾವಕ್ಕೆ ಅಧಿಪತಿ ಅಂದರೆ ನವಾಮಾಂಶನಾಗಿದ್ದಾನೆ. ಇನ್ನೊಂದೆಡೆ ದೇವಗುರು ಬೃಹಸ್ಪತಿ ಕೂಡ ಮೇಷ ರಾಶಿಯಲ್ಲಿ ಉಚ್ಚಸ್ಥಾನದಲ್ಲಿ ವಿರಾಜಮಾನನಾಗಿದ್ದಾನೆ. ಹೀಗಿರುವಾಗ ಗೃಹಲಕ್ಷ್ಮಿ ರಾಜಯೋಗ ನಿರ್ಮಾಣಗೊಳ್ಳುತ್ತಿದೆ. ಇದರಿಂದ ಒಟ್ಟು ಮೂರು ರಾಶಿಗಳ ಜನರಿಗೆ ರಾಜವೈಭವ ಪ್ರಾಪ್ತಿಯಾಗಲಿದೆ.   

3 /6

ವೃಷಭ ರಾಶಿ: ಗೃಹಲಕ್ಷ್ಮಿ ರಾಜಯೋಗ ನಿಮ್ಮ ಪಾಲಿಗೆ ಸಾಕಷ್ಟು ಅದೃಷ್ಟವನ್ನು ಹೊತ್ತು ತರಲಿದೆ. ಇದರಿಂದ ಸಮಾಜದಲ್ಲಿ ನಿಮ್ಮ ಸ್ಥಾನಮಾನದಲ್ಲಿ ಅಪಾರ ಹೆಚ್ಚಳ ಕಂಡುಬರಲಿದೆ. ದೀರ್ಘವಧಿಯಿಂದ ನೆನೆಗುದಿಗೆ ಬಿದ್ದ ನಿಮ್ಮ ಇಂಪಾರ್ಟೆಂಟ್ ಕೆಲಸಗಳು ಪೂರ್ಣಗೊಲ್ಲಳಿವೆ. ಉನ್ನತ ಸ್ಥಾನದಲ್ಲಿ ನೌಕರಿ ಮಾಡುವವರಿಗೆ ಭಾರಿ ಸಂತಸದ ಸುದ್ದಿ ಸಿಗಲಿದೆ. ಕುಟುಂಬ-ಮಿತ್ರರ ಸಹಕಾರದಿಂದ ಬಿಸ್ನೆಸ್ ನಲ್ಲಿ ಅತ್ಯುತ್ತಮ ಲಾಭ ನಿಮ್ಮದಾಗಲಿದ್ದು, ಇದರಿಂದ ನೀವು ಭಾರಿ ಧನಲಾಭ ಪಡೆಯುವಿರಿ. ಈ ಅವಧಿಯಲ್ಲಿ ನಿಮಗೆ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದ್ದು, ಪ್ರತಿಯೊಂದು ಕ್ಷೇತ್ರದಲ್ಲಿ ನೀವು ಯಶಸ್ಸನ್ನು ಸಾಧಿಸುವಿರಿ. ಪಿತ್ರಾರ್ಜಿತ ಸಂಪತ್ತಿನಿಂದ ನಿಮಗೆ ಸಾಕಷ್ಟು ಲಾಭ ಸಿಗುಯ ಸಾಧ್ಯತೆ ಕೂಡ ಇದೆ. ಹೊಸ ನೌಕರಿಯ ಹುಡುಕಾಟದಲ್ಲಿ ನಿರತರಾದವರಿಗೂ ಕೂಡ ಅಪಾರ ಯಶಸ್ಸು ಸಿಗಲಿದೆ.   

4 /6

ಸಿಂಹ ರಾಶಿ: ಸಿಂಹ ರಾಶಿಯ ಜಾತಕದವರಿಗೂ ಕೂಡ ಗೃಹಲಕ್ಷ್ಮಿ ರಾಜಯೋಗ ಅಪಾರ ಧನಲಾಭವನ್ನು ತಂದು ಕೊಡಲಿದೆ. ಈ ಅವಧಿಯಲ್ಲಿ ಬಿಸ್ನೆಸ್ ನಲ್ಲಿನ ಹೂಡಿಕೆ ಅಪಾರ ಲಾಭದಾಯದ ಸಿದ್ಧ ಸಾಬೀತಾಗಲಿದೆ. ಇದಲ್ಲದೆ ಮಹತ್ವದ ಒಪ್ಪಂದಗಳನ್ನು ಮಾಡಿಕೊಳ್ಳುವಲ್ಲಿ ನೀವು ಯಶಸ್ವಿಯಾಗುವಿರಿ. ಈ ಅವಧಿಯಲ್ಲಿ ಸಾಲಬಾಧೆಯಿಂದ ನಿಮಗೆ ಮುಕ್ತಿ ಸಿಗಲಿದ್ದು, ಆದಾಯದ ಹೊಸ ಮೂಲಗಳು ತೆರೆದುಕೊಳ್ಳಲಿವೆ. ಕೌಟುಂಬಿಕ ಸಮಸ್ಯೆಗಳಿಗೆ ತೆರೆಬೀಳುವ ಸಮಯವಿದು, ಗ್ರಹ ಕ್ಲೇಶಗಳಿಗೆ ಅಂತ್ಯವನ್ನು ಹಾಡುವಲ್ಲಿ ಯಶಸ್ವಿಯಾಗುವಿರಿ. ಮನೆಯಲ್ಲಿ ಸುಖ-ಶಾಂತಿ ನೆಲೆಸಲಿದ್ದು, ನಿಮ್ಮ ಆರೋಗ್ಯ ಕೂಡ ಉತ್ತಮವಾಗಿರಲಿದೆ.   

5 /6

ಕುಂಭ ರಾಶಿ: ಕುಂಭ ರಾಶಿಯ ಜಾತಕದವರಿಗೆ ಈ ಶುಭಯೋಗ ಸ್ಥಾನಮಾನ, ಘನತೆ-ಗೌರವ, ಪ್ರತಿಷ್ಠೆಯನ್ನು ಹೆಚ್ಚಿಸಲಿದೆ. ಕಾನೂನಿನ ವಿಷಯದಲ್ಲಿ ನೀವು ಯಶಸ್ಸನ್ನು ಸಾಧಿಸುವಿರಿ. ವಾಹನ-ಸಂಪತ್ತು ಖರೀದಿಸುವುದು ನಿಮ್ಮ ಪಾಲಿಗೆ ಲಾಭದಾಯಕ ಸಾಬೀತಾಗಲಿದೆ. ಬಿಸ್ನೆಸ್ ನಲ್ಲಿಯೂ ಕೂಡ ನೀವು ಯಶಸ್ಸನ್ನು ಸಾಧಿಸುವಿರಿ. ಕುಟುಂಬ ಸದಸ್ಯರ ಜೊತೆಗೆ ಉತ್ತಮ ಕಾಲ ಕಳೆಯುವಲ್ಲಿ ಯಶಸ್ವಿಯಾಗುವಿರಿ. ಸಾಲದಿಂದ ಮುಕ್ತಿ ಸಿಗಲಿದ್ದು, ಆದಾಯದ ಹೊಸ ಮಾರ್ಗಗಳು ನಿಮಗಾಗಿ ತೆರೆದುಕೊಳ್ಳಲಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವವರಿಗೆ ಯಶಸ್ಸು ಸಿಗಲಿದೆ.   

6 /6

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)