Tata Nexon: ಅಕ್ಟೋಬರ್ 2022 ರಲ್ಲಿ, ಟಾಟಾ ನೆಕ್ಸಾನ್ ದೇಶದಲ್ಲಿ ಹೆಚ್ಚು ಮಾರಾಟವಾದ SUV ಆಗಿ ಹೊರಹೊಮ್ಮಿದೆ. ಇದು ಮತ್ತೊಮ್ಮೆ SUV ವಿಭಾಗದಲ್ಲಿ ತನ್ನ ಪಾರುಪತ್ಯವನ್ನು ಮೆರೆಯಲು ಯಶಸ್ವಿಯಾಗಿದೆ.
Tata Nexon: ಅಕ್ಟೋಬರ್ 2022 ರಲ್ಲಿ, ಟಾಟಾ ನೆಕ್ಸಾನ್ ದೇಶದಲ್ಲಿ ಹೆಚ್ಚು ಮಾರಾಟವಾದ SUV ಆಗಿ ಹೊರಹೊಮ್ಮಿದೆ. ಇದು ಮತ್ತೊಮ್ಮೆ SUV ವಿಭಾಗದಲ್ಲಿ ತನ್ನ ಪಾರುಪತ್ಯವನ್ನು ಮೆರೆಯಲು ಯಶಸ್ವಿಯಾಗಿದೆ. ಟಾಟಾ ಮೋಟಾರ್ಸ್ ಕಳೆದ ತಿಂಗಳು ನೆಕ್ಸಾನ್‌ನ ಒಟ್ಟು 13,767 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಬನ್ನಿ ವಿವರ ತಿಳಿದುಕೊಳ್ಳೋಣ.
ಇದನ್ನೂ ಓದಿ-Royal Enfield: ರಾಯಲ್ ಎನ್ಫಿಲ್ದ್ ಪ್ರಿಯರಿಗೊಂದು ಸಂತಸದ ಸುದ್ದಿ
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
1. ಇತ್ತೀಚೆಗಷ್ಟೇ, ಟಾಟಾ ನೆಕ್ಸಾನ್ ಬೆಲೆಯನ್ನು ಹೆಚ್ಚಿಸಲಾಗಿದೆ, ಈ ಬೆಲೆ ಏರಿಕೆಯ ನಂತರ ಅದರ ಬೆಲೆ ಶ್ರೇಣಿಯು 7.70 ಲಕ್ಷದಿಂದ 14.18 ಲಕ್ಷದವರೆಗೆ ತಲುಪಿತು (ಎಕ್ಸ್ ಶೋ ರೂಂ, ದೆಹಲಿ). ಈ ಕಾರಿನ ಬೆಲೆಯನ್ನು ರೂ 18,000 ವರೆಗೆ ಹೆಚ್ಚಿಸಲಾಗಿದೆ (ವೇರಿಯಂಟ್ ಆಧರಿಸಿ).
2. ಟಾಟಾ ನೆಕ್ಸಾನ್ ಪೆಟ್ರೋಲ್ ಮತ್ತು ಡೀಸೆಲ್ ಎರಡೂ ರೂಪಾಂತರಗಳಲ್ಲಿ ಬರುತ್ತದೆ. ಇದು 1.2-ಲೀಟರ್, 3-ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ (110PS/170NM) ಮತ್ತು 1.5-ಲೀಟರ್, 4-ಸಿಲಿಂಡರ್ ಡೀಸೆಲ್ ಎಂಜಿನ್ (110PS/260NM) ಆಯ್ಕೆಯನ್ನು ಹೊಂದಿದೆ.
3. ಇದು 5-ಸ್ಪೀಡ್ ಮ್ಯಾನುವಲ್ ಮತ್ತು AMT ಗೇರ್‌ಬಾಕ್ಸ್ ಆಯ್ಕೆಯನ್ನು ಹೊನಿದೆ. ARAI ಪ್ರಕಾರ ಟಾಟಾ ನೆಕ್ಸಾನ್ (ಡೀಸೆಲ್) 21.5 kmpl ಮೈಲೇಜ್ ನೀಡುತ್ತದೆ ಮತ್ತು Tata Nexon (ಪೆಟ್ರೋಲ್) 17.2 kmpl ಮೈಲೇಜ್ ನೀಡುತ್ತದೆ ಎನ್ನಲಾಗಿದೆ.
4. ಇದು 7.0-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ), ಸನ್‌ರೂಫ್, ರೈನ್-ಸೆನ್ಸಿಂಗ್ ವೈಪರ್‌ಗಳು, ಹಿಂದಿನ ಎಸಿ ವೆಂಟ್‌ಗಳು, ಆಟೋ ಎಸಿ, ಕ್ರೂಸ್ ಕಂಟ್ರೋಲ್ ಮತ್ತು ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನಂತಹ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ.
5. ಇದು ಪ್ರಯಾಣಿಕರ ಸುರಕ್ಷತೆಯ ವಿಷಯದಲ್ಲಿ ಇದು ಸಾಕಷ್ಟು ಮುಂಚೂಣಿಯಲ್ಲಿದೆ. ಗ್ಲೋಬಲ್ NCAP ಇದಕ್ಕೆ 5 ಸ್ಟಾರ್ ಸುರಕ್ಷತಾ ರೇಟಿಂಗ್ ನೀಡಿದೆ. ಮಾರುಕಟ್ಟೆಯಲ್ಲಿ, ಇದು ಮಾರುತಿ ಬ್ರೆಝಾ, ಕಿಯಾ ಸೋನೆಟ್ ಮತ್ತು ಹ್ಯುಂಡೈ ವೆನ್ಯೂನಂತಹ ಕಾರುಗಳೊಂದಿಗೆ ಪೈಪೋಟಿ ನಡೆಸುತ್ತದೆ.