Vastu Tips: ಮನೆಯ ಈ ಸ್ಥಳದಲ್ಲಿ ಶಂಖವನ್ನು ಇಟ್ಟರೆ ಹಣದ ಸಮಸ್ಯೆ ದೂರವಾಗುತ್ತದೆ..!

Direction keep shankh: ವಾಸ್ತು ಪ್ರಕಾರ ಶಂಖವು ಲಕ್ಷ್ಮಿದೇವಿಗೆ ಸಂಬಂಧಿಸಿದೆ. ಹೀಗಾಗಿ ಮನೆಯ ಪೂಜಾ ಕೊಠಡಿಯಲ್ಲಿ ಶಂಖ ಇಡುವುದು ಉತ್ತಮ. ಇದರಿಂದ ಲಕ್ಷ್ಮಿದೇವಿಯು ಮನೆಯಲ್ಲಿ ಸದಾ ನೆಲೆಸುತ್ತಾಳಂತೆ.

Vastu Rules for Shankh: ಸಂಪತ್ತಿನ ದೇವತೆ ಲಕ್ಷ್ಮಿದೇವಿ ಮನೆಯಲ್ಲಿ ನೆಲೆಸಬೇಕೆಂದು ಪ್ರತಿಯೊಬ್ಬರೂ ಬಯಸುತ್ತಾರೆ. ಹೀಗಾಗಿ ತಾಯಿಯನ್ನು ಒಲಿಸಿಕೊಳ್ಳಲು ವಿವಿಧ ರೀತಿಯಲ್ಲಿ ಪೂಜೆ-ಪುನಸ್ಕಾರ ಮಾಡಲಾಗುತ್ತದೆ. ಲಕ್ಷ್ಮಿದೇವಿ ನೆಲೆಸದಿರುವ ಮನೆಯಲ್ಲಿ ಹಣದ ಸಮಸ್ಯೆ ಹೆಚ್ಚಾಗಿರುತ್ತದೆ. ಕೊಳಕು ಅಥವಾ ವಾಸ್ತು ದೋಷವಿರುವ ಮನೆಯಲ್ಲಿ ಲಕ್ಷ್ಮಿದೇವಿ ನೆಲೆಸುವುದಿಲ್ಲ. ವಾಸ್ತುಶಾಸ್ತ್ರದ ಪ್ರಕಾರ, ಲಕ್ಷ್ಮಿದೇವಿಯ ಆಶೀರ್ವಾದದ ಮೂಲಕ ಸುಖ-ಸಂಪತ್ತು ದೊರೆಯಬೇಕೆಂದರೆ ಕೆಲವು ಕೆಲಸಗಳನ್ನು ಮಾಡಬೇಕು. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ವಾಸ್ತುಶಾಸ್ತ್ರದ ಪ್ರಕಾರ ಪ್ರತಿದಿನವೂ ಬೆಳಗ್ಗೆ ಬೇಗ ಎದ್ದ ಕೂಡಲೇ ಕಿಟಕಿ ಬಾಗಿಲು ತೆರೆಯಬೇಕು. ಇದರಿಂದ ಮನೆಯೊಳಗೆ ಪಾಸಿಟಿವ್ ಎನರ್ಜಿ ಬಂದು ಮನೆಯ ಪರಿಸರವೂ ಸಂತೋಷದಿಂದ ಕೂಡಿರುತ್ತದೆ. ಪ್ರತಿದಿನ ವಾಸ್ತು ನಿಯಮಗಳನ್ನು ಅನುಸರಿಸುವುದರಿಂದ ಮನೆಯಲ್ಲಿ ಹಣದ ಒಳಹರಿವು ಉತ್ತಮವಾಗಿರುತ್ತದೆ.

2 /5

ವಾಸ್ತುಶಾಸ್ತ್ರದ ಪ್ರಕಾರ ಲಕ್ಷ್ಮಿದೇವಿಯು ಪೊರಕೆಯಲ್ಲಿ ನೆಲೆಸಿದ್ದಾಳೆಂಬ ನಂಬಿಕೆಯಿದೆ. ಇಂತಹ ಪೊರಕೆಯನ್ನು ಸರಿಯಾದ ದಿಕ್ಕಿನಲ್ಲಿ ಮನೆಯಲ್ಲಿ ಇಡಬೇಕು. ಪೊರಕೆಯನ್ನು ಮನೆಗೆ ಭೇಟಿ ನೀಡುವವರ ಕಣ್ಣಿಗೆ ಬೀಳದಂತೆ ನೋಡಿಕೊಳ್ಳಬೇಕು. ಪೊರಕೆಯನ್ನು ಕಾಲಿನಿಂದ ಒದೆಯಬಾರದು.

3 /5

ವಾಸ್ತುಪ್ರಕಾರ ಲಕ್ಷ್ಮಿದೇವಿಯು ಸ್ವಚ್ಛವಾದ ಸ್ಥಳದಲ್ಲಿ ನೆಲೆಸುತ್ತಾಳಂತೆ. ಹೀಗಾಗಿ ಮನೆಯನ್ನು ಯಾವಾಗಲೂ ಸ್ವಚ್ಛವಾಗಿಡುವುದು ಮುಖ್ಯ. ಮನೆಯ ಸ್ವಚ್ಛ ಪರಿಸರದಲ್ಲಿ ಲಕ್ಷ್ಮಿದೇವಿಯನ್ನು ಇಡುವುದರಿಂದ ಹಣದ ಸಮಸ್ಯೆಗಳಿಗೆ ಅಂತ್ಯ ಹಾಡಬಹುದು.

4 /5

ವಾಸ್ತುಶಾಸ್ತ್ರದ ಪ್ರಕಾರ ಅನ್ನಪೂರ್ಣೆಯನ್ನು ಪ್ರತಿನಿತ್ಯ ಪೂಜಿಸುವುದರಿಂದ ಉತ್ತಮ ಫಲಿತಾಂಶಗಳು ದೊರೆಯುತ್ತದೆ. ಹೀಗೆ ಮಾಡುವುದರಿಂದ ಮನೆಯಲ್ಲಿ ಸದಾ ಅನ್ನ, ಧನ-ಕನಕಗಳು ತುಂಬಿ ತುಳುಕಾಡುತ್ತವೆ ಎಂದು ಹೇಳಲಾಗಿದೆ. ವಾಸ್ತು ಪ್ರಕಾರ ಓಂ, ಶ್ರೀ ಗಣೇಶ ಮತ್ತು ಶುಭ-ಲಾಭ ಚಿಹ್ನೆಗಳನ್ನು ಮನೆಯ ಬಾಗಿಲಿನಲ್ಲಿಡುವುದು ಉತ್ತಮ. ಇದು ಮನೆಯಲ್ಲಿ ಧನಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸುತ್ತದೆ ಮತ್ತು ನಕಾರಾತ್ಮಕ ಶಕ್ತಿಯನ್ನು ನಾಶಪಡಿಸುತ್ತದೆ.  

5 /5

ವಾಸ್ತು ಪ್ರಕಾರ ಶಂಖವು ಲಕ್ಷ್ಮಿದೇವಿಗೆ ಸಂಬಂಧಿಸಿದೆ. ಹೀಗಾಗಿ ಮನೆಯ ಪೂಜಾ ಕೊಠಡಿಯಲ್ಲಿ ಶಂಖ ಇಡುವುದು ಉತ್ತಮ. ಇದರಿಂದ ಲಕ್ಷ್ಮಿದೇವಿಯು ಮನೆಯಲ್ಲಿ ಸದಾ ನೆಲೆಸುತ್ತಾಳಂತೆ. ಪ್ರತಿನಿತ್ಯ ಶಂಖವನ್ನು ಪೂಜಿಸುವುದರಿಂದ ಲಕ್ಷ್ಮಿದೇವಿಯು ಪ್ರಸನ್ನಳಾಗುತ್ತಾಳೆ ಮತ್ತು ಮನೆಯಲ್ಲಿ ಸಂಪತ್ತು ವೃದ್ಧಿಯಾಗುತ್ತದೆ.