Vastu tips For Money: ಕನಸ್ಸಿನಲ್ಲಿ ಇವುಗಳನ್ನು ಕಂಡರೆ ಸಿಗುತ್ತೆ ಅಪಾರ ಹಣ

Vastu tips For Money: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ವ್ಯಕ್ತಿಯ ಜೀವನದಲ್ಲಿ ಲಕ್ಷ್ಮಿ ಆಗಮನಕ್ಕೂ ಮೊದಲು ಕನಸ್ಸಿನಲ್ಲಿ ಕೆಲವು ವಸ್ತುಗಳು ಕಾಣಿಸಿಕೊಳ್ಳುತ್ತವೆ ಎಂದು ಹೇಳಲಾಗುತ್ತದೆ. 

Vastu tips For Money: ಜೀವನದಲ್ಲಿ ಕಷ್ಟ-ಸುಖ ಎರಡೂ ಕೂಡ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಕೆಲವರಿಗೆ ಬಹಳ ಸುಲಭವಾಗಿ ಎಲ್ಲವೂ ಲಭಿಸುತ್ತದೆ. ಇನ್ನೂ ಕೆಲವರಿಗೆ ಎಷ್ಟೇ ಕಷ್ಟಪಟ್ಟು ದುಡಿದರೂ ಕೂಡ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ದೊರೆಯುವುದೇ ಇಲ್ಲ. ಮಾತ್ರವಲ್ಲ, ಎಷ್ಟೇ ಹಣ ಸಂಪಾದಿಸಿದರೂ ಬಡತನದಿಂದ ಹೊರಬರಲು ಸಾಧ್ಯವಾಗುವುದೇ ಇಲ್ಲ. ಆದರೆ, ಯಾವುದೇ ವ್ಯಕ್ತಿಯ ಜೀವನದಲ್ಲಿ ಅದೃಷ್ಟದ ಬಾಗಿಲು ತೆರೆದಾಗ ಅವರು ಶೀಘ್ರದಲ್ಲೇ ಪ್ರಗತಿಯ ಮೆಟ್ಟಿಲುಗಳನ್ನು ಏರುತ್ತಾರೆ ಎಂದು ಹೇಳಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ವ್ಯಕ್ತಿಯ ಜೀವನದಲ್ಲಿ ಲಕ್ಷ್ಮಿ ಆಗಮನಕ್ಕೂ ಮೊದಲು ಕನಸ್ಸಿನಲ್ಲಿ ಕೆಲವು ವಸ್ತುಗಳು ಕಾಣಿಸಿಕೊಳ್ಳುತ್ತವೆ ಎಂದು ಹೇಳಲಾಗುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಕನಸಿನಲ್ಲಿ ಸರ್ಪ: ಕನಸಿನಲ್ಲಿ ಸರ್ಪ ಕಂಡರೆ ನಿಮ್ಮ ಜೀವನದಲ್ಲಿ ಶೀಘ್ರದಲ್ಲೇ ಬಡತನ ಕೊನೆಗೊಳ್ಳಲಿದೆ ಎಂದರ್ಥ.

2 /5

ಕನಸಿನಲ್ಲಿ ಹೊಳೆಯುವ ಚಿನ್ನ: ಕನಸಿನಲ್ಲಿ ಹೊಳೆಯುವ ಚಿನ್ನ ಕಾಣುವುದು ಎಂದರೆ ನಿಮ್ಮ ದುರದೃಷ್ಟವು ಅದೃಷ್ಟವಾಗಿ ಬದಲಾಗಲಿದೆ ಎಂದರ್ಥ.

3 /5

ಕನಸಿನಲ್ಲಿ ಜೇನಿನ ಗೂಡು: ಕನಸಿನಲ್ಲಿ ಜೇನಿನ ಗೂಡನ್ನು ನೋಡಿದರೆ, ತಾಯಿ ಲಕ್ಷ್ಮೀ ಅತಿ ಶೀಘ್ರದಲ್ಲಿ ನಿಮ್ಮ ಮನೆ ಪ್ರವೇಶಿಸಲಿದ್ದಾಳೆ ಎಂದು ಅರ್ಥ.

4 /5

ಕನಸಿನಲ್ಲಿ ಇಲಿಯನ್ನು ನೋಡಿದರೆ:  ಮೂಷಕ ಎಂದರೆ ಇಲಿಯು ವಿಘ್ನ ವಿನಾಶಕ ಗಣೇಶನ ವಾಹನ. ಕನಸಿನಲ್ಲಿ ಇಲಿಯನ್ನು ಕಂಡರೆ ನಿಮ್ಮ ಜೀವನದಲ್ಲಿ ಅತಿ ಶೀಘ್ರದಲ್ಲಿ ಹಣದ ಹೊಳೆಯೇ ಹರಿಯಲಿದೆ ಎಂಬ ನಂಬಿಕೆ ಇದೆ.

5 /5

ಕನಸಿನಲ್ಲಿ ದೇವತೆಯ ಚಿತ್ರ : ಕನಸಿನಲ್ಲಿ ಯಾವುದೇ ದೇವತೆಯ ಚಿತ್ರ ಕಂಡರೆ ಅದು ಮಂಗಳಕರ ಎಂದು ಹೇಳಲಾಗುತ್ತದೆ. ಇದು ನಿಮ್ಮ ಅದೃಷ್ಟ ಹೊಳೆಯಲಿದೆ ಎಂಬುದರ ಸಂಕೇತವಾಗಿದೆ. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.