Valley of Flowers: ಚಮೋಲಿಯ 'ವ್ಯಾಲಿ ಆಫ್ ಫ್ಲವರ್ಸ್' ಇದೀಗ ಪ್ರವಾಸಿಗರ ಎಂಟ್ರಿಗೆ ಮುಕ್ತವಾಗಿದೆ.
Valley of Flowers: ಚಮೋಲಿಯ 'ವ್ಯಾಲಿ ಆಫ್ ಫ್ಲವರ್ಸ್' ಇದೀಗ ಪ್ರವಾಸಿಗರ ಎಂಟ್ರಿಗೆ ಮುಕ್ತವಾಗಿದೆ. 500 ಕ್ಕೂ ಹೆಚ್ಚು ಜಾತಿಯ ಹೂವುಗಳ ಈ ಕಣಿವೆಯಲ್ಲಿದ್ದು, ಭೂಲೋಕದ ಸ್ವರ್ಗದಂತಿದೆ. ತನ್ನ ಸೌಂದರ್ಯದಿಂದಲೇ ಪ್ರವಾಸಿಗರನ್ನು ಆಕರ್ಷಿಸುತ್ತದೆ.
ಚಮೋಲಿ ಜಿಲ್ಲೆಯಲ್ಲಿ 3 ಸಾವಿರ ಮೀಟರ್ ಎತ್ತರದಲ್ಲಿರುವ ಈ ಕಣಿವೆಯನ್ನು ಪ್ರತಿ ವರ್ಷ ಜೂನ್ 1 ರಂದು ಪ್ರವಾಸಿಗರಿಗೆ ತೆರೆಯಲಾಗುತ್ತದೆ. ಅಕ್ಟೋಬರ್ 31 ರಂದು ಮುಚ್ಚಲಾಗುತ್ತದೆ.
ಅಕ್ಟೋಬರ್ ನಂತರ, ಈ ಕಣಿವೆಯು ಹಿಮದಿಂದ ಆವೃತವಾಗಿರುತ್ತದೆ. ಕೊರೊನಾ ಮಹಾಮಾರಿಯ ಎರಡು ವರ್ಷಗಳ ನಂತರ, ಹೂವುಗಳ ಕಣಿವೆಯಲ್ಲಿ ಪ್ರವಾಸಿಗರ ದಂಡೇ ಹರಿದು ಬರಲಾರಂಭಿಸಿದೆ.
ವ್ಯಾಲಿ ಆಫ್ ಫ್ಲವರ್ಸ್ ಅನ್ನು 1931 ರಲ್ಲಿ ಇಂಗ್ಲಿಷ್ ಪ್ರವಾಸಿ ಫ್ರಾಂಕ್ ಸ್ಮಿತ್ ಕಂಡುಹಿಡಿದನು. ಕಾಮೆಟ್ ಪರ್ವತಾರೋಹಣದ ಸಮಯದಲ್ಲಿ ಅವರು ದಾರಿಯಲ್ಲಿ ಅಲೆದ ನಂತರ ಇಲ್ಲಿಗೆ ತಲುಪಿದ್ದರು.
ಇಲ್ಲಿಂದ ವಾಪಸಾದ ಬಳಿಕ ಇಲ್ಲಿನ ಅನುಭವಗಳನ್ನು ‘ವ್ಯಾಲಿ ಆಫ್ ಫ್ಲವರ್ಸ್’ ಎಂಬ ಪುಸ್ತಕದಲ್ಲಿ ಪ್ರಸ್ತಾಪಿಸಿ, ಪ್ರಕೃತಿಯ ಈ ಅಪೂರ್ವ ಕೊಡುಗೆಗೆ ವಿಶ್ವಮಟ್ಟದಲ್ಲಿ ಮನ್ನಣೆ ದೊರೆಯಿತು. ವಿಶ್ವ ಪರಂಪರೆಯ ಸ್ಥಾನಮಾನವನ್ನು ಪಡೆದ ನಂತರ, ಹೂವಿನ ಕಣಿವೆಯು ಪ್ರವಾಸಿಗರ ನೆಚ್ಚಿನ ಸ್ಥಳವಾಗಿದೆ.
ಹೂವುಗಳ ಕಣಿವೆಯು 500 ಕ್ಕೂ ಹೆಚ್ಚು ಜಾತಿಯ ಹೂವುಗಳಿಗೆ ನೆಲೆಯಾಗಿದೆ. ಇದರಲ್ಲಿ ಬ್ರಹ್ಮಕಮಲದಂತಹ ಪ್ರಭೇದಗಳಿವೆ. ಇದು ಉತ್ತರಾಖಂಡದ ರಾಜ್ಯ ಪುಷ್ಪವಾಗಿದೆ.
Next Gallery