ತಾಯಿ ಲಕ್ಷ್ಮೀದೇವಿಯ ಕೃಪೆಯಿಂದ ಮಾತ್ರ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ. ಒಂದು ವೇಳೆ ನಿಮ್ಮ ಮೇಲೆ ಲಕ್ಷ್ಮೀದೇವಿ ಕೋಪಿಸಿಕೊಂಡರೆ ಹಣದ ಸಮಸ್ಯೆ ಉದ್ಭವಿಸುತ್ತದೆ.
ತಾಯಿ ಲಕ್ಷ್ಮೀದೇವಿಯ ಕೃಪೆಯಿಂದ ಮಾತ್ರ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ. ಒಂದು ವೇಳೆ ನಿಮ್ಮ ಮೇಲೆ ಲಕ್ಷ್ಮೀದೇವಿ ಕೋಪಿಸಿಕೊಂಡರೆ ಹಣದ ಸಮಸ್ಯೆ ಉದ್ಭವಿಸುತ್ತದೆ. ಬಹುತೇಕ ಜನರು ಶ್ರೀಮಂತರಾಗಬೇಕು, ನಾವು ಕೂಡ ಸಾಕಷ್ಟು ಹಣ ಮಾಡಬೇಕೆಂದು ಪ್ರಯತ್ನಿಸುತ್ತಾರೆ. ಆದರೆ ಅವರ ಪ್ರಯತ್ನಗಳ ನಂತರವೂ ಹಣದ ಸಮಸ್ಯೆ ಕೊನೆಗೊಳ್ಳುವುದಿಲ್ಲ. ಇದರ ಹಿಂದೆ ವಾಸ್ತು ಮತ್ತು ಜ್ಯೋತಿಷ್ಯ ಕಾರಣಗಳಿದ್ದು, ನಾವು ಮಾಡುವ ಕೆಲವು ತಪ್ಪುಗಳು ಸಹ ಇದಕ್ಕೆ ಕಾರಣವಾಗಿವೆ. ಲಕ್ಷ್ಮೀ ಯಾರ ಮನೆಗಳಲ್ಲಿ ನೆಲೆಗೊಳ್ಳುವುದಿಲ್ಲ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ. .
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
ತಪ್ಪು ಅಥವಾ ಅನೈತಿಕ ಮಾರ್ಗಗಳ ಮೂಲಕ ಹಣ ಗಳಿಸುವವರು ಮುಂದೊಂದು ದೊಡ್ಡ ಸಮಸ್ಯೆಗೆ ಸಿಲುಕುತ್ತಾರೆ. ಇಂತಹ ಜನರ ಮನೆಯಲ್ಲಿ ಕೆಲ ಕಾಲ ಮಾತ್ರ ಲಕ್ಷ್ಮೀದೇವಿ ನೆಲೆಸಿರುತ್ತಾಳೆ. ಅನೈತಿಕ ಮಾರ್ಗದಲ್ಲಿ ಗಳಿಸಿದ ದುಡ್ಡು ಎಂದಿಗೂ ಇಂತಹವರ ಬಳಿ ಉಳಿಯುವುದಿಲ್ಲ. ಎಷ್ಟೇ ಹಣ ಸಂಪಾದಿಸಿದರೂ ಸ್ವಲ್ಪ ಸಮಯದ ನಂತರ ಅದು ಕೈಬಿಟ್ಟು ಹೋಗಲಿದೆ.
ಸದಾ ಜಗಳವಾಡುತ್ತಿರುವ ಗಂಡ ಮತ್ತು ಹೆಂಡತಿಯ ಮನೆಯಲ್ಲಿ ಲಕ್ಷ್ಮೀದೇವಿ ವಾಸಿಸುವುದಿಲ್ಲ. ಪ್ರೀತಿ ಮತ್ತು ಶಾಂತಿ ಇರುವ ಮನೆಗಳಲ್ಲಿ ಮಾತ್ರ ಲಕ್ಷ್ಮೀದೇವಿ ಯಾವಾಗಲೂ ವಾಸಿಸುತ್ತಾಳೆ. ಆದ್ದರಿಂದ ಶ್ರೀಮಂತರಾಗಲು ಗಂಡ ಮತ್ತು ಹೆಂಡತಿ ಪರಸ್ಪರ ಗೌರವಿಸುವುದು ಹಾಗೂ ಪ್ರೀತಿಯಿಂದ ಇರುವುದು ಉತ್ತಮ.
ತಾಯಿ ಲಕ್ಷ್ಮೀದೇವಿ ರಾತ್ರಿ ತಡವಾಗಿ ಮಲಗಿ ಬೆಳಗ್ಗೆ ಲೇಟಾಗಿ ಏಳುವ ಜನರನ್ನು ಇಷ್ಟಪಡುವುದಿಲ್ಲ. ಆದ್ದರಿಂದ ನಿಮ್ಮ ಈ ಕೆಟ್ಟ ಅಭ್ಯಾಸವನ್ನು ತಕ್ಷಣವೇ ಬದಲಾಯಿಸಿಕೊಳ್ಳುವುದು ಉತ್ತಮ.
ಸನಾತನ ಧರ್ಮದಲ್ಲಿ ಯಾವುದೇ ಒಬ್ಬ ವ್ಯಕ್ತಿಯ ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಬಾಗಿಲಿಗೆ ಬಂದ ಭಿಕ್ಷುಕನಿಗೆ ದಾನ ನೀಡುವುದು ಬಹಳ ಮುಖ್ಯ ಎಂದು ಹೇಳಲಾಗಿದೆ. ಭಿಕ್ಷುಕರಿಗೆ ದೇಣಿಗೆ ನೀಡದ ಮತ್ತು ಅವರನ್ನು ಅವಮಾನಿಸುವ ಜನರ ಮನೆಗಳಲ್ಲಿ ಲಕ್ಷ್ಮೀದೇವಿ ನೆಲೆಗೊಳ್ಳುವುದಿಲ್ಲವಂತೆ.
ಶುಚಿತ್ವವಿಲ್ಲದ ಮನೆಗಳನ್ನು ತಾಯಿ ಲಕ್ಷ್ಮೀದೇವಿ ಇಷ್ಟಪಡುವುದಿಲ್ಲ. ಕೊಳಕು ಇರುವಲ್ಲಿ ಲಕ್ಷ್ಮೀ ಎಂದಿಗೂ ನೆಲೆಸುವುದಿಲ್ಲ. ಆದ್ದರಿಂದ ನಿಮ್ಮ ಮನೆಯನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳುವುದು ಉತ್ತಮ. (ಗಮನಿಸಿ: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. Zee News ದನ್ನು ದೃಢಪಡಿಸುವುದಿಲ್ಲ.)