Vastu Tips: ಬೆಡ್ ರೂಂನಲ್ಲಿರುವ ಈ ವಸ್ತುಗಳು ನಿಮ್ಮ ದಾಂಪತ್ಯ ಜೀವನದಲ್ಲಿ ಕಲಹಕ್ಕೆ ಕಾರಣವಾಗಬಹುದು!

                                        

Vastu Tips For Paintings: ವಾಸ್ತು ಶಾಸ್ತ್ರದಲ್ಲಿ ಮನೆಯಲ್ಲಿ ಯಾವ ವಸ್ತುವನ್ನು ಎಲ್ಲಿಡಬೇಕು ಎಂಬ ಬಗ್ಗೆ ಉಲ್ಲೇಖಿಸಲಾಗಿದೆ. ಅದರಂತೆ, ಮನೆಯಲ್ಲಿ ಕೆಲವು ಅಲಂಕಾರಿಕ ವಸ್ತುಗಳನ್ನು  ಸಹ ನಾವು ಯಾವ ಜಾಗದಲ್ಲಿ ಇಡಬೇಕು ಎಂಬ ಬಗ್ಗೆ ಸರಿಯಾಗಿ ಜ್ಞಾನ ಹೊಂದಿರುವುದು ಮುಖ್ಯ. ಇಲ್ಲದಿದ್ದರೆ,  ಅದು ಮನೆಯಲ್ಲಿ ವಾಸ್ತು ದೋಷಕ್ಕೆ ಕಾರಣವಾಗಬಹುದು. ಇದು ಪತಿ-ಪತ್ನಿ ನಡುವೆ ಭಿನ್ನಾಭಿಪ್ರಾಯಕ್ಕೂ ಕಾರಣವಾಗಬಹುದು ಎಂದು ಹೇಳಲಾಗುತ್ತದೆ. ಅದರಲ್ಲೂ ನೀವು ಮಲಗುವ ಕೋಣೆಯಲ್ಲಿ ಇಡುವ ಕೆಲವು ವಸ್ತುಗಳು ನಿಮ್ಮ ವೈವಾಹಿಕ ಜೀವನದ ಮೇಲೆ ನಕಾರಾತ್ಮಕ ಪ್ರಭಾವವನ್ನು ಉಂಟು ಮಾಡಬಹುದು ಎಂದು ಹೇಳಲಾಗುತ್ತದೆ. ನಿಮ್ಮ ಬೆಡ್ ರೂಂನಲ್ಲೂ ಕೂಡ ಇಂತಹ ವಸ್ತುಗಳಿದ್ದರೆ ಅವುಗಳನ್ನು ಕೂಡಲೇ ನಿಮ್ಮ ಕೋಣೆಯಿಂದ ಹೊರಹಾಕಿ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

ಕೆಲವರಿಗೆ ಪ್ರಾಣಿಗಳೆಂದರೆ ಅಚ್ಚು-ಮೆಚ್ಚು. ಹಾಗಾಗಿಯೇ, ಅದರ ಚಿತ್ರಗಳನ್ನು ತಮ್ಮ ಬೆಡ್ ರೂಂನಲ್ಲಿ ಹಾಕಿರುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ, ಮಲಗುವ ಕೋಣೆಯಲ್ಲಿ ಆಕ್ರಮಣಕಾರಿ ಪ್ರಾಣಿಗಳ ಚಿತ್ರಗಳನ್ನು ಎಂದಿಗೊ ಹಾಕಬಾರದು. ಇದು ಸಾಂಸಾರಿಕ ಜೀವನದಲ್ಲೂ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. 

2 /4

ಅಲಂಕಾರಕ್ಕಾಗಿ ಕೆಲವರು ಮುಳ್ಳಿನ ಗಿಡಗಳನ್ನು ಬೆಡ್ ರೂಂನಲ್ಲಿ ಇಡುತ್ತಾರೆ. ಆದರೆ, ಇಂತಹ ಮುಳ್ಳಿನ ಗಿಡಗಳು ನಿಮ್ಮ ಜೀವನದಲ್ಲಿ ಅಪಶ್ರುತಿಯನ್ನು ಸೃಷ್ಟಿಸಬಹುದು ಎಂದು ಹೇಳಲಾಗುತ್ತದೆ. 

3 /4

ನಿಸರ್ಗ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಹಾಗಾಗಿಯೇ, ನಮ್ಮಲ್ಲಿ ಕೆಲವರು ನಿಸರ್ಗಕ್ಕೆ ಸಂಬಂಧಿಸಿದ ವರ್ಣಚಿತ್ರಗಳನ್ನು ತಮ್ಮ ಮಲಗುವ ಕೋಣೆಯಲ್ಲಿ ಹಾಕುತ್ತಾರೆ. ಆದರೆ, ವಾಸ್ತು ಶಾಸ್ತ್ರದ ಪ್ರಕಾರ, ಸಮುದ್ರ, ಜಲಪಾತಗಳು ಅಥವಾ ನೀರಿನ ವರ್ಣಚಿತ್ರಗಳು ಪತಿ-ಪತ್ನಿಯರ ನಡುವಿನ ಜಗಳಕ್ಕೆ ಕಾರಣವಾಗುತ್ತದೆ ಎಂದು ಹೇಳಲಾಗುತ್ತದೆ. 

4 /4

ವಾಸ್ತು ಶಾಸ್ತ್ರದ ಪ್ರಕಾರ, ಸುಖ ದಾಂಪತ್ಯ ಜೀವನಕ್ಕಾಗಿ ದಂಪತಿಗಳು ಮಲಗುವ ದಿಕ್ಕಿನ ಬಗ್ಗೆಯೂ ಗಮನಹರಿಸುವುದು ಬಹಳ ಮುಖ್ಯ. ದಂಪತಿಗಳ ಕೋಣೆ ಯಾವಾಗಲೂ ಉತ್ತರ ಅಥವಾ ವಾಯುವ್ಯ ಭಾಗದಲ್ಲಿದ್ದರೆ ತುಂಬಾ ಒಳ್ಳೆಯದು ಎನ್ನಲಾಗುತ್ತದೆ.  ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.