Aadhar Card guideline: ಆಧಾರ್ ಕಾರ್ಡ್ ಹೊಂದಿರುವವರಿಗೆ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ಕಾಲಕಾಲಕ್ಕೆ, UIDAI ನಿಂದ ಆಧಾರ್ಗೆ ಸಂಬಂಧಿಸಿದ ಅಪ್ಡೇಟ್ ಗಳು ಬರುತ್ತಲೇ ಇರುತ್ತವೆ. ಇದರಿಂದಾಗಿ ಬಳಕೆದಾರರು ಸಮಸ್ಯೆ ಎದುರಿಸದೆ, ತಮ್ಮ ಕೆಲಸಗಳನ್ನು ಸರಾಗವಾಗಿ ಮಾಡಬಹುದು.
ಯುಐಡಿಎಐ ತನ್ನ ಅಧಿಕೃತ ಟ್ವೀಟ್ನಲ್ಲಿ “ಈಗ ನೀವು ಕೇವಲ 50 ರೂಪಾಯಿಗಳ ಶುಲ್ಕವನ್ನು ಪಾವತಿಸುವ ಮೂಲಕ ಆಧಾರ್ ನಲ್ಲಿರುವ ಹೆಸರು, ವಿಳಾಸ, ಜನ್ಮ ದಿನಾಂಕ, ಲಿಂಗ, ಮೊಬೈಲ್ ಮತ್ತು ಇಮೇಲ್ ಗಳನ್ನು ಸುಲಭವಾಗಿ ಅಪ್ಡೇಟ್ ಮಾಡಬಹುದು” ಎಂದು ಬರೆದಿದೆ.
ನಿಮ್ಮ ಹೆಸರು, ವಿಳಾಸ, ಜನ್ಮದಿನಾಂಕ ಎಲ್ಲವನ್ನೂ ಆಧಾರ್ ಕಾರ್ಡ್ನಲ್ಲಿ ಅಪ್ಡೇಟ್ ಮಾಡುವುದು ಬಹಳ ಮುಖ್ಯ. ಇದನ್ನು ಅಪ್ಡೇಟ್ ಮಾಡದಿದ್ದರೆ ಸರ್ಕಾರದ ಯೋಜನೆಗಳ ಪ್ರಯೋಜನಗಳನ್ನು ಪಡೆಯುವಲ್ಲಿಯೂ ನಿಮಗೆ ತೊಂದರೆಯಾಗಬಹುದು.
ನಿಮ್ಮ ಆಧಾರ್ನಲ್ಲಿರುವ ವಿಳಾಸವನ್ನು ಬದಲಾಯಿಸುವುದರ ಜೊತೆಗೆ ನೀವು ಆಧಾರ್ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಇ-ಆಧಾರ್ ಅನ್ನು ಡೌನ್ಲೋಡ್ ಮಾಡಬಹುದು. ನಿಮ್ಮ ಸಂಖ್ಯೆಯನ್ನು ಆಧಾರ್ನಲ್ಲಿ ಅಪ್ಡೇಟ್ ಮಾಡಿದರೆ, ನೀವು ಆದಾಯ ತೆರಿಗೆ ರಿಟರ್ನ್ ಅನ್ನು ಸಹ ಪರಿಶೀಲಿಸಬಹುದು. ಇದಲ್ಲದೆ, ಎನ್ಪಿಎಸ್ ಖಾತೆಯನ್ನು ಸಹ ತೆರೆಯಬಹುದು.
ಇದಲ್ಲದೇ, ನಿಮ್ಮ ಹತ್ತಿರದ ಆಧಾರ್ ಸೇವಾ ಕೇಂದ್ರದ ಬಗ್ಗೆಯೂ ನೀವು ಕೇವಲ ಒಂದು ಕ್ಲಿಕ್ನಲ್ಲಿ ತಿಳಿದುಕೊಳ್ಳಬಹುದು. ಇದಕ್ಕಾಗಿ ನೀವು ಈ ಲಿಂಕ್ ಅನುಸರಿಸಿ: https://bhuvan.nrsc.gov.in/aadhaar/