Triskaidekaphobia: ನಂ.13ಕ್ಕೆ ಜಗತ್ತು ಹೆದರುತ್ತಾ! ಬಹುಮಹಡಿ ಕಟ್ಟಡಗಳಲ್ಲಿ 13ನೇ ಮಹಡಿ-ಹೋಟೆಲ್ ನಲ್ಲಿ ನಂ.13 ಕೋಣೆ ಯಾಕಿರಲ್ಲ?

Triskaidekaphobia: ಚಂಡಿಗಡ್ (Chandigarh) ನಗರದಲ್ಲಿ ಸೆಕ್ಟರ್ 13 ಇಲ್ಲ. ಹೋಟೆಲ್ (Hotels) ಗಳಲ್ಲಿ 13 ನಂಬರ್ ರೂಮ್ ಇರುವುದಿಲ್ಲ. ಬಹುಮಹಡಿ ಕಟ್ಟಡಗಳಲ್ಲಿ (Multistorey Appartment) 13 ನಂಬರ್ ಮಹಡಿ ಯಾಕೆ ಇರುವುದಿಲ್ಲ? 

Number 14 Fobia - ನೀವೂ ಕೂಡ ಹಲವು ರೀತಿಯ ಸ್ಥಳಗಳಿಗೆ ಭೇಟಿ ನೀಡಿರಬಹುದು ಮತ್ತು ವಿವಿಧ ರೀತಿಯ ಹೋಟೆಲ್‌ಗಳಲ್ಲಿ ತಂಗಿರಬಹುದು. ಇದಲ್ಲದೆ ನೀವು ಅನೇಕ ಕಟ್ಟಡಗಳಿಗೂ ಕೂಡ ಭೇಟಿ ನೀಡಿರಬಹುದು. ಹೋಟೆಲ್‌ನಲ್ಲಿ 13 ನೇ ಸಂಖ್ಯೆಯ ರೂಮ್ ಅಥವಾ ಯಾವುದೇ ಕಟ್ಟಡದಲ್ಲಿ 13 ನೇ ಮಹಡಿಯನ್ನು ನೀವು ಎಂದಾದರೂ ನೋಡಿದ್ದೀರಾ? ಎಷ್ಟು ಹೊತ್ತು ಯೋಚಿಸಿದರೂ ಇಲ್ಲ ಎಂಬ ಉತ್ತರ ಮಾತ್ರ ನಿಮಗೆ ಸಿಗುತ್ತದೆ. 13 ನೇ ಸಂಖ್ಯೆಯ ಬಗ್ಗೆ ಇಂತಹ ಅನೇಕ ವಿಷಯಗಳು (Trending Topic) ಪ್ರಚಲಿತದಲ್ಲಿವೆ, ಈ ಕಾರಣದಿಂದಾಗಿ ಜನರು 13 ರಿಂದ ದೂರವಿರುವುದು ಕಂಡುಬರುತ್ತದೆ.

 

ಇದನ್ನೂ ಓದಿ-ಬಾಲಿವುಡ್ ಶೇಕ್ ಶೇಕ್ ಮಾಡಲು ಬರುತ್ತಿದ್ದಾರೆ ಈ ಸೌತ್ ಚಿತ್ರರಂಗದ ಸ್ಟಾರ್ ಗಳು..!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

1. ಕಾರಣ ಯೇಸುಗೆ ಸಂಬಂಧಿಸಿದೆ - ಪಾಶ್ಚಿಮಾತ್ಯ ದೇಶಗಳಲ್ಲಿ, ವಿಶೇಷವಾಗಿ ಸಂಖ್ಯೆ 13 ಅನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಇದಕ್ಕೆ ಮುಖ್ಯ ಕಾರಣ ಕ್ರಿಶ್ಚಿಯನ್ನರ ನಂಬಿಕೆ. ಒಮ್ಮೆ ಜೀಸಸ್ ಕ್ರಿಸ್ತನನ್ನು ಯಾರೋ ಒಬ್ಬರು ದ್ರೋಹ ಮಾಡಿದರು ಎಂದು ಮಾಧ್ಯಮ ವರದಿಗಳು ಹೇಳುತ್ತವೆ. ಅವನು ಮೊದಲು ಯೇಸುವಿನೊಂದಿಗೆ ಭೋಜನವನ್ನು ಸೇವಿಸುತ್ತಾನೆ ಮತ್ತು ನಂತರ ಅವರೊಂದಿಗೆ ಚೆನ್ನಾಗಿ ಮಾತನಾಡಿ ನಂತರ ದ್ರೋಹ ಬಗೆಯುತ್ತಾನೆ. ಆ ವ್ಯಕ್ತಿ 13ನೇ ಸಂಖ್ಯೆಯ ಕುರ್ಚಿಯ ಮೇಲೆ ಕುಳಿತಿದ್ದ. ಈ ಘಟನೆಯ ನಂತರ, ಅಮೆರಿಕ ಮತ್ತು ಯುರೋಪಿಯನ್ ದೇಶಗಳಲ್ಲಿ 13 ಸಂಖ್ಯೆಯನ್ನು ಅಶುಭವೆಂದು ಪರಿಗಣಿಸಲಾಗಿದೆ.

2 /4

2. ಇದೊಂದು ರೀತಿಯ ಫೋಬಿಯಾ ಆಗಿದೆ - ಇದಾದ ಬಳಿಕ, 13 ನೇ ಸಂಖ್ಯೆಯ ಬಗ್ಗೆ ಒಂದು ರೀತಿಯ ಭಯವು ವಿಶ್ವಾದ್ಯಂತ ಹರಡಿದೆ. ಈ ಭಯವು ಒಂದು ರೀತಿಯ ಫೋಬಿಯಾ ಆಗಿದೆ. ಸಂಖ್ಯೆ 13 ರ ಈ ಭಯವನ್ನು ಟ್ರಿಸ್ಕೈಡೆಕಾಫೋಬಿಯಾ (Triskaidekaphobia) ಎಂದು ಕರೆಯಲಾಗುತ್ತದೆ. ಅದಕ್ಕಾಗಿಯೇ ಅಲ್ಲಿ ಕೊಠಡಿ ಸಂಖ್ಯೆ 13 ಅಥವಾ 13 ನೇ ಮಹಡಿಯನ್ನು ಮಾಡಲಾಗುವುದಿಲ್ಲ. ವಿಶೇಷವಾಗಿ ಪಾಶ್ಚಿಮಾತ್ಯ ದೇಶಗಳ ಹೋಟೆಲ್‌ಗಳಲ್ಲಿ. ನೀವು 12ನೇ ಮಹಡಿಯ ನಂತರ ನೇರವಾಗಿ 14ನೇ ಮಹಡಿಗೆ ಹೋಗಬಹುದು.

3 /4

3. ಭಾರತದಲ್ಲಿಯೂ ಕೂಡ ಈ ಫೋಬಿಯ ಇದೆ - ಈಗ ನಿಮ್ಮ ಮನದಲ್ಲಿ ಭಾರತದಲ್ಲಿ ಏಕೆ ಹೀಗಾಗುತ್ತದೆ ಎಂಬ ಪ್ರಶ್ನೆ ಉದ್ಭವಿಸುಬಹುದು. ವಾಸ್ತವವಾಗಿ ಎಲ್ಲಾ ದೊಡ್ಡ ಹೋಟೆಲ್‌ಗಳು ಅಥವಾ ಕಟ್ಟಡಗಳನ್ನು ಅಂತರರಾಷ್ಟ್ರೀಯ ಮಾನದಂಡದ ಪ್ರಕಾರ ನಿರ್ಮಿಸಲಾಗಿದೆ. ಪಾಶ್ಚಿಮಾತ್ಯ ದೇಶಗಳಂತೆ ಏಷ್ಯಾದ ದೇಶಗಳಲ್ಲಿಯೂ ಸಹ ಹೋಟೆಲ್‌ಗಳಲ್ಲಿ 13 ಸಂಖ್ಯೆಯ ಕೊಠಡಿ ಅಥವಾ 13 ನೇ ಮಹಡಿ ಇರುವುದಿಲ್ಲ.

4 /4

4. ಚಂಡಿಗಡ್ ನಲ್ಲಿ ಸೆಕ್ಟರ್ 13 ಇಲ್ಲ - ಫ್ರಾನ್ಸ್‌ನಲ್ಲಿ, 13 ಸಂಖ್ಯೆಗೆ ಸಂಬಂಧಿಸಿದಂತೆ ಹಲವು ರೀತಿಯ ಮೂಢನಂಬಿಕೆಗಳಿವೆ. ಅಲ್ಲಿ ಯಾವುದೇ ಒಂದು ಮೇಜಿನ ಜೊತೆಗೆ 13 ಕುರ್ಚಿಗಳಿರುವುದು ಅಶುಭವೆಂದು ಪರಿಗಣಿಸಲಾಗಿದೆ. ಚಂಡೀಗಢದ ಬಗ್ಗೆ ನೀವು ಯಾರನ್ನಾದರೂ ಕೇಳಿದರೆ, ದೇಶದ ಮೊದಲ ಯೋಜಿತ ನಗರದಲ್ಲಿಯೂ ಸೆಕ್ಟರ್ -13 ಅನ್ನು ಮಾಡಲಾಗಿಲ್ಲ ಎಂದು ಹೇಳಿದರೆ, ನಿಮಗೂ ಕೂಡ ಆಶ್ಚರ್ಯವಾದೀತು.