ರಾಷ್ಟ್ರಪತಿ ಭವನದಲ್ಲಿ ಮೊದಲು ನೆಲೆಸಿದ್ದು ಭಾರತದ ಪ್ರಥಮ ಪ್ರಜೆಯಲ್ಲ! ಮತ್ತಿನ್ಯಾರು?

ದೇಶದ ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನಾಳೆ ಅಂದರೆ ಜುಲೈ 25 ರಂದು 15ನೇ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದಾದ ಬಳಿಕ ಅವರು ರಾಜಧಾನಿ ನವದೆಹಲಿಯ ರೈಸಿನಾ ಹಿಲ್ಸ್‌ನಲ್ಲಿ ನಿರ್ಮಿಸಲಾಗಿರುವ ರಾಷ್ಟ್ರಪತಿ ಭವನದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಈ ರಾಷ್ಟ್ರಪತಿ ಭವನದ ಇತಿಹಾಸ ನೂರಾರು ವರ್ಷಗಳಷ್ಟು ಹಳೆಯದು. ರಾಷ್ಟ್ರಪತಿ ಭವನದ ನಿರ್ಮಾಣವು 1912ರಲ್ಲಿ ಪ್ರಾರಂಭವಾಯಿತು. ಈ ಕಟ್ಟಡ ಪೂರ್ಣಗೊಳ್ಳಲು ಬರೋಬರಿ 19 ವರ್ಷಗಳನ್ನೇ ತೆಗೆದುಕೊಂಡಿದೆ. ರಾಷ್ಟ್ರಪತಿ ಭವನದಲ್ಲಿ ಎಲ್ಲವೂ ವಿಶಿಷ್ಟ ಮತ್ತು ಐತಿಹಾಸಿಕವಾಗಿದೆ. ಈ ಕಟ್ಟಡದ ಬಗ್ಗೆ ಅನೇಕ ಆಸಕ್ತಿದಾಯಕ ಸಂಗತಿಗಳಿವೆ. 

1 /5

ಮೊದಲು ಬ್ರಿಟಿಷರು ಕೋಲ್ಕತಾವನ್ನು ದೇಶದ ರಾಜಧಾನಿಯನ್ನಾಗಿ ಮಾಡಿದ್ದರು. ಆದರೆ 1911 ರಲ್ಲಿ ಬ್ರಿಟಿಷರು ರಾಜಧಾನಿಯನ್ನು ದೆಹಲಿಗೆ ಬದಲಾಯಿಸಿದರು. ಇದರ ನಂತರ, 1912 ರಲ್ಲಿ ರೈಸಿನಾ ಹಿಲ್ಸ್‌ನಲ್ಲಿ ರಾಷ್ಟ್ರಪತಿ ಭವನದ ಕೆಲಸ ಪ್ರಾರಂಭವಾಯಿತು. ಮೊದಲು ಇದರ ನಿರ್ಮಾಣದ ಮಿತಿಯನ್ನು 4 ವರ್ಷಕ್ಕೆ ನಿಗದಿಪಡಿಸಲಾಗಿತ್ತು. ಆದರೆ 1914 ರಲ್ಲಿ ಮೊದಲ ಮಹಾಯುದ್ಧ ಪ್ರಾರಂಭವಾಯಿತು. ಈ ಹಿನ್ನೆಲೆಯಲ್ಲಿ 19 ವರ್ಷಗಳ ನಂತರ ಅಂದರೆ 23 ಜನವರಿ 1931 ರಂದು ಕಟ್ಟಡವನ್ನು ನಿರ್ಮಿಸುವ ಕೆಲಸ ಪೂರ್ಣಗೊಂಡಿತು.

2 /5

ಬ್ರಿಟಿಷರ ಆಳ್ವಿಕೆಯಲ್ಲಿ, ಈ ಕಟ್ಟಡವನ್ನು ವೈಸರಾಯ್ ಹೌಸ್ ಎಂದು ಕರೆಯಲಾಗುತ್ತಿತ್ತು. ಇದನ್ನು ಬ್ರಿಟಿಷ್ ಸಾಮ್ರಾಜ್ಯದ ವೈಸ್ ರಾಯ್ ಗಾಗಿ ನಿರ್ಮಿಸಲಾಯಿತು. ಆದರೆ 1947 ಆಗಸ್ಟ್ 15 ರಂದು ದೇಶವು ಸ್ವತಂತ್ರವಾದಾಗ ಅದನ್ನು ರಾಜಭವನ ಎಂದು ಹೆಸರಿಸಲಾಯಿತು. ಇದಾದ ನಂತರ ದೇಶದ ಮೊದಲ ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ್ ಅವರ ಅವಧಿಯಲ್ಲಿ ಇದರ ಹೆಸರು ರಾಷ್ಟ್ರಪತಿ ಭವನವಾಯಿತು.

3 /5

ರಾಷ್ಟ್ರಪತಿ ಭವನದಲ್ಲಿ ನೆಲೆಸಿರುವ ಮೊದಲ ವ್ಯಕ್ತಿ ಮೊದಲ ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ್ ಅಲ್ಲ, ಬದಲಾಗಿ ಸಿ.ರಾಜಗೋಪಾಲಾಚಾರಿ. ವಾಸ್ತವವಾಗಿ, ಡಾ ರಾಜೇಂದ್ರ ಪ್ರಸಾದ್ ಅವರು 26 ಜನವರಿ 1950 ರಂದು ದೇಶದ ಮೊದಲ ರಾಷ್ಟ್ರಪತಿಯಾದರು. ಆದರೆ ಸಿ.ರಾಜಗೋಪಾಲಾಚಾರಿ ಅವರು 21 ಜೂನ್ 1948 ರಂದು ಭಾರತದ ಮೊದಲ ಗವರ್ನರ್ ಜನರಲ್ ಆದರು. ಆಗ ರಾಷ್ಟ್ರಪತಿ ಭವನ ರಾಜಭವನವಾಗಿತ್ತು. ಅವರು ರಾಷ್ಟ್ರಪತಿ ಭವನದ ಕೇಂದ್ರ ಗುಮ್ಮಟದ ಅಡಿಯಲ್ಲಿ ಪ್ರಮಾಣವಚನ ಸ್ವೀಕರಿಸಿದರು.

4 /5

ಸಿ.ರಾಜಗೋಪಾಲಾಚಾರಿ ಅವರು ಈ ಕಟ್ಟಡದಲ್ಲಿ ವಾಸಿಸಿದ ಮೊದಲ ಭಾರತೀಯರಾಗಿದ್ದಾರೆ. ಆದರೆ ಅವರು ವೈಸರಾಯ್‌ಯಾಗಿ ರಾಜಮನೆತನದ ಕೋಣೆಗಳಲ್ಲಿ ಉಳಿದುಕೊಂಡಿಲ್ಲ. ವಾಸ್ತವವಾಗಿ, ಅವರು ಈ ಕಟ್ಟಡದ ದೊಡ್ಡ ಕೊಠಡಿಗಳನ್ನು ಇಷ್ಟಪಡಲಿಲ್ಲ. ಆದ್ದರಿಂದ ಅವರು ಆಗಿನ ಅತಿಥಿ ಗೃಹದ ಒಂದು ಸಣ್ಣ ಕೋಣೆಯಲ್ಲಿ ಉಳಿದುಕೊಂಡಿದ್ದರಂತೆ. ಈ ಕೊಠಡಿಯನ್ನು ಈಗ ರಾಷ್ಟ್ರಪತಿ ಭವನದ ಕುಟುಂಬ ವಿಭಾಗ ಎಂದು ಕರೆಯಲಾಗುತ್ತದೆ.

5 /5

ಸಿ.ರಾಜಗೋಪಾಲಾಚಾರಿ ಅವರು ಆರಂಭಿಸಿದ ಸಂಪ್ರದಾಯ ಇಂದಿಗೂ ಮುಂದುವರಿದಿದೆ. ಸಿ.ರಾಜಗೋಪಾಲಾಚಾರಿಯವರ ನಂತರ, ಮೊದಲ ರಾಷ್ಟ್ರಪತಿಯಾದ ಡಾ.ರಾಜೇಂದ್ರ ಪ್ರಸಾದ್ ಸೇರಿದಂತೆ ಈ ಕಟ್ಟಡಕ್ಕೆ ಬಂದ ಎಲ್ಲಾ ರಾಷ್ಟ್ರಪತಿಗಳು ವೈಸರಾಯ್ ಅವರ ಐಷಾರಾಮಿ ಕೊಠಡಿಯ ಬದಲಿಗೆ ಮೊದಲ ಭಾರತೀಯ ಗವರ್ನರ್ ಜನರಲ್ ವಾಸಿಸುತ್ತಿದ್ದ ಅದೇ ಕೊಠಡಿಯಲ್ಲಿ ಉಳಿಯಲು ನಿರ್ಧರಿಸಿದ್ದರಂತೆ. ಸ್ವಲ್ಪ ಸಮಯದ ನಂತರ ವೈಸರಾಯ್ ಅವರ ಕೋಣೆಯನ್ನು ಅತಿಥಿ ವಿಭಾಗವನ್ನಾಗಿ ಮಾಡಲಾಯಿತು. ಈಗ ರಾಷ್ಟ್ರದ ಮುಖ್ಯಸ್ಥರು ಮತ್ತು ಅವರ ಇತರ ದೇಶಗಳ ನಿಯೋಗ ಇಲ್ಲಿಯೇ ಕಾರ್ಯ ನಿರ್ವಹಿಸುತ್ತಿದೆ.