Owl Statue at Home: ಮನೆಯಲ್ಲಿ ಗೂಬೆಯ ವಿಗ್ರಹ ಇಟ್ಟರೆ ಏನಾಗುತ್ತೆ ಗೊತ್ತಾ..?

Owl Statue at Home: ಮನೆಯ ವಾಯುವ್ಯ ದಿಕ್ಕಿನಲ್ಲಿ ಗೂಬೆ ಮೂರ್ತಿ ಇಡಬೇಕು. ವಾಯುವ್ಯ ದಿಕ್ಕಿನಲ್ಲಿ ಇಡುವುದರಿಂದ ಸಕಾರಾತ್ಮಕ ಶಕ್ತಿಯ ಪ್ರವೇಶವಾಗುತ್ತದೆ. ಸುತ್ತಮುತ್ತಲ ಪ್ರದೇಶ ನಕಾರಾತ್ಮಕ ಶಕ್ತಿಯಿಂದ ದೂರವಿರುತ್ತದೆ.

ನವದೆಹಲಿ: ಹಿಂದೂ ಧರ್ಮದಲ್ಲಿ ಗೂಬೆಗೆ ಮಹತ್ವದ ಸ್ಥಾನವಿದೆ. ಇದನ್ನು ತಾಯಿ ಲಕ್ಷ್ಮಿದೇವಿಯ ವಾಹನವೆಂದು ನಂಬಲಾಗಿದೆ. ಗೂಬೆಯ ವಿಗ್ರಹವನ್ನು ಮನೆಯಲ್ಲಿ ಇಡುವಂತೆ ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಗೂಬೆಯನ್ನು ಮನೆಗೆ ತಂದರೆ ಅದೃಷ್ಟ ದೊರೆಯುತ್ತದೆಂದು ನಂಬಲಾಗಿದೆ. ಗೂಬೆಯನ್ನು ಸಂತೋಷ, ಸಮೃದ್ಧಿ ಸಂಕೇತವೆಂದೇ ಹೇಳಲಾಗಿದೆ. ವಾಸ್ತು ಶಾಸ್ತ್ರದಲ್ಲೂ ಗೂಬೆಯ ವಿಗ್ರಹಕ್ಕೆ ಆದ್ಯತೆ ನೀಡಲಾಗಿದೆ. ಮನೆಯಲ್ಲಿರುವ ಗೂಬೆಯ ವಿಗ್ರಹದಿಂದ ವಾಸ್ತು ದೋಷಗಳು ನಿವಾರಣೆಯಾಗುತ್ತವಂತೆ. ಮನೆಯಲ್ಲಿ ಗೂಬೆಯ ವಿಗ್ರಹವಿಟ್ಟರೆ ಏನೆಲ್ಲಾ ಲಾಭ ಸಿಗುತ್ತದೆ ಅನ್ನೋದರ ಬಗ್ಗೆ ಮಾಹಿತಿ ನೀಡುತ್ತೇವೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ನೀವು ಗೂಬೆ ಮೂರ್ತಿಯನ್ನು ಮನೆಯಲ್ಲಿಟ್ಟರೆ ತಾಯಿ ಲಕ್ಷ್ಮಿದೇವಿ ಪ್ರಸನ್ನಳಾಗ್ತಾಳೆ. ಮನೆಯಲ್ಲಿ ಸದಾ ಸಂಪತ್ತು ತುಂಬಿ ತುಳುಕುತ್ತಿರುತ್ತದೆ. ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಆರ್ಥಿಕ ಲಾಭದ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ. ಮನೆಯಲ್ಲಿ ಯಾವಾಗಲೂ ಶಾಂತಿ ನೆಲೆಸಿರುತ್ತದೆ. ಕಚೇರಿಯಲ್ಲಿ ಗೂಬೆಯನ್ನು ಇಟ್ಟುಕೊಳ್ಳುವುದು ವೃತ್ತಿಯಲ್ಲಿ ಪ್ರಗತಿತರುತ್ತದೆ ಮತ್ತು ಸಂಬಂಧಗಳು ಸಹ ಮಧುರವಾಗುತ್ತವೆ. 

2 /5

ಮನೆಗೆ ಒಂಟಿ ಗೊಂಬೆ ಅಥವಾ ಮೂರ್ತಿ ಇವರು ಗೂಬೆಯನ್ನು ಅಪ್ಪಿತಪ್ಪಿಯೂ ತರಬಾದರು. ಜೋಡಿ ಗೂಬೆ ಮೂರ್ತಿಯನ್ನೇ ಮನೆಗೆ ತರಬೇಕು. ಜೋಡಿ ಗೂಬೆಗಳು ನಿಮ್ಮ ಮನೆಗೆ ಶುಭ ಫಲಿತಾಂಶ ನೀಡುತ್ತವೆ. ದೀಪಾವಳಿ ಹಬ್ಬವು ಗೂಬೆ ಮೂರ್ತಿ ಖರೀದಿಗೆ ಪ್ರಶಸ್ತ ದಿನ. ದೀಪಾವಳಿ ವೇಳೆ ಮನೆಯ ಅಲಂಕಾರಕ್ಕೆ ಖರೀದಿಸುವ ವಸ್ತುಗಳ ಜೊತೆಗೆ ಗೂಬೆಯ ಮೂರ್ತಿಯನ್ನು ಖರೀದಿಸುವುದು ಉತ್ತಮ.

3 /5

ಮನೆಗೆ ಗೂಬೆಯ ಕಂಚಿನ ಮೂರ್ತಿ ಖರೀದಿಸುವುದು ಉತ್ತಮ. ಕಂಚಿನ ಮೂರ್ತಿಯ ಶುಭ ಫಲ ಹೆಚ್ಚಿರುತ್ತದೆ. ಗೂಬೆ ಫೋಟೋವನ್ನು ಮನೆಯಲ್ಲಿ ಇಡುವುದಕ್ಕಿಂತ ಮೂರ್ತಿ ಇಡುವುದು ಹೆಚ್ಚು ಉತ್ತಮ. ನೀವು ಗೂಬೆಯ ಫೋಟೋ ಅಥವಾ ಗೂಬೆಗೆ ಸಂಬಂಧಿಸಿದ ವಸ್ತು, ಚಿಹ್ನೆಗಳನ್ನು ಸಹ ಇಡಬಹುದು.

4 /5

ಗೂಬೆಯು ತಾಯಿ ಲಕ್ಷ್ಮಿದೇವಿ ವಾಹನ. ಹೀಗಾಗಿ ಅದನ್ನು ಪ್ರತಿಷ್ಠಾಪನೆ ಮಾಡಲು ಶುಕ್ರವಾರ ಒಳ್ಳೆಯ ದಿನವಾಗಿದೆ. ಗಂಗಾಜಲದಿಂದ ಗೂಬೆಯ ಮೂರ್ತಿಯನ್ನು ಒರೆಸಬೇಕು. ನಂತರ ಅದನ್ನು ಪ್ರತಿಷ್ಠಾಪನೆ ಮಾಡಬೇಕು. ಈ ವೇಳೆ ಲಕ್ಷ್ಮಿದೇವಿ ಪೂಜೆಗೆ ತೆಂಗಿನಕಾಯಿ ಒಡೆದು ಹಾಲಿನ ಅಭಿಷೇಕ ಮಾಡಬೇಕು.

5 /5

ಗೂಬೆಯನ್ನು ವಾಯುವ್ಯ ದಿಕ್ಕಿನಲ್ಲಿ ಇಡುವುದರಿಂದ ಸಕಾರಾತ್ಮಕ ಶಕ್ತಿಯ ಪ್ರವೇಶವಾಗುತ್ತದೆ. ಸುತ್ತಮುತ್ತಲ ಪ್ರದೇಶ ನಕಾರಾತ್ಮಕ ಶಕ್ತಿಯಿಂದ ದೂರವಿರುತ್ತದೆ. ಕಚೇರಿಯಲ್ಲಿ ಗೂಬೆಯ ಸಣ್ಣ ಪ್ರತಿಮೆ ಇಡಬಹುದು. ಗೂಬೆ ನಿಮ್ಮ ಕುಟುಂಬ ಮತ್ತು ಸದಸ್ಯರನ್ನು ದುಷ್ಟ ಕಣ್ಣುಗಳಿಂದ ರಕ್ಷಿಸುತ್ತದೆ.