ವಿಐಪಿ ನಂಬರ್ ಗೆ ವಿಪರೀತ ಕ್ರೇಜ್; ಈ ನಂಬರ್ ನಾಲ್ಕೂವರೆ ಲಕ್ಷಕ್ಕೆ ಮಾರಾಟ!

Craze For VIP Number: ಮೊಬೈಲ್ ಮತ್ತು ಕಾರುಗಳ ವಿಐಪಿ ನಂಬರ್‍ಗೆ ಲಕ್ಷಾಂತರ ರೂ. ನೀಡುವ ಜನರು ಸಾಕಷ್ಟಿದ್ದಾರೆ. ಭಾರತದಲ್ಲಿ ಸಿಕ್ಕಾಪಟ್ಟೆ ವಿಐಪಿ ನಂಬರ್‍ ಕ್ರೇಜ್ ಇದೆ. ಫ್ಯಾನ್ಸಿ ನಂಬರ್ ಪಡೆಯಲು ಲಕ್ಷಾಂತರ ರೂ. ನೀಡುವ ಜನರಿದ್ದಾರೆ.  

ಕಾರಿನ ವಿಐಪಿ ಸಂಖ್ಯೆ: ಕೆಲವು ಜನರಿಗೆ ಕಾರು ಮತ್ತು ಅದರ ವಿಐಪಿ ನಂಬರ್ ಬಗ್ಗೆ ಸಿಕ್ಕಾಪಟ್ಟೆ ಕ್ರೇಜ್ ಇರುತ್ತದೆ. ಹೀಗಾಗಿ ಅನೇಕರು ವಿಐಪಿ ನಂಬರ್ ಬಿಡ್‍ನಲ್ಲಿ ಲಕ್ಷಗಟ್ಟಲೇ ಹಣ ಖರ್ಚು ಮಾಡಿ ತಮ್ಮ ಇಚ್ಛೆಯ ವಾಹನ ನಂಬರ್ ಪಡೆದುಕೊಳ್ಳುತ್ತಾರೆ. ಇತ್ತೀಚೆಗಷ್ಟೇ ಹರಿಯಾಣದ ಕೈತಾಲ್‍ನಲ್ಲಿ ವಿಐಪಿ ನಂಬರ್‍ವೊಂದಕ್ಕೆ ಲಕ್ಷಾಂತರ ರೂ. ನೀಡಲಾಗಿದೆ. ಮೊಬೈಲ್ ವಿಐಪಿ ನಂಬರ್‍ಗೂ ಲಕ್ಷಾಂತರ ರೂ. ನೀಡುವ ವ್ಯಕ್ತಿಗಳು ಭಾರತದಲ್ಲಿದ್ದಾರೆ. ಆದರೆ ಕಾರಿಗೆ ವಿಐಪಿ ನಂಬರ್‍ಗೆ ದೊಡ್ಡ ಮೊತ್ತ ನೀಡಿದ್ದು ಸಖತ್ ಸುದ್ದಿಯಾಗಿದೆ. ಇದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
   

1 /4

ಹರಿಯಾಣದ ಕೈತಾಲ್‍ನ SDM ಕಚೇರಿಯಲ್ಲಿ ವಿಐಪಿ ಸಂಖ್ಯೆ ಪಡೆಯಲು ಜನರಲ್ಲಿ ಅಪಾರ ಕ್ರೇಜ್ ಕಂಡುಬಂದಿತ್ತು. ಹೊಸದಾಗಿ ಆರಂಭವಾದ ಸರಣಿಯ 33 ಸಂಖ್ಯೆಗಳನ್ನು ಬಿಡ್ಡಿಂಗ್‌ಗೆ ಹಾಕಲಾಗಿತ್ತು. ಇವುಗಳಲ್ಲಿ ಹಲವು ಸಂಖ್ಯೆಗಳ ಬ್ರೇಸ್ ಪ್ರೈಸ್‍ಅನ್ನು 50 ಸಾವಿರ ರೂ.ಗೆ ಇರಿಸಲಾಗಿತ್ತು. ಅಲ್ಲದೇ ಕೆಲವು ನಂಬರ್‍ಗೆ 20,000 ರೂ.ವರೆಗೂ ನಿಗದಿ ಮಾಡಲಾಗಿತ್ತು.

2 /4

ಈ ಬಿಡ್‌ನಲ್ಲಿ HR 08F ಸರಣಿಯಲ್ಲಿ ಅತ್ಯಧಿಕ ಬಿಡ್ ಅನ್ನು 7777 ನಂಬರ್‍ಗೆ ಇರಿಸಲಾಗಿತ್ತು. ಈ ವಿಐಪಿ ನಂಬರ್‍ಗೆ ಸಂದೀಪ್ ಮೌದ್ಗಿಲ್ ಎಂಬುವರು 4 ಲಕ್ಷ 50 ಸಾವಿರ ರೂ.ಗೆ ಬಿಡ್ ಮಾಡುವ ಮೂಲಕ ಅಚ್ಚರಿಗೊಳಿಸಿದರು. ಈ ವಿಐಪಿ ಸಂಖ್ಯೆಯ ಮೂಲ ಬೆಲೆ 50 ಸಾವಿರ ರೂ.ಇತ್ತು. ಸಂದೀಪ್ ಮೌದ್ಗಿಲ್ ತಮ್ಮ ಫಾರ್ಚುನರ್ ಕಾರಿಗೆ ಈ ವಿಐಪಿ ಸಂಖ್ಯೆಯನ್ನು ಖರೀದಿಸಿದ್ದಾರೆ.

3 /4

ಅದೇ ರೀತಿ 8888 ವಿಐಪಿ ಸಂಖ್ಯೆ 1 ಲಕ್ಷದ 5 ಸಾವಿರ ರೂ.ಗೆ ಮಾರಾಟವಾಗಿದೆ. 1111 ಸಂಖ್ಯೆ 95 ಸಾವಿರ ರೂ., 1000 ಸಂಖ್ಯೆ 80 ಸಾವಿರ ರೂ., 9999 ಸಂಖ್ಯೆ 60 ಸಾವಿರ ರೂ.ಗೆ ಮಾರಾಟವಾಗಿವೆ. ಈ ಎಲ್ಲಾ ಸಂಖ್ಯೆಗಳ ಮೂಲ ಬೆಲೆ 50 ಸಾವಿರ ರೂ. ಆಗಿತ್ತು. ಅದೇ ರೀತಿ 20 ಸಾವಿರ ರೂ. ಮೂಲ ಬೆಲೆಗೆ ನಿಗದಿಪಡಿಸಿದ್ದ1100 ವಿಐಪಿ ಸಂಖ್ಯೆಯು 36 ಸಾವಿರ ರೂ.ಗೆ ಮಾರಾಟವಾಗಿದೆ.

4 /4

0405, 3535 ಮತ್ತು 3800 ವಿಐಪಿ ಸಂಖ್ಯೆಗಳು 20 ಸಾವಿರ ರೂ.ಗೆ ಮಾರಾಟವಾಗಿದೆ. 50 ಸಾವಿರ ರೂ. ಮೂಲ ಬೆಲೆಗೆ 2222, 5555, 2000, 8000, 3000, 0777, 0888 ಸಂಖ್ಯೆಗಳು ಮಾರಾಟವಾಗಿದೆ. ಇಲ್ಲಿ ನಡೆದ ಬಿಡ್ಡಿಂಗ್ ನಲ್ಲಿ 33 ನಂಬರ್‍ಗಳಿಗೆ 16 ಲಕ್ಷ 36 ಸಾವಿರ ರೂ.ಗೆ ಜನರು ಬಿಡ್ ಮಾಡಿದ್ದರು.